Home
ಸುದ್ದಿಜಾಲ

ದೇಶದಲ್ಲೇ ಮೊದಲ ಆಪಲ್‌ ಸ್ಟೋರ್‌ ಪ್ರಾರಂಭ; ಅಚ್ಚರಿ ಮೂಡಿಸಿದ ಟಿಮ್‌ ಕುಕ್‌ ನಡೆ!

ಟೆಕ್ ದೈತ್ಯ ಆಪಲ್‌ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ರಿಟೇಲ್‌ ಸ್ಟೋರ್‌ ಅನ್ನು ಮಂಗಳವಾರ (ಏಪ್ರಿಲ್‌ 18) ಮುಂಬೈ ನಗರದಲ್ಲಿ ಅನಾವರಣಗೊಳಿಸಲಿದೆ. ಗ್ರಾಹಕರು ಆಪಲ್‌ನ ಐಫೋನ್‌ಗಳು, ಮ್ಯಾಕ್‌ಬುಕ್‌ ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು, ಸ್ಮಾರ್ಟ್‌ ಟಿವಿಗಳು, ಏರ್‌ಪಾಡ್ಸ್‌ಗಳು, ಟ್ಯಾಬ್ಲೆಟ್‌ಗಳು, ಆಪಲ್‌ ವಾಚ್‌ ಸೇರಿದಂತೆ ಇತರೆ ಆಪಲ್‌ ಉತ್ಪನ್ನಗಳನ್ನು ಇಲ್ಲಿ ಪಡೆಯಬಹುದಾಗಿದೆ.

ಹೌದು, ಆಪಲ್‌ ಸಂಸ್ಥೆಯು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೋ ವರ್ಲ್ಡ್ ಡ್ರೈವ್‌ ಮಾಲ್‌ನಲ್ಲಿ 22,000 ಚದರ ಅಡಿಯಲ್ಲಿ 'ಆಪಲ್‌ ಬಿಕೆಸಿ' (Apple BKC) ಹೆಸರಿನಲ್ಲಿ ಬೃಹತ್‌ ಸ್ಟೋರ್‌ ಅನ್ನು ಆರಂಭ ಮಾಡಿದೆ. ಇದನ್ನು ಸ್ವತಃ ಆಪಲ್ ಕಂಪನಿ ಸಿಇಒ ಟಿಮ್‌ ಕುಕ್‌ (Tim Cook) ಉದ್ಘಾಟಿಸಿದ್ದು, ಈ ಸ್ಟೋರ್‌ ಗ್ರಾಹಕರಿಗೆ ಇದು ವಿಭಿನ್ನ ಅನುಭವ ನೀಡಲಿದೆ ಎಂದು ಆಪಲ್‌ ಸಂಸ್ಥೆಯು ಹೇಳಿಕೊಂಡಿದೆ.

ದೇಶದಲ್ಲೇ ಮೊದಲ ಆಪಲ್‌ ಸ್ಟೋರ್‌ ಪ್ರಾರಂಭ; ಅಚ್ಚರಿ ಮೂಡಿಸಿದ ಟಿಮ್‌ ಕುಕ್‌ ನಡೆ!

ಇನ್ನು ಆಪಲ್‌ ಸ್ಟೋರ್‌ನ ವಿನ್ಯಾಸವು ಮಯಂಬೈನ ಪ್ರಸಿದ್ಧ 'ಕಪ್ಪು ಹಳದಿ ಟಾಕ್ಸಿ'ಯಿಂದ ಪ್ರೇರಣೆಗೊಂಡಿದ್ದು, ಪೂರ್ಣ ಅಂಗಡಿಯನ್ನು ಸಂಪೂರ್ಣ ಶೇ 100 ರಷ್ಟು ನವೀಕರಿಸಬಹುದಾದ ಸಂಪನ್ಮೂಲಗಳಿಂದಲೇ ನಿರ್ಮಾಣ ಮಾಡಿರುವುದು ಪ್ರಮುಖ ವಿಶೇಷವಾಗಿ ಕಾಣಿಸಿಕೊಂಡಿದೆ. ಹಾಗೆಯೇ ಮಳಿಗೆಯ ಪ್ರವೇಶ ದ್ವಾರದಲ್ಲಿ 'ಹಲೋ ಮುಂಬೈ' ಎಂದು ಬರೆಯಲಾಗಿದೆ.

ಇದರೊಂದಿಗೆ ಈ ಆಪಲ್‌ ಅಂಗಡಿಯ ಮತ್ತೊಂದು ವಿಶೇಷವೆಂದರೆ ಈ ಸ್ಟೋರ್‌ನಲ್ಲಿ 100 ಜನ ಸೇವಾ ಪ್ರತಿನಿಧಿಗಳಿರಲಿದ್ದು, ಇದರಿಂದ 20 ಭಾಷೆಗಳಲ್ಲಿ ಗ್ರಾಹಕರ ಜತೆ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಅಂದ ಹಾಗೆ ಸಂಸ್ಥೆಯು ಮುಂಬೈ ನಂತರ ಇದೇ ಏ. 20 ರಂದು ದೆಹಲಿಯಲ್ಲಿ ಇನ್ನೊಂದು ರಿಟೇಲ್‌ ಸ್ಟೋರ್‌ ತೆರೆಯಲಿದೆ ಎಂದು ಹೇಳಲಾಗುತ್ತಿದೆ.

ದೇಶದಲ್ಲೇ ಮೊದಲ ಆಪಲ್‌ ಸ್ಟೋರ್‌ ಪ್ರಾರಂಭ; ಅಚ್ಚರಿ ಮೂಡಿಸಿದ ಟಿಮ್‌ ಕುಕ್‌ ನಡೆ!

ಹಾಗೆಯೇ ಬೆಂಗಳೂರಿನಲ್ಲಿಯೂ ಆಪಲ್‌ ಸಂಸ್ಥೆಯು ಬೃಹತ್ ಜಾಗವನ್ನು ಗುತ್ತಿಗೆಗೆ ಪಡೆದಿದ್ದು, ಹೀಗಾಗಿ ಬೆಂಗಳೂರಿನಲ್ಲಿಯೂ ರಿಟೇಲ್‌ ಸ್ಟೋರ್‌ ಲಗ್ಗೆ ಇಡುವ ಎಲ್ಲಾ ಸಾಧ್ಯತೆಗಳು ಇವೆ. ಈ ಮೊದಲು ಆಪಲ್‌ ಕಂಪನಿಯು ರಿಸೆಲ್ಲರ್‌ ಮೂಲಕವೇ ದೇಶದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿತ್ತು. ಆದರೆ ಇದೀಗ ಮೊದಲ ಬಾರಿಗೆ ಅಧಿಕೃತ ರಿಟೇಲ್‌ ಸ್ಟೋರ್‌ ಪ್ರಾರಂಭಿಸಿ, ಮಾರಾಟ ಮತ್ತು ಸೇವೆಗೆ ಸಜ್ಜಾಗಿದೆ. ಅಂದಹಾಗೆ ಆಪಲ್‌ ಸಂಸ್ಥೆಯು ತನ್ನ ಮುಂದಿನ ಐಫೋನ್‌ 15 ಸರಣಿಯನ್ನು ಬಿಡುಗಡೆ ಮಾಡಲು ಸನ್ನದ್ದವಾಗುತ್ತಿದೆ.

ದೇಶದಲ್ಲೇ ಮೊದಲ ಆಪಲ್‌ ಸ್ಟೋರ್‌ ಪ್ರಾರಂಭ; ಅಚ್ಚರಿ ಮೂಡಿಸಿದ ಟಿಮ್‌ ಕುಕ್‌ ನಡೆ!

ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿದ್ದಾರಾ ಆಪಲ್‌ ಸಿಇಓ ಟಿಮ್‌ ಕುಕ್?
ಆಪಲ್‌ ಸಿಇಓ ಟಿಮ್‌ ಕುಕ್ ಅವರು ಬುಧವಾರ (ಏ. 19 ರಂದು) ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹಾಗೆಯೇ ಆಪಲ್ ಮುಖ್ಯಸ್ಥ ಟಿಮ್‌ ಕುಕ್ ಅವರು ಭಾರತದ ಉಪ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಸಹ ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಟಿಮ್‌ ಕುಕ್ ಅವರ ಈ ಭೇಟಿ ಟೆಕ್‌ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಮುಂದಿನ ಆಪಲ್‌ ಸ್ಟೋರ್‌ ಎಲ್ಲಿ ಗೊತ್ತಾ?
ಆಪಲ್ ಸಂಸ್ಥೆಯು ಮುಂಬೈ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೋ ವರ್ಲ್ಡ್ ಡ್ರೈವ್‌ ಮಾಲ್‌ನಲ್ಲಿ ಮೊದಲ ರಿಟೇಲ್‌ ಸ್ಟೋರ್‌ ಪ್ರಾರಂಭಿಸಿ, ಆಪಲ್‌ ಪ್ರಿಯ ಗ್ರಾಹಕರಿಗೆ ಖುಷಿ ನೀಡಿದೆ. ನಂತರ ಏ. 20 ರಂದು ದೆಹಲಿಯಲ್ಲಿ ಇನ್ನೊಂದು ರಿಟೇಲ್‌ ಸ್ಟೋರ್‌ ತೆರೆಯುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿಯೂ ಆಪಲ್‌ ಸಂಸ್ಥೆಯು ಬೃಹತ್ ಜಾಗವನ್ನು ಗುತ್ತಿಗೆಗೆ ಪಡೆದಿದ್ದು, ಹೀಗಾಗಿ ಬೆಂಗಳೂರಿನಲ್ಲಿಯೂ ರಿಟೇಲ್‌ ಸ್ಟೋರ್‌ ಲಗ್ಗೆ ಇಡುವ ಎಲ್ಲಾ ಸಾಧ್ಯತೆಗಳು ಇವೆ.

Best Mobiles in India

English summary
Apple CEO Tim Cook threw open the gates to the 28,000 sq ft store in Mumbai. details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+