ಡಬಲ್‌ ಧಮಾಕಾ!..ಐಫೋನ್‌ನಲ್ಲಿ ಡ್ಯುಯಲ್‌ ಬ್ಲೂಟೂತ್‌ ಡಿವೈಸ್‌ ಕನೆಕ್ಟ್ ಆಯ್ಕೆ!

|

ಪ್ರಸ್ತುತ ಬಹುತೇಕ ಡಿವೈಸ್‌ಗಳು ವಾಯರ್‌ಲೆಸ್‌ ಮಾದರಿಯಲ್ಲಿ ಪರಿಚಿತವಾಗುತ್ತಿದ್ದು, ಅವುಗಳಲ್ಲಿ ಇಯರ್‌ಫೋನ್‌, ಏರ್‌ಪೋಡ್‌, ಸ್ಪೀಕರ್‌ಗಳ ಮುಂಚೂಣಿಯಲ್ಲಿವೆ. ವಾಯರ್‌ಲೆಸ್‌ ಡಿವೈಸ್‌ಗಳು ಬ್ಲೂಟೂತ್‌ ಕನೆಕ್ಟಿವಿಟಿ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಬಳಕೆದಾರರಿಗೆ ಉಪಯುಕ್ತ ಎನಿಸಿವೆ. ಈ ನಿಟ್ಟಿನಲ್ಲಿ ಮುಂದುವರೆದಿರುವ ಆಪಲ್‌ ಕಂಪನಿಯು ಇದೀಗ ಬ್ಲೂಟೂತ್‌ ಕನೆಕ್ಟಿವಿಟಿಯಲ್ಲಿ ಡ್ಯುಯಲ್‌ ಆಯ್ಕೆಯನ್ನು ನೀಡಲು ಮುಂದಾಗಿದೆ.

ಡಬಲ್‌ ಧಮಾಕಾ!..ಐಫೋನ್‌ನಲ್ಲಿ ಡ್ಯುಯಲ್‌ ಬ್ಲೂಟೂತ್‌ ಡಿವೈಸ್‌ ಕನೆಕ್ಟ್ ಆಯ್ಕೆ!

ಹೌದು, ಆಪಲ್‌ ಕಂಪನಿಯು ಒಂದೇ ವೇಳೆಗೆ ಬ್ಲೂಟೂತ್‌ ಮೂಲಕ ಎರಡು ಆಡಿಯೊ ಡಿವೈಸ್‌ಗಳನ್ನು ಕನೆಕ್ಟ್‌ ಮಾಡುವ ಆಯ್ಕೆಯನ್ನು ಒದಗಿಸಲಿದ್ದು, ಮುಂಬರುವ ಐಫೋನ್‌ಗಳಲ್ಲಿ ಈ ಆಯ್ಕೆ ಸೇರಿಕೊಳ್ಳಲಿದೆ ಎನ್ನುವ ಮಾಹಿತಿಯನ್ನು ಜಪಾನಿ ಮ್ಯಾಕ್ ಒಟಕರ ಬ್ಲಾಗ್‌ನಲ್ಲಿ ತಿಳಿಸಲಾಗಿದೆ. ಈ ಆಯ್ಕೆಯಲ್ಲಿ ಐಫೋನ್‌ಗೆ ಪ್ರತ್ಯೇಕ್‌ ಎರಡು ಆಡಿಯೊ ಡಿವೈಸ್‌ಗಳಿಗೆ ಬ್ಲೂಟೂತ್‌ ಸಿಗ್ನಲ್‌ಗಳಿಂದ ಕನೆಕ್ಟ್‌ ಮಾಡಬಹುದಾಗಿದೆ.

ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!ಓದಿರಿ : ಶಾಶ್ವತವಾಗಿ ಬೆಲೆ ಇಳಿಕೆ ಕಂಡ ವಿವೋ 'V15' ಮತ್ತು 'Y17' ಸ್ಮಾರ್ಟ್‌ಫೋನ್‌ಗಳು!

ಡಬಲ್‌ ಧಮಾಕಾ!..ಐಫೋನ್‌ನಲ್ಲಿ ಡ್ಯುಯಲ್‌ ಬ್ಲೂಟೂತ್‌ ಡಿವೈಸ್‌ ಕನೆಕ್ಟ್ ಆಯ್ಕೆ!

ಐಫೋನ್‌ನ ಬ್ಲೂಟೂತ್‌ ಸೆಟ್ಟಿಂಗ್‌ನಲ್ಲಿ ಹೊಸದಾಗಿ ಆಯ್ಕೆಯೊಂದನ್ನು ಸೇರಿಸಲಿದ್ದು, ಈ ಆಯ್ಕೆಯು ಬಳಕೆದಾರರಿಗೆ ಬ್ಲೂಟೂತ್‌ ಮೂಲಕ ಎರಡು ಆಡಿಯೊ ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲು ನೆರವಾಗಲಿದೆ. ಹಾಗೆಯೇ ಎರಡು ಡಿವೈಸ್‌ಗಳಲ್ಲಿ ಉತ್ತಮ ಕ್ವಾಲಿಟಿಯ ಆಡಿಯೊ ಕೇಳಬಹುದಾಗಿದೆ. ಈ ಆಯ್ಕೆಯನ್ನು ಕಂಪನಿಯು ತನ್ನ ಮುಂಬರುವ ಐಫೋನ್‌ ಮಾದರಿಗಳಲ್ಲಿ ಅಳವಡಿಸಿಕೊಳ್ಳಲಿದೆ ಎನ್ನಲಾಗುತ್ತಿದ್ದು, ಬಳಕೆದಾರರಿಗೆ ಡ್ಯುಯಲ್‌ ಕನೆಕ್ಟಿವಿಟಿಯ ಪ್ರಯೋಜನ್‌ ದೊರೆಯಲಿದೆ.

ಓದಿರಿ : ಬದಲಾಗಲಿದೆ ಆಪಲ್‌!...ಐಫೋನ್‌ ಸೇರಲಿವೆ ವಿಶೇಷ ಆಯ್ಕೆಗಳು!ಓದಿರಿ : ಬದಲಾಗಲಿದೆ ಆಪಲ್‌!...ಐಫೋನ್‌ ಸೇರಲಿವೆ ವಿಶೇಷ ಆಯ್ಕೆಗಳು!

ಡಬಲ್‌ ಧಮಾಕಾ!..ಐಫೋನ್‌ನಲ್ಲಿ ಡ್ಯುಯಲ್‌ ಬ್ಲೂಟೂತ್‌ ಡಿವೈಸ್‌ ಕನೆಕ್ಟ್ ಆಯ್ಕೆ!

ಸದ್ಯ ಬ್ಲೂಟೂತ್‌ ಆಧಾರರಿತ ಆಡಿಯೊ ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದು, ಆದರೆ ಒಂದೇ ಡಿವೈಸ್‌ ಮಾತ್ರ ಕನೆಕ್ಟ್‌ ಮಾಡುವ ಆಯ್ಕೆಗಳನ್ನು ಹೊಂದಿವೆ. ಆಪಲ್‌ನ ಹೊಸ ಆಯ್ಕೆಯು ಎರಡು ಡಿವೈಸ್‌ಗಳಿಗೆ ಕನೆಕ್ಟ್‌ ಮಾಡಬಹುದಾದ ಅವಕಾಶವು ಇರಲಿದೆ ಎನ್ನಲಾಗಿದ್ದು, ಬಳಕೆದಾರರು ತಮ್ಮ ಐಫೋನ್‌ ಮೂಲಕ ಎರಡು ಆಡಿಯೊ ಡಿವೈಸ್‌ಗಳಿಗೆ ಸಂಪರ್ಕ ಸಾಧಿಸಬಹುದಾಗಿದೆ.

ಐಫೋನ್‌ಗಳಲ್ಲಿ ಬ್ಲೂಟೂತ್‌ 5.0 ಸಾಮರ್ಥ್ಯದಲ್ಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಇದುವೇ ಹೈ ಕನೆಕ್ಟಿವಿಟಿ ಬ್ಲೂಟೂತ್‌ ಸೌಲಭ್ಯ ಎಂದು ಗುರುತಿಸಿಕೊಂಡಿದೆ. ಸ್ಯಾಮ್‌ಸಂಗ್‌ ತನ್ನ ಕೇಲವು ಆಯ್ದ ಸ್ಮಾರ್ಟ್‌ಫೋನ್‌ ಮಾದರಿಗಳಲ್ಲಿ ಈಗಾಗಲೇ ಬ್ಲೂಟೂತ್‌ ಮೂಲಕ ಡ್ಯುಯಲ್‌ ಆಡಿಯೊ ಡಿವೈಸ್‌ ಕನೆಕ್ಟಿವಿಟಿ ಸೌಲಭ್ಯವನ್ನು ನೀಡಿದೆ. ಈಗ ಆಪಲ್‌ ಸಹ ಡ್ಯೂಯಲ್‌ ಬ್ಲೂಟೂತ್‌ ಆಡಿಯೋ ಡಿವೈಸ್‌ಗಳಿಗೆ ಸಂಪರ್ಕಿಸುವ ಆಯ್ಕೆಯನ್ನು ಪರಿಚಯಿಸುವ ತಯಾರಿಯಲ್ಲಿದೆ.

ಓದಿರಿ : ಗೂಗಲ್ ಡುಯೋ ; ಡೇಟಾ ಸೇವಿಂಗ್ ಮತ್ತು ಗ್ರೂಪ್‌ ವಿಡಿಯೊ ಕಾಲಿಂಗ್‌ ಆಯ್ಕೆ ಸೇರ್ಪಡೆ!ಓದಿರಿ : ಗೂಗಲ್ ಡುಯೋ ; ಡೇಟಾ ಸೇವಿಂಗ್ ಮತ್ತು ಗ್ರೂಪ್‌ ವಿಡಿಯೊ ಕಾಲಿಂಗ್‌ ಆಯ್ಕೆ ಸೇರ್ಪಡೆ!

Best Mobiles in India

English summary
Apple could bring dual Bluetooth audio connections to future iPhones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X