Home
ಸುದ್ದಿಜಾಲ

Smartphone: ಮುಂದಿನ ಫೋನ್‌ಗಳಲ್ಲಿ ವಿಶೇಷ ಸೌಲಭ್ಯ! ಕಳುವಾದ ಫೋನ್ ಆಫ್‌ ಆಗಿದ್ರೂ ಪತ್ತೆ ಮಾಡಬಹುದು!

ಸ್ಮಾರ್ಟ್‌ಫೋನ್‌ಗಳು (Smartphone) ಬಳಕೆದಾರರಿಗೆ ವಿಶೇಷವಾದ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಅದರಲ್ಲೂ ಐಫೋನ್‌ಗಳಂತೂ ಬಳಕೆದಾರರ ಜೀವ ಕಾಪಾಡುವಷ್ಟು ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಶ್ರೀಮಂತ ಆಗುತ್ತಿದೆ. ಈ ಬೆಳವಣಿಗೆ ನಡುವೆ ಮುಂದಿನ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ವಿಶೇಷ ಸೌಲಭ್ಯವೊಂದು ಸಿಗಲಿದೆ.

ಹೌದು, ಹೊಸ ಹೊಸ ಓಎಸ್‌ ಅನ್ನು ಘೋಷಣೆ ಮಾಡುವುದರ ಜೊತೆಗೆ ಬಳಕೆದಾರರು ಭಿನ್ನ ಫೀಚರ್ಸ್‌ ಅನುಭವ ಪಡೆಯುತ್ತಿದ್ದಾರೆ. ಅದರಂತೆ ಮುಂದಿನ ಓಎಸ್‌ನಲ್ಲಿ ರನ್‌ ಆಗುವ ಫೋನ್‌ಗಳು ಕಳ್ಳತನವಾಗಿದ್ದರೂ ಸಹ ಅವುಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ. ಹಾಗಿದ್ರೆ, ಇದು ಹೇಗೆ ಸಾಧ್ಯ?, ಮುಂದಿನ ಓಎಸ್‌ ಅನ್ನು ಯಾವಾಗ ಘೋಷಣೆ ಮಾಡಲಾಗತ್ತದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಫೋನ್‌ಗಳಲ್ಲಿ ವಿಶೇಷ ಸೌಲಭ್ಯ! ಕಳುವಾದ ಫೋನ್ ಆಫ್‌ ಆಗಿದ್ರೂ ಪತ್ತೆ ಮಾಡಬಹುದು...

ಕದ್ದ ಫೋನ್‌ ಆಫರ್ ಆಗಿದ್ರೂ ಪತ್ತೆ ಮಾಡಬಹುದು: ಆಂಡ್ರಾಯ್ಡ್‌ 15 ಓಎಸ್‌ (Android 15 OS) ನಲ್ಲಿ ರನ್‌ ಆಗುವ ಸ್ಮಾರ್ಟ್‌ಫೋನ್‌ಗಳು ವಿಶೇಷ ಫೀಚರ್ಸ್‌ ಆಯ್ಕೆ ಪಡೆದುಕೊಳ್ಳಲಿವೆ ಎನ್ನಲಾಗಿದೆ. ಅದರಲ್ಲಿ ಪ್ರಮುಖವಾಗಿ ಕಳೆದುಹೋದ ಡಿವೈಸ್‌ಗಳು ಸ್ವಿಚ್ ಆಫ್ ಆಗಿದ್ದರೂ ಅಹ ಅವುಗಳನ್ನು ಹುಡುಕಲು ಸಹಾಯ ಓಎಸ್‌ ಸಹಾಯ ಮಾಡಲಿದೆ ಎನ್ನುವ ಮಾತುಗಳು ಟೆಕ್‌ ವಲಯದಿಂದ ಕೇಳಿಬರುತ್ತಿವೆ.

ಇನ್ನು ಗೂಗಲ್‌ I/O 2024 ಕಾರ್ಯಕ್ರಮದ ದಿನಾಂಕವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಈ ಮೇ 14 ರಂದು ನಡೆಯಲಿರುವ ಈ ಸಮಾರಂಭದಲ್ಲಿ ಅಂಡ್ರಾಯ್ಡ್‌ 15 ಅನ್ನು ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬದಲಾಣೆಯನ್ನು ಸ್ಮಾರ್ಟ್‌ಫೋನ್‌ನಲ್ಲಿ ಗಮನಿಸಬಹುದಾಗಿದೆ. ಗಮನಿಬೇಕಾದ ವಿಷಯ ಏನೆಂದರೆ ಒಂದು ವರ್ಷದಿಂದಲೂ ಸಹ ಈ ವಿಶೇಷ ಫೀಚರ್ಸ್‌ ಬಗ್ಗೆ ಕೆಲವು ಮಾಹಿತಿಗಳು ಅಲ್ಲಲ್ಲಿ ಕೇಳಿಬರುತ್ತಿದ್ದವು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದ್ರೆ ಖಂಡಿತಾ ಈ ಬಾರಿ ಈ ವಿಶೇಷ ಸೌಲಭ್ಯ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಆಪಲ್‌ನ ಫೈಂಡ್ ಮೈ ನೆಟ್‌ವರ್ಕ್‌ನಂತೆಯೇ ಕೆಲಸ ಮಾಡಲಿದೆ: ಮುಂದಿನ ಓಎಸ್‌ನಲ್ಲಿ ಕಂಡುಬರುವ ಈ ವಿಶೇಷ ಫೀಚರ್ಸ್‌ ಆಪಲ್‌ನ ಫೈಂಡ್ ಮೈ ನೆಟ್‌ವರ್ಕ್‌ನಂತೆಯೇ (Apple Find My Network) ಕೆಲಸ ಮಾಡುತ್ತದೆ ಎನ್ನಲಾಗಿದೆ. ಅಂದರೆ ಫೋನ್ ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲದಿದ್ದರೂ ಸಹ ಆ ಫೋನ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಅದನ್ನು ಪತ್ತೆ ಮಾಡಲು ಅನುವು ಮಾಡಿಕೊಡುತ್ತದೆ.

ಫೋನ್‌ಗಳಲ್ಲಿ ವಿಶೇಷ ಸೌಲಭ್ಯ! ಕಳುವಾದ ಫೋನ್ ಆಫ್‌ ಆಗಿದ್ರೂ ಪತ್ತೆ ಮಾಡಬಹುದು...

ಇದು ಹೇಗೆ ಕೆಲಸ ಮಾಡುತ್ತದೆ?: ಈ ವಿಶೇಷ ಫೀಚರ್ಸ್‌ ಇರುವ ಫೋನ್‌ಗಳಲ್ಲಿ ಪವರ್ ಡೌನ್ ಆಗಿರುವಾಗಲೂ ಬ್ಲೂಟೂತ್ ಬೀಕನ್ ಸಿಗ್ನಲಿಂಗ್ ಅನ್ನು ನಿರ್ವಹಿಸುವ ಮೂಲಕ ಈ ಕಾರ್ಯ ಮಾಡಲಾಗುತ್ತದೆ. ಇತರ ಹೊಂದಾಣಿಕೆಯ ಡಿವೈಸ್‌ಗಳು ತಮ್ಮ ಸ್ಥಳವನ್ನು ಫೋನ್‌ ಬಳಕೆದಾರರಿಗೆ ಪತ್ತೆಹಚ್ಚಲು ಮತ್ತು ವರದಿ ಮಾಡಲು ಅನುಕೂಲ ಮಾಡಿಕೊಡುತ್ತವೆ.

ಫೈಂಡ್‌ ಮೈ ಡಿವೈಸ್‌: ಈಗಾಗಲೇ ನೀವು ಬಳಕೆ ಮಾಡುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಫೈಂಡ್‌ ಮೈ ಡಿವೈಸ್‌ (Find my device) ಫೀಚರ್ಸ್‌ ಅನ್ನು ಗಮನಿಸಿರಬಹುದು. ಆದರೆ ಇದನ್ನು ಇನ್ನಷ್ಟು ವಿಸ್ತರಣೆ ಮಾಡಲು ಗೂಗಲ್‌ ಈಗಾಗಲೇ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಅಂದರೆ, ಆಫ್‌ಲೈನ್ ಡಿವೈಸ್‌ ಮತ್ತು ಥರ್ಡ್-ಪಾರ್ಟಿ ಟ್ರ್ಯಾಕರ್‌ಗಳನ್ನು ಸೇರಿಸಲು ಗೂಗಲ್‌ ಈಗಾಗಲೇ ಘೋಷಣೆ ಮಾಡಿದೆಯಾದರೂ ಇನ್ನು ಅನುಷ್ಠಾನ ಮಾಡಲಾಗಿಲ್ಲ.

ಈ ಸೌಲಭ್ಯವನ್ನು ಕಾರ್ಯಗತಗೊಳಿಸಿದ ಬಳಿಕ ಅಪ್‌ಗ್ರೇಡ್ ಫೈಂಡ್‌ ಮೈ ಡಿವೈಸ್‌ನಲ್ಲಿ ಇನ್ನಷ್ಟು ಹೊಸ ಸೌಲಭ್ಯಗಳು ಲಭ್ಯವಾಗಲಿವೆ. ಇದು ಡಿವೈಸ್‌ನ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಗೌಪ್ಯತೆ ಕ್ರಮಗಳನ್ನು ಸುಧಾರಿಸುತ್ತದೆ. ಅದರಲ್ಲೂ ಸಂಭಾವ್ಯ ಗೌಪ್ಯತೆ ಉಲ್ಲಂಘನೆಗಳ ವಿರುದ್ಧ ರಕ್ಷಣೆಯ ಹೆಚ್ಚುವರಿ ಲೇಯರ್‌ ಅನ್ನು ಇದರಲ್ಲಿ ಕಾಣಬಹುದಾಗಿದೆ. ಅಂದರೆ ಯಾರಾದರೂ ನಿಮ್ಮ ಒಪ್ಪಿಗೆಯಿಲ್ಲದೆ ಥರ್ಡ್‌ ಪಾರ್ಟಿ ಟ್ರ್ಯಾಕರ್ ಅನ್ನು ಬಳಕೆ ಮಾಡಿಕೊಂಡು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು ಮುಂದಾದರೆ ನಿಮಗೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತದೆ.

ಫೋನ್‌ಗಳಲ್ಲಿ ವಿಶೇಷ ಸೌಲಭ್ಯ! ಕಳುವಾದ ಫೋನ್ ಆಫ್‌ ಆಗಿದ್ರೂ ಪತ್ತೆ ಮಾಡಬಹುದು...

ಸದ್ಯಕ್ಕೆ ಈ ಫೈಂಡ್‌ ಮೈ ಡಿವೈಸ್‌ ಇಂಟರ್ನೆಟ್‌ಗೆ ಸಂಪರ್ಕಗೊಂಡಿರುವ ಆಂಡ್ರಾಯ್ಡ್‌ ಮತ್ತು ವಿಯರ್‌ ಓಎಸ್‌ ಡಿವೈಸ್‌ಗಳಲ್ಲಿ (Wear OS device) ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಇದು ಅಪ್‌ಗ್ರೇಡ್‌ ಆದರೆ ಇಂಟರ್ನೆಟ್‌ಗೆ ಸಂಪರ್ಕಿಸಲು ಸಾಧ್ಯವಾಗದ ಸಂದರ್ಭಗಳಲ್ಲಿಯೂ ಸಹ ಬಳಕೆದಾರರು ಡಿವೈಸ್‌ಗಳನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

ಯಾವ ಫೋನ್‌ನಲ್ಲಿ ಹೊಸ ಫೀಚರ್ಸ್‌ ಕಾಣಿಸಿಕೊಳ್ಳಲಿದೆ?: ಇನ್ನು ಉಲ್ಲೇಖಿಸಿದ ವರದಿಯು ನಿಜವೇ ಆದರೆ ಗೂಗಲ್‌ ಪಿಕ್ಸೆಲ್‌ 9 ನಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಆದರೆ, ಇತರೆ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳು ಈ ಫೀಚರ್ಸ್‌ ಅನ್ನು ಕಲ್ಪಿಸಿಕೊಡುವಲ್ಲಿ ಇನ್ನೂ ಮುಂದೆ ಬಂದಿಲ್ಲ. ಯಾಕೆಂದರೆ ಆಫ್‌ಲೈನ್ ಡಿವೈಸ್‌ ಟ್ರ್ಯಾಕಿಂಗ್‌ನ ಅನುಷ್ಠಾನಕ್ಕೆ ಹಾರ್ಡ್‌ವೇರ್ ವಿಭಾಗದಲ್ಲಿ ವಿಶೇಷ ಎಂಜಿನಿಯರಿಂಗ್ ಅಗತ್ಯ ಇರುವುದರಿಂದ ಹಳೆಯ ಮಾದರಿಗಳಲ್ಲಿ ಈ ಸೌಲಭ್ಯ ನಿಮಗೆ ಲಭ್ಯ ಇರುವುದಿಲ್ಲ.

Best Mobiles in India

English summary
It is said that a special facility will be available in Android 15 OS. This OS will allow you to find lost smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+