ಚಾರ್ಜ್ ಆಗುವಾಗ ಐಫೋನ್ ಪಕ್ಕದಲ್ಲೇ ಮಲಗುವವರಿಗೆ ಗಂಭೀರ ಎಚ್ಚರಿಕೆ ನೀಡಿದ ಆಪಲ್!
ಆಪಲ್‌ನ ಐಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಈ ಫೋನ್‌ಗಳಿಗೆ ಇರುವ ಕ್ರೇಜ್ ಬೇರೆ ಯಾವ ಫೋನ್‌ಗಳಿಗೂ ಇಲ್ಲ ಎಂದರೆ ತಪ್ಪಾಗಲಾರದು. ಈ ಕಾರಣಕ್ಕೆ ಏನೋ ಬಳಕೆದಾರರು ತಮ್ಮ ಐಫೋನ್‌ಗಳನ್ನು (iPhones) ಅರೆಕ್ಷಣವೂ ಬಿಟ್ಟಿರಲಾರದ ಸಂಬಂಧ ಬೆಳೆಸಿಕೊಂಡಿರುತ್ತಾರೆ. ಈ ರೀತಿಯ ಜನರಿಗೆ ಆಪಲ್ ಗಂಭೀರ ಎಚ್ಚರಿಕೆ ನೀಡಿದೆ.
ಹೌದು, ಚಾರ್ಜಿಂಗ್ ಫೋನ್‌ನ ಪಕ್ಕದಲ್ಲಿ ಮಲಗುವುದರಿಂದ ಬೆಂಕಿ, ವಿದ್ಯುತ್ ಆಘಾತ, ಗಾಯಗಳು ಮತ್ತು ಆಸ್ತಿ ಹಾನಿಯ ಅಪಾಯ ಸೇರಿದಂತೆ ಸಂಭವನೀಯ ಅಪಾಯಗಳ ಬಗ್ಗೆ ಆಪಲ್ ಎಚ್ಚರಿಕೆ ನೀಡಲಾಗಿದೆ. ಫೋನ್‌ಗಳು ಚೆನ್ನಾಗಿ ಗಾಳಿ ಇರುವ ಪ್ರದೇಶಗಳಲ್ಲಿ ಚಾರ್ಜ್ ಆಗುತ್ತಿವೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಚಾರ್ಜ್ ಆಗುವಾಗ ಅವುಗಳನ್ನು ಕಂಬಳಿಗಳು ಅಥವಾ ದಿಂಬುಗಳ ಅಡಿಯಲ್ಲಿ ಇರಿಸುವುದನ್ನು ತಪ್ಪಿಸಲು ಬಳಕೆದಾರರಿಗೆ ಸಲಹೆ ನೀಡಲಾಗಿದೆ.

ಐಫೋನ್ ಬಳಕೆದಾರರಿಗೆ ಎಚ್ಚರಿಕೆ: ಆಪಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಚಾರ್ಜಿಂಗ್ ಆಗುವಾಗ ಫೋನ್ ಪಕ್ಕದಲ್ಲಿ ಮಲಗಿದರೆ ಆಗುವ ಸಂಭವನೀಯ ಅಪಾಯಗಳ ಬಗ್ಗೆ ಎಚ್ಚರಿಸಿದೆ. ಈ ಮೂಲಕ ಸರಿಯಾದ ಫೋನ್ ಚಾರ್ಜಿಂಗ್‌ನ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ. ಈ ಅಪಾಯಗಳು ಬೆಂಕಿ, ವಿದ್ಯುತ್ ಆಘಾತ, ಗಾಯಗಳು ಅಥವಾ ಫೋನ್ ಮತ್ತು ಆಸ್ತಿಗೆ ಹಾನಿಮಾಡುವ ಸಾಮರ್ಥ್ಯವ ಹೊಂದಿವೆ ಎಂದು ಉಲ್ಲೇಖಿಸಲಾಗಿದೆ.
ಕಂಬಳಿ ಅಥವಾ ದಿಂಬಿನ ಕೆಳಗೆ ಫೋನ್ ಅನ್ನು ಚಾರ್ಜ್ ಮಾಡುವುದರಿಂದ ಡಿವೈಸ್ ಹೆಚ್ಚು ಬಿಸಿಯಾಗುತ್ತದೆ ಎಂದು ಈ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆಪಲ್‌ನಿಂದ ಪ್ರಮುಖ ಮೆಸೆಜ್‌ನಲ್ಲಿ ಡಿವೈಸ್ ಅನ್ನು ಪವರ್ ಅಡಾಪ್ಟರ್ ಅಥವಾ ವೈರ್‌ಲೆಸ್ ಚಾರ್ಜರ್‌ನಲ್ಲಿ ಇಟ್ಟಾಗ ಪಕ್ಕದಲ್ಲಿ ಮಲಗಬೇಡಿ ಮತ್ತು ವಿದ್ಯುತ್‌ಗೆ ಸಂಪರ್ಕಗೊಂಡಿರುವಾಗ ಡಿವೈಸ್‌ಗಳನ್ನು ಕಂಬಳಿ, ದಿಂಬು ಅಥವಾ ನಿಮ್ಮ ದೇಹದ ಕೆಳಗೆ ಇರಿಸುವುದನ್ನು ತಪ್ಪಿಸಿ ಎಂದು ತಿಳಿಸಿದೆ.
ಐಫೋನ್‌ಗಳು, ಪವರ್ ಅಡಾಪ್ಟರ್‌ಗಳು ಮತ್ತು ವೈರ್‌ಲೆಸ್ ಚಾರ್ಜರ್‌ಗಳನ್ನು ಯಾವಾಗಲಾದರೂ ಸರಿಯೇ ಚೆನ್ನಾಗಿ ಗಾಳಿ ಇರುವ ಸ್ಥಳಗಳಲ್ಲಿ ಬಳಕೆ ಮಾಡಬೇಕು ಎಂದಿರುವ ಆಪಲ್ ಥರ್ಡ್ ಪಾರ್ಟಿ ಚಾರ್ಜರ್‌ಗಳ ಬಗ್ಗೆಯೂ ಈ ವೇಳೆ ಎಚ್ಚರಿಕೆ ನೀಡಿದೆ. ಅಂದರೆ ಅಂತರರಾಷ್ಟ್ರೀಯ ಸುರಕ್ಷತಾ ನಿಯಮಗಳಿಗೆ ಬದ್ಧವಾಗಿರುವ ಐಫೋನ್‌ಗಾಗಿ ತಯಾರಿಸಿದ ಕೇಬಲ್‌ಗಳನ್ನು ಮಾತ್ರ ಆಯ್ಕೆ ಮಾಡಲು ಬಳಕೆದಾರರಿಗೆ ಸಲಹೆ ನೀಡಲಾಗಿದೆ.
ಅದಾಗ್ಯೂ ಮಾನದಂಡಗಳನ್ನು ಪೂರೈಸುವ ಮತ್ತು ಸಂಬಂಧಿತ ಸುರಕ್ಷತಾ ನಿಯಮಗಳನ್ನು ಅನುಸರಿಸುವ ಮೂರನೇ ವ್ಯಕ್ತಿಯ ಕೇಬಲ್‌ಗಳನ್ನು ಬಳಸಿಕೊಂಡು ಐಫೋನ್ ಅನ್ನು ಚಾರ್ಜ್ ಮಾಡಲು ಮುಂದಾದರೂ ಸಹ ಒಂದು ವೇಳೆ ಅಡಾಪ್ಟರ್ ಈ ಸುರಕ್ಷತಾ ಮಾನದಂಡಗಳನ್ನು ಪೂರೈಸದಿರಬಹುದು. ಇದು ಹಾನಿ ಅಥವಾ ಸಂಭಾವ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು ಕಂಪನಿ ಎಚ್ಚರಿಸಿದೆ.
ಇದೆಲ್ಲಕ್ಕೂ ಮಿಗಿಲಾಗಿ ನೀರಿನ ಬಳಿ ಫೋನ್‌ಗಳನ್ನು ಚಾರ್ಜ್ ಮಾಡಲೇಬೇಡಿ ಎಂದು ಹೇಳಿದೆ. ಈ ರೀತಿ ಮಾಡುವುದರಿಂದ ಹಾನಿಗೊಳಗಾದ ಚಾರ್ಜರ್‌ಗಳನ್ನು ಡಿವೈಸ್ ಅನ್ನು ತಕ್ಷಣವೇ ಹಾನಿ ಮಾಡಬಹುದು. ಪರಿಣಾಮ ದುರ್ಬಲಗೊಂಡ ಕೇಬಲ್‌ಗಳು ಅಥವಾ ಚಾರ್ಜರ್‌ಗಳನ್ನು ಬಳಸುವುದು ಅಥವಾ ತೇವಾಂಶದಲ್ಲಿ ಚಾರ್ಜ್ ಮಾಡುವುದು ಬೆಂಕಿ, ವಿದ್ಯುತ್ ಆಘಾತಗಳಿಗೆ ಕಾರಣ ಆಗುತ್ತದೆ ಎಂದು ಹೇಳಿದೆ.
ಇದು ಆಪಲ್ ಸಂಸ್ಥೆ ತನ್ನ ಬಳಕೆದಾರರಿಗೆ ನೀಡಿದ ಎಚ್ಚರಿಕೆ ಸಂದೇಶವಾದರೂ ಸಹ ಇದೇ ಸಲಹೆಯನ್ನು ಆಂಡ್ರಾಯ್ಡ್ ಫೋನ್ ಬಳಕೆದಾರರು ಸಹ ಪಾಲಿಸುವುದು ಒಳ್ಳೆಯದು. ಯಾಕೆಂದರೆ ಆಂಡ್ರಾಯ್ಡ್ ವಿಭಾಗದಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ವರದಿ ಆಗುತ್ತವೆ. ಯಾರದೋ ಚಾರ್ಜರ್ ಅನ್ನು ಇನ್ಯಾರೋ ಬಳಕೆ ಮಾಡುವುದು, ಫೋನ್ ಅನ್ನು ಎಲ್ಲೆಂದರಲ್ಲಿ ಚಾರ್ಜಿಂಗ್‌ಗೆ ಹಾಕುವುದು ಸೇರಿದಂತೆ ಅನೇಕ ತಪ್ಪಾದ ಕೆಲಸಗಳನ್ನು ಆಂಡ್ರಾಯ್ಡ್ ಬಳಕೆದಾರರು ಮಾಡುತ್ತಾರೆ.

ಈ ನಡುವೆ ಭಾರತ ಸೇರಿದಂತೆ ಅನೇಕ ಕಡೆ ಆಂಡ್ರಾಯ್ಡ್ ಫೋನ್‌ಗಳು ಚಾರ್ಜಿಂಗ್ ನಲ್ಲಿರುವಾಗಲೇ ಸ್ಪೋಟವಾಗಿವೆ. ಕೆಲವೊಂದು ಕಡೆ ಈ ಸಂಬಂಧ ಪ್ರಾಣಹಾನಿ ಸಹ ಆಗಿದೆ. ಇದರಿಂದಾಗಿ ಆಂಡ್ರಾಯ್ಡ್ ಬಳಕೆದಾರರು ಸಹ ಈ ಮೇಲಿನ ಪ್ರಮುಖ ಸೂಚನೆಗಳನ್ನು ಪಾಲಿಸಿದ್ದೇ ಆದರೆ ಸ್ಮಾರ್ಟ್‌ಫೋನ್ ಖಂಡಿತಾ ಸೇಫ್ ಆಗಿರಲಿದೆ ಜೊತೆಗೆ ನೀವು ಸಹ ಸೇಫ್.


Click it and Unblock the Notifications








