ವಿದ್ಯಾರ್ಥಿಗಳಿಗೆ ಬಂಪರ್ ಆಫರ್... ಆಪಲ್‌ನ ಈ ಡಿವೈಸ್‌ಗಳ ಮೇಲೆ ದೊಡ್ಡ ಡಿಸ್ಕೌಂಟ್!
ಆಪಲ್ ಡಿವೈಸ್‌ಗಳು (Apple device) ಸಾಮಾನ್ಯವಾಗಿ ದುಬಾರಿ ಬೆಲೆ ಹೊಂದಿರುತ್ತವೆ. ಈ ಡಿವೈಸ್‌ಗಳನ್ನು ಖರೀದಿ ಮಾಡಬೇಕು ಎಂದುಕೊಂಡಿರುವ ಅದೆಷ್ಟೋ ಜನರು ಅದರಲ್ಲೂ ವಿದ್ಯಾರ್ಥಿಗಳು ಹಣದ ಸಮಸ್ಯೆಯಿಂದ ಖರೀದಿ ಮಾಡಲು ಸಾಧ್ಯ ಆಗಿರುವುದಿಲ್ಲ.ಆದರೆ, ಈಗ ಆಪಲ್‌ನ ಈ ಡಿವೈಸ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗಿದ್ದು, ಈ ಮೂಲಕ ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.
ಹೌದು, ಆಪಲ್ ಇದೀಗ ವಿದ್ಯಾರ್ಥಿಗಳು, ಶಿಕ್ಷಕರಿಗಾಗಿ (students, teachers) ಪ್ರಮುಖ ಡಿವೈಸ್‌ಗಳಾದ ಮ್ಯಾಕ್‌ಬುಕ್ಸ್ ಮತ್ತು ಐಪ್ಯಾಡ್‌ಗಳ (MacBooks, iPads) ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಈ ಸಂಬಂಧ ಅಧಿಕೃತವಾಗಿ ಆಪಲ್ ಮಾಹಿತಿ ನೀಡಲಾಗಿದೆ. ಹಾಗಿದ್ರೆ, ಬನ್ನಿ ಈ ಡಿವೈಸ್‌ಗಳೊಂದಿಗೆ ಇತರೆ ಯಾವೆಲ್ಲಾ ಆಪಲ್ ಡಿವೈಸ್‌ಗಳಿಗೆ ಆಫರ್ ಇದೆ, ವಿದ್ಯಾರ್ಥಿಗಳಲ್ಲದವರು ಇವುಗಳನ್ನು ಖರೀದಿ ಮಾಡುವುದು ಹೇಗೆ? ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ.

ಆಪಲ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಆಫರ್ ಅನ್ನು ಘೋಷಣೆ ಮಾಡಿದೆ. ಈ ವೇಳೆ ಐಪ್ಯಾಡ್‌ಗಳು ಮತ್ತು ಮ್ಯಾಕ್‌ಬುಕ್‌ಗಳು ಸೇರಿದಂತೆ ಹಲವಾರು ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಲಭ್ಯ ಇದ್ದು, ಹೆಸರೇ ಸೂಚಿಸುವಂತೆ ಈ ಕೊಡುಗೆಯು ಸಂಪೂರ್ಣವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾತ್ರ ಸೀಮಿತವಾಗಿದ್ದು, ಅಕ್ಟೋಬರ್ 2 ರವರೆಗೆ ಮಾನ್ಯವಾಗಿರುತ್ತದೆ.
ನೀವು ವಿದ್ಯಾರ್ಥಿ ಅಲ್ಲದಿದ್ದರೂ ಸಹ ಇವುಗಳನ್ನು ಖರೀದಿ ಮಾಡಬಹುದು. ಅದೇಗೆ ಎಂದರೆ ನಿಮಗೆ ತಿಳಿದಿರುವ ವಿದ್ಯಾರ್ಥಿಯಿಂದ ಮಾನ್ಯವಾದ ವಿದ್ಯಾರ್ಥಿ ಐಡಿಯನ್ನು ಬಳಸಿಕೊಂಡು ನೀವು ಈ ಡಿಸ್ಕೌಂಟ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಆದರೆ, ಇದರ ಇನ್‌ವಾಯ್ಸ್ ವಿದ್ಯಾರ್ಥಿಯ ಹೆಸರಿನಲ್ಲಿರುತ್ತದೆ ಎಂಬುದು ನಿಮಗೆ ತಿಳಿದಿರಲಿ. ಅದಾಗ್ಯೂ ನಿಮ್ಮ ವೈಯಕ್ತಿಕ ಐಡಿಗಳನ್ನು ಬಳಕೆ ಮಾಡಿಕೊಂಡು ಡಿವೈಸ್ ಬಳಕೆ ಮಾಡಬಹುದು.
ಡಿಸ್ಕೌಂಟ್ ವಿವರ: ಇನ್ನು ಆಪಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ(https://www.myunidays.com/IN/en-IN/partners/appleeducationstore/spotlight/online) ಶೇರ್ ಮಾಡಿಕೊಂಡ ವಿವರದ ಪ್ರಕಾರ ಪ್ರಕಾರ, ಮ್ಯಾಕ್‌ಬುಕ್ ಏರ್ 13 M1 ಅನ್ನು 89,900ರೂ.ಗಳಿಗೆ ಖರೀದಿಸಬಹುದಾಗಿದೆ. ಇದರ ಸಾಮಾನ್ಯ ದರ 99,900ರೂ.ಗಳಾಗಿದೆ ಈ ಮೂಲಕ ಖರೀದಿದಾರರು 10,000 ರೂಪಾಯಿಗಳ ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಳ್ಳಲಿದ್ದಾರೆ.
ಇದರೊಂದಿಗೆ M2 ಚಿಪ್‌ಸೆಟ್‌ನೊಂದಿಗೆ ಪ್ಯಾಕ್ ಆಗಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಹೊಸ ಮ್ಯಾಕ್‌ಬುಕ್ ಏರ್ 13 (MacBook Air 13) ಅನ್ನು 1,04,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಡಿವೈಸ್‌ನ ಸಾಮಾನ್ಯ ದರ 1,14,900 ರೂ.ಗಳಾಗಿದೆ. ಈ ಡಿವೈಸ್ ಖರೀದಿಯಲ್ಲೂ ಸಹ ವಿದ್ಯಾರ್ಥಿಗಳು 10,000 ರೂಪಾಯಿ ರಿಯಾಯಿತಿ ಪಡೆಯಲಿದ್ದಾರೆ.

ಉಳಿದಂತೆ ಇತ್ತೀಚಿಗೆ ಬಿಡುಗಡೆಯಾದ ಮ್ಯಾಕ್‌ಬುಕ್ ಏರ್ 15 (MacBook Air 15) ಸಹ ದೊಡ್ಡ ರಿಯಾಯಿತಿಯನ್ನು ಪಡೆದುಕೊಂಡಿದೆ. ಅಂದರೆ ಇದನ್ನು ನೀವು 1,24,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 1,349,00ರೂ.ಗಳು. ಇದರಲ್ಲಿ ನೀವು ಮ್ಯಾಕ್‌ಬುಕ್ ಪ್ರೊ ಅನ್ನು ಪಡೆಯಲು ಇಚ್ಚಿಸಿದರೆ 13, 14 ಮತ್ತು 16 ಇಂಚಿನ ವೇರಿಯಂಟ್ ಆಯ್ಕೆ ಇದೆ. ಇವು ಕ್ರಮವಾಗಿ 1,19,900ರೂ., 1,84,900ರೂ.ಗಳು ಮತ್ತು 2,29,900ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿವೆ.
ಇದಿಷ್ಟು ಮಾತ್ರವಲ್ಲದೆ ಆಪಲ್ ಐಮ್ಯಾಕ್ ನಲ್ಲಿ ರಿಯಾಯಿತಿ ಸಿಗಲಿದೆ. 1,24,900 ರೂ.ಗಳೊಂದಿಗೆ ನೀವು ಮ್ಯಾಕ್ ಮಿನಿ ಖರೀದಿ ಮಾಡಬಹುದು. ಈ ಮೂಲಕ 49,900 ರೂ.ಗಳ ವರೆಗೆ ಹಣ ಉಳಿಸಬಹುದಾಗಿದೆ. ಆದರೆ, ಮ್ಯಾಕ್ ಸ್ಟುಡಿಯೋ (Mac Studio) ಅಥವಾ M2 ಸರಣಿಯ ಮ್ಯಾಕ್ ಪ್ರೊನಲ್ಲಿ ಯಾವುದೇ ರಿಯಾಯಿತಿ ಘೋಷಣೆ ಮಾಡಿಲ್ಲ. ಇದು ಕೆಲವು ಬಳಕೆದಾರರಿಗೆ ಬೇಸರದ ವಿಷಯವಾಗಿರಬಹುದು.
ಇನ್ನು ಐಪ್ಯಾಡ್‌ಏರ್, ಐಪ್ಯಾಡ್ ಪ್ರೊ 11 (iPad Pro 11) ಮತ್ತು ಐಪ್ಯಾಡ್ ಪ್ರೊ 12.9 ಗಳಿಗೂ ರಿಯಾಯಿತಿ ನೀಡಲಾಗಿದ್ದು, ಇವುಗಳು ಕ್ರಮವಾಗಿ 54,900ರೂ.ಗಳು ಹಾಗೂ 76,900ರೂ.ಗಳು ಹಾಗೂ 1,02,900 ರೂ.ಗಳ ಬೆಲೆ ಪಡೆದುಕೊಂಡಿವೆ. ಅದರಲ್ಲೂ ಈ ಐಪ್ಯಾಡ್‌ಗಳು ಪೆನ್ಸಿಲ್‌ನೊಂದಿಗೆ ಲಭ್ಯ ಇದ್ದು, ಶೈಕ್ಷಣಿಕ ಬಳಕೆಯಲ್ಲಿ ಸಾಕಷ್ಟು ಪ್ರಯೋಜನ ನೀಡಲಿವೆ.
ಐಫೋನ್‌ಗಳಿಗೆ ಯಾವುದೇ ಆಫರ್ ಇಲ್ಲ: ಈ ವೇಳೆ ಐಫೋನ್‌ಗೆ ಯಾವುದೇ ಡಿಸ್ಕೌಂಟ್ ಅನ್ನು ಘೋಷಣೆ ಮಾಡಿಲ್ಲ. ಅದಾಗ್ಯೂ ನೀವು ಆಫರ್ ಬೆಲೆಗೆ ಐಫೋನ್ ಖರೀದಿ ಮಾಡಬಹುದು. ಅದೇಗೆ ಎಂದರೆ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 13 (iPhone 13) ಅನ್ನು 61,999ರೂ.ಗಳ ಆಫರ್ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು ದೊಡ್ಡ ಮತ್ತ ಎಂದರೆ ನೀವು ಬ್ಯಾಂಕ್ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಬಹುದು. ಈ ಮೂಲಕ ಹೆಚ್ಚುವರಿ 2,000 ರೂ. ರಿಯಾಯಿತಿ ಲಭ್ಯ ಆಗಲಿದೆ. ನಂತರ ನೀವು 59,999ರೂ.ಗೆ ಖರೀದಿ ಮಾಡಬಹುದು.


Click it and Unblock the Notifications








