Home
ಸುದ್ದಿಜಾಲ

ಆಂಡ್ರಾಯ್ಡ್ 'ಪಿ' ಅಧಿಕೃತ ಹೆಸರು ಬಹಿರಂಗ!..ಈ ಬಾರಿಯ ಸಿಹಿತಿಂಡಿಯ ಹೆಸರೇನು ಗೊತ್ತಾ?

By Bhaskar N J

ಭಾರೀ ಕುತೂಹಲ ಮೂಡಿಸಿದ್ದ ಗೂಗಲ್ ಬಿಡುಗಡೆ ಮಾಡುತ್ತಿರುವ ಹೊಸ ಆಂಡ್ರಾಯ್ಡ್ ಆವೃತ್ತಿಯ ಹೆಸರು ಇದೀಗ ಬಹಿರಂಗಗೊಂಡಿದೆ. ಗೂಗಲ್‌ ಉತ್ಪನ್ನ ಆಂಡ್ರಾಯ್ಡ್‌ನ ಹೊಸ ಆವೃತ್ತಿ 'ಆಂಡ್ರಾಯ್ಡ್ ಪಿ' ಸದ್ಯದಲ್ಲೇ ಹೊರಬರಲಿದೆ ಎನ್ನುವುದು ಅಧಿಕೃತವಾಗಿ ಘೋಷಣೆಯಾದ ನಂತರ ಆಂಡ್ರಾಯ್ಡ್ 'ಪಿ' ಎಂದರೆ ಏನು ಎಂಬುದನ್ನು ಗೂಗಲ್ ಅಧಿಕೃತವಾಗಿ ಪ್ರಕಟಿಸಿದೆ.

ಈ ಮೊದಲು ಗೂಗಲ್ ತನ್ನ ಒಎಸ್​ ಹೆಸರನ್ನು 'ಪಿಸ್ತಾಚಿಯೋ'ಎಂದು ಹೆಸರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ಕುತೂಹಲ ಈಗಷ್ಟೇ ಅಂತ್ಯವಾಗಿದ್ದು. ಸದ್ಯ ಹೊರಬರಲಿರುವ ಆಂಡ್ರಾಯ್ಡ್‌ನ ಒಂಬತ್ತನೇ ಆವೃತ್ತಿಗೆ ಆಂಡ್ರಾಯ್ಡ್ ಪೈ ಎಂದು ಹೆಸರಿಡಲಾಗಿದೆ. ಓದಲು ಮತ್ತು ಕೇಳಲು ಗಣಿತದ 'ಪೈ' ಹಾಗೆಯೇ ಇರುವ ಇದರ ಅರ್ಥ ಒಂದು ಸಿಹಿ ತಿಂಡಿಯದ್ದಾಗಿದೆ.

ಆಂಡ್ರಾಯ್ಡ್ 'ಪಿ' ಅಧಿಕೃತ ಹೆಸರು ಬಹಿರಂಗ!..ಈ ಬಾರಿಯ ಸಿಹಿತಿಂಡಿಯ ಹೆಸರೇನು?

'ಪೈ' ಎನ್ನುವುದು ಹಣ್ಣನ್ನು ಹುದುಗಿ ಬೇಯಿಸಿದ ಹೂರಣ ಎಂಬುದರ ಸೂಚಕವಾಗಿದ್ದು, ಕಳೆದ ಬಾರಿ ಓರಿಯೋ ಬಿಸ್ಕತ್ ಹೆಸರನ್ನಿಟ್ಟದ್ದ ಗೂಗಲ್ ಈ ಬಾರಿ ಹಣ್ಣನ್ನು ಹುದುಗಿ ಬೇಯಿಸಿದ ಹೂರಣದ ಕಡುಬಿನಂತಹ ಹೆಸರನ್ನಿಟ್ಟಿದೆ. ಪ್ರತಿಬಾರಿಯೂ ಹೊಸ ಆಂಡ್ರಾಯ್ಡ್ ಆವೃತ್ತಿಯ ಹೆಸರು ಏನಿರಬಹುದು ಎನ್ನುವ ಕುತೂಹಲದಲ್ಲಿ ಈ ಬಾರಿಯ ಕುತೋಹಲ ಈಗ ತಣಿದಿದೆ.

ಆಂಡ್ರಾಯ್ಡ್‌ನ ಹೊಸ ಆವೃತ್ತಿಗಳನ್ನು ನಿಯಮಿತವಾಗಿ ಹೊರತರುವ ಗೂಗಲ್ ಸರಣಿ ಇಂಗ್ಲಿಷಿನ ಅಕಾರಾದಿ ಕ್ರಮವನ್ನು ಅನುಸರಿಸುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಆ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುವುದು ಅದರ ವಿಶೇಷವಾಗಿದೆ. ಇದರಿಂದ ಪ್ರತಿ ಬಾರಿಯೂ ಹೊಸ ಆಂಡ್ರಾಯ್ಡ್ ಆವೃತ್ತಿಯ ಹೆಸರು ಏನಿರಬಹುದು ಎನ್ನುವ ಕುತೂಹಲ ಮೂಡುತ್ತಿದೆ.

ಆಂಡ್ರಾಯ್ಡ್ 'ಪಿ' ಅಧಿಕೃತ ಹೆಸರು ಬಹಿರಂಗ!..ಈ ಬಾರಿಯ ಸಿಹಿತಿಂಡಿಯ ಹೆಸರೇನು?

2009ರಿಂದ ಶುರುವಾಗಿರುವ ಈ ಸಂಪ್ರದಾಯದಲ್ಲಿ ಕಪ್ ಕೇಕ್ , ಡೋನಟ್ , ಎಕ್ಲೆರ್ , ಫ್ರೋಯೋ , ಜಿಂಜರ್ ಬ್ರೆಡ್ , ಹನಿಕೊಂಬ್, ಐಸ್ ಕ್ರೀಮ್ ಸ್ಯಾಂಡ್ ವಿಚ್, ಜೆಲ್ಲಿ ಬೀನ್ , ಕಿಟ್ ಕ್ಯಾಟ್, ಲಾಲಿ ಪಾಪ್, ಓರಿಯೋ ಹೀಗೆಲ್ಲಾ ಹೆಸರುಗಳನ್ನು ಗೂಗಲ್ ಇಡುತ್ತಲೇ ಬಂದಿತ್ತು. ಇದೀಗ ಆಂಡ್ರಾಯ್ಡ್ ಪಿ ಸರದಿ ಬಂದಿದ್ದು, 'ಪೈ' ಎನ್ನುವ ಹೂರಣದ ಹೆಸರನ್ನಿಟ್ಟು ಗಮನಸೆಳೆದಿದೆ.

ಓದಿರಿ: ಆಗಸ್ಟ್ 21 ರಿಂದ ಅಂಚೆ ಪೇಮೆಂಟ್ ಬ್ಯಾಂಕ್' ಆರಂಭ!..ಖಾತೆ ತೆರೆಯಲು 5 ಕಾರಣಗಳು!!

Best Mobiles in India

English summary
Essential PH-1 is the first non-google smartphone to official support Android 9 Pie. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+