Android 16 ಡೆವಲಪರ್ ಪೂರ್ವವೀಕ್ಷಣೆ ಲಾಂಚ್; ಭಾರೀ ಅಚ್ಚರಿಯ ಫೀಚರ್ಸ್ ಇವೆ!
ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆಯ ಬಹು ನಿರೀಕ್ಷಿತ ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್‌ನ ಮೊದಲ ಡೆವಲಪರ್ ಪೂರ್ವವೀಕ್ಷಣೆಯ ( Android 16 Developer Preview ) ರೋಲ್‌ಔಟ್ ಅನ್ನು ಗೂಗಲ್ ಘೋಷಿಸಿದೆ. ಆಂಡ್ರಾಯ್ಡ್ 16 (Android 16) ಓಎಸ್‌ನ ಸ್ಥಿರ ಆವೃತ್ತಿಯು Q2 2025 ರಲ್ಲಿ ಲಭ್ಯ ಆಗಲಿದೆ ಎಂದು ಗೂಗಲ್ ( Google ) ದೃಢಪಡಿಸಿದೆ. ಇನ್ನು ಈ ನೂತನ ಓಎಸ್ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ.
ಹೌದು, ಗೂಗಲ್ ಸಂಸ್ಥೆಯು ತನ್ನ ಹೊಸ ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್‌ನ ಮೊದಲ ಡೆವಲಪರ್ ಪೂರ್ವವೀಕ್ಷಣೆಯ ರೋಲ್ಔಟ್ ಲಭ್ಯ ಮಾಡಿದೆ. ಆರಂಭದಲ್ಲಿ ಗೂಗಲ್ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯ ಇರುತ್ತದೆ ಎನ್ನಲಾಗಿದೆ. ಇನ್ನು ಈ ನೂತನ ಆಪರೇಟಿಂಗ್ ಸಿಸ್ಟಮ್‌ನ ಸ್ಥಿರ ಹಾಗೂ ಸಾರ್ವಜನಿಕ ಮುಕ್ತ ಬಿಡುಗಡೆಯು 2025 ರ ದ್ವಿತೀಯಾರ್ಧದಲ್ಲಿ ಮಾಡಲಿದೆ.

ಅಂದಹಾಗೆ ಆಂಡ್ರಾಯ್ಡ್ 16 ಓಎಸ್ ಅಪ್‌ಡೇಟ್ ಎಂಬೆಡೆಡ್ ಫೋಟೋ ಪಿಕ್ಕರ್, ವೈದ್ಯಕೀಯ ದಾಖಲೆ ಸಪೋರ್ಟ್ ಮತ್ತು ಅಪ್‌ಡೇಟ್ ಸೆಕ್ಯುರಿಟಿ ಸ್ಯಾಂಡ್‌ಬಾಕ್ಸ್ ಗಳಂತಹ ಕೆಲವು ನೂತನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂದು ವರದಿಯಾಗಿದೆ. ಹಾಗಾದ್ರೆ ಆಂಡ್ರಾಯ್ಡ್ 16 ಓಎಸ್ ಅನ್ನು ಬೆಂಬಲಿಸುವ ಡಿವೈಸ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.
ಆಂಡ್ರಾಯ್ಡ್ 16 ಓಎಸ್ ಯಾವಾಗ ಲಭ್ಯ
ಗೂಗಲ್ ಸಂಸ್ಥೆಯು ಎರಡು ಪ್ರಮುಖ Android API ಅಪ್‌ಡೇಟ್‌ಗಳನ್ನು ಹೊರತರಲು ಯೋಜಿಸಿದೆ. ಆಂಡ್ರಾಯ್ಡ್ 16 (Android 16) ಅನ್ನು Q2 2025 ರಲ್ಲಿ ಪ್ರಾರಂಭಿಸಲು ಯೋಜಿಸಲಾಗಿದೆ, ಹಾಗೆಯೇ ಆಂಡ್ರಾಯ್ಡ್ 16 ( Android 16 ) ದ್ವಿತೀಯ ಅಪ್‌ಡೇಟ್ ಅನ್ನು Q4 2025 ರಲ್ಲಿ ಪರಿಚಯಿಸಲಿದೆ.
ಆಂಡ್ರಾಯ್ಡ್ 16 ಡೆವಲಪರ್ ಪೂರ್ವವೀಕ್ಷಣೆ - ಬೆಂಬಲಿತ ಡಿವೈಸ್‌ಗಳ ಲಿಸ್ಟ್
ಗೂಗಲ್ ಸಂಸ್ಥೆಯ ಗೂಗಲ್ ಪಿಕ್ಸಲ್ 6a ಹಾಗೂ ನೂತನ ಪಿಕ್ಸಲ್ ಸರಣಿಯ ಫೋನ್‌ಗಳು Android 16 ಅಪ್‌ಡೇಟ್ ಸ್ವೀಕರಿಸಲು ಅರ್ಹವಾಗಿವೆ. ಇನ್ನು ಬಿಲ್ಡ್ ಸಂಖ್ಯೆ BP21.241018.009 ನೊಂದಿಗೆ ಫಸ್ಟ್ ಡೆವಲಪರ್ ಪೂರ್ವವೀಕ್ಷಣೆಯು ಗೂಗಲ್ ಪಿಕ್ಸಲ್ 9 ಸರಣಿ, ಗೂಗಲ್ ಪಿಕ್ಸಲ್ 9 ಪ್ರೊ ಫೋಲ್ಡ್, ಗೂಗಲ್ ಪಿಕ್ಸಲ್ 8 ಸರಣಿ, ಗೂಗಲ್ ಪಿಕ್ಸಲ್ 8a, ಗೂಗಲ್ ಪಿಕ್ಸಲ್ ಫೋಲ್ಡ್, ಗೂಗಲ್ ಪಿಕ್ಸಲ್ 7a, ಗೂಗಲ್ ಪಿಕ್ಸಲ್ 7 ಸರಣಿ, ಗೂಗಲ್ ಪಿಕ್ಸಲ್ 6 ಸರಣಿ ಮತ್ತು ಗೂಗಲ್ ಪಿಕ್ಸಲ್ 6a ಗೆ ಲಭ್ಯ ಇರುತ್ತದೆ.
ಹೆಲ್ತ್ ರೆಕಾರ್ಡ್
ಆಂಡ್ರಾಯ್ಡ್ 16 ಡೆವಲಪರ್ ಪೂರ್ವವೀಕ್ಷಣೆ ಓಎಸ್ ಹೆಲ್ತ್ ಕನೆಕ್ಟ್‌ನ (Health Connect) ಆರೋಗ್ಯ ದಾಖಲೆಗಳನ್ನು ಸಪೋರ್ಟ್ ಮಾಡುವ API ಗಳ ಆರಂಭಿಕ ಆವೃತ್ತಿಯನ್ನು ಒಳಗೊಂಡಿದೆ. ಇದು ಸ್ಪಷ್ಟ ಬಳಕೆದಾರ ಸಮ್ಮತಿಯೊಂದಿಗೆ FHIR ಸ್ವರೂಪದಲ್ಲಿ ವೈದ್ಯಕೀಯ ದಾಖಲೆಗಳನ್ನು ಓದಲು ಮತ್ತು ಬರೆಯಲು ಆಪ್ ಅನುಮತಿಸುತ್ತದೆ. ಅಂದಹಾಗೆ ಈ API ಪ್ರಸ್ತುತ ಆರಂಭಿಕ ಪ್ರವೇಶ ಪ್ರೋಗ್ರಾಂನಲ್ಲಿ ಇದೆ.
ಎಂಬೆಡೆಡ್ ಫೋಟೋ ಪಿಕ್ಕರ್
ಗೂಗಲ್ ನೂತನ ಓಎಸ್‌ನಲ್ಲಿ ( Embedded photo picker ) ಎಂಬೆಡೆಡ್ ಫೋಟೋ ಪಿಕ್ಕರ್ ಆಯ್ಕೆಯನ್ನು ಸೇರ್ಪಡೆ ಮಾಡಿದೆ. ಇದು ಸಂಪೂರ್ಣ ಮೀಡಿಯಾ ಲೈಬ್ರರಿಗೆ ಆಕ್ಸಸ್ ಅನ್ನು ನೀಡುವ ಬದಲು ಕೆಲವು ಫೋಟೋಗಳು ಹಾಗೂ ವೀಡಿಯೊಗಳಿಗೆ ಆಪ್ ಅನ್ನು ಆಕ್ಸಸ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ.


Click it and Unblock the Notifications








