ಆಪಲ್‌ ಸಂಸ್ಥೆಯಿಂದ ಐಫೋನ್ 12 ಬಳಕೆದಾರರಿಗಾಗಿ ಹೊಸ ಪ್ರೋಗ್ರಾಂ ಲಾಂಚ್‌!

|

ಆಪಲ್‌ ಕಂಪೆನಿ ಐಫೋನ್‌ 12 ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಇತ್ತೀಚಿನ ದಿನಗಳಲ್ಲಿ ಐಫೋನ್‌ 12ನಲ್ಲಿ ಸೌಂಡ್‌ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಬಳಕೆದಾರರಿಗಾಗಿ ಆಪಲ್ ಹೊಸ ಸೇವಾ ಕಾರ್ಯಕ್ರಮವನ್ನು ಘೋಷಿಸಿದೆ. ಈ ಕಾರ್ಯಕ್ರಮವು ಐಫೋನ್ 12 ಅಥವಾ ಐಫೋನ್ 12 ಪ್ರೊ ಗಾಗಿ ಉದ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ನೀವು ಕರೆ ಮಾಡಿದಾಗ ಅಥವಾ ಸ್ವೀಕರಿಸುವಾಗ ಫೋನ್ ಒಂದರಲ್ಲಿ ರಿಸೀವರ್‌ನಿಂದ ಯಾವುದೇ ಸೌಂಡ್‌ ಬರದಿದ್ದರೆ, ಅದು ಸೇವೆಗೆ ಅರ್ಹವಾಗಿರಲಿದೆ ಎಂದು ಆಪಲ್‌ ಸಂಸ್ಥೆ ಹೇಳಿದೆ.

 ಐಫೋನ್‌ 12

ಹೌದು, ಆಪಲ್‌ ಕಂಪೆನಿ ಐಫೋನ್‌ 12ನಲ್ಲಿ ಕಾಣಿಸಿಕೊಂಡಿರುವ ಸೌಂಡ್‌ ಸಮಸ್ಯೆ ಪರಿಹರಿಸಲು ಮುಂದಾಗಿದೆ. ಇದಕ್ಕೆಂದೆ ವಿಶೇಷ ಸೇವಾ ಕಾರ್ಯಕ್ರಮ ಪ್ರಾರಂಭಿಸಿದೆ. ಸದ್ಯ ಆಪಲ್ ಸಪೋರ್ಟ್ ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, "ರಿಸೀವರ್ ಮಾಡ್ಯೂಲ್‌ನಲ್ಲಿ ವಿಫಲವಾಗಬಹುದಾದ ಒಂದು ಅಂಶದಿಂದಾಗಿ ಐಫೋನ್ 12 ಮತ್ತು ಐಫೋನ್ 12 ಪ್ರೊ ಸಾಧನಗಳಲ್ಲಿ ಸೌಂಡ್‌ ಪ್ರಾಬ್ಲಂ ಕಾಣಿಸಿಕೊಂಡಿದೆ ಎಂದು ಹೇಳಿದೆ. ಈ ಡಿವೈಸ್‌ಗಳನ್ನು ಅಕ್ಟೋಬರ್ 2020 ಮತ್ತು ಏಪ್ರಿಲ್ 2021 ರ ನಡುವೆ ತಯಾರಿಸಲಾಗಿದೆ. ಹಾಗಾದ್ರೆ ಈ ಹೊಸ ಕಾರ್ಯಕ್ರಮದಲ್ಲಿ ಸೌಂಡ್‌ ಸಮಸ್ಯೆಯನ್ನು ಹೇಗೆ ಪರಿಹರಿಸಲಾಗುತ್ತದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್‌

ಕ್ಯುಪರ್ಟಿನೋ ಹಾರ್ಡ್‌ವೇರ್ ದೈತ್ಯ ಆಪಲ್‌ ಈ ಕಾರ್ಯಕ್ರಮವು ಐಫೋನ್ 12 ಅಥವಾ ಐಫೋನ್ 12 ಪ್ರೊಗಾಗಿ ಪ್ರಾರಂಭಿಸಿದೆ. ಒಂದು ವೇಳೆ ನೀವು ಕರೆ ಮಾಡಿದಾಗ ಅಥವಾ ಸ್ವೀಕರಿಸುವಾಗ ಫೋನ್ ಒಂದರಲ್ಲಿ ರಿಸೀವರ್‌ನಿಂದ ಧ್ವನಿ ಹೊರಡಿಸದಿದ್ದರೆ, ಈ ಸೇವೆಯಲ್ಲಿ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. "ಆಪಲ್ ಅಥವಾ ಆಪಲ್ ಅಧಿಕೃತ ಸೇವಾ ಪೂರೈಕೆದಾರರು ಅರ್ಹ ಸಾಧನಗಳನ್ನು ಉಚಿತವಾಗಿ ಸೇವೆ ಮಾಡುತ್ತಾರೆ" ಎಂದು ಆಪಲ್ ಹೇಳಿದೆ.

 ಐಫೋನ್ 12

ಆದರೆ ಐಫೋನ್ 12 ಮಿನಿ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಈ ಕಾರ್ಯಕ್ರಮದ ಭಾಗವಲ್ಲ ಎಂದು ಕಂಪನಿ ಹೇಳಿದೆ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ, ಆಪಲ್ ಫೋನ್ ಸೇವೆಯನ್ನು ದೇಶಕ್ಕೆ ಅಥವಾ ಖರೀದಿಸಿದ ಪ್ರದೇಶಕ್ಕೆ ನಿರ್ಬಂಧಿಸಬಹುದು. ಅಂತೆಯೇ, ಈ ಪ್ರೋಗ್ರಾಂ ನಿಮ್ಮ ಐಫೋನ್ 12 ಅಥವಾ ಐಫೋನ್ 12 ಪ್ರೊನ ಮೂಲ ಖಾತರಿಯನ್ನು ವಿಸ್ತರಿಸುವುದಿಲ್ಲ. ಇದು ಯುನಿಟ್‌ನ ಮೊದಲ ಚಿಲ್ಲರೆ ಮಾರಾಟದ ನಂತರ 2 ವರ್ಷಗಳವರೆಗೆ ಐಫೋನ್ 12 ಅಥವಾ ಐಫೋನ್ 12 ಪ್ರೊ ಸಾಧನಗಳನ್ನು ಬಾಧಿಸುತ್ತದೆ.

ಐಫೋನ್

ಬಳಕೆದಾರರು ಕರೆ ಮಾಡುವಾಗ ತಮ್ಮ ಐಫೋನ್ 12 ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಪೀಕರ್‌ಗಳೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೆಲವು ಸಮಯಗಳಿಂದ ದೂರು ನೀಡಿದ್ದರು. ಇದೇ ಕಾರಣಕ್ಕೆ ಆಪಲ್‌ ಕಂಪೆನಿ ಈ ರೀತಿಯ ಕಾರ್ಯಕ್ರಮಕ್ಕೆ ಮುಂದಾಅಗಿದೆ. ಒಂದು ವೇಳೆ ನೀವು ಕೂಡ ಐಫೋನ್ 12 ಹೊಂದಿದ್ದು, ಸೌಂಡ್‌ ಪ್ರಾಬ್ಲಂ ಹೊಂದಿದ್ದರೆ ಆಪಲ್‌ ಕಂಪೆನಿ ಹೊಸ ಸೇವಾ ಕಾರ್ಯಕ್ರಮದ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Apple launches new service programme for 'no-sound issues' on the iPhone 12.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X