Home
ಸುದ್ದಿಜಾಲ

ಐಫೋನ್ ಬಳಕೆದಾರರಿಗೆ ತುರ್ತು ಎಚ್ಚರಿಕೆ ನೀಡಿದ ಆಪಲ್‌: ತಕ್ಷಣವೇ ಈ ಕೆಲಸ ಮಾಡಿ, ಇಲ್ಲವಾದ್ರೆ ಡೇಂಜರ್

ಆಪಲ್‌ ಸಂಸ್ಥೆಯ ಐಫೋನ್‌ಗಳು (iPhone) ಇಂದು ಬಹುಬೇಡಿಕೆಯ ಫೋನ್‌ಗಳಾಗಿದ್ದು, ಈ ನಡುವೆ ಐಫೋನ್‌ನ ಮುಂದಿನ ಸರಣಿಯ ಫೋನ್‌ಗಳಾದ ಐಫೋನ್ 15 ಸರಣಿ ಫೋನ್‌ಗಳ ಅನಾವರಣಕ್ಕೆ ದಿನಗಣನೆ ಆರಂಭ ಆಗಿದೆ. ಈ ನಡುವೆ ಆಪಲ್‌ ತನ್ನೆಲ್ಲಾ ಐಫೋನ್‌ ಬಳೆದಾರರಿಗೆ ಗಂಭೀರ ಎಚ್ಚರಿಕೆಯನ್ನು ರವಾನಿಸಿದೆ.

ಹೌದು, ಆಪಲ್ ತನ್ನ ಇನ್ನೇನು ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 12 ರಂದು iOS 17 ರೋಲ್ ಔಟ್ ದಿನಾಂಕವನ್ನು ಪ್ರಕಟಿಸುತ್ತದೆ ಎಂದು ತಿಳಿದುಬಂದಿದೆ. ಆದರೆ, ಈಗ ಆಪಲ್ iOS 16.6.1 ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಆಪಲ್‌ ಫೋನ್‌ಗಲ್ಲಿ ಇರುವ ಎರಡು ಪ್ರಮುಖ ದೋಷಗಳನ್ನು ನಿವಾರಣೆ ಮಾಡಲಿದೆ ಎಂದು ತಿಳಿಸಿದೆ. ಹಾಗಿದ್ರೆ, ಏನಿದು ದೋಷ?, ಐಫೋನ್‌ ಬಳಕೆದಾರರು ಏನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಐಫೋನ್ ಬಳಕೆದಾರರಿಗೆ ತುರ್ತು ಎಚ್ಚರಿಕೆ ನೀಡಿದ ಆಪಲ್‌: ತಕ್ಷಣವೇ ಈ ಕೆಲಸ ಮಾಡಿ..

ಐಫೋನ್‌ನಲ್ಲಿ ಎರಡು ದೋಷಗಳೇನು?: ಮೊದಲ ದುರ್ಬಲತೆ ಏನೆಂದರೆ ಇಮೇಜ್‌ ಐಓ (ImageIO) ಫ್ರೇಮ್‌ವರ್ಕ್‌ನಲ್ಲಿದೆ. ಇದು ದುರುದ್ದೇಶಪೂರಿತವಾಗಿ ರಚಿಸಲಾದ ಚಿತ್ರವನ್ನು ಪ್ರಕ್ರಿಯೆಗೊಳಿಸುವ ಮೂಲಕ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಆಕ್ರಮಣಕಾರರಿಗೆ ಅವಕಾಶ ನೀಡುತ್ತದೆ. ಎರಡನೆಯ ದುರ್ಬಲತೆಯು ವ್ಯಾಲೆಟ್‌ನಲ್ಲಿ (Wallet) ಕಾಣಿಸಿಕೊಂಡಿದೆ. ಇದು ದುರುದ್ದೇಶಪೂರಿತವಾಗಿ ರಚಿಸಲಾದ ಫೈಲ್‌ ಅನ್ನು ತೆರೆಯುವ ಮೂಲಕ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಸ್ಕ್ಯಾಮರ್‌ಗಳಿಗೆ ಅವಕಾಶ ನೀಡುತ್ತದೆ.

ಪರಿಣಾಮ ಈ ಎರಡು ಪ್ರಮುಖ ಭದ್ರತಾ ಅಪಾಯಗಳಿಂದ ನಿಮ್ಮ ಐಫೋನ್ ಅನ್ನು ರಕ್ಷಿಸಲು ಸಾಧ್ಯವಾದಷ್ಟು ಬೇಗ iOS 16.6.1 ನವೀಕರಣವನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಆಪಲ್‌ ತಿಳಿಸಿದೆ. ಇನ್ನು ಟೆಕ್ಕ್ರಂಚ್‌ ಈ ಸಂಬಂಧ ವರದಿ ಮಾಡಿದೆ. ಈ ವರದಿಯಲ್ಲಿ ಇರುವಂತೆ, ಸರ್ಕಾರಿ ಮಾಲ್‌ವೇರ್‌ಗಳನ್ನು ಪರಿಶೀಲಿಸುವ ಸಂಶೋಧನಾ ಗ್ರೂಫ್‌ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಮರ್ಸಿನರಿ ಸ್ಪೈವೇರ್ ಅನ್ನು ತಲುಪಿಸಲು ಸಕ್ರಿಯವಾಗಿ ಬಳಸಲ್ಪಟ್ಟ ಶೂನ್ಯ-ಕ್ಲಿಕ್ ದುರ್ಬಲತೆಯನ್ನು ಕಂಡುಹಿಡಿದಿದೆ ಎಂದು ಉಲ್ಲೇಖಿಸಿದೆ.

ಈ ಪೆಗಾಸಸ್ ಒಂದು ಸ್ಪೈವೇರ್ ಆಗಿದ್ದು, ಇದನ್ನು ಜಗತ್ತಿನಾದ್ಯಂತ ಅನೇಕ ಸರ್ಕಾರಗಳು ನಾಗರಿಕ ಸಮಾಜದ ಕಾರ್ಯಕರ್ತರು, ಪತ್ರಕರ್ತರು, ವಿರೋಧ ಪಕ್ಷದ ಸದಸ್ಯರನ್ನು ಗುರಿಯಾಗಿಸಲು ಬಳಸಿಕೊಳ್ಳಲಾಗುತ್ತದೆ. ಈ ಮೂಲಕ ದೇಶದ ಪ್ರಮುಖ ಹಾಗೂ ಅಗತ್ಯ ಮಾಹಿತಿಯನ್ನು ಕದಿಯಲಾಗುತ್ತದೆ. ಅದರಲ್ಲೂ ಇತ್ತೀಚಿನ ಆವೃತ್ತಿಯ iOS (16.6) ಚಾಲನೆಯಲ್ಲಿರುವ ಐಫೋನ್‌ಗಳಲ್ಲಿ ಈ ಆಪಾಯ ಹೆಚ್ಚಿದೆ ಎಂದು ತಿಳಿಸಲಾಗಿದೆ.

ನವೀಕರಣ ಮಾಡುವುದು ಹೇಗೆ?:
-ಐಒಎಸ್ 16.6.1 ಅಪ್‌ಡೇಟ್ ಈಗ ಎಲ್ಲಾ ಅರ್ಹ ಐಫೋನ್‌ಗಳು ಮತ್ತು ಐಪ್ಯಾಡ್‌ಗಳಿಗೆ ಲಭ್ಯವಿದೆ. ಇದನ್ನು ಇನ್‌ಸ್ಟಾಲ್‌ ಮಾಡಿಕೊಳ್ಳಲು ನೀವು ನಿಮ್ಮ ಫೋನ್‌ನ ಸೆಟ್ಟಿಂಗ್‌ -ವಿಭಾಗಕ್ಕೆ ಹೋಗಿ.
-ಇದಾದ ನಂತರದಲ್ಲಿ ಜನರಲ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಟ್ಯಾಪ್‌ ಮಾಡಿದರೆ ಸಾಫ್ಟ್‌ವೇರ್‌ ಅಪ್‌ಡೇಟ್‌ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡುವ ಮೂಲಕ ಹೊಸ ಐಒಎಸ್ ಅನ್ನು ಬಳಕೆ ಮಾಡಬಹುದು.

ಇನ್ನು iOS 16.6.1 ನಲ್ಲಿ ಆಪಲ್‌ ಯಾವುದೇ ಹೊಸ ಫೀಚರ್ಸ್‌ ಅಥವಾ ಸೌಲಭ್ಯಗಳನ್ನು ಬಿಡುಗಡೆ ಮಾಡಿಲ್ಲ. ಬದಲಾಗಿ ಕೇವಲ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಮಾತ್ರ ಬಳಕೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಮುಂದಿನ ಪ್ರಮುಖ ಅಪ್‌ಡೇಟ್ iOS 17 ನಲ್ಲಿ ಹೊಸ ಫೀಚರ್ಸ್‌ ಇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇದನ್ನು ಈ ತಿಂಗಳ ಅಂತ್ಯದಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.

ಚೀನಾದಲ್ಲಿ ಐಫೋನ್‌ ಬಳಕೆ ನಿಷೇಧ: ಐಫೋನ್ ತಯಾರಕ ಆಪಲ್ ಶೀಘ್ರದಲ್ಲೇ ಐಫೋನ್ 15 ಅನ್ನು ಅನಾವರಣಗೊಳಿಸಲಿದೆ. ಆಪಲ್ ಪ್ರಧಾನ ಕಛೇರಿಯಲ್ಲಿ ನಡೆಯಲಿರುವ ಮೆಗಾ ಲಾಂಚ್ ಕಾರ್ಯಕ್ರಮಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಐಫೋನ್ 15 ಅನ್ನು ಬಿಡುಗಡೆ ಮಾಡುವ ಮುನ್ನವೇ ಆಪಲ್ ಚೀನಾದಲ್ಲಿ ದೊಡ್ಡ ಹಿನ್ನಡೆ ಅನುಭವಿಸಿದೆ.

ಐಫೋನ್ ಬಳಕೆದಾರರಿಗೆ ತುರ್ತು ಎಚ್ಚರಿಕೆ ನೀಡಿದ ಆಪಲ್‌: ತಕ್ಷಣವೇ ಈ ಕೆಲಸ ಮಾಡಿ..

ಸರ್ಕಾರಿ ನೌಕರರು ಆಪಲ್‌ನ ಐಫೋನ್ ಬಳಸದಂತೆ ಚೀನಾ ಸರ್ಕಾರ ನಿಷೇಧ ಹೇರಿದೆ. ಚೀನಾದ ರಾಷ್ಟ್ರೀಯತೆಯ ಏರಿಕೆಯಿಂದಾಗಿ ಆಪಲ್‌ ಅನ್ನು ಬಹಿಷ್ಕರಿಸುವ ಅಭಿಯಾನವೂ ತೀವ್ರಗೊಂಡಿದೆ ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ಚೀನಾದ ಕಂಪನಿಯಾದ ಹುವಾವೇಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಈ ಮೂಲಕ ಚೀನಾದಲ್ಲಿ ಆಪಲ್ ಅನ್ನು ಬಹಿಷ್ಕರಿಸಿ ಎಂದು ಪ್ರತಿಪಾದಿಸುವವರ ಸಂಖ್ಯೆ ಹೆಚ್ಚಾಗಿದೆ.

Best Mobiles in India

English summary
'It is known that Apple will announce its iOS 17 roll out date on September 12 in a few days. But, now Apple has released iOS 16.6.1, through which Apple will fix two major bugs in the iPhone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+