ಡಿಸ್ಕೌಂಟ್‌ನಲ್ಲಿ ಐಫೋನ್‌ SE 2020 ಖರೀದಿಸಲು ನಾಳೆ ಕಡೆಯ ದಿನ!

|

ಇ-ಕಾಮರ್ಸ್‌ ದೈತ್ಯ ಸಂಸ್ಥೆಗಳಾದ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್ ಒಂದಿಲ್ಲೊಂದು ಆಫರ್ ನಿಡುತ್ತಲೇ ಗ್ರಾಹಕರನ್ನು ಸೆಳೆಯುತ್ತವೆ. ಅದರಲ್ಲಿಯೂ ವಿಶೇಷ ದಿನಗಳು ಹಾಗೂ ವಿಕೇಂಡ್‌ ದಿನಗಳಂದು ನೂತನ ಸ್ಮಾರ್ಟ್‌ಫೋನ್‌ಗಳಿಗೂ ಭಾರಿ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಆಕರ್ಷಿಸುತ್ತವೆ. ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಈಗ ಆಯ್ದ ಐಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ಕೊಡುಗೆ ಘೋಷಿಸಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಇದೀಗ 'ಆಪಲ್‌ ಡೇಸ್ ಸೇಲ್' ಮೇಳವು ಚಾಲ್ತಿಯಲ್ಲಿದ್ದು, ಇದೇ ಆಗಷ್ಟ್ 25ರಂದು (ನಾಳೆ) ಮುಕ್ತಾಯವಾಗಲಿದೆ. ಈ ಕೊಡುಗೆಯಲ್ಲಿ ಆಯ್ದ ಆಪಲ್‌ ಐಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಇದೆ. ಮುಖ್ಯವಾಗಿ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಐಫೋನ್ SE 2020 ಫೋನ್‌ ಅನ್ನು ಗ್ರಾಹಕರು ಬಿಗ್ ಡಿಸ್ಕೌಂಟ್ ನಲ್ಲಿ ಖರೀದಿಸಬಹುದಾಗಿದೆ.

2020

ಐಫೋನ್‌ SE 2020 64GB ವೇರಿಯಂಟ್‌ ಫೋನ್ ಆಫರ್‌ನಲ್ಲಿ 35,999 ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 128GB ವೇರಿಯಂಟ್‌ ಫೋನ್ 40,999ರೂ. ಗಳಿಗೆ ಮತ್ತು 256GB ವೇರಿಯಂಟ್‌ 50,999ರೂ.ಗಳಿಗೆ ಲಭ್ಯ. ಜೊತೆಗೆ ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಾಗಲಿದ್ದು, ತಿಂಗಳಿಗೆ 5,667ರೂ.ಗಳ EMI ಸೌಲಭ್ಯ ಸಹ ದೊರೆಯಲಿದೆ. ಹಾಗಾದರೇ ಐಫೋನ್‌ SE 2020 ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ಆಪಲ್ ಐಫೋನ್ SE(2020) 4.7-ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ.

ಪ್ರೊಸೆಸರ್ ಕಾರ್ಯವೈಖರಿ

ಪ್ರೊಸೆಸರ್ ಕಾರ್ಯವೈಖರಿ

ಐಫೋನ್ SE(2020) ಆಪಲ್‌ ಕಂಪೆನಿ A 13 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 13 ಬೆಂಬಲ ನೀಡಲಿದೆ. ಇನ್ನು ಈ ಐಫೋನ್ 64GB, 128GB, ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಲಬ್ಯವಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಐಫೋನ್ SE(2020) ಐಫೋನ್ ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದ್ದು, 12 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ. ಜೊತೆಗೆ 7 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 60kps ವರೆಗೆ 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಫೋಟೋಗಳಿಗಾಗಿ ಸ್ಮಾರ್ಟ್ HDR ಆಯ್ಕೆ ಪಡೆದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಆಪಲ್‌ ಐಫೋನ್‌SE(2020) ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ 802.11ax, ವೈ-ಫೈ ಕಾಲ್‌, ಎನ್‌ಎಫ್‌ಸಿ, ಬ್ಲೂಟೂತ್ ವಿ 5.0, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಹಾಗೆಯೇ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಹೊಂದಿವೆ.

Most Read Articles
Best Mobiles in India

Read more about:
English summary
Apple Days Sale: iPhone SE (2020) is available at just Rs. 35,999 for the 64GB storage variant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X