ಐಫೋನ್ 15 ಲಾಂಚ್ ಬೆನ್ನಲ್ಲೇ ಗ್ರಾಹಕರಿಗೆ ಬಿಗ್ ಶಾಕ್!..ಯಾರೂ ಊಹಿಸಿರಲಿಲ್ಲ!
ಟೆಕ್ ದೈತ್ಯ ಆಪಲ್ ಸಂಸ್ಥೆಯು ತನ್ನ ಐಫೋನ್ 15 ಸರಣಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಸರಣಿಯು ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಹಾಗೂ ಐಫೋನ್ 15 ಪ್ರೊ ಮ್ಯಾಕ್ಸ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಆದರೆ ಈ ನೂತನ ಸರಣಿಯ ಲಾಂಚ್ ಬೆನ್ನಲ್ಲೇ ಗ್ರಾಹಕರಿಗೆ ಭಾರೀ ಶಾಕ್ ನೀಡಿದೆ.
ಹೌದು, ಆಪಲ್ ಸಂಸ್ಥೆಯ ಐಫೋನ್ 15 ಸರಣಿಯ ಬಿಡುಗಡೆ ಆಗಿದ್ದು, ಅದರ ಬೆನ್ನಲ್ಲೇ ತನ್ನ ಕೆಲವು ಕೆಲವು ಐಫೋನ್ ಮಾಡೆಲ್‌ಗಳನ್ನು ಸ್ಥಗಿತಗೊಳಿಸಿದೆ. ಸಂಸ್ಥೆಯು ತನ್ನ ನಾಲ್ಕು ಪ್ರಮುಖ ಐಫೋನ್ ಮಾಡೆಲ್‌ಗಳನ್ನು ಅಲಭ್ಯ ಮಾಡಿದೆ. ಅದಾಗ್ಯೂ, ಸ್ಥಗಿತವಾದ ಈ ಐಫೋನ್‌ಗಳು ಅಮೆಜಾನ್, ಫ್ಲಿಪ್‌ಕಾರ್ಟ್ ತಾಣಗಳಲ್ಲಿ ಸ್ಟಾಕ್ ಇರುವವರೆಗೂ ಖರೀದಿಗೆ ಲಭ್ಯ ಇರುತ್ತವೆ ಎಂಬುದನ್ನು ಗಮನಿಸಿ. ಹಾಗಾದರೆ ಸ್ಥಗಿತ ಆಗಿರುವ ಐಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇನ್ನು ಈ ಜನಪ್ರಿಯ ಐಫೋನ್‌ಗಳು ಸ್ಥಗಿತ :
* ಆಪಲ್ ಐಫೋನ್ 14 ಪ್ರೊ ಮ್ಯಾಕ್ಸ್
* ಆಪಲ್ ಐಫೋನ್ 14 ಪ್ರೊ
* ಆಪಲ್ ಐಫೋನ್ 13 ಮಿನಿ
* ಆಪಲ್ ಐಫೋನ್ 12
ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಫೀಚರ್ಸ್ ಹೀಗಿವೆ :
ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಪಡೆದಿದ್ದು, ಆಲ್ವೇಸ್ ಆನ್ ಡಿಸ್‌ಪ್ಲೇ ಒಳಗೊಂಡಿದೆ. ಅದೇ ರೀತಿ ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ರೆಟಿನಾ XDR ಡಿಸ್‌ಪ್ಲೇ ಜೊತೆಗೆ ಇದು ಕೂಡಾ ಆಲ್ವೇಸ್ ಆನ್ ಸೌಲಭ್ಯ ಪಡೆದಿದೆ.
ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಈ ಎರಡು ಫೋನ್‌ಗಳು A16 ಬಯೋನಿಕ್ ಚಿಪ್ ಪ್ರೊಸೆಸರ್ ಬಲದಲ್ಲಿ ಕೆಲಸ ಮಾಡುತ್ತವೆ. ಅಧಿಕ ಕಾರ್ಯಕ್ಷಮತೆಯ ಕೋರ್ CPU ಒಳಗೊಂಡಿವೆ. ಸಂಸ್ಥೆಯ A16 ಚಿಪ್‌ಗಳು ಡೈನಾಮಿಕ್ ಐಲ್ಯಾಂಡ್ ಫೀಚರ್ ನಲ್ಲಿ ಕಂಡುಬರುವ ಮೃದುವಾದ ಅನಿಮೇಷನ್‌ಗಳಿಗೆ ಶಕ್ತಿ ತುಂಬಲು ನೆರವು ಮಾಡುತ್ತದೆ.
ಐಫೋನ್ 13 ಮಿನಿ ಫೋನ್ ಫೀಚರ್ಸ್ ಹೀಗಿವೆ :
ಐಫೋನ್ 13 ಮಿನಿ ಮೊಬೈಲ್ 5.8 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಉತ್ತಮ ಪಿಕ್ಸಲ್ ರೆಸಲ್ಯೂಶನ್ ಒಳಗೊಂಡಿದೆ. ಅಲ್ಲದೇ ಈ ಫೋನ್ A15 ಬಯೋನಿಕ್ ಪ್ರೊಸೆಸರ್ ಹೊಂದಿದ್ದು, 5G ಸಪೋರ್ಟ್ ಹೊಂದಿದೆ. ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ಪೂರಕವಾಗಿವೆ.
ಐಫೋನ್ 12 ಫೋನ್ ಫೀಚರ್ಸ್ ಹೀಗಿವೆ :
ಐಫೋನ್ 12 ಮೊಬೈಲ್ OLED ಡಿಸ್‌ಪ್ಲೇ ಪಡೆದಿದ್ದು, ಜೊತೆಗೆ A14 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಐಫೋನ್ 12 ಫೋನ್ ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ರಚನೆ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್ ಆಂಗಲ್ ಸೆನ್ಸಾರ್‌ಗಳನ್ನು ಹೊಂದಿವೆ. ಹಾಗೆಯೇ ಈ ಐಫೋನ್ IP68 ವಾಟರ್ ರೆಸಿಸ್ಟಂಟ್ ಸೌಲಭ್ಯ ಸಹ ಹೊಂದಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳ ಆಯ್ಕೆ ಪಡೆದಿದೆ.


Click it and Unblock the Notifications








