Home
ಸುದ್ದಿಜಾಲ

Android ಫೋನ್‌ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದ ಭಾರತ ಸರ್ಕಾರ; ತಕ್ಷಣವೇ ಇದನ್ನು ಮಾಡಿ!

ಆಂಡ್ರಾಯ್ಡ್‌ ಫೋನ್‌ಗಳನ್ನು (Android phone) ಖರೀದಿ ಮಾಡುವಲ್ಲಿ ಭಾರತ ಮುಂಚೂಣಿಯಲ್ಲಿದೆ. ಈ ಫೋನ್‌ಗಳು ಬಜೆಟ್‌ ಬೆಲೆಯಿಂದ ದುಬಾರಿ ಬೆಲೆಯಲ್ಲಿಯೂ ಲಭ್ಯ ಇವೆ. ಈಗಂತೂ ಈ ಫೋನ್‌ಗಳು ಆಪಲ್‌ ಫೋನ್‌ಗಳನ್ನೇ ಮೀರಿಸುವ ಸುಧಾರಿತ ಫೀಚರ್ಸ್‌ ಅನ್ನು ಸಹ ಹೊಂದಿವೆ. ಆದಾಗ್ಯೂ ಭದ್ರತಾ ವಿಚಾರದಲ್ಲಿ ಮಾತ್ರ ಆಗಾಗ್ಗೆ ಸಂಕಷ್ಟಕ್ಕೆ ಸಿಲುಕುತ್ತಲೇ ಇರುತ್ತವೆ.

ಹೌದು, ಆಂಡ್ರಾಯ್ಡ್ ಫೋನ್‌ ಬಳಕೆದಾರರಿಗೆ ಶಾಕ್‌ ಆಗುವ ಸುದ್ದಿಯೊಂದನ್ನು ಭಾರತ ಸರ್ಕಾರ (Government of India) ನೀಡಿದೆ. ಅಂದರೆ ಆಂಡ್ರಾಯ್ಡ್‌ 13 (Android 13) ಮತ್ತು ಅದಕ್ಕಿಂತ ಹಳೆಯ ಡಿವೈಸ್‌ ಬಳಕೆ ಮಾಡುವವರು ಅಪಾಯಕ್ಕೆ ಒಳಗಾಗಬಹುದು ಎಂದು ತಿಳಿಸಲಾಗಿದೆ. ಜೊತೆಗೆ ಇದಕ್ಕೆ ಪರಿಹಾರವನ್ನೂ ಸಹ ನೀಡಲಾಗಿದೆ. ಹಾಗಿದ್ರೆ, ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಏನು ಮಾಡಬೇಕು?, ಇದರಿಂದ ಆಗುವ ಸಮಸ್ಯೆ ಏನು?, ಈ ರೀತಿಯ ಸಮಸ್ಯೆಗಳಿಂದ ಪೂರ್ವದಲ್ಲಿಯೇ ಎಚ್ಚೆತ್ತುಕೊಳ್ಳುವುದು ಹೇಗೆ? ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

Android ಫೋನ್‌ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದ ಭಾರತ ಸರ್ಕಾರ..

ಆಂಡ್ರಾಯ್ಡ್‌ ಬಳಕೆದಾರರಿಗೆ ಹೆಚ್ಚಿನ ಅಪಾಯದಲ್ಲಿ: ಹೆಚ್ಚಿನ ಸಂಖ್ಯೆಯ ಆಂಡ್ರಾಯ್ಡ್‌ ಫೋನ್ ಬಳಕೆದಾರರು ಇರುವ ಕಾರಣ ಆಂಡ್ರಾಯ್ಡ್‌ ಹೆಚ್ಚು ಅಪಾಯಕ್ಕೆ ಎದುರಾಗುತ್ತದೆ. ಅದರಲ್ಲೂ ಭಾರತದಲ್ಲಿ ಲಕ್ಷಾಂತರ ಬಳಕೆದಾರರ ಮೇಲೆ ಇದು ಪರಿಣಾಮ ಬೀರಬಹುದು ಎನ್ನಲಾಗಿದೆ. ಈ ದುರ್ಬಲತೆಗಳನ್ನು ಬಳಕೆ ಮಾಡಿಕೊಂಡು ಸ್ಕ್ಯಾಮರ್‌ಗಳೂ ಡಿವೈಸ್‌ ಗಳನ್ನು ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳುವ ಸಾಮರ್ಥ್ಯ ಪಡೆದಿದ್ದಾರೆ. ಈ ಮೂಲಕ ಸೂಕ್ಷ್ಮ ಡೇಟಾವನ್ನು ಕದಿಯಬಹುದಾಗಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಣೆ ಮಾಡುವ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಹಳೆಯ ಆಂಡ್ರಾಯ್ಡ್ ಡಿವೈಸ್‌ಗಳಿಗೆ ಅದರಲ್ಲೂ ಆಂಡ್ರಾಯ್ಡ್‌ ಆವೃತ್ತಿ 13 ಮತ್ತು ಇದಕ್ಕಿಂತ ಹಳೆಯ ಆವೃತ್ತಿಯಲ್ಲಿ ಕೆಲಸ ಮಾಡುವ ಡಿವೈಸ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ.ಈ ಸಂಬಂಧ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ, CERT ಯು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ (Android operating system) ಬಳಕೆದಾರರಿಗೆ ಗಮನಾರ್ಹ ಅಪಾಯಗಳನ್ನು ಉಂಟುಮಾಡುವ ಬಹು ದೋಷಗಳನ್ನು ಹೈಲೈಟ್ ಮಾಡಿದೆ.

CERT ಆಂಡ್ರಾಯ್ಡ್‌ ಓಎಸ್‌ ನಲ್ಲಿ ಕಂಡುಬರುವ ದೋಷಗಳನ್ನು 'ಕ್ರಿಟಿಕಲ್' ಎಂದು ಲೇಬಲ್ ಮಾಡಿದೆ. ಇವುಗಳು ದುರ್ಬಳಕೆಯಾದರೆ ಸ್ಮಾರ್ಟ್‌ಫೋನ್‌ ಬಳಕೆದಾರರು ತೀವ್ರ ಸಮಸ್ಯೆಗಳನ್ನು ಎದುರಿಬೇಕಾಗುತ್ತೆ ಎನ್ನಲಾಗಿದೆ. ಅಂದರೆ ಈ ಸಮಸ್ಯೆ ಡಿವೈಸ್‌ಗಳಲ್ಲಿ ತಮ್ಮದೇ ಆದ ಕೋಡ್ ಅನ್ನು ಕಾರ್ಯಗತಗೊಳಿಸುವುದು, ಉನ್ನತ ಸವಲತ್ತುಗಳನ್ನು ಪಡೆಯುವುದು, ಸೂಕ್ಷ್ಮ ಬಳಕೆದಾರರ ಮಾಹಿತಿಯನ್ನು ಪ್ರವೇಶಿಸುವುದು ಮತ್ತು ನಿರಾಕರಣೆಯನ್ನು ಉಂಟುಮಾಡುವುದು ಸೇರಿದಂತೆ ಹಲವಾರು ದುರುದ್ದೇಶಪೂರಿತ ಕ್ರಮಗಳನ್ನು ಕೈಗೊಳ್ಳಲು ಮಾಡಿಕೊಡಲು ಸ್ಕ್ಯಾಮರ್‌ಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಸರ್ಕಾರ ತಿಳಿಸಿದೆ.

ಇನ್ನು ನೇರವಾಗಿ ಹೇಳುವುದಾದರೆ ಈ ಭದ್ರತಾ ನ್ಯೂನತೆಗಳಿಂದ ಹ್ಯಾಕರ್‌ಗಳು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ ಅನ್ನು ಅತ್ಯಂತ ಸರಳವಾಗಿ ಅವರ ಕಂಟ್ರೋಲ್‌ಗೆ ತೆಗೆದುಕೊಂಡು ಅವರಿಗೆ ಬೇಕಾದದ್ದನ್ನು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ ಬಳಕೆದಾರರು ಹಣ ಕಳೆದುಕೊಳ್ಳಬಹುದು ಅಥವಾ ಖಾಸಗಿ ಮಾಹಿತಿಗಳನ್ನು ಸ್ಕ್ಯಾಮರ್‌ಗಳು ಪಡೆಯುವುದರಿಂದ ಮಾನಸಿಕ ಸಮಸ್ಯೆಯನ್ನೂ ಸಹ ಎದುರಿಸಬೇಕಾಗುತ್ತದೆ.

ಯಾವೆಲ್ಲಾ ಆಂಡ್ರಾಯ್ಡ್‌ ಆವೃತ್ತಿ ಸಮಸ್ಯೆಯಲ್ಲಿವೆ?: CERT ಪ್ರಕಾರ ಹೈಲೈಟ್ ಮಾಡಲಾದ ದುರ್ಬಲತೆಗಳು ಪ್ರಾಥಮಿಕವಾಗಿ ಆಪರೇಟಿಂಗ್ ಸಿಸ್ಟಂನ ಹಳೆಯ ಆವೃತ್ತಿಗಳನ್ನು ರನ್‌ ಮಾಡುವ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಕೆಟ್ಟ ಪರಿಣಾಮ ಬೀರಲಿವೆ ಎಂದು ಸರ್ಕಾರ ಉಲ್ಲೇಖ ಮಾಡಿದೆ. ಅಂದರೆ, ಆವೃತ್ತಿಗಳು 11, 12, 12L, ಮತ್ತು 13 ನಲ್ಲಿ ಈ ಸಮಸ್ಯೆ ಇದ್ದು, ಈ ಆವೃತ್ತಿಯಲ್ಲಿರುವ ಫೋನ್‌ಗಳನ್ನು ಅಪ್‌ಡೇಟ್‌ ಮಾಡಬೇಕಿದೆ.

ಇನ್ನು ಈ ದುರ್ಬಲತೆಗಳು ಒಂದೇ ಘಟಕಕ್ಕೆ ಸೀಮಿತವಾಗಿಲ್ಲ ಎಂಬುದು ಸಹ ಪ್ರಮುಖವಾಗಿದೆ. ಬದಲಿಗೆ, ಆಂಡ್ರಾಯ್ಡ್‌ನ ವ್ಯವಸ್ಥೆಯ ವಿವಿಧ ಭಾಗಗಳಲ್ಲಿ ಇದು ಕಂಡುಬಂದಿದೆ. ಅದರಲ್ಲೂ ಪ್ರಮುಖವಾಗಿ ಫ್ರೇಮ್‌ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು ಮತ್ತು ಆರ್ಮ್, ಮೀಡಿಯಾ ಟೆಕ್, ಯುನಿಸೊಕ್, ಕ್ವಾಲ್‌ಕಾಮ್ ಮತ್ತು ಕ್ವಾಲ್‌ಕಾಮ್‌ನ ಕ್ಲೋಸ್ಡ್-ಸೋರ್ಸ್ ಘಟಕಗಳಂತಹ ವಿವಿಧ ವಿಭಾಗದಲ್ಲಿ ಇದು ಸಮಸ್ಯೆ ನಿರ್ಮಾಣ ಮಾಡಲಿದೆ.

ನಿಮ್ಮ ಸ್ಮಾರ್ಟ್‌ಫೋನ್‌ ಅಪ್‌ಡೇಟ್‌ ಮಾಡಿ: ಈ ಸಮಸ್ಯೆಗಳನ್ನು ಪರಿಹರಿಸುವ ಆಂಡ್ರಾಯ್ಡ್‌ ಓಎಸ್‌ (Android OS) ಗಾಗಿ ಗೂಗಲ್‌ ಈಗಾಗಲೇ ನವೀಕರಣವನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಬಳಕೆದಾರರು ತಮ್ಮ ಡಿವೈಸ್‌ಗಳನ್ನು ತ್ವರಿತವಾಗಿ ನವೀಕರಿಸಲು ಮತ್ತು ಬಳಕೆದಾರರು ತಮ್ಮ ಡಿವೈಸ್‌ಗಳನ್ನು ರಕ್ಷಿಸಲು ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಈ ಮೂಲಕ ಮುಂದಾಗುವ ಸಮಸ್ಯೆಗಳಿಗೆ ಫುಲ್‌ಸ್ಟಾಪ್‌ ಇಡಬಹುದಾಗಿದೆ.

ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೇಗೆ ರಕ್ಷಿಸುವುದು?:
-ಭದ್ರತಾ ಪ್ಯಾಚ್‌ಗಳನ್ನು ತುರ್ತಾಗಿ ಅನ್ವಯಿಸಿ: ಕೆಲವು ದುರ್ಬಲತೆಗಳು ಈಗಾಗಲೇ ಸಕ್ರಿಯ ಶೋಷಣೆಗೆ ಕಾರಣವಾಗಬಹುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಆದ್ದರಿಂದ ನಿಮ್ಮ ಡಿವೈಸ್‌ ಅನ್ನು ಭದ್ರಪಡಿಸಿಕೊಳ್ಳಲು ತಕ್ಷಣದ ಮತ್ತು ಪರಿಣಾಮಕಾರಿ ಹಂತವೆಂದರೆ ಓಎಸ್‌ ಅನ್ನು ನವೀಕರಿಸುವ ಮೂಲಕ ಭದ್ರತಾ ಪ್ಯಾಚ್‌ಗಳನ್ನು ಸರಿ ಮಾಡುವುದು. ಗುರುತಿಸಲಾದ ದೋಷಗಳನ್ನು ಪರಿಹರಿಸಲು ಮತ್ತು ನಿಮ್ಮ ಡಿವೈಸ್‌ನ ಸುರಕ್ಷತೆಯನ್ನು ಹೆಚ್ಚಿಸಲು ಈ ಪ್ಯಾಚ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

-ನಿಮ್ಮ ಆಂಡ್ರಾಯ್ಡ್‌ ಓಎಸ್‌ ಅನ್ನು ನವೀಕರಿಸಿ : ನಿಮ್ಮ ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಮ್ ಅನ್ನು ನಿಯಮಿತವಾಗಿ ನವೀಕರಿಸುವುದು ಬಹಳ ಮುಖ್ಯವಾದ ಕೆಲಸವಾಗಿದೆ. ತಿಳಿದಿರುವ ದೋಷಗಳ ವಿರುದ್ಧ ನಿಮ್ಮ ಡಿವೈಸ್‌ ಅನ್ನು ರಕ್ಷಿಸಲು ಸಹಾಯ ಮಾಡುವ ಇತ್ತೀಚಿನ ಭದ್ರತಾ ಫೀಚರ್ಸ್‌ ಮತ್ತು ಸುಧಾರಣೆಗಳನ್ನು ನೀವು ಹೊಂದಿದ್ದೀರಿ ಎಂದು ಇದು ಖಚಿತಪಡಿಸುತ್ತದೆ.

- ಯಾವುದೇ ಆಪ್‌ ಡೌನ್‌ಲೋಡ್‌ಗಳೊಂದಿಗೆ ಎಚ್ಚರ: ವಿಶೇಷವಾಗಿ ಅನಧಿಕೃತ ಮೂಲಗಳಿಂದ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಿ. ಥರ್ಡ್‌ ಪಾರ್ಟಿ ಆಪ್‌ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ ಮತ್ತು ಗೂಗಲ್‌ ಪ್ಲೇ ಸ್ಟೋರ್‌ (Google Play Store) ನಂತಹ ವಿಶ್ವಾಸಾರ್ಹ ಆಪ್‌ ಸ್ಟೋರ್‌ಗಳ ಮೂಲಕ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿ. ಇದರೊಂದಿಗೆ ಆಪ್‌ಗಳಿಗೆ ಅನುಮತಿ ನೀಡುವಾಗ ಎಚ್ಚರ ಇರಲಿ.

Android ಫೋನ್‌ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದ ಭಾರತ ಸರ್ಕಾರ..

- ಡೇಟಾವನ್ನು ಬ್ಯಾಕಪ್ ಮಾಡಿ: ಬಾಹ್ಯ ಮೂಲ ಅಥವಾ ಕ್ಲೌಡ್ ಸ್ಟೋರೇಜ್‌ನಲ್ಲಿ ನಿಮ್ಮ ಡೇಟಾವನ್ನು ನಿಯಮಿತವಾಗಿ ಬ್ಯಾಕಪ್ ಮಾಡಿ. ಯಾವುದೇ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ನಿಮ್ಮ ಅಮೂಲ್ಯವಾದ ಮಾಹಿತಿಯು ಸುರಕ್ಷಿತವಾಗಿದೆ ಎಂದು ಇದು ಖಚಿತಪಡಿಸಿಕೊಳ್ಳಬಹುದು. ಇದರಿಂದಾಗಿ ನೀವು ಏನನ್ನೂ ಕಳೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ.

Best Mobiles in India

English summary
Android 13 and older devices may be at risk, Government of India warning and Along with this, the solutions are given.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+