Home
ಸುದ್ದಿಜಾಲ

Apple Event 2021: ಐಫೋನ್‌ 13 ಸರಣಿ ಜೊತೆ ಇನ್ನೇನು ವಿಶೇಷ ಇಲ್ಲಿದೆ ಮಾಹಿತಿ!

ವಿಶ್ವದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ ಆಗಿರುವ ಆಪಲ್ ಸಂಸ್ಥೆಯ ಐಫೋನ್‌ಗಳು ಹೆಚ್ಚು ಡಿಮ್ಯಾಂಡ್‌ ಪಡೆದಿವೆ. ಕಂಪನಿಯು ಐಫೋನ್‌ 12 ಸರಣಿಯನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಅದರ ಮುಂದುವರಿದ ಭಾಗವಾಗಿ ಕಂಪನಿಯು ಈಗ ತನ್ನ ಬಹು ನಿರೀಕ್ಷಿತ ಐಫೋನ್ 13 ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹಾಗಾದರೇ ಆಪಲ್‌ ಈವೆಂಟ್ 2021 ಕಾರ್ಯಕ್ರಮದಲ್ಲಿ ಐಫೋನ್‌ 13 ಫೋನ್‌ಗಳ ಜೊತೆಗೆ ಇತರೆ ಯಾವೆಲ್ಲಾ ಡಿವೈಸ್‌ಗಳನ್ನು ನಿರೀಕ್ಷಿಸಬಹುದು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

Apple Event 2021: ಐಫೋನ್‌ 13 ಸರಣಿ ಜೊತೆ ಇನ್ನೇನು ವಿಶೇಷ ಇಲ್ಲಿದೆ ಮಾಹಿತಿ!

ಎಷ್ಟು ಐಫೋನ್‌ ಲಾಂಚ್ ಆಗಲಿವೆ
ಈ ಬಾರಿಯ ಆಪಲ್‌ ಈವೆಂಟ್ 2021 ಕಾರ್ಯಕ್ರಮದಲ್ಲಿ ನಾಲ್ಕು ಐಫೋನ್‌ಗಳು ಬಿಡುಗಡೆ ಆಗುವ ಸಾಧ್ಯತೆಗಳು ಇವೆ. ಕ್ರಮವಾಗಿ ಅವುಗಳು ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್‌ ಎನ್ನಲಾಗಿದೆ.

ಐಫೋನ್‌ 13 ಸರಣಿಯ ವಿಶೇಷತೆ ಏನು?
ಒಂದಿಲ್ಲೊಂದು ವಿಶೇಷತೆಯೊಂದಿಗೆ ಹೊಸ ಸರಣಿಯನ್ನು ಆಪಲ್ ಲಾಂಚ್ ಮಾಡುತ್ತದೆ. ಹಾಗೆಯೇ ಈ ಬಾರಿಯ ಐಫೋನ್‌ 13 ಸರಣಿಯು ವಿಶೇಷ ಕ್ಯಾಮೆರಾ ಫೀಚರ್‌ ಹೊಂದಿರಲಿದೆ ಎಂದು ಹೇಳಲಾಗಿದೆ.

Apple Event 2021: ಐಫೋನ್‌ 13 ಸರಣಿ ಜೊತೆ ಇನ್ನೇನು ವಿಶೇಷ ಇಲ್ಲಿದೆ ಮಾಹಿತಿ!

ಹೊಸ ಸರಣಿಯ ಡಿಸ್‌ಪ್ಲೇ
ಬಿಡುಗಡೆ ಆಗಲಿರುವ ಹೊಸ ಐಫೋನ್ 13 ಫೋಣ್‌ಗಳು ಐಪ್ಯಾಡ್ ಪ್ರೊ ಮಾದರಿಯಂತೆ 120Hz ರೀಫ್ರೇಶ್ ರೇಟ್ ಹೊಂದಿರಲಿವೆ. ಹಾಗೆಯೇ 'ಪ್ರೊಮೋಷನ್' ಮಾದರಿಯಲ್ಲಿ ಬರಲಿವೆ ಎಂದು ಅಂದಾಜಿಸಲಾಗಿದೆ.

ಐಫೋನ್ 13 ಸರಣಿ 5G ಹೊಂದಿರುತ್ತಾ?
ಬಹುನಿರೀಕ್ಷಿತ ಐಫೋನ್ 13 ಸರಣಿಯ ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್‌ ಈ ಎಲ್ಲ ಐಫೋನ್‌ಗಳು 5G ಸಪೋರ್ಟ್‌ ಪಡೆದಿರಲಿವೆ ಎಂದು ನಿರೀಕ್ಷಿಸಲಾಗುತ್ತಿದೆ.

Apple Event 2021: ಐಫೋನ್‌ 13 ಸರಣಿ ಜೊತೆ ಇನ್ನೇನು ವಿಶೇಷ ಇಲ್ಲಿದೆ ಮಾಹಿತಿ!

ಆಪಲ್ ಈವೆಂಟ್‌ನಲ್ಲಿ ಮತ್ತೇನು ವಿಶೇಷ?
ಈ ಬಾರಿಯ ಆಪಲ್ ಕಾರ್ಯಕ್ರಮದಲ್ಲಿ ಐಫೋನ್ 13 ಸರಣಿಯ ಜೊತೆಗೆ ಆಪಲ್ ವಾಚ್, ಆಪಲ್ ಏರ್‌ಪಾಡ್ಸ್‌ ಡಿವೈಸ್‌ಗಳು ಲಾಂಚ್ ಆಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

ಆಪಲ್ ವಾಚ್ ಹೇಗಿರಲಿದೆ?
ಆಪಲ್ ಕಾರ್ಯಕ್ರಮದಲ್ಲಿ ಆಪಲ್ ವಾಚ್ ಸರಣಿ 7 ಅನಾವರಣ ಆಗಲಿದೆ ಎನ್ನಲಾಗಿದೆ. ಇನ್ನು ಈ ಆಪಲ್ ವಾಚ್ ಅಪ್‌ಡೇಟ್‌ ವಿನ್ಯಾಸದೊಂದಿಗೆ ಲಾಂಚ್ ಆಗಲಿದೆ ಎನ್ನಲಾಗಿದೆ. ಆಪಲ್ ವಾಚ್ ಸರಣಿ 7 ಪ್ರಸ್ತುತ 40mm ಮತ್ತು 44mm ಗಾತ್ರಗಳ ಆಯ್ಕೆಗಳಲ್ಲಿ ಇದ್ದು, ಹೊಸ ಸರಣಿಯು 41mm ಮತ್ತು 45mm ಗಾತ್ರದ ಆಯ್ಕೆಗಳಲ್ಲಿ ಬರುತ್ತದೆ ಎಂದು ಹೇಳಲಾಗುತ್ತಿದೆ

ಕುತೂಹಲ ಮೂಡಿಸಿದ ಆಪಲ್ ಏರ್‌ಪಾಡ್ಸ್
ಐಫೋನ್ 13 ಸರಣಿಯಂತೆ ಆಪಲ್ ಏರ್‌ಪಾಡ್ಸ್ 3 ಡಿವೈಸ್ ಸಹ ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಈ ಡಿವೈಸ್ ಸಾಕಷ್ಟು ಅಪ್‌ಡೇಟ್‌ ಹೊಂದಿದ ಇಯರ್‌ಬಡ್‌ ಆಗಿರಲಿದೆ ಎನ್ನಲಾಗಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಈ ಡಿವೈಸ್ ಬಿಡುಗಡೆ ಸಾಧ್ಯತೆಗಳಿವೆ. ಈ ಹಿಂದಿನ ಐಫೋನ್‌ 12 ಸರಣಿಯ ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಒಂದು ಕ್ವಿಕ್ ಲುಕ್ ತಿಳಿಯಲು ಮುಂದೆ ಓದಿರಿ.

ಐಫೋನ್ 12 - ಫೀಚರ್ಸ್‌
ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 12 ಮಿನಿ ಫೀಚರ್ಸ್‌
ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ.

ಐಫೋನ್ 12 ಪ್ರೊ - ಫೀಚರ್ಸ್‌
ಐಫೋನ್ 12 ಪ್ರೊ 6.1-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಮುಖ್ಯವಾಗಿ ಐಫೋನ್ 12 ಪ್ರೊ ಕ್ಯಾಮೆರಾ ವಿಭಾಗದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಎರಡು ವೈಡ್-ಆಂಗಲ್ ಸೆನ್ಸರ್‌ಗಳು ಮತ್ತು ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ.

ಐಫೋನ್ 12 ಪ್ರೊ ಮ್ಯಾಕ್ಸ್‌ - ಫೀಚರ್ಸ್‌
ಐಫೋನ್ 12 ಪ್ರೊ ಮ್ಯಾಕ್ಸ್‌ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಐಫೋನ್ 12 ಪ್ರೊ ಮ್ಯಾಕ್ಸ್ ಟೆಲಿಫೋಟೋ ಕ್ಯಾಮೆರಾದೊಂದಿಗೆ ಉತ್ತಮವಾದ ಕ್ಯಾಮೆರಾ ಸೆಟ್ ಹೊಂದಿದ್ದು, ಇದು 65 ಎಂಎಂ ಫೋಕಲ್ ಉದ್ದವನ್ನು ಹೊಂದಿದ್ದು ಅದು ನಿಮಗೆ 2.5x ಆಪ್ಟಿಕಲ್ ಜೂಮ್ ಮತ್ತು 5x ಜೂಮ್ ಶ್ರೇಣಿಯನ್ನು ಅನುಮತಿಸುತ್ತದೆ. ಸುಧಾರಿತ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಕೂಡ ಹೊಂದಿದೆ. ಡಾಲ್ಬಿ ಸಪೋರ್ಟ್‌ ಸಹ ಪಡೆದಿದೆ.

Best Mobiles in India

English summary
Apple Event 2021: What To Expect With iphone 13 Series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+