ಆಪಲ್‌ ಡಬ್ಲ್ಯೂಡಬ್ಲ್ಯೂಡಿಸಿ 2015 ನಲ್ಲಿ ಕ್ಯಾಮೆರಾ ಸ್ಟಿಕ್ ಬಳಕೆ ಇಲ್ಲ

  By Shwetha
  |

  ತನ್ನ ಡಬ್ಲ್ಯೂಡಬ್ಲ್ಯೂಡಿಸಿ 2015 ರ ಕಾರ್ಯಾಗಾರದಲ್ಲಿ ಆಪಲ್ ಸೆಲ್ಫಿ ಸ್ಟಿಕ್ ಅನ್ನು ಬಳಸಬಾರದೆಂಬ ನಿಯಮವನ್ನು ಹೊರತಂದಿದೆ. ಮೋಸ್ಕೋನ್ ವೆಸ್ಟ್ ಅಥವಾ ಯೆರ್ಬಾ ಬ್ಯುನಾ ಗಾರ್ಡನ್‌ಗಳಲ್ಲಿ ಭಾಗವಹಿಸುವವರು ಸೆಲ್ಫಿ ಸ್ಟಿಕ್ ಇಲ್ಲವೇ ಇತರ ಯಾವುದೇ ಉಪಕರಣಗಳನ್ನು ಬಳಸಬಾರದೆಂಬ ಕಟ್ಟಾಜ್ಞೆಯನ್ನು ಹೊರಡಿಸಿದೆ.

  ಓದಿರಿ: ಹೆಚ್ಚು ನಿರೀಕ್ಷಿತ ಐಓಎಸ್ 9 ನಲ್ಲಿ ಏನೆಲ್ಲಾ ಇದೆ ಗೊತ್ತೇ?

  ಆಪಲ್‌ ಡಬ್ಲ್ಯೂಡಬ್ಲ್ಯೂಡಿಸಿ 2015 ನಲ್ಲಿ ಕ್ಯಾಮೆರಾ ಸ್ಟಿಕ್ ಬಳಕೆ ಇಲ್ಲ

  ಇನ್ನು ಫೋಟೋಗ್ರಫಿಗಾಗಿ ಬಳಸುವ ಫೋನ್‌ಗಳು ಅಥವಾ ಕಾಂಪ್ಯಾಕ್ಟ್ ಕ್ಯಾಮೆರಾಗಳನ್ನು ಆಪಲ್ ಅನುಮತಿಸಿದ್ದು, ಈವೆಂಟ್‌ನ ವೀಡಿಯೊ ರೆಕಾರ್ಡಿಂಗ್ ಮಾಡುವುದನ್ನು ಡೆವಲಪರ್‌ಗಳು ಈಗಾಗಲೇ ನಿಷೇಧಿಸಿದ್ದು ವೃತ್ತಿಪರ ಫೋಟೋ ಪರಿಕರಗಳನ್ನು ಬಳಸುವಂತಿಲ್ಲ ಎಂಬುದು ತಿಳಿದು ಬಂದಿದೆ.

  ಓದಿರಿ: ಟಿಮ್ ಕುಕ್: ಪೇಪರ್ ಮಾರುವ ಹುಡುಗ ಪ್ರಪಂಚವನ್ನು ಗೆದ್ದ ಕಥೆ

  ಇನ್ನು ಉದ್ಘಾಟನಾ ಸಮಾರಂಭದಲ್ಲಿ ಸೆಲ್ಫಿ ಸ್ಟಿಕ್‌ಗಳು ತೊಂದರೆಯನ್ನುಂಟು ಮಾಡುವುದರಿಂದ ಮತ್ತು ಇದು ಇತರ ಪ್ರೇಕ್ಷಕರಿಗೆ ಭಂಗವನ್ನುಂಟು ಮಾಡುವುದರಿಂದ ಅಲ್ಲದೆ ಆಪಲ್‌ನ ಕ್ಯಾಮೆರಾಗಳಿಗೆ ಈ ಸ್ಟಿಕ್ ತೊಂದರೆ ಮಾಡಬಹುದೆಂಬ ಯೋಚನೆಯಿಂದ ಆಪಲ್ ಈ ತೀರ್ಮಾನಕ್ಕೆ ಬಂದಿದೆ.

  ಆಪಲ್‌ ಡಬ್ಲ್ಯೂಡಬ್ಲ್ಯೂಡಿಸಿ 2015 ನಲ್ಲಿ ಕ್ಯಾಮೆರಾ ಸ್ಟಿಕ್ ಬಳಕೆ ಇಲ್ಲ

  ಡಬ್ಲ್ಯೂಡಬ್ಲ್ಯೂಡಿಸಿ ನ ಆಡಿಯೊ ಅಥವಾ ಆಡಿಯೊ ವಿಶುವಲ್ ರೆಕಾರ್ಡಿಂಗ್‌ಗಳನ್ನು ಮಾಡುವುದು ಇಲ್ಲವೇ ವೃತ್ತಿಪರ ಫೋಟೋಗ್ರಫಿಕ್ ಅಥವಾ ವೀಡಿಯೊ ಉಪಕರಣಗಳನ್ನು ಕಾರ್ಯಾಗಾರವಿರುವ ಪ್ರದೇಶಗಳಿಗೆ ಒಯ್ಯುವಂತಿಲ್ಲ ಎಂದು ಆಪಲ್‌ನ ಮಾಹಿತಿ ಪುಟ ಘೋಷಿಸಿದೆ.

  ಆಪಲ್‌ ಡಬ್ಲ್ಯೂಡಬ್ಲ್ಯೂಡಿಸಿ 2015 ನಲ್ಲಿ ಕ್ಯಾಮೆರಾ ಸ್ಟಿಕ್ ಬಳಕೆ ಇಲ್ಲ

  ಸೆಲ್ಫಿ ಸ್ಟಿಕ್ ಅಥವಾ ಇಂತಹುದೇ ಮೋನೋಪ್ಯಾಡ್‌ಗಳನ್ನು ಈ ಪ್ರದೇಶಗಳಲ್ಲಿ ಬಳಸುವಂತಿಲ್ಲ ಎಂದು ಎಂದು ಈ ಮಾಹಿತಿ ತಿಳಿಸಿದೆ. ಈಗಾಗಲೇ ಕೆಲವು ಈವೆಂಟ್‌ಗಳಲ್ಲಿ ಈ ಸೆಲ್ಫಿ ಸ್ಟಿಕ್ ಅನ್ನು ಬ್ಯಾನ್ ಮಾಡಿದೆ. ಡಬ್ಲ್ಯೂಡಬ್ಲ್ಯೂಡಿಸಿ 2015 ಜೂನ್ 8 ರಿಂದ 12 ರವರೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿದೆ. ಇದೇ ಈವೆಂಟ್‌ನಲ್ಲಿ ಆಪಲ್ ಐಓಎಸ್ 9 ಮತ್ತು OS X 10.11 ಅನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

  English summary
  No selfie sticks would be allowed at the Worldwide Developers Conference, 2015, Apple announced in the new rules for the event. The attendees wouldn't be allowed to use selfie sticks or any other kind of photo monopod within the bounds of either Moscone West or Yerba Buena Gardens.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more