ಆಪಲ್‌ನಿಂದ 3ಡಿ ಗೆಶ್ಚರ್ ರೆಕಗ್ನಿಶನ್ ಕಂಪೆನಿ ಖರೀದಿ

Posted By:

ಸಣ್ಣ ಕಂಪೆನಿಗಳನ್ನು ದೊಡ್ಡ ದೊಡ್ಡ ಕಂಪೆನಿಗಳು ಖರೀದಿಸುವುದು ಸಾಮಾನ್ಯ.ಇದಕ್ಕಿಗ ಹೊಸ ಸೇರ್ಪಡೆಯಾಗಿ ಇಸ್ರೇಲ್‌ನ 3ಡಿ ಗೆಶ್ಚರ್ ಕಂಪೆನಿ ಪ್ರೈಮ್‌ಸೆನ್ಸ್‌ನ್ನು 350 ದಶಲಕ್ಷ ಡಾಲರ್‌ಗೆ ಖರೀದಿಸಲು ಆಪಲ್‌ ಮುಂದಾಗಿದೆ.

ಪ್ರೈಮ್‌ಸೆನ್ಸ್‌(primesense) ಮೂಲತಃ 3ಡಿ ಗೆಶ್ಚರ್ ರೆಕಗ್ನಿಶನ್(ಕೇವಲ ಕೈಸನ್ನೆ ಅಥವಾ ಆಂಗಿಕ ಚಲನೆಯಿಂದ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಯಂತ್ರಿಸುವ ಹೊಸ ತಂತ್ರಜ್ಞಾನ) ಕಂಪೆನಿಯಾಗಿದ್ದು ಈಗಾಗಲೇ ಹಲವು ಕಂಪೆನಿಗಳಿಗೆ ತನ್ನ ತಂತ್ರಜ್ಞಾನವನ್ನು ಬಳಸಲು ಅನುಮತಿ ನೀಡಿದೆ.

ಮೈಕ್ರೋಸಾಫ್ಟ್‌ ಎಕ್ಸ್‌ಬಾಕ್ಸ್‌ Kinect ಗೇಮ್ಸ್‌ನಲ್ಲಿ ಈ ತಂತ್ರಜ್ಞಾನವಿದ್ದು ಕೈ ಸನ್ನೆಯ ಮೂಲಕವೇ ಗೇಮ್ಸ್‌ ನಿಯಂತ್ರಣ ಮಾಡಬಹುದಾಗಿದೆ. ಆಪಲ್‌ ಮುಂದಿನ ದಿನಗಳಲ್ಲಿ ಗೆಶ್ಚರ್‌ ನಿಯಂತ್ರಣ ಹೊಂದಿರುವ ಆಪಲ್‌ ಟಿವಿಗಳನ್ನು ತಯಾರಿಸಲಿದೆ ಎನ್ನುವ ವದಂತಿ ಇದ್ದು ಅದಕ್ಕೆ ಸಂಬಂಧಿಸಿದಂತೆ ಈ ಪ್ರೈಮ್‌ಸೆನ್ಸ್‌ಕಂಪೆನಿಯನ್ನು ಖರೀದಿಸಿದೆ ಎನ್ನಲಾಗಿದೆ.

 ಆಪಲ್‌ನಿಂದ 3ಡಿ ಗೆಶ್ಚರ್ ರೆಕಗ್ನಿಶನ್ ಕಂಪೆನಿ ಖರೀದಿ

ನಾವು ಸಣ್ಣ ಸಣ್ಣ ಕಂಪೆನಿಗಳನ್ನು ಆಗಾಗ ಖರೀದಿಸುತ್ತಿರುತ್ತೇವೆ. ಈ ಸಂದರ್ಭದಲ್ಲಿ ಖರೀದಿಸಿದ ಉದ್ದೇಶ ಮತ್ತು ನಮ್ಮ ಮುಂದಿನ ಯೋಜನೆಗಳನ್ನು ಚರ್ಚಿಸುವುದಿಲ್ಲ ಎಂದು ಆಪಲ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದೆ.

ಆಪಲ್‌ ಈಗಾಗಲೇ ಹಲವು ಸಣ್ಣಸಣ್ಣ ತಂತ್ರಜ್ಞಾನ ತಯಾರಕ ಕಂಪೆನಿಗಳನ್ನು ಖರೀದಿಸಿದೆ. ಆಪಲ್‌ನ ಸದ್ಯ ಈಗ ಭಾರೀ ಸುದ್ದಿ ಮಾಡುತ್ತಿರುವ ಐಫೋನ್‌ 5 ಎಸ್‌ನಲ್ಲಿ ಬಳಸುತ್ತಿರುವ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನ ಮೂಲತಃ ಅಮೆರಿಕದ AuthenTec ಕಂಪೆನಿಯದ್ದು.ಜುಲೈ 2012ರಲ್ಲಿ ಈ ಕಂಪೆನಿಯನ್ನು ಆಪಲ್‌ 356 ದಶಲಕ್ಷ ಡಾಲರ್‌ ನೀಡಿ ಖರೀದಿಸಿತ್ತು.


ಇದನ್ನೂ ಓದಿ: ಆಪಲ್‌ ಪೇಟೆಂಟ್‌ ನಕಲು ಮಾಡಿದ್ದಕ್ಕೆ ಸ್ಯಾಮ್‌ಸಂಗ್‌ಗೆ ದಂಡ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot