fake messages: ಒಬ್ಬ ಭಾರತೀಯ ಪ್ರತಿದಿನ ಸರಾಸರಿ 12 ನಕಲಿ ಮೆಸೆಜ್ ಪಡೆಯುತ್ತಾನಂತೆ; ನೀವು ಹಳ್ಳಕ್ಕೆ ಬೀಳೋದು ಇಲ್ಲಿಂದಲೇ!
ಫೋನ್ ಬಳಕೆ ಇಂದು ಹೆಚ್ಚಾಗುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ಮುದುಕರ ವರೆಗೂ ಫೋನ್ ಮುಟ್ಟದ ಕೈಗಳಿಲ್ಲ. ಈ ಫೋನ್‌ಗಳು ಇಂದು ಕೇವಲ ಮೆಸೆಜ್, ಕರೆಗೆ ಮಾತ್ರ ಸೀಮಿತವಾಗದೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತವೆ. ಅದರಲ್ಲೂ ಬ್ಯಾಂಕಿಂಗ್ ವ್ಯವಹಾರ ಈಗ ಬೆರಳ ತುದಿಯಲ್ಲೇ ನಡೆಯಲಿದೆ. ಈ ಬೆಳವಣಿಗೆ ನಡುವೆ ಅಚ್ಚರಿಪಡುವ ವರದಿಯೊಂದು ಬಹಿರಂಗವಾಗಿದೆ.
ಹೌದು, ಒಬ್ಬ ಭಾರತೀಯ ಪ್ರಜೆಯು ಇಮೇಲ್, ಟೆಕ್ಸ್ಟ್ ಅಥವಾ ಸಾಮಾಜಿಕ ಮಾಧ್ಯಮದ (Email, text or social media messages) ಮೂಲಕ ಸರಾಸರಿ ಪ್ರತಿದಿನ ಎಷ್ಟು ಮೆಸೆಜ್‌ಗಳನ್ನು ಸ್ವೀಕರಿಸುತ್ತಾನೆ ಎಂಬ ಮಾಹಿತಿ ಹೊರಬಿದ್ದಿದೆ. ಹಾಗೆಯೇ ಸ್ವೀಕಾರ ಮಾಡಲಾದ ಮೆಸೆಜ್‌ಗಳಲ್ಲಿ ಮೋಸದ ಮೆಸೆಜ್‌ಗಳು ಎಷ್ಟು ಎಂಬ ಮಾಹಿತಿಯೂ ಈ ಮೂಲಕ ತಿಳಿದುಬಂದಿದೆ. ಹಾಗಿದ್ರೆ, ಈ ವರದಿಯಲ್ಲಿ ಇರುವ ಮಾಹಿತಿ ಏನು?, ಯಾವೆಲ್ಲಾ ಮೆಸೆಜ್‌ಗಳು ನಿತ್ಯವೂ ಬರುತ್ತವೆ ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಮ್ಯಾಕ್‌ಅಫೀಯ ಚೊಚ್ಚಲ 'ಗ್ಲೋಬಲ್ ಸ್ಕ್ಯಾಮ್ ಮೆಸೇಜ್' ತನಿಖೆಯ ಅಧ್ಯಯನದ ಸಮೀಕ್ಷೆಗೆ ಒಳಗಾದ ಭಾರತೀಯರಲ್ಲಿ ಸರಿಸುಮಾರು 82 ಪ್ರತಿಶತದಷ್ಟು ಜನರು ನಕಲಿ ಮೆಸೆಜ್‌ಗಳ ಮೇಲೆ ಕ್ಲಿಕ್ ಮಾಡಿದ್ದಾರೆ ಅಥವಾ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ ಶೇಕಡಾ 49 ರಷ್ಟು ಜನರು ಈ ಸ್ಕ್ಯಾಮ್ ಮೆಸೆಜ್‌ಗಳನ್ನು ನಂಬಿದ್ದಾರಂತೆ. ಅಂದರೆ ಇದರಲ್ಲಿ ಯಾವುದೇ ಮುದ್ರಣದೋಷಗಳು ಇರುವುದಿಲ್ಲ. ಪರಿಣಾಮ ಅವುಗಳನ್ನು ಗುರುತಿಸುವುದು ಸವಾಲಿನ ಕೆಲಸವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟೇ ಅಲ್ಲದೆ ಪ್ರತಿ ವಾರ ಸುಮಾರು 1.8 ಗಂಟೆಗಳ ಕಾಲ ಈ ಮೆಸೆಜ್ ದೃಢೀಕರಣವನ್ನು ಪರಿಶೀಲಿಸಲು ಜನರು ಸಮಯ ವ್ಯಯ ಮಾಡುತ್ತಾರೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ. ಈ ಅತ್ಯಾಧುನಿಕ ವಂಚನೆಯ ಅತ್ಯಂತ ಪ್ರಚಲಿತ ರೂಪಗಳಲ್ಲಿ ಹೆಚ್ಚಿನ ಭಾರತೀಯ ಗ್ರಾಹಕರು ನಕಲಿ ಉದ್ಯೋಗ ನೋಟಿಫಿಕೇಶನ್ ಅಥವಾ ಆಫ್‌ಗಳಿಗೆ (64%) ಮತ್ತು ಬ್ಯಾಂಕ್ ಎಚ್ಚರಿಕೆ ಮೆಸೆಜ್‌ಗಳಿಗೆ (52%) ಬಲಿಯಾಗುತ್ತಾರೆ ಎಂದು ತಿಳಿಸಲಾಗಿದೆ.

ಈ ಸಮಗ್ರ ಅಧ್ಯಯನದಲ್ಲಿ ಭಾರತ ಸೇರಿದಂತೆ ಏಳು ದೇಶಗಳಲ್ಲಿ 7,000 ವಯಸ್ಕರನ್ನು ಹೊಂದಿದ್ದು, ಈ ಮೂಲಕ ವಂಚನೆ ಮೆಸೆಜ್‌ಗಳ ಪ್ರಭಾವ ಮತ್ತು ವಿಶ್ವದಾದ್ಯಂತ ಗ್ರಾಹಕರ ಮೇಲೆ ಕೃತಕ ಬುದ್ಧಿಮತ್ತೆ (AI) ಮೂಲಕ ಸುಗಮಗೊಳಿಸಲಾದ ಉತ್ಕೃಷ್ಟತೆಯನ್ನು ಅಳೆಯುವ ಗುರಿಯನ್ನು ಹೊಂದಲಾಗಿತ್ತು. ಸರಿಸುಮಾರು 60 ಪ್ರತಿಶತ ಪ್ರತಿಕ್ರಿಯಿಸಿದ ಭಾರತೀಯರು ವಂಚನೆ ಮೆಸೆಜ್‌ಗಳನ್ನು ಗುರುತಿಸುವುದು ಹೆಚ್ಚು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ಹ್ಯಾಕರ್‌ಗಳು ತಮ್ಮ ಹಗರಣಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಎಐ ಅನ್ನು ಈ ವೇಳೆ ಬಳಕೆ ಮಾಡಿದ್ದಾರೆ ಎಂದು ಕಂಡುಕೊಳ್ಳಲಾಗಿದೆ.
ಹಾಗೆಯೇ 90 ಪ್ರತಿಶತ ಭಾರತೀಯರು ಪ್ರತಿದಿನವೂ ಇಮೇಲ್ ಮತ್ತು ಟೆಕ್ಸ್ಟ್ ಮೂಲಕ ನಕಲಿ ಮೆಸೆಜ್‌ಗಳು ಅಥವಾ ವಂಚನೆಯ ಮೆಸೆಜ್‌ಗಳನ್ನು ಸ್ವೀಕರಿಸುತ್ತಾರೆ ಎಂದು ವರದಿಯು ಗಮನಿಸಿದೆ. ಆದರೆ 84 ಪ್ರತಿಶತದಷ್ಟು ಜನರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ರೀತಿಯ ಮೆಸೆಜ್‌ಗಳನ್ನು ಪಡೆದಿರುವುದಾಗಿ ತಿಳಿಸಿದ್ದಾರೆ. ಎಐ ಆಧಾರಿತ ವಂಚನೆ ಹೆಚ್ಚಾಗುತ್ತಿರುವ ಪರಿಣಾಮ ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ 37 ಪ್ರತಿಶತದಷ್ಟು ಜನರು ಡಿಜಿಟಲ್ ಸಂವಹನದಲ್ಲಿ ನಂಬಿಕೆಯು ಕಡಿಮೆಯಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಯಾವೆಲ್ಲಾ ವಿಷಯದ ಮೆಸೆಜ್‌ಗಳು ಜನರನ್ನು ಮೋಸಗೊಳಿಸಿವೆ?: ನೀವು ಬಹುಮಾನವನ್ನು ಗೆದ್ದಿದ್ದೀರಿ ಎಂಬ ಮೆಸೆಜ್‌ಗಳು 72 % ಬಂದರೆ ನಕಲಿ ಉದ್ಯೋಗ ಅಧಿಸೂಚನೆಗಳು ಅಥವಾ ಕೊಡುಗೆಗಳು 64 % ಮಸೆಜ್ ಬಂದಿವೆಯಂತೆ. ಹಾಗೆಯೇ ಬ್ಯಾಂಕ್ ಎಚ್ಚರಿಕೆ ಸಂದೇಶ 52 %, ಖರೀದಿಯ ಬಗ್ಗೆ ಮಾಹಿತಿ 37 %, ಓಟಿಟಿ ಚಂದಾದಾರಿಕೆ ನವೀಕರಣಗಳ 35 %, ನಕಲಿ ತಪ್ಪಿದ ವಿತರಣೆ ಅಥವಾ ವಿತರಣೆ ಸಮಸ್ಯೆ 29 %, ಅಮೆಜಾನ್ ಭದ್ರತಾ ಎಚ್ಚರಿಕೆ ಅಥವಾ ಖಾತೆ ನವೀಕರಣಗಳಿಗೆ ಸಂಬಂಧಿಸಿದ ಅಧಿಸೂಚನೆ 27 % ಸೇರಿದಂತೆ ಅನೇಕ ರೀತಿಯ ನಕಲಿ ಮೆಸೆಜ್‌ಗಳನ್ನು ಈ ಕ್ಷಣಕ್ಕೂ ಜನರನ್ನು ಮೋಸದ ಜಾಲಕ್ಕೆ ಕೆಡವುತ್ತಿವೆ.


Click it and Unblock the Notifications








