ಐಫೋನ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಮಿಸ್ ಮಾಡ್ಕೋಬೇಡಿ!
ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದ್ದು, ಸಾಮಾನ್ಯವಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನೇ ಬಹುತೇಕರು ಖರೀದಿಸುತ್ತಾರೆ. ಹಾಗೆಯೇ ಇನ್ನು ಕೆಲವರು ಆಪಲ್ ಸಂಸ್ಥೆಯ ಐಫೋನ್ ಖರೀದಿಸುವ ಮನಸ್ಸು ಹೊಂದಿರುತ್ತಾರೆ. ಹಾಗೇನಾದರೂ ನೀವು ಐಫೋನ್ ಖರೀದಿಸುವ ಯೋಜನೆಯಲ್ಲಿದ್ದರೇ ನಿಮಗಿಗ ಜನಪ್ರಿಯ ಇ-ಕಾಮರ್ಸ್ ತಾಣ ಅಮೆಜಾನ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಒದಗಿಸಿದೆ.

ಹೌದು, ಅಮೆಜಾನ್ ತಾಣವು ಇದೀಗ 'ಆಪಲ್ ಡೇಸ್' ಸೇಲ್ ಮೇಳವನ್ನು ಆಯೋಜಿಸಿದೆ. ಐದು ದಿನಗಳ ಈ ಮೇಳವು ಇದೇ ನವೆಂಬರ್ 13 ರಿಂದ ಶುರುವಾಗಿದ್ದು, ಇದೇ ನವೆಂಬರ್ 17ರ ವರೆಗೂ ನಡೆಯಲಿದೆ. ಮೇಳದಲ್ಲಿ ಐಫೋನ್‌ಗಳಿಗೆ ಬಿಗ್ ಡಿಸ್ಕೌಂಟ್ ನೀಡಲಾಗಿದ್ದು, ಹಾಗೆಯೇ ಆಪಲ್‌ನ ಐಪ್ಯಾಡ್, ಆಪಲ್ ವಾಚ್ ಸೇರಿದಂತೆ ಇತರೆ ಉತ್ಪನ್ನಗಳಿಗೆ ಬೆಸ್ಟ್ ರಿಯಾಯಿತಿಯನ್ನು ಘೋಷಿಸಿದೆ. ಹಾಗಾದರೇ ಅಮೆಜಾನ್ ಆಪಲ್ ಮೇಳದಲ್ಲಿ ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಆಪಲ್ ಉತ್ಪನ್ನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 11 ಸರಣಿ
ಆಪಲ್ ಸಂಸ್ಥೆಯ ಇತ್ತೀಚಿನ ಐಫೋನ್ 11 ಸರಣಿಯ ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಫೋನ್‌ಗಳು ಆಫರ್ ಪಡೆದಿವೆ. ಐಫೋನ್ 11 ಫೋನ್ 64,900ರೂ.ಗಳಿಗೆ ಐಫೋನ್ 11 ಪ್ರೊ ಫೋನ್ 99,900ರೂ.ಗಳಿಗೆ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್ ಫೋನ್ 1,09,900ರೂ.ಗಳಿಗೆ ಲಭ್ಯ ಇವೆ. ಆಪಲ್ ಡೇಸ್ ಸೇಲ್‌ನಲ್ಲಿ ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆಯ ಮೇಲೆ 6,000ರೂ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಹಾಗೆಯೇ ಕ್ಯಾಶ್‌ಬ್ಯಾಕ್ ಮತ್ತು ಇಎಮ್‌ಐ ಸೌಲಭ್ಯ ಇದೆ.

ಆಪಲ್ XR
ಜನಪ್ರಿಯ 'ಆಪಲ್ XR' ಐಫೋನ್ ಆಪಲ್ ಡೇಸ್ ಸೇಲ್‌ನಲ್ಲಿ 42,900ರೂ.ಗಳಿಗೆ ಲಭ್ಯವಿದ್ದು, ಸುಮಾರು 7,450ರೂ.ಗಳ ವರೆಗೂ ಗ್ರಾಹಕರಿಗೆ ಎಕ್ಸ್‌ಚೇಂಜ್ ಆಫರ್ ಸಿಗಲಿದೆ. ಈ ಐಫೋನ್ 6.1 ಇಂಚಿನ LCD ಡಿಸ್‌ಪ್ಲೇ ಆಪಲ್ A12 ಬಯೋನಿಕ್ ಚೀಪ್ ಸೇಟ್, ಹಿಂಬದಿಯಲ್ಲಿ 12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಸೆಲ್ಫಿ ಕ್ಯಾಮೆರಾ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ 2,942mAh ಬ್ಯಾಟರಿ ಪಡೆದಿದ್ದು, ಫೇಸ್‌ಐಡಿ ಆಯ್ಕೆ ಹೊಂದಿದೆ.

ಆಪಲ್ ಐಪ್ಯಾಡ್ (7th Gen)
ಆಪಲ್ ಸಂಸ್ಥೆಯ ಹೊಸ 7ನೇ ತಲೆಮಾರಿನ ಆಪಲ್ ಐಪ್ಯಾಡ್ ಅಮೆಜಾನ್ ತಾಣದಲ್ಲಿ ಡಿಸ್ಕೌಂಟ್ ಪಡೆದಿದ್ದು, 29,900ರೂ.ಗಳಿಗೆ ಸಿಗಲಿದೆ. ಹಾಗೆಯೇ ಆಪಲ್ ಐಪ್ಯಾಡ್ ಏರ್ ಡಿವೈಸ್ 42,655 ಲಭ್ಯ ವಿದೆ. ಇನ್ನು ಆಪಲ್ ಐಪ್ಯಾಡ್ ಪ್ರೊ 94,905ರೂ.ಗಳಿಗೆ ಸಿಗಲಿದೆ. ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆಯ ಮೇಲೆ 3,000ರೂ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ.

ಆಪಲ್ ವಾಚ್ ಸೀರಿಸ್ 5
ನೂತನ ಆಪಲ್ ವಾಚ್ ಸೀರಿಸ್ 5 ಡಿವೈಸ್ 40,900ರೂ.ಗಳ ಪ್ರೈಸ್‌ಟ್ಯಾಗ್ ಹೊಂದಿದ್ದು, ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆಯ ಮೇಲೆ 4,000ರೂ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಹಾಗೆಯೇ ಬೆಸ್ಟ್ ಇಎಮ್‌ಐ ಸೌಲಭ್ಯದ ಆಯ್ಕೆಗಳು ಸಿಗಲಿವೆ.


Click it and Unblock the Notifications








