ಮುಂದಿನ ಬಾರಿ ಒಲಾ-ಉಬರ್‌ನಲ್ಲಿ ಕ್ಯಾಬ್ ಬುಕ್ ಮಾಡುವ ಮುನ್ನ ಈ ಸ್ಟೋರಿ ನೋಡಿ..!

|

ಇಂದಿನ ದಿನದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಆಪ್ ಆಧಾರಿತ ಟ್ಯಾಕ್ಸಿ (ಕ್ಯಾಬ್) ಸೇವೆಯ ಲಾಭವನ್ನು ಹಲವು ಮುಂದಿ ಪಡೆದುಕೊಳ್ಳುತ್ತಿದ್ದಾರೆ. ಹಲವು ಕಾರಣಗಳಿಗಾಗಿ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಅವಲಂಬನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಪ್ರಯಾಣಿಕರು ಅನುಸರಿಸ ಬೇಕಾದ ಕ್ರಮಗಳ ಕುರಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಮುಂದಿನ ಬಾರಿ ಒಲಾ-ಉಬರ್‌ನಲ್ಲಿ ಕ್ಯಾಬ್ ಬುಕ್ ಮಾಡುವ ಮುನ್ನ ಈ ಸ್ಟೋರಿ ನೋಡಿ..!

ಸದ್ಯ ನಗರದಲ್ಲಿ ಓಲಾ ಮತ್ತು ಉಬರ್ ಹೆಚ್ಚಿನ ಪ್ರಮಾಣದಲ್ಲಿ ಸೇವೆಯನ್ನು ನೀಡುತ್ತಿವೆ. ಈ ಹಿನ್ನಲೆಯಲ್ಲಿ ಮುಂದೆ ಆಪ್‌ನಲ್ಲಿ ಟ್ಯಾಕ್ಸಿ ಬುಕ್ ಮಾಡಿದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ವರ್ತಿಸಬೇಕು, ನಿಮ್ಮ ಸುರಕ್ಷತೆಗೆ ಹೇಗೆ ಆದ್ಯತೆಯನ್ನು ನೀಡಬೇಕು ಎಂಬುದರ ಕುರಿತು ಮಾಹಿತಿಯೂ ಇಲ್ಲಿದೆ.

ಓದಿರಿ: ಕನ್ನಡದಲ್ಲಿಯೇ ವಾಟ್ಸ್‌ಆಪ್: ಬಳಸುವುದು ಹೇಗೆ..?

ಕ್ಯಾಬ್ ಹತ್ತುವ ಮುನ್ನ:

ಕ್ಯಾಬ್ ಹತ್ತುವ ಮುನ್ನ:

ಆಪ್‌ನಲ್ಲಿ ಕ್ಯಾಬ್ ಬುಕ್ ಮಾಡಿದ ನಂತರದಲ್ಲಿ, ಕ್ಯಾಬ್ ನಿಮ್ಮ ಬಳಿಗೆ ಬಂದ ಸಂದರ್ಭದಲ್ಲಿ ಕ್ಯಾಬ್ ಹತ್ತುವ ಮುಂಚಿತವಾಗಿ ಕ್ಯಾಬ್ ನೋಂದಣಿ ಸಂಖ್ಯೆ ಮತ್ತು ಆಪ್‌ನಲ್ಲಿ ನೀಡಿದ ಕ್ಯಾಬ್ ನೋಂದಣಿ ಸಂಖ್ಯೆ ಒಂದೇ ಇದೆಯೇ ನೋಡಿಕೊಳ್ಳಿ, ಆಪ್‌ ನಲ್ಲಿರುವ ಚಾಲಕನ ಹೆಸರು, ಭಾವಚಿತ್ರ ಹೊಂದಾಣಿಕೆಯಾಗುತ್ತಿದೆಯೇ ಖಚಿತ ಪಡಿಸಿಕೊಳ್ಳಿ, ಅಲ್ಲದೇ ಚಾಲಕನ ರೇಟಿಂಗ್ ಸಹ ನೋಡಿ. ಇವು ಮ್ಯಾಚ್ ಆಗಲಿಲ್ಲವಾದರೆ ಕ್ಯಾಬ್ ಹತ್ತಲು ಹೋಗಬೇಡಿ.

ಟಿಂಟೆಡ್ ಗ್ಲಾಸ್ ಬಗ್ಗೆ:

ಟಿಂಟೆಡ್ ಗ್ಲಾಸ್ ಬಗ್ಗೆ:

ಇದಲ್ಲದೇ ಕಪ್ಪುಬಣ್ಣದ (ಟಿಂಟೆಡ್‌) ಗಾಜುಗಳನ್ನು ಕ್ಯಾಬ್ ಹೊಂದಿದ್ದರೆ ನೀವು ಕ್ಯಾಬ್ ಎರುವುದನ್ನು ನಿರಾಕರಿಸಬಹುದು. ಟಿಂಟೆಡ್‌ ಗ್ಲಾಸ್ ಇದ್ದರೇ ಪ್ರಯಾಣಿಸಲು ಮುಂದಾಗಬೇಡಿ. ಅಲ್ಲದೇ ಈ ಕುರಿತು ಸೇವೆಯನ್ನು ನೀಡುತ್ತಿರುವ ಕಂಪನಿಗೆ ದೂರು ಸಲ್ಲಿಸಿ.

ಪ್ರಯಾಣ ಆರಂಭಿಸಿದ ನಂತರ:

ಪ್ರಯಾಣ ಆರಂಭಿಸಿದ ನಂತರ:

ಈ ಮೇಲಿನ ಅಂಶಗಳನ್ನು ಗಣನೆಗೆ ತೆದುಕೊಂಡ ನಂತರದಲ್ಲಿ ಪ್ರಯಾಣ ಆರಂಭಿಸಿ. ಪ್ರಯಾಣ ಆರಂಭವಾದ ನಂತರದಲ್ಲಿ ಆಪ್ ನಲ್ಲಿರುವ ಶೇರ್ ಸ್ಟೇಟಸ್‌' ಮೂಲಕ ಪ್ರಯಾಣದ ಕುರಿತು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಾಹಿತಿ ಹಂಚಿಕೊಳ್ಳಿ.

ಪ್ರಯಾಣದ ಸಂದರ್ಭದಲ್ಲಿ:

ಪ್ರಯಾಣದ ಸಂದರ್ಭದಲ್ಲಿ:

ಕ್ಯಾಬ್ ನಲ್ಲಿ ನೀವು ಒಬ್ಬರೇ ಪ್ರಯಾಣಿಸುವ ಸಂದರ್ಭದಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ಪ್ರಯಾಣಿಸಿ. ಇದರಿಂದ ನೀವು ಅಪಾಯದ ಸಂದರ್ಭದಲ್ಲಿ ಕ್ಯಾಬ್‌ನ ಎರಡೂ ಬದಿಯಿಂದ ಸುರಕ್ಷಿತವಾಗಿ ಹೊರಬರುವ ಅವಕಾಶಗಳು ಇರಲಿದೆ. ಅಲ್ಲದೇ ಚಾಲಕರಿಂದಲೂ ಯಾವುದೇ ರೀತಿಯ ತೊಂದರೆಗಳು ಉಂಟಾಗದ ರೀತಿಯಲ್ಲಿ ಸುರಕ್ಷಿತವಾಗಿರಬಹುದು.

How to send WhatsApp Payments invitation to others - GIZBOT KANNADA
ಹಾದಿ ತಿಳಿಯದಿದ್ದರೆ:

ಹಾದಿ ತಿಳಿಯದಿದ್ದರೆ:

ನೀವು ಹೊಸ ದಾರಿಯಲ್ಲಿ ಕ್ಯಾಬ್ ನಲ್ಲಿ ಸಾಗುವ ಸಂದರ್ಭದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಮ್ಯಾಪ್ ಅನ್ನು ಅನ್ ಮಾಡಿಟ್ಟುಕೊಳ್ಳಿ. ನೀವು ಎಲ್ಲಿದ್ದೀರಿ, ಯಾವ ಮಾರ್ಗದಲ್ಲಿ ಚಲಿಸುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ಗೂಗಲ್‌ ಮ್ಯಾಪ್‌ ಸಹಾಯವನ್ನು ಮಾಡಲಿದೆ.

ಮಹಿಳೆಯರಿಗೆ:

ಮಹಿಳೆಯರಿಗೆ:

ಮಹಿಳೆಯರುವ ಒಬ್ಬರೇ ಪ್ರಯಾಣಿಸುವ ಸಂದರ್ಭದಲ್ಲಿ ಕಾರಿನಲ್ಲಿ ಮಕ್ಕಳ ಸುರಕ್ಷತೆಗಗಾಗಿ ಅಳವಡಿಸಲಾಗಿರುವ ಚೈಲ್ಡ್‌ ಲಾಕ್‌ ಅನ್ನು ತೆಗೆದಿರುವ ಹಾಗೆ ನೋಡಿಕೊಳ್ಳಿ. ಇಲ್ಲವಾದರೆ ನಿಮಗೆ ಒಳಗಿನಿಂದ ಇಳಿಯಲು ಸಾಧ್ಯವಾಗುವುದಿಲ್ಲ, ಯಾವುದೇ ಸಂದರ್ಭದಲ್ಲಿ ಅಪಾಯ ಎದುರಾದರೆ 100 ಸಂಖ್ಯೆಗೆ ಕರೆ ಮಾಡುವ ಮೂಲಕ ಪೊಲೀಸರ ಸಹಾಯವನ್ನು ಪಡೆಯಬಹುದಾಗಿದೆ.

ಕಸ್ಟಮರ್ ಕೇರ್:

ಕಸ್ಟಮರ್ ಕೇರ್:

ನಿಮ್ಮ ಪ್ರಯಾಣದ ಕುರಿತು ಯಾವುದೇ ಪ್ರಶ್ನೆ ಅಥವಾ ಅನುಮಾನಗಳಿದ್ದರೂ, ಅದಕ್ಕೆ ಸ್ಪಂದಿಸಲು ದಿನದ 24 ಗಂಟೆಯೂ ಒಂದು ತಂಡ ಕ್ಯಾಬ್‌ ಸಂಸ್ಥೆಗಳಲ್ಲಿ ಬಳಕೆದಾರರ ಸೇವೆಗೆ ಸಿದ್ಧವಿರುತ್ತದೆ.

Best Mobiles in India

English summary
App based taxi services:do's and don'ts list. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X