Home
ಸುದ್ದಿಜಾಲ

ಈ ಜನಪ್ರಿಯ ಐಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ, ಈ ಆಫರ್‌ ಮಿಸ್‌ ಮಾಡ್ಕೋಬೇಡಿ!

ಇ ಕಾಮರ್ಸ್‌ ದಿಗ್ಗಜ ಪ್ಲಾಟ್‌ಫಾರ್ಮ್ ಅಮೆಜಾನ್‌ ಮೊಬೈಲ್‌ ಫೋನ್‌ಗಳಿಗೆ ಏನಾದರೊಂದು ಡಿಸ್ಕೌಂಟ್‌ ಲಭ್ಯ ಮಾಡಿರುತ್ತದೆ. ಸಂಸ್ಥೆಯು ಎಲ್ಲ ಮಾದರಿಯ ಫೋನ್‌ಗಳಿಗೂ ಆಕರ್ಷಕ ಡಿಸ್ಕೌಂಟ್‌ ಘೋಷಿಸಿರುತ್ತದೆ. ಸದ್ಯ ಅಮೆಜಾನ್‌ ತಾಣದಲ್ಲಿ ಆಪಲ್‌ ಡೇಸ್‌ ಸೇಲ್‌ ಚಾಲ್ತಿ ಇದ್ದು, ಆಯ್ದ ಐಫೋನ್‌ ಮೊಬೈಲ್‌ಗಳು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಅವುಗಳ ಪೈಕಿ ಆಪಲ್‌ ಐಫೋನ್‌ 13 ಫೋನ್‌ ಈಗ ಅತ್ಯುತ್ತಮ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದ್ದು, ಐಫೋನ್‌ ಖರೀದಿಸಬೇಕು ಎಂದಿಕೊಂಡಿರುವ ಗ್ರಾಹಕರಿಗೆ ಭರ್ಜರಿ ಖುಷಿ ನೀಡಿದೆ.

ಹೌದು, ಅಮೆಜಾನ್‌ ಇ-ಕಾಮರ್ಸ್ ವೆಬ್‌ಸೈಟ್‌ ಪ್ಲಾಟ್‌ಫಾರ್ಮ್‌ ನಲ್ಲಿ ಆಪಲ್‌ ಡೇಸ್‌ ಸೇಲ್‌ (Apple Days) ಮಾರಾಟ ಮೇಳ ಆಯೋಜಿಸಲಾಗಿದೆ. ಈ ಮೇಳವು ಈಗಾಗಲೇ ಚಾಲ್ತಿ ಆಗಿದ್ದು, ಇದೇ ಜೂನ್ 6 ರ ವರೆಗೂ ಲೈವ್ ಇರಲಿದೆ. ಈ ಸೇಲ್‌ನಲ್ಲಿ ಐಫೋನ್‌ 13 (Apple iPhone 13) ಫೋನಿನ ಬ್ಲೂ ಕಲರ್‌ನ 128GB ಸ್ಟೋರೇಜ್‌ ವೇರಿಯಂಟ್‌ ಶೇ. 19% ರಷ್ಟು ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರು 48,799ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿಸಬಹುದು.

ಈ ಜನಪ್ರಿಯ ಐಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ, ಈ ಆಫರ್‌ ಮಿಸ್‌ ಮಾಡ್ಕೋಬೇಡಿ!

ಇನ್ನು ಐಫೋನ್ 13 ಫೋನ್‌ 128 GB, 256 GB ಹಾಗೂ 512 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ ಆರು ಕಲರ್‌ ಆಯ್ಕೆಯನ್ನು ಪಡೆದಿದ್ದು, ಅವುಗಳು ಕ್ರಮವಾಗಿ ರೆಡ್‌, ಬ್ಲೂ, ಗ್ರೀನ್‌, ಮೀಡ್‌ನೈಟ್‌, ಪಿಂಕ್‌ ಹಾಗೂ ಸ್ಟಾರ್‌ಲೈಟ್‌ ಕಲರ್‌ ಆಯ್ಕೆಯಲ್ಲಿ ಇವೆ. ಹಾಗಾದರೇ ಐಫೋನ್ 13 ಫೋನಿನ ಇತರೆ ಫೀಚರ್ಸ್‌ ಬಗ್ಗೆ ಹಾಗೂ ಇತ್ತೀಚಿನ ಐಫೋನ್‌ 15 ಫೀಚರ್ಸ್‌ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಐಫೋನ್ 13 ಫೋನ್‌ ಫೀಚರ್ಸ್‌ ಹೀಗಿವೆ

ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಪಡೆದಿದ್ದು, ಇದರ ಜೊತೆಗೆ 1200 nits ಬ್ರೈಟ್ನೆಸ್‌ ಅನ್ನು ಇದು ಪಡೆದುಕೊಂಡಿದೆ. ಹಾಗೆಯೇ ಈ ಐಫೋನ್‌ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಐಓಎಸ್‌ 15 ಓಎಸ್‌ ಸಪೋರ್ಟ್‌ ಪಡೆದಿದೆ.

ಐಫೋನ್ 13 ಫೋನ್ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಮತ್ತೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಸಾಮರ್ಥ್ಯದಲ್ಲಿ ಇದೆ. ಕ್ಯಾಮೆರಾಗಳು ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಅಲ್ಲದೇ ಇದು ಸಿನಿಮ್ಯಾಟಿಕ್ ಮೋಡ್ ಆಯ್ಕೆ ಒಳಗೊಂಡಿದೆ.

ಆಪಲ್‌ ಐಫೋನ್‌ 15 ಪ್ರೊ ಫೀಚರ್ಸ್‌

ಇತ್ತೀಚಿನ ಈ ಐಫೋನ್ 6.1 ಇಂಚಿನ OLED ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಐಫೋನ್ 15 ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಇದು A17 ಪ್ರೊ ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದ್ದು, ಹಿಂದಿನ ಸರಣಿಗಿಂತ ವೇಗ ಪಡೆದಿದೆ.

ಅಲ್ಲದೇ ಈ ಫೋನ್ 48 ಮೆಗಾ ಪಿಕ್ಸಲ್‌ ವೈಡ್ ಆಂಗಲ್ ಕ್ಯಾಮೆರಾ, 12 ಮೆಗಾ ಪಿಕ್ಸಲ್‌ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 12 ಮೆಗಾ ಪಿಕ್ಸಲ್‌ ಟೆಲಿಫೋಟೋ ಲೆನ್ಸ್‌ ರಚನೆ ಪಡೆದಿದೆ. ಇನ್ನು ಐಫೋನ್‌ 15 ಪ್ರೊ ಫೋನ್‌ 128GB, 256GB, 512GB ಹಾಗೂ 1TB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದರ ಜೊತೆಗೆ ಬ್ಲ್ಯಾಕ್‌ ಟೈಟಾನಿಯಂ, ವೈಟ್‌ ಟೈಟಾನಿಯಂ, ಬ್ಲೂ ಟೈಟಾನಿಯಂ ಹಾಗೂ ನ್ಯಾಚುರಲ್ ಟೈಟಾನಿಯಂ ಕಲರ್‌ ಆಯ್ಕೆ ಹೊಂದಿದೆ.

Best Mobiles in India

English summary
Apple Days Sale on Amazon: Attractive deals on iPhone 13. know more about iphone 13 and iphone 15 phones, specifications, offer price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+