Home
ಸುದ್ದಿಜಾಲ

ಬೆಂಗಳೂರಿಗರಿಗೂ ಬಂತು ಆಪಲ್‌ನಲ್ಲಿ ಕೆಲಸ ಮಾಡುವ ಭಾಗ್ಯ

By Suneel

ಆಪಲ್‌ ಬೆಂಗಳೂರಿನಲ್ಲಿ ಐಫೋನ್ ಅಪ್ಲಿಕೇಶನ್‌ ವಿನ್ಯಾಸ ಮತ್ತು ಅಭಿವೃದ್ದಿ ಘಟಕವನ್ನು ಸ್ಥಾಪಿಸುವುದಾಗಿ ಬುಧವಾರ( ಮೇ 18) ಹೇಳಿದೆ. ಇದೇ ಮೊಟ್ಟ ಮೊದಲ ಬಾರಿಗೆ ಭಾರತ ಭೇಟಿ ನೀಡಿರುವ ಆಪಲ್‌ ಸಿಇಓ 'ಟಿಮ್‌ ಕುಕ್‌" ಶನಿವಾರ(ಮೇ 21) ಪ್ರಧಾನಿ ನರೇಂದ್ರ ಮೋದಿಯವರನ್ನು ಬೇಟಿ ಮಾಡಲಿದ್ದಾರಂತೆ. ಮುಂಬೈಗೆ ಬಂದು ಇಳಿದ 'ಟಿಮ್‌ ಕುಕ್‌'ರವರು ಭಾರತದ ಪ್ರವಾಸ ಕೈಗೊಂಡಿದ್ದಾರೆ.

ಟಿಮ್‌ ಕುಕ್‌'ರ ಭಾರತ ಭೇಟಿಯಿಂದ ಭಾರತದಲ್ಲಿ ಇತರೆ ಯಾವ ಯಾವ ಆಪಲ್‌ ಘಟಕಗಳು ಸ್ಥಾಪನೆಯಾಗಲಿವೆ ಎಂದು ಕಾದುನೋಡಬೇಕಾಗಿದೆ. ಆದರೆ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಐಫೋನ್‌ ಅಪ್ಲಿಕೇಶನ್‌ ವಿನ್ಯಾಸ ಮತ್ತು ಅಭಿವೃದ್ದಿ ಘಟಕದಿಂದ ಅಪ್ಲಿಕೇಶನ್‌ ಅಭಿವೃದ್ದಿ ಮಾಡುವ ಯಂಗ್‌ ಟ್ಯಾಲೆಂಟ್‌ಗಳಿಗೆ ಉತ್ತಮ ಅವಕಾಶ ದೊರೆಯುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಮತ್ತು ಟಿಮ್‌ ಕುಕ್‌'ರ ಭಾರತ ಭೇಟಿ ಬಗೆಗಿನ ವಿಶೇಷ ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

1

1

ಆಪಲ್‌ ಬೆಂಗಳೂರಿನಲ್ಲಿ ಐಫೋನ್‌ ಅಪ್ಲಿಕೇಶನ್‌ಗಳ ವಿನ್ಯಾಸ ಮತ್ತು ಅಭಿವೃದ್ದಿಯ ಘಟಕವನ್ನು(ಅಕ್ಸೆಲೆರೇಟರ್) ಸ್ಥಾಪಿಸುವುದಾಗಿ ಬುಧವಾರ(ಮೇ 18) ಹೇಳಿದೆ. ಸಾವಿರಾರು ಅಪ್ಲಿಕೇಶನ್‌ ಅಭಿವೃದ್ದಿಗಾರರು ಐಓಎಸ್‌ಗೆ ಆಪ್‌ಗಳನ್ನು ಅಭಿವೃದ್ದಿಪಡಿಸಬಹುದು ಎಂದು ಆಪಲ್‌ ಕಂಪನಿ ಹೇಳಿದೆ. ಅಲ್ಲದೇ ಕಂಪನಿ ವಿಶೇಷ ಸಹಕಾರವನ್ನು ಅಭಿವೃದ್ದಿಗಾರರಿಗೆ ನೀಡುವುದಾಗಿ ಹೇಳಿದೆ.

2

2

ಅಂದಹಾಗೆ ಬೆಂಗಳೂರಿನಲ್ಲಿ 2017ರಲ್ಲಿ ಆಪಲ್‌ ತನ್ನ ಐಫೋನ್ ಅಪ್ಲೀಕೇಶನ್‌ ವಿನ್ಯಾಸ ಮತ್ತು ಅಭಿವೃದ್ದಿ ಘಟಕವನ್ನು ಸ್ಥಾಪಿಸುವ ನಿರೀಕ್ಷೆ ಹೊಂದಿದೆ.
ಚಿತ್ರ ಕೃಪೆ:Indian Express

3

3

"ಭಾರತವು ಉತ್ತಮ ಉದ್ಯಮಶೀಲ ಮತ್ತು ರೋಮಾಂಚಕ ಐಓಎಸ್ ಅಭಿವೃದ್ದಿ ಸಮುದಾಯಗಳ ತವರೂರು" ಎಂದು ಆಪಲ್‌ ಸಿಇಓ ಹೇಳಿದ್ದಾರೆ. "ಬೆಂಗಳೂರಿನಲ್ಲಿ ವಿಶೇಷ ಘಟಕ ಸ್ಥಾಪಿಸುವುದರಿಂದ, ಐಫೋನ್‌ ಬಳಕೆದಾರರಿಗೆ ಸಹಾಯವಾಗುವಂತಹ ಉತ್ತಮ ಅಪ್ಲಿಕೇಶನ್‌ಗಳನ್ನು ಅಭಿವೃದ್ದಿಪಡಿಸಲು ಆಪ್‌ ಅಭಿವೃದ್ದಿಗಾರರಿಗೆ ಆಕ್ಸೆಸ್‌ ನೀಡಲಾಗುವುದು" ಎಂದಿದ್ದಾರೆ.

4

4

ಆಪಲ್‌ ಸಿಇಓ 'ಟಿಮ್‌ ಕುಕ್‌' ಭಾರತಕ್ಕೆ ಇದೇ ಮೊದಲ ಭಾರಿಗೆ ಭೇಟಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ'ಯವರನ್ನು ಶನಿವಾರ ಭೇಟಿ ಮಾಡಲಿದ್ದಾರೆ.

5

5

ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿರುವ ಅಪ್ಲಿಕೇಶನ್‌ ವಿನ್ಯಾಸ ಘಟಕದಲ್ಲಿ ತಜ್ಞರು ಅಪ್ಲಿಕೇಶನ್‌ ಅಭಿವೃದ್ದಿ ಮಾಡುವವರಿಗೆ ಲೀಡಿಂಗ್‌ ಆಪ್‌ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಮತ್ತು ಆಪ್‌ ವಿಮರ್ಶಯನ್ನು ನೀಡಲಾಗುತ್ತದೆ ಎಂದು ಆಪಲ್‌ ಹೇಳಿದೆ.

6

6

ಅಪ್ಲಿಕೇಶನ್‌ ಅಭಿವೃದ್ದಿಗಾರರಿಗೆ ಈ ಸುದ್ದಿಯು ಮೆಚ್ಚುಗೆ ಆಗಲಿದ್ದು, ಭಾರತದ ವ್ಯಾಪಾರಿ ಸಮುದಾಯಗಳಿಗೂ ಮೆಚ್ಚುಗೆ ವಿಷಯವಾಗಿದೆ. ಆಪಲ್‌ ಬೆಂಗಳೂರಿನಲ್ಲಿ ಅಪ್ಲಿಕೇಶನ್‌ ವಿನ್ಯಾಸ ಮತ್ತು ಅಭಿವೃದ್ದಿ ಘಟಕ ಸ್ಥಾಪಿಸುವುದರಿಂದ ಬೆಂಗಳೂರು ಮತ್ತು ಇಡಿ ಭಾರತದ ಯಂಗ್‌ ಟ್ಯಾಲೆಂಟ್‌ಗಳಿಗೆ ಉತ್ತಮ ಉದ್ಯೋಗಾವಕಾಶ ದೊರೆಯಲಿದೆ ಎಂದು 'Zomato' ಸಿಇಓ ದೀಪಿಂದರ್‌ ಗೋಯೆಲ್‌ ಹೇಳಿದ್ದಾರೆ.

7

7

"ಆಪಲ್ ಐಓಎಸ್‌ ಅಕ್ಸೆಲೆರೇಟರ್‌ ಘಟಕದಿಂದ ಉತ್ತಮ ಸೃಜನಶೀಲತೆ ಮತ್ತು ತರಬೇತಿಯನ್ನು ಆಪ್‌ ಅಭಿವೃದ್ದಿಕಾರರು ಪಡೆಯಬಹುದು ಮತ್ತು ವಿಶಾಲ ಮಾರುಕಟ್ಟೆಯನ್ನು ತಲುಪಬಹುದಾಗಿದೆ" ಎಂದು NASSCOM ಅಧ್ಯಕ್ಷ ಆರ್‌ ಚಂದ್ರಶೇಖರ್‌ ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Apple announces iOS app accelerator in Bengaluru. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+