ಬರೀ ವಾಟ್ಸಾಪ್‌ನಲ್ಲಿ ಫೋಟೊ ನೋಡಿಯೇ ದ್ವೀಪ ಖರೀದಿಸಿದ ಮಹಾಶಯ!
ಊರಲ್ಲಿ ಕಣ್ಣಮುಂದೆ ಇರುವ ಮನೆ ಅಥವಾ ಸೈಟ್ ಖರೀದಿ ಮಾಡುವುದಾಗ ಜನರು ಹತ್ತಾರು ಬಾರಿ ಭೇಟಿ ನೀಡಿ ಪರಿಶೀಲಿಸಿ ಖರೀದಿಗೆ ಮುಂದಾಗುತ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ಬರೀ ವಾಟ್ಸಾಪ್‌ನಲ್ಲಿ ಫೋಟೊ, ವಿಡಿಯೋ ನೋಡಿಯೇ ದ್ವೀಪ ಖರೀದಿಸಿ ಸುದ್ದಿಯಾಗಿದ್ದಾನೆ.

ಹೌದು, ಶ್ರೀಮಂತ ಉದ್ಯಮಿಯೊಬ್ಬ ಐರ್ಲೆಂಡ್‌ನ ಹಾರ್ಸ್ ಎಂಬ ದ್ವೀಪವನ್ನು ಖರೀದಿಸಿದ್ದಾನೆ. ಹೇಳಿಕೇಳಿ ಐರ್ಲಾಂಡ್ ಸುಂದರ ಸಮುದ್ರದ ನಡುಗಡ್ಡೆ ಅಥವಾ ದ್ವೀಪ ಸಮೂಹಗಳಿಗೆ ಹೆಸರುವಾಸಿಯಾಗಿದೆ. ಜಗತ್ತಿನ ಶ್ರೀಮಂತರು ಇಲ್ಲಿನ ದ್ವೀಪ ಖರೀದಿಸಿ ಐಷಾರಾಮಿ ನೆಲೆಯನ್ನು ಹೊಂದಲು ಇಷ್ಟಪಡುತ್ತಾರೆ. ಹೀಗೆ ಈ ಉದ್ಯಮಿಯು ದ್ವೀಪವೊಂದನ್ನು ತನ್ನದಾಗಿಸಿಕೊಂಡಿದ್ದಾನೆ. ಈ ದ್ವೀಪ ಹೇಗಿದೆ ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ವಾಟ್ಸಾಪ್ ಮೂಲಕ ಒಪ್ಪಂದ
ವಾಸ್ತವವಾಗಿ, ಖರೀದಿದಾರನು ವಾಟ್ಸಾಪ್ ಮೂಲಕ ಒಪ್ಪಂದವನ್ನು ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಯುರೋಪಿಯನ್ ಖರೀದಿದಾರನು ಹಾರ್ಸ್ ದ್ವೀಪದ ಚಿತ್ರಗಳು ಮತ್ತು ವೀಡಿಯೊಗಳನ್ನು ನೋಡಿ ಅದನ್ನು ಖರೀದಿ ಮಾಡಿದ್ದಾನೆ. ಐರ್ಲೆಂಡ್ ನೈರುತ್ಯ ದಿಕ್ಕಿನಲ್ಲಿರುವ 157 ಎಕರೆ ಭೂಮಿ ಹೊಂದಿರುವ ದ್ವೀಪವಾಗಿದೆ ಹಾರ್ಸ್.

ಖರೀದಿ ಮೊತ್ತ ಎಷ್ಟು?
ಐರ್ಲೆಂಡ್ ಕರಾವಳಿಯ ಖಾಸಗಿ ದ್ವೀಪ ಹಾರ್ಸ್. ಅದನ್ನು ಖರೀದಿಸುವ ಮೊದಲು ಸ್ಥಳವನ್ನು ಭೇಟಿ ಮಾಡದೆ 6.3 ಬಿಲಿಯನ್ ಡಾಲರ್‌ಗೆ ಶ್ರೀಮಂತ ವ್ಯಕ್ತಿಯೊಬ್ಬ ಖರೀದಿ ಮಾಡಿದ್ದಾನೆ. ಖರೀದಿದಾರನ ಯಾವುದೇ ವಿವರಗಳು ಲಭ್ಯವಾಗಿಲ್ಲ ಎಂದು ಸಿಎನ್ಎನ್ ಟ್ರಾವೆಲ್ ವರದಿ ಮಾಡಿದೆ

ಸುಂದರ ದ್ವೀಪ
ಈ ಖಾಸಗಿ ದ್ವೀಪವು ಮೂರು ಕಡಲತೀರಗಳು, ಏಳು ಮನೆಗಳು ಮತ್ತು ನೈಸರ್ಗಿಕ ವನ್ಯಜೀವಿಗಳನ್ನು ಒಳಗೊಂಡಿದೆ ಎಂದು ಸಿಎನ್ಎನ್ ಟ್ರಾವೆಲ್ ವರದಿ ಮಾಡಿದೆ. ಹಾರ್ಸ್ ದ್ವೀಪವು ಅಟ್ಲಾಂಟಿಕ್ ಮಹಾಸಾಗರದ ಹಿನ್ನಲೆಯಲ್ಲಿ ಹಸಿರು ಭೂಪ್ರದೇಶ, ಒಂದು ಮುಖ್ಯ ಮನೆ ಮತ್ತು ಹಲವಾರು ಅತಿಥಿ ಕುಟೀರಗಳನ್ನು ಹೊಂದಿದೆ.

ಮೂಲಸೌಕರ್ಯ ಅದ್ಭುತವಾಗಿದೆ
19 ನೇ ಶತಮಾನದಲ್ಲಿ ಹಾರ್ಸ್ ದ್ವೀಪ ಸುಮಾರು 137 ಜನಸಂಖ್ಯೆಯನ್ನು ಹೊಂದಿತ್ತು. 1960 ರ ಹೊತ್ತಿಗೆ, ಅದರ ನಿವಾಸಿಗಳು ಈ ಸ್ಥಳವನ್ನು ತೊರೆದರು. ಹಾರ್ಸ್ ದ್ವೀಪವು ಪ್ರಸ್ತುತ ಪರಿಷ್ಕರಿಸಿದ ಆಸ್ತಿಯಾಗಿದ್ದು, ಹೆಲಿಪ್ಯಾಡ್, ಜಿಮ್, ಗೇಮ್ಸ್ ಹೌಸ್ ಹೊಂದಿದೆ. ದ್ವೀಪವು ವಿದ್ಯುತ್, ನೀರು ಮತ್ತು ಒಳಚರಂಡಿ ವ್ಯವಸ್ಥೆ ಮತ್ತು ಖಾಸಗಿ ರಸ್ತೆಗಳಿಂದ ತುಂಬಿರುವುದರಿಂದ ಮೂಲಸೌಕರ್ಯ ಅದ್ಭುತವಾಗಿದೆ.


Click it and Unblock the Notifications








