Home
ಸುದ್ದಿಜಾಲ

ಹೊಸ ರೂಲ್ಸ್‌.. ಸಿಮ್ ಕಾರ್ಡ್ ಸ್ವ್ಯಾಪ್ ಮಾಡಿದ ಬಳಿಕ 7 ದಿನಗಳವರೆಗೆ ಪೋರ್ಟಿಂಗ್ ನಿಷೇಧ!

ಸಿಮ್‌ (SIM) ಕಾರ್ಡ್‌ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸರ್ಕಾರ ಹಾಗೂ ಟೆಲಿಕಾಂ ಸಂಸ್ಥೆಗಳು ಸಾಕಷ್ಟು ನವೀಕರಣಗಳನ್ನು ಮಾಡಿಕೊಂಡು ಬಂದಿದೆ. ಯಾಕೆಂದರೆ ಈ ಸಿಮ್‌ಗಳನ್ನು ಬಳಕೆ ಮಾಡಿಕೊಂಡೇ ಸ್ಕ್ಯಾಮರ್‌ಗಳು ದೊಡ್ಡ ಮಟ್ಟದ ವಂಚನೆಗಳನ್ನು ಮಾಡುತ್ತಿದ್ದು, ಭಾರೀ ಹಣವನ್ನು ಕೆಟ್ಟ ಮಾರ್ಗದ ಮೂಲಕ ಸಂಪಾದನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ರೀತಿಯಲ್ಲಿ ಜನರನ್ನು ಹಿಂಸಿಸುತ್ತಿದ್ದಾರೆ.

ಹೌದು, ಸಿಮ್‌ ಕಾರ್ಡ್‌ ಇಲ್ಲದೆ ಫೋನ್‌ ಬಳಕೆ ಅಸಾಧ್ಯ. ಈ ನಡುವೆ ಇ-ಸಿಮ್‌ (E-SIM) ಬಳಕೆ ಸಹ ಹಚ್ಚಾಗುತ್ತಿದ್ದು, ಕೆಲವೇ ಸ್ಮಾರ್ಟ್‌ಫೋನ್‌ಗಳು ಮಾತ್ರ ಇದಕ್ಕೆ ಬೆಂಬಲ ನೀಡುತ್ತವೆ. ಈ ಎಲ್ಲಾ ಬೆಳವಣಿಗೆ ನಡುವೆ ಟ್ರಾಯ್‌ ಸಿಮ್‌ ಕಾರ್ಡ್‌ ಸಂಬಂಧ ಪ್ರಮುಖ ಆದೇಶವೊಂದನ್ನು ನೀಡಿದೆ. ಈ ಮೂಲಕ ಹಗರಣವನ್ನು ತಡೆಯಲು ಸಜ್ಜಾಗಿದೆ. ಹಾಗಿದ್ರೆ, ಏನಿದು ಹೊಸ ರೂಲ್ಸ್‌, ಇದರಿಂದ ಬಳಕೆದಾರರಿಗೆ ಏನೆಲ್ಲಾ ಲಾಭ ಆಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸಿಮ್ ಕಾರ್ಡ್ ಸ್ವ್ಯಾಪ್ ಮಾಡಿದ ಬಳಿಕ 7 ದಿನಗಳವರೆಗೆ ಪೋರ್ಟಿಂಗ್ ನಿಷೇಧ!...

ಸಿಮ್‌ ಕಾರ್ಡ್‌ ಸಂಬಂಧ ಹೊಸ ರೂಲ್ಸ್: ಸಿಮ್‌ ಕಾರ್ಡ್‌ ಸಂಬಂಧ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇನ್ಮುಂದೆ ಬಳಕೆದಾರರು ತಮ್ಮ ಸಿಮ್ ಅನ್ನು ಸ್ವ್ಯಾಪ್ ಮಾಡಿದ ನಂತರ 7 ದಿನಗಳವರೆಗೆ ತಮ್ಮ ಸಿಮ್ ಅನ್ನು ಪೋರ್ಟ್ ಮಾಡುವ ಹಾಗಿಲ್ಲ. ಈ ಮೂಲಕ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಮೊಬೈಲ್ ನಂಬರ್ ಪೋರ್ಟೆಬಿಲಿಟಿ (MNP) ನಿಯಮಗಳಿಗೆ ಹೊಸ ತಿದ್ದುಪಡಿಯನ್ನು ಸೇರಿಸಿದೆ.

2009 ರಲ್ಲಿ ಈ ನಿಯಮ ಆರಂಭ ಆಗಿದ್ದು, ಅಂದಿನಿಂದ ಇದು ಒಂಬತ್ತನೇ ತಿದ್ದುಪಡಿಯಾಗಿದೆ. ಬಳಕೆದಾರರು ಇತ್ತೀಚೆಗೆ ತಮ್ಮ ಸಿಮ್ ಕಾರ್ಡ್ ಅನ್ನು ವಿನಿಮಯ ಮಾಡಿಕೊಂಡರೆ ಅವರು ತಮ್ಮ ಫೋನ್ ಸಂಖ್ಯೆಯನ್ನು ಹೊಸ ವಾಹಕಕ್ಕೆ ಅಂದರೆ ಟೆಲಿಕಾಂ ಸಂಸ್ಥೆಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಹಾಗಿದ್ರೆ, ಸಿಮ್‌ ಪೋರ್ಟಿಂಗ್‌ (SIM porting) ಎಂದರೇನು ಹಾಗೂ ಸಿಮ್ ಸ್ವಾಪ್ ಎಂದರೇನು? (SIM Swap) ಅನ್ನೋದರ ಬಗ್ಗೆಯೂ ಕಣ್ಣಾಡಿಸೋಣ ಬನ್ನಿ.

ಸಿಮ್ ಕಾರ್ಡ್ ಸ್ವ್ಯಾಪ್ ಮಾಡಿದ ಬಳಿಕ 7 ದಿನಗಳವರೆಗೆ ಪೋರ್ಟಿಂಗ್ ನಿಷೇಧ!...

ಸಿಮ್ ಪೋರ್ಟಿಂಗ್ ಎಂದರೇನು?: ಸಿಮ್‌ ಪೋರ್ಟಿಂಗ್ ಎಂದರೆ ನಿಮ್ಮ ಫೋನ್ ಸಂಖ್ಯೆಯನ್ನು ಒಂದು ಮೊಬೈಲ್ ಸೇವಾ ಪೂರೈಕೆದಾರರಿಂದ ಇನ್ನೊಂದಕ್ಕೆ ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಈ ಮೂಲಕ ನಿಮ್ಮ ಹಳೆಯ ಸಿಮ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೆ, ಅಸ್ತಿತ್ವದಲ್ಲಿರುವ ಫೋನ್ ಸಂಖ್ಯೆಯನ್ನು ಉಳಿಸಿಕೊಂಡು ಹೊಸ ಸೇವಾ ಪೂರೈಕೆದಾರರಿಂದ ಸೇವೆ ಪಡೆಯಬಹುದು. ಇದರಲ್ಲೂ ಸಹ ಕೆಲವು ಕಟ್ಟು ನಿಟ್ಟಿನ ಕ್ರಮಗಳಿವೆ. ಅಂದರೆ ಪೋರ್ಟಿಂಗ್ ಪ್ರಕ್ರಿಯೆಯನ್ನು 3 ತಿಂಗಳಿಗೊಮ್ಮೆ ಮಾತ್ರ ಮಾಡಬೇಕಿದೆ.

ಸಿಮ್ ಸ್ವಾಪ್ ಎಂದರೇನು?: ಇನ್ನು ಸಿಮ್ ಸ್ವಾಪ್ ವಿಚಾರಕ್ಕೆ ಬರುವುದಾದ್ರೆ ನಿಮ್ಮ ಪ್ರಸ್ತುತ ಸಿಮ್ ಕಾರ್ಡ್ ಅನ್ನು ಹೊಸದರೊಂದಿಗೆ ಬದಲಾಯಿಸುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಈ ಮೂಲಕ ಗ್ರಾಹಕರು ಉತ್ತಮ ಫೀಚರ್ಸ್‌ನೊಂದಿಗೆ ಹೊಸ ಸಿಮ್ ಕಾರ್ಡ್‌ಗೆ ಅಪ್‌ಗ್ರೇಡ್ ಆಗಬಹುದಾಗಿದೆ. ಅಲ್ಲದೆ ಕಳೆದುಹೋದ ಅಥವಾ ಹಾನಿಗೊಳಗಾದ ಸಿಮ್ ಕಾರ್ಡ್ ಅನ್ನು ಬದಲಿಸುವುದು ಅಥವಾ ಹೊಸ ಫೋನ್ ಅಥವಾ ನೆಟ್‌ವರ್ಕ್‌ಗೆ ಹೊಂದಿಕೆಯಾಗುವ ಸಿಮ್ ಕಾರ್ಡ್‌ಗೆ ಬದಲಾಗುವುದು ಸೇರಿದಂತೆ ಮುಂತಾದ ಕೆಲಸಗಳಿಗೆ ಸಿಮ್ ಸ್ವಾಪ್ ಎನ್ನಲಾಗುತ್ತದೆ.

ಸಿಮ್ ಕಾರ್ಡ್ ಸ್ವ್ಯಾಪ್ ಮಾಡಿದ ಬಳಿಕ 7 ದಿನಗಳವರೆಗೆ ಪೋರ್ಟಿಂಗ್ ನಿಷೇಧ!...

ಅದರಂತೆ ಈಗ ಟ್ರಾಯ್ಡ್‌ ಹೊಸ ನಿಯಮ ಜಾರಿ ಮಾಡಿದ್ದು, ಸಿಮ್‌ ಹಾನಿ, ಅಥವಾ ಕಳ್ಳತನದ ಕಾರಣದಿಂದ ಬಳಕೆದಾರರು ತಮ್ಮ ಆಪರೇಟರ್‌ನಿಂದ ಹೊಸ ಭೌತಿಕ ಸಿಮ್‌ ಕಾರ್ಡ್ ಅನ್ನ ಪಡೆಯಲು ಮುಂದಾದರೆ ಅವರು ತಮ್ಮ ಸಂಖ್ಯೆಯನ್ನು ಹೊಸ ಟೆಲಿಕಾಂ ಆಪರೇಟರ್‌ಗೆ ವರ್ಗಾಯಿಸಲು ಸಾಧ್ಯವಾಗುವುದಿಲ್ಲ. ಆದರೆ ಏಳು ದಿನಗಳವರೆಗಿನ ಕೂಲ್‌ಡೌನ್ ಅವಧಿಯ ನಂತರ ನೀವು ಬಯಸಿದಲ್ಲಿ ಹೊಸ ನೆಟ್‌ವರ್ಕ್‌ಗೆ ಬದಲಾಗಬಹುದು.

ಈ ಹೊಸ ನಿಯಮವನ್ನು ಯಾಕೆ ಜಾರಿ ಮಾಡಲಾಗಿದೆ?: ವಂಚನೆ ಮತ್ತು ಸ್ಪ್ಯಾಮ್‌ಗಳಿಂದ ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಟ್ರಾಯ್‌ ಹೇಳಿಕೊಂಡಿದೆ. ಇಷ್ಟೇ ಅಲ್ಲದೆ ಫೋನ್ ಸಂಖ್ಯೆಗಳ ಅನಧಿಕೃತ ವರ್ಗಾವಣೆಯನ್ನು ತಡೆಯುವ ಕ್ರಮ ಸಹ ಇದಾಗಿದೆ. ವಂಚನೆಗಳ ಪ್ರಕರಣ ಸಂಖ್ಯೆ ಹೆಚ್ಚುತ್ತಿರುವ ಸಮಯದಲ್ಲಿ ಈ ನಿಯಮವು ಉತ್ತಮ ಎನಿಸಿದೆ.

Best Mobiles in India

English summary
Telecom Regulatory Authority of India has implemented a new rule regarding SIM cards, henceforth users will not have to port their SIM for 7 days after swapping their SIM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+