ಐಫೋನ್‌ಗಳು ಇನ್ಮುಂದೆ ನಿಮ್ಮದೇ ಧ್ವನಿಯಲ್ಲಿ ಮಾತನಾಡುತ್ತವೆ: ಅದೇಗೆ ಅಂತೀರಾ!?
ಐಫೋನ್‌ಗಳು ಹೆಚ್ಚಿನ ಜನಪ್ರಿಯತೆ ಹಾಗೂ ಭಾರೀ ಬೇಡಿಕೆ ಇರುವ ಸ್ಮಾರ್ಟ್‌ಫೋನ್‌ಗಳಾಗಿದ್ದು, ಇವುಗಳು ಭದ್ರತೆಯ ವಿಚಾರದಲ್ಲಿ ಹಾಗೂ ದೀರ್ಘ ಬಾಳಿಕೆ ವಿಚಾರದಲ್ಲಿ ಇತರೆ ಫೋನ್‌ಗಳಿಂತ ಉತ್ತಮ ಸ್ಥಾನ ಪಡೆದುಕೊಂಡಿವೆ. ಈ ನಡುವೆ ಬಳಕೆದಾರರ ಪ್ರಾಣ ಕಾಪಾಡುವ ಹಾಗೂ ಅವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದ ಆಪಲ್ ಡಿವೈಸ್‌ಗಳು ಇನ್ಮುಂದೆ ವಿಶೇಷ ಚೇತನರ ಬಾಳಿಕೆ ಬೆಳಕಾಗಲಿವೆ.
ಹೌದು,ವಿಶೇಷ ಚೇತನರಿಗೆ ಸಹಾಯ ಮಾಡಲು ನಿರ್ಮಿಸಲಾದ ಹೊಸ ಫೀಚರ್ಸ್‌ಗಳನ್ನು ಆಪಲ್ ಘೋಷಿಸಿದ್ದು, ಇವೆಲ್ಲಾ ಐಓಎಸ್ 17 ನ ಭಾಗವಾಗಿರಲಿವೆ ಎನ್ನಲಾಗಿದೆ.ಜೊತೆಗೆ ಈ ವರ್ಷದ ಕೊನೆಯಲ್ಲಿ ಬಳಕೆಗೆ ಲಭ್ಯವಾಗಲಿವೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದರಲ್ಲಿ ಬಳಕೆದಾರರು ಲೈವ್ ಸ್ಪೀಚ್,ವೈಯಕ್ತಿಕ ಧ್ವನಿ, ಡಿಟೆಕ್ಷನ್ ಮೋಡ್ ಪಾಯಿಂಟ್ ಮತ್ತು ಸ್ಪೀಕ್ ಸೇರಿದಂತೆ ಇತರೆ ಫೀಚರ್ಸ್ ಸೇರಿವೆ. ಹಾಗಿದ್ರೆ, ಏನಿವು ಹೊಸ ಫೀಚರ್ಸ್?, ಹೇಗೆಲ್ಲಾ ಇವು ಕೆಲಸ ಮಾಡಲಿವೆ ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ವೈಯಕ್ತಿಕ ಧ್ವನಿ ರಚನೆ: ಆಪಲ್ ಡಿವೈಸ್‌ಗಳಾದ ಐಫೋನ್ ಹಾಗೂ ಐಪ್ಯಾಡ್ ಬಳಕೆ ಮಾಡಲು ಮುಂದಾಗುವ ವಿಶೇಷ ಚೇತನರು ಇನ್ಮುಂದೆ ಯಾರದೇ ಸಹಾಯವಿಲ್ಲದೆ ಹಲವಾರು ಸೇವೆ ಪಡೆದುಕೊಳ್ಳಬಹುದು. ಅದರಲ್ಲೂ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುವ ಅಪಾಯದಲ್ಲಿರುವ ಜನರು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ತಮ್ಮದೇ ಆದ ಧ್ವನಿಯನ್ನು ರಚಿಸಲು ಹಾಗೂ ಈ ಮೂಲಕ ಬೇಕಾದವರ ಜೊತೆಗೆ ಸಂಪರ್ಕದಲ್ಲಿರಲು ಅನುವು ಮಾಡಿಕೊಡಲಾಗುತ್ತದೆ.
ಇನ್ನು ಐಫೋನ್ ಅಥವಾ ಐಪ್ಯಾಡ್‌ನಲ್ಲಿ15 ನಿಮಿಷಗಳ ಆಡಿಯೊಗಾಗಿ ಪಠ್ಯ ಪ್ರಾಂಪ್ಟ್‌ಗಳ ಸೆಟ್ ಅನ್ನು ಓದುವ ಮೂಲಕ ಬಳಕೆದಾರರು ವೈಯಕ್ತಿಕ ಧ್ವನಿಯನ್ನು ರಚಿಸಬಹುದಾಗಿದೆ. ಎಂದು ಕಂಪನಿ ತಿಳಿಸಿದೆ. ಈ ಮಾಹಿತಿಯನ್ನು ಖಾಸಗಿಯಾಗಿ ಮತ್ತು ಸುರಕ್ಷಿತವಾಗಿರಿಸಲು ಸಾಧನದ ಯಂತ್ರ ಕಲಿಕೆ (ಎಐ) ಅನ್ನು ಆಪಲ್ ಬಳಕೆ ಮಾಡುತ್ತದೆ ಎಂದು ತಿಳಿದುಬಂದಿದೆ. ಜೊತೆಗೆ ಲೈವ್ ಸ್ಪೀಚ್‌ನೊಂದಿಗೆ ಇದನ್ನು ಸಂಯೋಜಿಸುತ್ತದೆ, ಈ ಕಾರಣಕ್ಕಾಗಿಯೇ ಬಳಕೆದಾರರು ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿ ಇರುವಾಗ ಅವರ ವೈಯಕ್ತಿಕ ಧ್ವನಿಯೊಂದಿಗೆ ಮಾತನಾಡಬಹುದಾಗಿದೆ.

ಡಿಟೆಕ್ಷನ್ ಮೋಡ್ ಪಾಯಿಂಟ್: ಆಪಲ್ ಪ್ರಕಾರ ಕುರುಡು ಅಥವಾ ಕಡಿಮೆ ದೃಷ್ಟಿ ಹೊಂದಿರುವ ಬಳಕೆದಾರರಿಗೆ ಮ್ಯಾಗ್ನಿಫೈಯರ್‌ನಲ್ಲಿರುವ ಡಿಟೆಕ್ಷನ್ ಮೋಡ್ ಪಾಯಿಂಟ್ ಮತ್ತು ಸ್ಪೀಕ್ ಫೀಚರ್ಸ್ ಸಹಾಯ ಮಾಡಲಿದ್ದು, ಇವು ಬಳಕೆದಾರರು ಹುಡುಕುತ್ತಿರುವ ಪಠ್ಯವನ್ನು ಸೂಚಿಸುತ್ತದೆ ಮತ್ತು ಗೃಹೋಪಯೋಗಿ ವಸ್ತುಗಳಂತಹ ಭೌತಿಕ ವಸ್ತುಗಳೊಂದಿಗೆ ಸಂವಹನ ನಡೆಸಲು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಜೋರಾಗಿ ಮಾತನಾಡುತ್ತದೆ.
ಸಹಾಯಕ ಪ್ರವೇಶ : ಐಫೋನ್‌ಗಳು ಮತ್ತು ಐಪ್ಯಾಡ್‌ಗಳಲ್ಲಿನ ಸಹಾಯಕ ಪ್ರವೇಶ (Assistive Access)ಹೆಚ್ಚಿನ-ಕಾಂಟ್ರಾಸ್ಟ್ ಇರುವ ಬಟನ್‌ಗಳು ಮತ್ತು ದೊಡ್ಡ ಪಠ್ಯ ಲೇಬಲ್‌ಗಳೊಂದಿಗೆ ಸರಳ ಇಂಟರ್ಫೇಸ್ ಅನ್ನು ನೀಡಲಿದೆ. ದೃಷ್ಟಿಗೋಚರವಾಗಿ ಸಂವಹನ ಮಾಡಲು ಮುಂದಾಗುವ ಬಳಕೆದಾರರು ಎಮೋಜಿ-ಓನ್ಲಿ ಕೀಬೋರ್ಡ್ ಆಯ್ಕೆ ಮೂಲಕ ಪ್ರೀತಿಪಾತ್ರರೊಂದಿಗೆ ಏನಾದರೂ ಶೇರ್ ಮಾಡಿಕೊಳ್ಳಲು ವಿಡಿಯೋ ಸಂದೇಶವನ್ನು ರೆಕಾರ್ಡ್ ಮಾಡುವ ಆಯ್ಕೆಯನ್ನು ಪಡೆದುಕೊಳ್ಳಲಿದ್ದಾರೆ.
ಲೈವ್ ಸ್ಪೀಚ್: ಇನ್ನು ಮ್ಯಾಗ್ನಿಫೈಯರ್‌ನಲ್ಲಿ ಪಾಯಿಂಟ್ ಹಾಗೂ ಸ್ಪೀಚ್ ಕ್ಯಾಮೆರಾ, ಲಿಡಾರ್ ಸ್ಕ್ಯಾನರ್ ಮತ್ತು ಆನ್-ಡಿವೈಸ್ ಮೆಷಿನ್ ಲರ್ನಿಂಗ್‌ನಿಂದ ಇನ್‌ಪುಟ್ ಅನ್ನು ಸಂಯೋಜಿಸಲಿದ್ದು, ಬಳಕೆದಾರರು ಕೀಪ್ಯಾಡ್‌ನಾದ್ಯಂತ ತಮ್ಮ ಬೆರಳುಗಳನ್ನು ಚಲಿಸುವಂತೆ ಇದರಲ್ಲೂ ಸಹ ಈ ರೀತಿಯ ಸೇವೆ ಪಡೆದುಕೊಳ್ಳಬಹುದು.ಹಾಗೆಯೇ ಬಳಕೆದಾರರು ತಮ್ಮ ಡಿವೈಸ್‌ನೊಂದಿಗೆ ಸಂವಹನ ಮಾಡುವಾಗ ಮಾತನಾಡುವ ಪಠ್ಯವನ್ನು ಆಲಿಸಬಹುದಾಗಿದೆ.ಈ ಲೈವ್ ಸ್ಪೀಚ್‌ನೊಂದಿಗೆ ಫೋನ್ ಮತ್ತು ಫೇಸ್‌ಟೈಮ್ ಕರೆಗಳು ಹಾಗೂ ವೈಯಕ್ತಿಕ ಸಂಭಾಷಣೆಗಳ ಸಮಯದಲ್ಲಿ ಹಲವು ಪ್ರಯೋಜನ ಪಡೆದುಕೊಳ್ಳಬಹುದು.

ಇನ್ನುಳಿದಂತೆ ಐಫೋನ್ ಮತ್ತು ಐಪ್ಯಾಡ್ ನಲ್ಲಿ ಮ್ಯಾಗ್ನಿಫೈಯರ್ ಅಪ್ಲಿಕೇಶನ್‌ಗೆ ಸಂಯೋಜಿಸಲಾಗಿದ್ದು, ವಾಯ್ಸ್‌ಓವರ್ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಮ್ಯಾಗ್ನಿಫೈಯರ್ ಜನರ ಪತ್ತೆ, ಡೋರ್ ಡಿಟೆಕ್ಷನ್ ಮತ್ತು ಇಮೇಜ್ ವಿವರಣೆಯನ್ನು ನೀಡಲಿದ್ದು, ಇದರಿಂದ ದೃಷ್ಟಿಹೀನತೆ ಇರುವ ಜನರು ಸುಲಭವಾಗಿ ಜೀವನ ಮಾಡಲು ಸಹಕಾರ ಆಗಲಿದೆ. ಇಷ್ಟು ಮಾತ್ರವಲ್ಲದೆ ಭೌತಿಕ ಪರಿಸರವನ್ನು ಹೆಚ್ಚು ಪರಿಣಾಮಕಾರಿಯಾಗಿ ನ್ಯಾವಿಗೇಟ್ ಇದು ಸಹಾಯ ಮಾಡಲಿದೆ.


Click it and Unblock the Notifications








