ಐಫೋನ್ XR ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಮಿಸ್ ಮಾಡ್ಕೊಬೇಡಿ!
ಇ-ಕಾಮರ್ಸ್ ಕ್ಷೇತ್ರದ ದಿಗ್ಗಜ ಎನಿಸಿರುವ ಅಮೆಜಾನ್ ತಾಣವು ಗ್ಯಾಡ್ಜೆಟ್ಸ್‌ಗಳಿಗೆ ಆಫರ್ ನೀಡುವುದರಲ್ಲಿ ಸದಾ ಮುಂದೆ. ಪ್ರಮುಖ ಹಬ್ಬಗಳು ಹಾಗೂ ಕೆಲವು ಸ್ಪೆಷಲ್ ದಿನಗಳಂದು ನೂತನ ಸ್ಮಾರ್ಟ್‌ಫೋನ್‌ಗಳಿಗೂ ಸಹ ವಿಶೇಷ ರಿಯಾಯಿತಿ ಘೋಷಿಸಿ ಗ್ರಾಹಕರನ್ನು ಆಕರ್ಷಿಸುತ್ತದೆ. ಅಮೆಜಾನ್ ತಾಣದಲ್ಲಿ ಅಂತಹ ಟೈಮ್ ಈಗ ಬಂದಿದ್ದು, ಜನಪ್ರಿಯ ಐಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ಕೊಡುಗೆ ಘೋಷಿಸಿದೆ.

ಹೌದು, ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಇದೀಗ 'ಆಪಲ್ ಡೇಸ್ ಸೇಲ್' ಮೇಳವು ಚಾಲ್ತಿಯಲ್ಲಿದ್ದು, ಆಪಲ್ ಉತ್ಪನ್ನಗಳಿಗೆ ರಿಯಾಯಿತಿ ಇದೆ. ಮುಖ್ಯವಾಗಿ ಐಫೋನ್ X, ಐಫೋನ್ 11 ಸರಣಿಯ ಫೋನ್‌ಗಳಿಗೆ, ಆಪಲ್ ವಾಚ್, ಐಫೋಡ್‌ಗಳಿಗೆ ಡಿಸ್ಕೌಂಟ್ ಲಭ್ಯ ಇವೆ. ಇನ್ನು ಅಮೆಜಾನ್ ಪ್ರೈಮ್ ಚಂದಾದಾರರಿಗೆ ಕೆಲವು ಆಯ್ದ ಫೋನ್‌ಗಳ ಮೇಲೆ ವಿಶೇಷವಾಗಿ 2000ರೂ ಮತ್ತು 3000ರೂ.ವರೆಗೂ ರಿಯಾಯಿತಿ ಲಭಿಸಲಿದೆ. ಅಂದಹಾಗೆ ಈ ಸೇಲ್ ವೇಳವು ಇದೇ ಮಾರ್ಚ್ 21ರ ವರೆಗೂ ಇರಲಿದೆ. ಆಪಲ್ ಸೇಲ್ ಮೇಳದಲ್ಲಿ ಯಾವೆಲ್ಲಾ ಐಫೋನ್‌ಗಳಿಗೆ ಡಿಸ್ಕೌಂಟ್ ಇದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಆಪಲ್ ಐಫೋನ್ XR
ಆಪಲ್ ಸಂಸ್ಥೆಯ ಜನಪ್ರಿಯ ಐಫೋನ್ XR ಸ್ಮಾರ್ಟ್‌ಫೋನ್ ಸಹ ಈ ಸೇಲ್ ಮೇಳದಲ್ಲಿ ಡಿಸ್ಕೌಂಟ್ ಪಡೆದಿದೆ. 128GB ಆಂತರಿಕ ಸ್ಟೋರೇಜ್ ವೇರಿಯಂಟ್ 50,900ರೂ ಪ್ರೈಸ್‌ಟ್ಯಾಗ್‌ನಲ್ಲಿ ಗುರುತಿಸಿಕೊಂಡಿದೆ. ಎಚ್‌ಡಿಎಫ್‌ಸಿ ಕಾರ್ಡ್ ಬಳಸಿ ಖರೀದಿಸಿದರೇ ಹೆಚ್ಚುವರಿ ರಿಯಾಯಿತಿ ಸಿಗಲಿದೆ.

ಆಪಲ್ ಐಫೋನ್ 11
ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಆಪಲ್ ಐಫೋನ್ 11 ಸ್ಮಾರ್ಟ್‌ಫೋನ್ ಸಹ ಡಿಸ್ಕೌಂಟ್ ಪಡೆದಿದ್ದು, 64GB ಆಂತರಿಕ ಸ್ಟೋರೇಜ್ ವೇರಿಯಂಟ್ ಫೋನ್ 64,900ರೂ. ಬೆಲೆಗೆ ಲಭ್ಯ. ಹಾಗೆಯೇ ಎಚ್‌ಡಿಎಫ್‌ಸಿ ಕಾರ್ಡ್ ಬಳಸಿ ಖರೀದಿಸಿದರೇ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಈ ಐಫೋನ್ ಹಿಂಬದಿಯಲ್ಲಿ 12ಎಂಪಿ ಸೆನ್ಸಾರ್‌ನ ಕ್ಯಾಮೆರಾ ಹೊಂದಿದ್ದು, ಮುಂಬದಿ ಸಹ 12ಎಂಪಿ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಆಪಲ್ ಐಫೋನ್ 8
ಈ ಸೇಲ್ ಮೇಳದಲ್ಲಿ ಆಪಲ್‌ನ ಐಫೋನ್ 8 ಸಹ ಡಿಸ್ಕೌಂಟ್ ಪಡೆದಿದ್ದು, 256GB ಸ್ಟೋರೇಜ್‌ನ ವೇರಿಯಂಟ್ ಫೋನ್ ಇದೀಗ 40,999ರೂ.ಗಳಿಗೆ ಸಿಗಲಿದೆ. ಇನ್ನು ಈ ಫೋನ್ ರೇಟಿನಾ ಹೆಚ್‌ಡಿ ಡಿಸ್‌ಪ್ಲೇಯನ್ನು ಪಡೆದಿದ್ದು, ಎ11 ಬಯೋನಿಕ್ ಚೀಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12ಎಂಪಿ ರಿಯರ್ ಕ್ಯಾಮೆರಾ ಒಳಗೊಂಡಿದ್ದು, 7ಎಂಪಿ ಸೆಲ್ಫಿ ಕ್ಯಾಮೆರಾ ಪಡೆದುಕೊಂಡಿದೆ.

ಆಪಲ್ ಮ್ಯಾಕ್‌ಬುಕ್ ಏರ್
ಆಪಲ್ ಮ್ಯಾಕ್‌ಬುಕ್ ಏರ್ ಡಿವೈಸ್‌ಗಳು ಗ್ರಾಹಕರ ಮೆಚ್ಚುಗೆ ಪಡೆದಿದ್ದು, ಈ ಸೇಲ್ ಮೇಳದಲ್ಲಿ ರಿಯಾಯಿತಿ ಪಡೆದಿವೆ. 128GB ಸ್ಟೋರೇಜ್‌ನ ಆಪಲ್ ಮ್ಯಾಕ್‌ಬುಕ್ ಏರ್ 93,120ರೂ. ಬೆಲೆಯಲ್ಲಿ ಲಭ್ಯ ಇದೆ. ಮತ್ತು 256GB ಸ್ಟೋರೇಜ್‌ನ ಆಪಲ್ ಮ್ಯಾಕ್‌ಬುಕ್ ಏರ್ 1,09,900ರೂ. ಪ್ರೈಸ್‌ಟಾಗ್‌ನಲ್ಲಿ ಸಿಗಲಿದೆ.


Click it and Unblock the Notifications








