Home
ಸುದ್ದಿಜಾಲ

ಬೆಂಗಳೂರು.... ಐಫೋನ್ 13 ಹಾನಿ, ಮಾಲೀಕರಿಗೆ 1 ಲಕ್ಷ ರೂ. ಪಾವತಿಸಲು ಆಪಲ್‌ಗೆ ಆದೇಶ!

ಆಪಲ್‌ನ ಐಫೋನ್‌ಗಳಿಗೆ (Apple iPhone) ಇರುವ ಕ್ರೇಜ್‌ ಬೇರೆ ಫೋನ್‌ಗಳಿಗೆ ಖಂಡಿತಾ ಇಲ್ಲ. ಈ ನಡುವೆ ಐಫೋನ್ 15 ಸರಣಿ (iPhone 15 series) ಫೋನ್‌ಗಳು ಸಹ ಲಾಂಚ್‌ ಆಗಿದ್ದು, ಗ್ರಾಹಕರು ಈ ಫೋನ್‌ಗಳನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ನಡುವೆ ಆಪಲ್‌ ಕಂಪೆನಿಗೆ ಹಿನ್ನೆಡೆಯಾದ ಘಟನೆಯೊಂದು ಜರುಗಿದ್ದು, ಈ ಮೂಲಕ ಗ್ರಾಹಕನೋರ್ವನಿಗೆ 1 ಲಕ್ಷ ರೂ. ಪಾವತಿಸುವಂತೆ ಆಗಿದೆ.

ಹೌದು, ಯಾವುದೇ ಫೋನ್ ಸಮಸ್ಯೆಗೆ ಒಳಗಾದರೆ ಅದನ್ನು ಸರ್ವಿಸ್‌ ಸೆಂಟರ್‌ಗೆ ತೆಗೆದುಕೊಂಡು ಹೋಗುವುದು ಸಾಮಾನ್ಯ. ಆದರೆ, ಸರ್ವಿಸ್‌ ಸೆಂಟರ್‌ನವರೇ ಆ ಫೋನ್‌ ಅನ್ನು ಇನ್ನೂ ಹೆಚ್ಚಿಗೆ ಕೆಡಿಸಿ ನಿಮಗೆ ವಾಪಸ್‌ ಕೊಟ್ಟರೆ ನಿಮ್ಮ ಪರಿಸ್ಥಿತಿ ಹೇಗಾಗಬೇಡ. ಅದೇ ರೀತಿಯ ಇಲ್ಲಿ ನಡೆದಿದೆ. ರಿಪೇರಿ ಪ್ರಕ್ರಿಯೆಯಲ್ಲಿ ಐಫೋನ್ 13 ಅನ್ನು ಹಾನಿಗೊಳಿಸಿದ್ದಕ್ಕಾಗಿ ಗ್ರಾಹಕನಿಗೆ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಆಪಲ್ ಇಂಡಿಯಾ ಮತ್ತು ಅದರ ಸೇವಾ ಕೇಂದ್ರವೊಂದಕ್ಕೆ ಬೆಂಗಳೂರು ಸಿಟಿ ಕೋರ್ಟ್ ಆದೇಶಿಸಿದೆ. ಹಾಗಿದ್ರೆ, ಏನಿದು ಘಟನೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಫೋನ್ 13 ಹಾನಿ, ಮಾಲೀಕರಿಗೆ 1 ಲಕ್ಷ ರೂ. ಪಾವತಿಸಲು ಆಪಲ್‌ಗೆ ಆದೇಶ!

ಆಪಲ್‌ಗೆ ದಂಡ: ಅಕ್ಟೋಬರ್ 29, 2021 ರ ಘಟನೆ ಇದು, ಆದರೆ ಈಗ ಈ ಸಂಬಂಧ ಆದೇಶ ಹೊರಬಿದ್ದಿದೆ. ಅವೆಜ್ ಖಾನ್ ಒಂದು ವರ್ಷದ ವಾರಂಟಿಯೊಂದಿಗೆ ಐಫೋನ್ 13 (iPhone 13) ಅನ್ನು ಖರೀದಿ ಮಾಡಿದ್ದರು. ಹಲವಾರು ತಿಂಗಳ ನಂತರ, ಖಾನ್ ಬ್ಯಾಟರಿ ಮತ್ತು ಸ್ಪೀಕರ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಿದರು. ವೃತ್ತಿಪರ ಸಹಾಯವನ್ನು ಕೋರಿ, ಖಾನ್ ಅವರು ಆಗಸ್ಟ್ 2022 ರಲ್ಲಿ ಇಂದಿರಾನಗರದಲ್ಲಿರುವ ಐಪ್ಲಾನೆಟ್ (iPlanet) ಕೇರ್ ಸೆಂಟರ್, ಆಪಲ್‌ನ ಅಧಿಕೃತ ಸೇವಾ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ, ಆಪಲ್‌ ಸ್ಟೋರ್‌ ತಂತ್ರಜ್ಞರು ಸಮಸ್ಯೆಗಳನ್ನು ಪರಿಹರಿಸಬಹುದೆಂದು ಭರವಸೆ ನೀಡಿದ್ದಾರೆ.

ಕೆಲವು ದಿನಗಳ ನಂತರ, ಖಾನ್ ತನ್ನ ಐಫೋನ್‌ನಲ್ಲಿನ ಸಮಸ್ಯೆಯನ್ನು ಸರಿಯಾಗಿದೆ ಬಂದು ಫೋನ್‌ ಅನ್ನು ತೆಗೆದುಕೊಳ್ಳಿ ಎಂಬ ಫೋನ್ ಕರೆಯನ್ನು ಸ್ವೀಕರಿಸಿದ್ದಾರೆ. ಆದರೆ, ಫೋನ್ ಪಡೆಯಲು ಸರ್ವಿಸ್ ಸೆಂಟರ್ ಗೆ ಹೋದಾಗ ಅದು ಸರಿಯಾಗಿ ಕೆಲಸ ಮಾಡದೇ ಇರುವುದು ಕಂಡು ಬಂದಿದೆ. ಸೇವಾ ಕೇಂದ್ರವು ಫೋನ್ ಅನ್ನು ಮತ್ತೊಮ್ಮೆ ನೋಡುವುದಾಗಿ ಭರವಸೆ ನೀಡಿದೆ. ಆದರೆ ಅವರು ಎರಡು ವಾರಗಳವರೆಗೆ ಖಾನ್ ಅವರ ವಿಚಾರಣೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದಾಗ್ಯೂ, ತನ್ನ ಐಫೋನ್ ಅನ್ನು ದುರಸ್ತಿಗಾಗಿ ಮರಳಿ ತೆಗೆದುಕೊಂಡ ನಂತರ, ಖಾನ್ ತನ್ನ ಫೋನ್‌ನಲ್ಲಿ ಎರಡು ವಾರಗಳವರೆಗೆ ಯಾವುದೇ ಅಪ್‌ಡೇಟ್‌ ಅನ್ನು ಪಡೆದಿಲ್ಲ. ಇದಾದ ನಂತರದಲ್ಲಿ ಪ್ರತಿನಿಧಿಗಳು ಫೋನ್‌ನ ಹೊರ ಜಾಲರಿಯಲ್ಲಿ ಅಂಟು ತರಹದ ವಸ್ತುವನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಈ ದುರಸ್ತಿ ಖಾತರಿಯ ಅಡಿಯಲ್ಲಿಲ್ಲ ಪರಿಣಾಮ ಸರಿಪಡಿಸಲು ಹೆಚ್ಚಿನ ಹಣ ನೀಡುವಂತೆ ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ ಹತಾಶೆಗೊಂಡ ಖಾನ್, ಅನೇಕ ಸಂದರ್ಭಗಳಲ್ಲಿ ಫೋನ್ ಮತ್ತು ಇಮೇಲ್ ಮೂಲಕ ಆಪಲ್‌ ಇಂಡಿಯಾವನ್ನು ಸಂಪರ್ಕಿಸಿದ್ದಾರೆ ಆದರೂ ಅವರಿಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಎಲ್ಲಾ ಕಾರಣಗಳಿಂದ ಬೇಸತ್ತ ಖಾನ್ ನಂತರ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದರಂತೆ ಅಕ್ಟೋಬರ್ 27, 2022 ರಂದು ಆಪಲ್‌ಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

ಡಿಸೆಂಬರ್ 2022 ರಲ್ಲಿ, ಖಾನ್ ಅವರು ಆಪಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಇಂದಿರಾನಗರದ ಐಪ್ಲಾನೆಟ್ ಕೇರ್ ಸೆಂಟರ್ ವಿರುದ್ಧ ಅನ್ಯಾಯದ ವ್ಯಾಪಾರ ಅಭ್ಯಾಸಗಳನ್ನು ಉಲ್ಲೇಖಿಸಿ, ಶಾಂತಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ದೂರಿನ ನಂತರ, ಆಪಲ್‌ನ ವಕೀಲರು ಖಾನ್ ಅವರ ಮೊಕದ್ದಮೆಯು ಕಾನೂನುಬದ್ಧವಾಗಿ ಅಥವಾ ವಾಸ್ತವಿಕವಾಗಿ ದೃಢವಾಗಿಲ್ಲ ಎಂದು ವಾದಿಸಿದ್ದಾರೆ.

ಅವರು ಏನನ್ನೋ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ವೇಳೆ ಉಲ್ಲೇಖ ಮಾಡಿದ್ದಾರೆ. ಅನಧಿಕೃತ ಮಾರ್ಪಾಡುಗಳನ್ನು ಮಾಡುವ ಮೂಲಕ ಗ್ರಾಹಕರು ತಮ್ಮ ಫೋನ್ ಅನ್ನು ಹಾನಿಗೊಳಿಸಿದ್ದಾರೆ ಮತ್ತು ಈ ಮಾರ್ಪಾಡುಗಳು ವಾರಂಟಿಗೆ ಒಳಪಟ್ಟಿಲ್ಲ ಎಂದು ಅವರು ವಾದಿಸಿದ್ದಾರೆ. ಇದಲ್ಲದೆ, ಗ್ರಾಹಕ ಪಾವತಿ ಮಾಡಿ ಮಾಡಿಸಬೇಕಿದ್ದ ಸೇವೆಯನ್ನು ನಿರಾಕರಿಸಿದ್ದು, ಜೊತೆಗೆ ಆ ಫೋನ್‌ ಅನ್ನು ಅವರು ಮರಳಿ ಪಡೆಯಲು ಸಹ ನಿರಾಕರಿಸಿದ್ದಾರೆ ಎಂದು ವಾದ ಮಾಡಿದ್ದಾರೆ.

ನ್ಯಾಯಾಲಯವು ಎರಡೂ ಪಕ್ಷಗಳ ವಾದ ಪ್ರತಿವಾದ ಆಲಿಸಿದ ನಂತರ ಗ್ರಾಹಕ ಅವೇಜ್ ಖಾನ್ ಪರವಾಗಿ ತೀರ್ಪು ನೀಡಲಾಗಿದೆ. ಆಪಲ್ ಮತ್ತು ಅದರ ಸೇವಾ ಪಾಲುದಾರರಿಗೆ ಐಫೋನ್‌ನ ವೆಚ್ಚಕ್ಕೆ ಬಡ್ಡಿಯನ್ನು ಒಳಗೊಂಡಂತೆ 79,900 ಮರುಪಾವತಿ ಮಾಡಲು ಮತ್ತು ಅನಾನುಕೂಲತೆಗಾಗಿ ಪರಿಹಾರವಾಗಿ 20,000 ರೂ. ಗಳನ್ನು ಪಾವತಿ ಮಾಡಬೇಕು ಎಂದು ತಿಳಿಸಲಾಗಿದೆ.

Best Mobiles in India

English summary
A Bengaluru city court has ordered Apple India and one of its service centers to pay Rs 1 lakh as compensation to a customer for damaging an iPhone 13 during the repair process.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+