Home
ಸುದ್ದಿಜಾಲ

ಆಪಲ್‌ಗೆ ಸಿಕ್ಕಿದೆ 'ಅಪರೂಪದ' ಫೀಚರ್ಸ್‌ ಪೇಟೆಂಟ್! ಇದು ಐಫೋನ್ 15 ನಲ್ಲಿ ಕಾಣಿಸಿಕೊಳ್ಳೋದು ಡೌಟು!

ಸ್ಮಾರ್ಟ್‌ಫೋನ್‌ ವಲಯದಲ್ಲಿ ಆಪಲ್‌ನ ಐಫೋನ್‌ಗಳಿಗೆ ವಿಶೇಷವಾದ ಬೇಡಿಕೆ ಇದೆ. ಈ ಫೋನ್‌ಗಳು ಉತ್ತಮ ಕಾರ್ಯಕ್ಷಮತೆ ಹಾಗೂ ದೀರ್ಘಬಾಳಕೆ, ಅತ್ಯುತ್ತಮ ಕ್ಯಾಮೆರಾ ಫೀಚರ್ಸ್‌ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡುತ್ತಿವೆ. ಅದಾಗ್ಯೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರೀ ಬೇಡಿಕೆ ಇರುವ ಈ ಫೀಚರ್ಸ್‌ ಮಾತ್ರ ಇದರಲ್ಲಿ ಇಲ್ಲಿಯವರೆಗೂ ಇಲ್ಲ.

ಹೌದು, ಐಫೋನ್‌ಗಳಲ್ಲಿ ಪ್ರಮುಖವಾಗಿ ಭದ್ರತಾ ವಿಚಾರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಈ ಮೂಲಕ ಸುಲಭವಾಗಿ ಬೇರೆ ಯಾರೂ ಸಹ ಈ ಫೋನ್‌ಗಳಿಗೆ ಎಂಟ್ರಿಯಾಗಲು ಸಾಧ್ಯವಿಲ್ಲ. ಇದೆಲ್ಲದರ ನಡುವೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ಬಳಕೆಯಲ್ಲಿ ಇರುವ ಇನ್-ಡಿಸ್ಪ್ಲೇ ಫಿಂಗರ್‌ಫ್ರಿಂಟ್ ಸೆನ್ಸರ್‌ ಆಯ್ಕೆಯನ್ನು ಆಪಲ್‌ ಫೋನ್‌ಗಳು ಸಹ ಪಡೆದುಕೊಳ್ಳಲಿದೆ ಎನ್ನಲಾಗಿದೆ. ಆದರೆ, ಇದು ಆಂಡ್ರಾಯ್ಡ್ ಗಿಂತ ವಿಶೇಷವಾದ ಟೆಕ್ನಾಲಜಿಯನ್ನು ಹೊಂದಿರಲಿದೆ.

ಆಪಲ್‌ಗೆ ಸಿಕ್ಕಿದೆ 'ಅಪರೂಪದ' ಫೀಚರ್ಸ್‌ ಪೇಟೆಂಟ್! ...

ಆಪಲ್‌ ಫೋನ್‌ನಲ್ಲಿ ಅತ್ಯಾಕರ್ಷಕ ಹಾಗೂ ಅತ್ಯಂತ ಅಗತ್ಯ ಎನಿಸುವ ಎಲ್ಲಾ ರೀತಿಯ ಫೀಚರ್ಸ್‌ಗಳನ್ನು ಹೊಂದಿದ್ದರೂ ಸಹ ಈವರೆಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆಯನ್ನು ಹೊಂದಿಲ್ಲ. ವಿಷಯ ಏನೆಂದರೆ ಫಿಂಗರ್‌ಪ್ರಿಂಟ್ ಆಧಾರಿತ ಟಚ್ ಐಡಿಯನ್ನು ನೀಡಿದ ಫೋನ್‌ಗಳಲ್ಲಿ ಇದು ಪ್ರಮುಖವಾಗಿದೆಯಾದರೂ ತನ್ನ ಯಾವುದೇ ಡಿವೈಸ್‌ಗಳಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ ಫೀಚರ್ಸ್‌ ಅನ್ನು ಪರಿಚಯಿಸದೆ ಇರುವುದು.

ಇತ್ತೀಚಿನ ದಿನಗಳಲ್ಲಿ ಆಪಲ್‌ನಲ್ಲಿ ಕಂಡುಬರುತ್ತಿರುವ ಕೆಲವು ಬೆಳವಣಿಗೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಐಫೋನ್‌ಗಳಲ್ಲಿ ಈ ಇನ್-ಡಿಸ್ಪ್ಲೇ ಸೆನ್ಸರ್‌ ಇರಲಿದೆ ಎಂದು ನಂಬಹುದಾಗಿದೆ. ಯಾಕೆಂದರೆ ಪೇಟೆಂಟ್ಲಿ ಆಪಲ್ ವರದಿಯ ಪ್ರಕಾರ, ಆಪಲ್‌ ಐಫೋನ್‌ ಆಪ್ಟಿಕಲ್-ಫಿಂಗರ್‌ಪ್ರಿಂಟ್ ಡಿಟೆಕ್ಷನ್ ಸಿಸ್ಟಮ್‌ಗಾಗಿ ಪೇಟೆಂಟ್ ಪಡೆದುಕೊಂಡಿದೆ. ಇದನ್ನು ಯುಎಸ್‌ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಆಫೀಸ್‌ನಿಂದ ಅಧಿಕೃತವಾಗಿ ಆಪಲ್‌ಗೆ ಪೇಟೆಂಟ್ ನೀಡಲಾಗಿದೆ.

ಇನ್ನು ಈ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗೆ ಸಂಬಂಧಿಸಿದ ಪೇಟೆಂಟ್ ಅನ್ನು ಆಪಲ್ ಪಡೆದುಕೊಂಡಿರುವುದು ಇದೇ ಮೊದಲಲ್ಲ, ಕಳೆದ ಕೆಲವು ವರ್ಷಗಳಿಂದ ಆಪಲ್ ಹಲವಾರು ರೀತಿಯ ವಿಶೇಷ ರೀತಿಯ ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಆದರೆ, ಎಲ್ಲವನ್ನೂ ತನ್ನ ಡಿವೈಸ್‌ಗಳಲ್ಲಿ ಪರಿಚಯಿಸದೆ ಒಂದೊಂದಾಗಿ ಹೊಸ ಫೋನ್‌ಗಳನ್ನು ಅನಾವರಣ ಮಾಡುವ ವೇಳೆ ಪರಿಚಯಿಸಿಕೊಂಡು ಬರುವ ಚಾಣಾಕ್ಷ ಬುದ್ದಿಯನ್ನು ಸಹ ತೋರಿಸುತ್ತಿದೆ.

ಆಪಲ್‌ಗೆ ಸಿಕ್ಕಿದೆ 'ಅಪರೂಪದ' ಫೀಚರ್ಸ್‌ ಪೇಟೆಂಟ್! ...

ಆಪಲ್‌ ಐಫೋನ್‌ಗಾಗಿ ಆಪ್ಟಿಕಲ್ ಫಿಂಗರ್‌ಪ್ರಿಂಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಮೊಹಮ್ಮದ್ ಯೇಕೆ ಯಜ್ದಂಡೂಸ್ಟ್ ಮತ್ತು ಕ್ರಿಸ್ ಕ್ರಾಹ್ ಎಂಬುವವರು ಕಂಡುಹಿಡಿದಿದ್ದಾರೆ. ಜೊತೆಗೆ ಇದನ್ನು ಮೊದಲ ಆಪ್ಟಿಕಲ್-ಫಿಂಗರ್‌ಪ್ರಿಂಟ್ ಪತ್ತೆ ವ್ಯವಸ್ಥೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಇದು ತಾಪಮಾನ ಪರಿಹಾರ ವಿಧಾನದ(temperature compensation method) ಬಗ್ಗೆ ಹೆಚ್ಚು ಗಮನಹರಿಸಿದೆ.

ಐಫೋನ್ 15 ಸರಣಿಯಲ್ಲಿ ಈ ಫೀಚರ್ಸ್‌ ಇರಲಿದೆಯಾ?: ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಐಫೋನ್ 15 ಬಗ್ಗೆ ಸಾಕಷ್ಟು ಮಾಹಿತಿ ಹರಿದಾಡುತ್ತಿವೆ. ಅದಾಗ್ಯೂ ಐಫೋನ್ 15 ಸರಣಿಯಲ್ಲಿ ಈ ಫೀಚರ್ಸ್‌ ಲಭ್ಯ ಇರಲಿದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಆಪಲ್‌ನಿಂದ ಪೇಟೆಂಟ್ ಪಡೆದ ತಂತ್ರಜ್ಞಾನಗಳನ್ನು ತಮ್ಮ ಉತ್ಪನ್ನಗಳಲ್ಲಿ ಆಪಲ್ ಬಳಕೆ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ.

ಅಕಸ್ಮಾತ್‌ ಬಳಸಿದ್ದೇ ಆದರೂ ಕನಿಷ್ಠ ಒಂದು ವರ್ಷವಾದರೂ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಐಫೋನ್ 15ರ ನಂತರ ಲಾಂಚ್‌ ಆಗುವ ಫೋನ್‌ಗಳಲ್ಲಾದರೂ ಈ ಸೆನ್ಸರ್‌ ಇರಲಿದೆಯಾ ಕಾದು ನೋಡಬೇಕು. ಅದರಂತೆ ಜೂನ್ 5ರಂದು ಪ್ರಾರಂಭವಾಗಲಿರುವ ಆಪಲ್ WWDC2023ಗಾಗಿ ಸಿದ್ಧವಾಗುತ್ತಿದ್ದು, ಆಪಲ್‌ ತನ್ನ ಮೊದಲ AR/VR ಹೆಡ್‌ಸೆಟ್‌ ಅನ್ನು ಪರಿಚಯಿಸಲಿದೆ. ಕಳೆದ ಎರಡು ವರ್ಷಗಳಿಂದ ಈ ವಿಷಯಗಳ ಬಗ್ಗೆ ಭಾರೀ ಕುತೂಹಲದಿಂದ ಇರುವ ಜನರಿಗೆ ಮುಂಬರುವ ತಿಂಗಳುಗಳಲ್ಲಿ ಬಳಕೆ ಮಾಡಲು ಸಾಧ್ಯವಾಗಲಿದೆ.

ಆಪಲ್‌ಗೆ ಸಿಕ್ಕಿದೆ 'ಅಪರೂಪದ' ಫೀಚರ್ಸ್‌ ಪೇಟೆಂಟ್! ...

ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಸೆನ್ಸರ್‌ ಹೇಗೆ ಕೆಲಸ ಮಾಡಲಿದೆ?: ಇದು ಆಪ್ಟಿಕಲ್ ಸ್ಕ್ಯಾನರ್ ಬದಲಿಗೆ ಅಲ್ಟ್ರಾಸಾನಿಕ್ ಸ್ಕ್ಯಾನರ್ ಅನ್ನು ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸಲಿದ್ದು, ಅಲ್ಟ್ರಾಸಾನಿಕ್ ಸೆನ್ಸರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ನ ಚಿತ್ರವನ್ನು ನಿರ್ಮಿಸಲು ಅಲ್ಟ್ರಾಸೌಂಡ್ ಬಳಸಿ ಕೆಲಸ ಮಾಡುತ್ತವೆ. ವಿಶೇಷ ಏನೆಂದರೆ ಎಂತಹುದೇ ಗೊಂದಲಮಯ ಫಿಂಗರ್‌ಪ್ರಿಂಟ್‌ಗಳೊಂದಿಗೂ ಇದು ಕೆಲಸ ಮಾಡುತ್ತದೆ. ಅಂದರೆ ನಿಮ್ಮ ಕೈಗಳು ಸನ್ ಕ್ರೀಮ್‌ನಿಂದ ತೇವ ಅಥವಾ ಎಣ್ಣೆಯುಕ್ತವಾಗಿದ್ದರೂ ಸಹ ಇದು ನಿಮ್ಮ ಗುರುತನ್ನು ಪತ್ತೆ ಮಾಡುತ್ತದೆ.

Best Mobiles in India

English summary
Apple has won the patent for the rare in-display fingerprint sensor. company did have fingerprint based Touch ID, way before it was common, it never added an in-display fingerprint sensor in any of its devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+