ನಿರುದ್ಯೋಗಿಗಳೇ ಎಚ್ಚರ... ಈ ಉದ್ಯೋಗಾಕಾಂಕ್ಷಿ ಕಳೆದುಕೊಂಡಿದ್ದು ಬರೋಬ್ಬರಿ 20 ಲಕ್ಷ
ಇಂದಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಹಲವಾರು ಯುವಕ ಯುವತಿಯರು ಬಹಳ ಕಷ್ಟ ಪಡುತ್ತಿದ್ದಾರೆ.ಈ ಕಾರಣಕ್ಕೆ ಸಿಕ್ಕ ಸಿಕ್ಕಲ್ಲಿಗೆ ಅಪ್ಲಿಕೇಶನ್ ಹಾಕುವುದು ಸಾಮಾನ್ಯವಾಗಿದೆ. ಈ ನಡುವೆ
ಇಂಜಿನಿಯರಿಂಗ್ ಪದವೀಧರರು ಹೊಸ ಉದ್ಯೋಗ ಹುಡುಕಲು ಟೆಲಿಗ್ರಾಮ್ ಗ್ರೂಪ್‌ಗೆ ಎಂಟ್ರಿ ಆಗಿದ್ದು, ಈ ಮೂಲಕ ಭಾರೀ ಹಣ ಕಳೆದುಕೊಂಡಿದ್ದಾರೆ.
ಹೌದು, ಸ್ಕ್ಯಾಮರ್‌ಗಳು ವಿವಿಧ ರೀತಿಯಲ್ಲಿ ಮೋಸ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿದೆ. ಯಾಕೆಂದರೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಇಂಜಿನಿಯರಿಂಗ್ ಪದವೀಧರ ತನ್ನ ಸ್ನೇಹಿತನ ಶಿಫಾರಸಿನ ಮೇರೆಗೆ ಟೆಲಿಗ್ರಾಂ ಚಾನೆಲ್‌ಗೆ ಸೇರಿಕೊಂಡರು. ಇದಾಗಿದ್ದೇ ತಡ ಕುರಿ ಹಳ್ಳಕ್ಕೆ ಬಿತ್ತು ಎಂಬಂತೆ ಉದ್ಯೋಗ ಇಲ್ಲದೆ ನೊಂದಿದ್ದ ವ್ಯಕ್ತಿಗೆ ಇನ್ನಷ್ಟು ನೋವು ನೀಡಲಾಗಿದೆ. ಹಾಗಿದ್ರೆ, ಏನಿದು ಹೊಸ ವಂಚನೆ?, ಈ ರೀತಿ ವಂಚನೆಯಿಂದ ಪಾರಾಗುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

20 ಲಕ್ಷ ರೂ. ವಂಚನೆ: ಆಂಧ್ರಪ್ರದೇಶದ ವಿಜಯವಾಡ ಮೂಲದ ಇಂಜಿನಿಯರಿಂಗ್ ಪದವೀಧರ ಸೈಬರ್ ವಂಚನೆಗೆ ಬಲಿಯಾಗಿ ಈಗ ಬರೋಬ್ಬರಿ 20 ಲಕ್ಷ ರೂ.ಕಳೆದುಕೊಂಡಿದ್ದಾರೆ. ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು. ಉದ್ಯೋಗ ಬೇಟೆಯ ಸಮಯದಲ್ಲಿ, ಅವರ ಸ್ನೇಹಿತರು ಹಾಗೂ ಗೊತ್ತಿರುವವರ ಸಂಪರ್ಕಗಳ ಮೂಲಕ ಕೆಲಸ ಹುಡುಕಲು ಮುಂದಾಗಿದ್ದರು. ಈ ವೇಳೆ ಅವರಿಗೆ ಗೊತ್ತಾಗಿದ್ದೇ ಟೆಲಿಗ್ರಾಮ್ ಗ್ರೂಪ್.
ವಿಜಯವಾಡದ ಸಾಫ್ಟ್‌ವೇರ್ ಉದ್ಯೋಗಾಕಾಂಕ್ಷಿ ಹರ್ಷವರ್ಧನ್ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದ್ದಾರೆ. ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಅವರಿಗೆ ತಮ್ಮ ಸ್ನೇಹಿತ ಕೃಷ್ಣ ಚೈತನ್ಯ ರೆಡ್ಡಿ ಒಂದು ಶಿಪಾರಸ್ಸು ಮಾಡಿದ್ದಾರೆ. ಅದೇನೆಂದರೆ ಡೆವಲಪರ್ ಪ್ರೊಫೆಷನಲ್ಸ್ ಎಂಬ ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಕೋ ಅಲ್ಲಿ ಅತ್ಯುತ್ತಮವಾದ ಉದ್ಯೋಗಗಳನ್ನು ಪಡೆಯಬಹುದುದು ಎಂದು. ಅದರಂತೆ ಹರ್ಷವರ್ಧನ್ ಅಲ್ಲಿಗೆ ಸೇರಿದ್ದಾರೆ. ಇದಾದ ನಂತರಲ್ಲಿ ಈ ಗ್ರೂಪ್‌ನಲ್ಲಿ ಸಂಬಂಧಿಸಿದವರು ಉದ್ಯೋಗಿಗಳಿಗೆ ಸಾಫ್ಟ್‌ವೇರ್ ಉದ್ಯೋಗಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ಒಮ್ಮೆ ಇದೇ ಗ್ರೂಪ್‌ನಲ್ಲಿ ಪೋಸ್ಟ್‌ಗಳನ್ನು ಸ್ಕ್ರೋಲ್ ಮಾಡುತ್ತಿದ್ದಾಗ, ಒಂದು ಉದ್ಯೋಗದ ಜಾಹೀರಾತಿನಲ್ಲಿದ್ದ ಫೋನ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಆ ವಂಚಕನು ಅವನಿಗೆ ಬೆಂಗಳೂರಿನ ಎಲ್‌ಟಿಐ ಮೈಂಡ್‌ಟ್ರೀ ಲಿಮಿಟೆಡ್‌ನಲ್ಲಿ(LTI Mindtree) ಕೆಲಸ ಕೊಡಿಸುವುದಾಗಿ ತಿಳಿಸಿದ್ದಾನೆ. ಇದಕ್ಕಾಗಿ 20 ಲಕ್ಷ ಬೇಡಿಕೆ ಇಡಲಾಗಿದೆ. ಅದರಂತೆ ಈ ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳಲು ಉತ್ಸುಕರಾಗಿದ್ದ ಹರ್ಷವರ್ಧನ್ ಜುಲೈ ಮತ್ತು ಆಗಸ್ಟ್ ಆರಂಭದಲ್ಲಿ ಹಣವನ್ನು ಹಂತ ಹಂತವಾಗಿ ಠೇವಣಿ ಮಾಡಿದ್ದಾರೆ.
ಆದಾಗ್ಯೂ, ಅವರು ತಮ್ಮ ನೇಮಕಾತಿ ಪತ್ರವನ್ನು ಪಡೆಯಲು ಎಲ್‌ಟಿಐ ಮೈಂಡ್‌ಟ್ರೀ ಲಿಮಿಟೆಡ್ ಅನ್ನು ಸಂಪರ್ಕಿಸಿದಾಗ, ಮೋಸ ಹೋಗಿದ್ದಾರೆಂದು ತಿಳಿದುಕೊಂಡಿದ್ದಾರೆ. ನಂತರ, ಅವರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಿಸಿದ್ದಾರೆ. ಇದೇ ರೀತಿ ಅದೆಷ್ಟೋ ಘಟನೆಗಳು ನಮ್ಮ ನಡುವೆ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈ ಮೂಲಕ ನಾವು ಎಚ್ಚರಿಕೆ ವಹಿಸುವುದು ಅನಿವಾರ್ಯ.
ಸುರಕ್ಷಿತವಾಗಿರುವುದು ಹೇಗೆ?
ಉದ್ಯೋಗ ಹಗರಣಗಳು ಇದೇ ಮೊದಲಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಉದ್ಯೋಗಾಕಾಂಕ್ಷಿಗಳು ಮೋಸಗಾರರಿಂದ ಮೋಸ ಹೋಗಿದ್ದಾರೆ. ಅದರಲ್ಲೂ ಆನ್‌ಲೈನ್‌ನಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಪರಿಣಾಮ ನೀವು ಮೊದಲು ಕಂಪನಿಯ ಬಗ್ಗೆ ತಿಳಿದುಕೊಳ್ಳಿ. ಅವರ ಅಧಿಕೃತ ವೆಬ್‌ಸೈಟ್, ಸಂಪರ್ಕ ಮಾಹಿತಿ ಮತ್ತು ಆನ್‌ಲೈನ್ ಸ್ಟೇಟಸ್ ಅನ್ನು ಪರಿಶೀಲಿಸಿ. ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ನಕಲಿ ವೆಬ್‌ಸೈಟ್‌ಗಳು ಮತ್ತು ಪ್ರೊಫೈಲ್‌ಗಳನ್ನು ಕಾನೂನುಬದ್ಧವಾಗಿ ಕಾಣಿಸಿಕೊಳ್ಳಲು ರಚಿಸುತ್ತಾರೆ.
ಅವಾಸ್ತವಿಕ ಕೊಡುಗೆಗಳ ಬಗ್ಗೆ ಎಚ್ಚರ: ವಂಚಕರು ಬಲಿಪಶುಗಳಿಗೆ ಹೆಚ್ಚಿನ ಸಂಬಳ, ನಂಬಲಾಗದ ಪ್ರಯೋಜನಗಳು ಅಥವಾ ತ್ವರಿತ ಪ್ರಚಾರಗಳನ್ನು ಭರವಸೆ ನೀಡುವುದು ಸಾಮಾನ್ಯ. ಈ ಮೂಲಕವೂ ನೀವು ಇದು ನಕಲಿಯೋ ಅಥವಾ ಅಸಲಿಯೋ ಎಂದು ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ಕಾನೂನುಬದ್ಧ ಉದ್ಯೋಗದಾತರು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಕ್ಕಾಗಿ ಶುಲ್ಕವನ್ನು ಮುಂಗಡವಾಗಿ ಪಾವತಿಸಲು ಕೇಳುವುದಿಲ್ಲ.
ಅಧಿಕೃತ ಉದ್ಯೋಗ ಪೋರ್ಟಲ್‌ಗಳನ್ನು ಬಳಸಿ: ಇದೆಲ್ಲಕ್ಕಿಂತ ಮಿಗಿಲಾಗಿ ಉದ್ಯೋಗಕ್ಕಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ಅವಲಂಬನೆ ಮಾಡಿ. ಉದ್ಯೋಗ ಹುಡುಕಾಟಗಳಿಗಾಗಿ ಸಾಮಾಜಿಕ ಮಾಧ್ಯಮದ ಗ್ರೂಪ್‌ಗಞಲು ಮತ್ತು ಮೆಸೆಜ್‌ಗಳು ಅಥವಾ ಇನ್ನಿತರೆ ಆಪ್‌ಗಳನ್ನು ಹೆಚ್ಚಾಗಿ ನಂಬಬೇಡಿ. ಇದರೊಂದಿಗೆ ಯಾವುದೇ ಕಾರಣಕ್ಕೂ ನೀವು ನಿಮ್ಮ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಬೇಡಿ.

ಅಂದರೆ ನಿಮ್ಮ ಬ್ಯಾಂಕ್ ಖಾತೆಯ ವಿವರಗಳು, ಆಧಾರ್ ಕಾರ್ಡ್ ಸಂಖ್ಯೆ ಅಥವಾ ಪಾಸ್‌ಪೋರ್ಟ್ ಮಾಹಿತಿಯಂತಹ ಸೂಕ್ಷ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಯನ್ನು ಸಂಭಾವ್ಯ ಉದ್ಯೋಗದಾತರೊಂದಿಗೆ ನೀವು ಅವರ ಕಾನೂನುಬದ್ಧತೆಯನ್ನು ದೃಢೀಕರಿಸುವವರೆಗೆ ಹಂಚಿಕೊಳ್ಳುವುದನ್ನು ತಪ್ಪಿಸಿ.


Click it and Unblock the Notifications