Home
ಸುದ್ದಿಜಾಲ

ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇನ್ಮುಂದೆ ಈ ತಲೆನೋವಿಲ್ಲ!

ಭಾರತದಲ್ಲಿ ಟೆಕ್‌ ವಲಯಕ್ಕೆ ಸಂಬಂಧಿಸಿದಂತೆ ಕೆಲವು ವಿಶೇಷ ಕಾನೂನುಗಳನ್ನು ಪಾಲನೆ ಮಾಡಬೇಕು.ಈ ಕಾನೂನಿನ ವಿರುದ್ಧ ಯಾರೇ ನಡೆದುಕೊಂಡರು ಶಿಕ್ಷೆಗೆ ಗುರಿಯಾಗುವುದಂತೂ ಕಟ್ಟಿಟ್ಟ ಬುತ್ತಿ. ಈ ಕಾರಣಕ್ಕೆ ಇನ್ಮುಂದೆ ನೀವು ಯಾವುದೇ ಫೋನ್‌ ಖರೀದಿ ಮಾಡಿದರೂ ಈ ವಿಷಯಗಳಿಗೆ ಪೂರ್ಣ ಸ್ವಾತಂತ್ರ್ಯ ಪಡೆಯಬಹುದು.

ಹೌದು, ಭಾರತದಲ್ಲಿ ಬಹುಪಾಲು ಎಲ್ಲಾ ಬ್ರ್ಯಾಂಡ್‌ನ ಆಂಡ್ರಾಯ್ಡ್‌ ಫೋನ್‌ಗಳ ಮೇಲೆ ಗೂಗಲ್‌ ತನ್ನದೇ ಆದ ಪ್ರಾಬಲ್ಯ ಸಾಧಿಸಿತ್ತು. ಆದರೆ, ಸರ್ಕಾರದ ಕೆಲವು ಕಠಿಣ ನಿರ್ಧಾರದಿಂದ ಹಾಗೂ ಗೂಗಲ್‌ಗೆ ವಿಧಿಸಿದ ದಂಡದ ಪರಿಣಾಮದಿಂದ ಇನ್ಮುಂದೆ ಫೋನ್‌ಗಳ ಮೇಲೆ ಗೂಗಲ್‌ನ ಪ್ರಾಬಲ್ಯ ಕಡಿಮೆಯಾಗಲಿದೆ. ಹಾಗಿದ್ರೆ, ಗೂಗಲ್‌ ಈ ವರೆಗೆ ಮಾಡುತ್ತಿದ್ದ ಕೆಲಸವೇನು? ಮುಂದೆ ಬಳಕೆದಾರರಿಗೆ ಆಗುವ ಅನುಕೂಲಗಳೇನು? ಎಂಬ ಮಾಹಿತಿಯನ್ನು ವಿವರಿಸಲಾಗಿದೆ ಓದಿರಿ.

ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇನ್ಮುಂದೆ ಈ ತಲೆನೋವಿಲ್ಲ!

ಗೂಗಲ್ ಮೇಲೆ ಪ್ರಬಲ ಸ್ಥಾನದ ದುರುಪಯೋಗ ಆರೋಪ

ಗೂಗಲ್‌ ಮೇಲೆ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿಬರುತ್ತಿದ್ದು, ಈ ಸಂಬಂಧ ಗೂಗಲ್ ಇಂಡಿಯಾ ವಿರುದ್ಧ ನೀಡಿದ ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ತೀರ್ಪು ಹೊರಬಿದ್ದ ನಂತರ ಮಾರುಕಟ್ಟೆಗೆ ಬರುವ ಯಾವುದೇ ಫೋನ್‌ಗಳು ಗೂಗಲ್‌ ಮಾಲೀಕತ್ವದ ಆಪ್‌ಗಳಿಂದ ಮುಕ್ತಿಪಡೆಯಲಿವೆ ಎನ್ನಲಾಗಿದೆ.

ಯಾವೆಲ್ಲಾ ಆಪ್‌ಗಳಿಗೆ ಕಡಿವಾಣ?

ಮಾರುಕಟ್ಟೆಯಲ್ಲಿ ಬಳಕೆಗೆ ತಕ್ಕಂತೆ ವಿವಿಧ ರೀತಿಯ ಆಪ್‌ಗಳು ಲಭ್ಯವಿದ್ದು, ಅದರಲ್ಲಿ ಗೂಗಲ್‌ ಆಪ್‌ಗಳು ಸಹ ಒಂದು. ಆದರೆ, ಯಾವುದೇ ಹೊಸ ಫೋನ್‌ನಲ್ಲಿ ತನ್ನ ಬಂಡತನ ಪ್ರದರ್ಶಿಸುತ್ತಿದ್ದ ಗೂಗಲ್‌ ಪ್ರಮುಖ ಆಪ್‌ಗಳಾದ ಕ್ರೋಮ್‌, ಗೂಗಲ್ ಪೇ, ಜಿ-ಮೇಲ್‌ ಹಾಗೂ ಗೂಗಲ್‌ ಮ್ಯಾಪ್‌ ಆಪ್‌ಗಳನ್ನು ಪೂರ್ವದಲ್ಲಿಯೇ ಇನ್‌ಸ್ಟಾಲ್‌ ಮಾಡಿಸುತ್ತಿತ್ತು. ಹೀಗಾಗಿ ಬಳಕೆದಾರರು ಬೇರೆ ಆಪ್‌ ಬಗ್ಗೆ ಅಲೋಚನೆ ಮಾಡದೆ ಇರುವುದನ್ನೇ ಬಳಸಲು ಮುಂದಾಗುತ್ತಿದ್ದರು.

ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇನ್ಮುಂದೆ ಈ ತಲೆನೋವಿಲ್ಲ!

ಇನ್ಮುಂದೆ ಹೊಸ ಆಂಡ್ರಾಯ್ಡ್‌ ಫೋನ್‌ನಲ್ಲಿ ಯಾವ ಆಪ್‌ ಇರಲಿವೆ?

ಈವರೆಗೂ ಗೂಗಲ್‌ ಒಂದೇ ಸಾಕಷ್ಟು ಫೋನ್‌ಗಳ ಬ್ರ್ಯಾಂಡ್ ಅನ್ನು ಆಕ್ರಮಿಸಿಕೊಂಡಿತ್ತು. ಆದರೆ, ಇನ್ಮುಂದೆ ಯಾವುದೇ ಫೋನ್‌ನ ತಯಾರಕರು ತಮಗೆ ಇಷ್ಟ ಇರುವ ಸಂಸ್ಥೆಯ ಆಪ್‌ಗಳನ್ನು ಪೂರ್ವದಲ್ಲಿ ಇನ್‌ಸ್ಟಾಲ್‌ ಮಾಡಲು ಸಾಧ್ಯವಾಗುತ್ತದೆ. ಅದಾಗ್ಯೂ ಫೋನ್ ಖರೀದಿ ಮಾಡಿದ ಮೇಲೆ ಬಳಕೆದಾರರು ಸಹ ತಮಗೆ ಇಷ್ಟವಾದ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತದೆ. ಈ ಬದಲಾವಣೆಗಳು ಇತ್ತೀಚಿನ CCI ಆದೇಶದ ಅನುಸರಣೆಯಲ್ಲಿವೆ.

ಗೂಗಲ್‌ ಹೇಳಿದ್ದಿಷ್ಟಿ?

ಭಾರತದಲ್ಲಿ ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನಾವು ನಮ್ಮ ಬದ್ಧತೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಆಂಡ್ರಾಯ್ಡ್‌ ಮತ್ತು ಗೂಗಲ್‌ ಪ್ಲೇ ಗಾಗಿ ಭಾರತದ ಸ್ಪರ್ಧಾತ್ಮಕ ಆಯೋಗದ (CCI) ಇತ್ತೀಚಿನ ನಿರ್ದೇಶನಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಬೇಕಾಗಿದೆ. ಜೊತೆಗೆ ನಾವು ಅವರ ನಿರ್ದೇಶನಗಳನ್ನು ಹೇಗೆ ಅನುಸರಿಸುತ್ತಿದ್ದೇವೆ ಎಂಬುದನ್ನು CCI ಗೆ ತಿಳಿಸಿದ್ದೇವೆ ಎಂದು ಗೂಗಲ್‌ ತಿಳಿಸಿದೆ.

ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಇನ್ಮುಂದೆ ಈ ತಲೆನೋವಿಲ್ಲ!

ಇನ್ಮುಂದೆ ಬಿಲ್ಲಿಂಗ್‌ ಸಿಸ್ಟಮ್

ಮುಂದಿನ ತಿಂಗಳಿನಿಂದ ಎಲ್ಲಾ ಆಪ್‌ಗಳು ಮತ್ತು ಗೇಮ್‌ ಆಪ್‌ ಬಳಕೆದಾರರಿಗೆ ಬಿಲ್ಲಿಂಗ್ ಲಭ್ಯವಿರುತ್ತದೆ. ಆಪ್‌ನಲ್ಲಿ ಡಿಜಿಟಲ್ ಕಂಟೆಂಟ್‌ ಖರೀದಿಸುವಾಗ ಗೂಗಲ್‌ ಪ್ಲೇ ನ ಬಿಲ್ಲಿಂಗ್ ಸಿಸ್ಟಮ್ ಜೊತೆಗೆ ಪರ್ಯಾಯ ಬಿಲ್ಲಿಂಗ್ ವ್ಯವಸ್ಥೆಯನ್ನು ಆಯ್ಕೆ ಮಾಡುವ ಸೌಲಭ್ಯವನ್ನು ಡೆವಲಪರ್‌ಗಳು ಬಳಕೆದಾರರಿಗೆ ನೀಡಬಹುದು ಎಂದು ಉಲ್ಲೇಖಿಸಿದೆ. ಈ ಮೂಲಕ ಗ್ರಾಹಕರಿಗೆ ಮುಕ್ತ ಸ್ವಾತಂತ್ರ್ಯ ನೀಡುವುದಾಗಿ ತಿಳಿಸಿದೆ.

ಗೂಗಲ್‌ಗೆ 1,350 ಕೋಟಿ ರೂಪಾಯಿ ದಂಡ

2022 ರ ಅಕ್ಟೋಬರ್‌ನಲ್ಲಿ ಆಂಡ್ರಾಯ್ಡ್‌ನಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ CCI ಗೂಗಲ್‌ಗೆ 1,350 ಕೋಟಿ ರೂಪಾಯಿ ದಂಡವನ್ನು ವಿಧಿಸಿತ್ತು. ಆಪ್‌ಗಳ ಪೂರ್ವ ಸ್ಥಾಪನೆ ಮತ್ತು ಅದರ ಹುಡುಕಾಟದ ಪ್ರತ್ಯೇಕತೆಯನ್ನು ಖಾತ್ರಿಪಡಿಸುವುದು ಸೇರಿದಂತೆ ಡಿವೈಸ್‌ ತಯಾರಕರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಗೂಗಲ್‌ಗೆ ಸೂಚಿಸಲಾಗಿತ್ತು. ಆದರೂ ವಿಧಿಸಿದ ದಂಡವನ್ನು ಇನ್ನೂ ಪಾವತಿಸಿಲ್ಲ. CCI ಆದೇಶವನ್ನು ತೆರವು ಮಾಡಲು NCLAT ನಿರಾಕರಿಸಿದ ನಂತರ ಗೂಗಲ್‌ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

Best Mobiles in India

English summary
Search giant Google has now revised its policy, android smartphone come into the market without pre-installed apps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+