ಐಫೋನ್‌ನಿಂದ ಹೆಚ್ಚಿನ ವಿಕಿರಣ: ಸಮಸ್ಯೆ ಪರಿಹಾರಕ್ಕೆ ಈ ಸಲಹೆ ನೀಡಿದ ಆಪಲ್!
ಆಪಲ್ ಫೋನ್‌ಗಳೆಂದರೆ ಭದ್ರತೆಗೆ ಹೆಸರುವಾಸಿ. ಆದರೆ, ಫ್ರಾನ್ಸ್ ಸರ್ಕಾರ ಮಾತ್ರ ಇದನ್ನು ತಳ್ಳಿ ಹಾಕಿದ್ದು, ನಿಮ್ಮ ಫೋನ್‌ಗಳು ಹೆಚ್ಚು ವಿಕಿರಣ ಹೊರಸೂಸುತ್ತಿದ್ದು, ಮಾರಾಟ ಮಾಡಲಾದ ಎಲ್ಲಾ ಫೋನ್‌ಗಳನ್ನು ಮರು ಪಡೆಯಿರಿ ಎಂದು ಆಪಲ್‌ಗೆ ತಿಳಿಸಿದೆ. ಆದರೆ ಆಪಲ್ ಮಾತ್ರ ಈ ಆರೋಪವನ್ನು ತಳ್ಳಿಹಾಕಿದೆ.
ಹೌದು, ನಿಗದಿತ ವಿಕಿರಣ ಹೊರಸೂಸುವಿಕೆಗಿಂತ ಹೆಚ್ಚಿನ ವಿಕಿರಣ ಹೊರಸೂಸುತ್ತಿವೆ ಎಂದು ಆರೋಪಿಸಿ ಐಫೋನ್ 12 ಸರಣಿ ಫೋನ್‌ಗಳಿಗೆ ಫ್ರಾನ್ಸ್ ಸರ್ಕಾರ ಕಟ್ಟು ನಿಟ್ಟಿನ ನಿಯಮಗಳನ್ನು ಹೇರಿದೆ. ಆದರೆ ಈಗ ಐಫೋನ್ 12 ಸರಣಿಯಲ್ಲಿ ವಿಕಿರಣ ಸಮಸ್ಯೆಯನ್ನು ಪರಿಹರಿಸಲು ಆಪಲ್ ಮುಂದಾಗಿದೆ. ಹಾಗಿದ್ರೆ, ಆಪಲ್ ತೆಗೆದುಕೊಂಡ ಕ್ರಮ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕೆಲವು ದಿನಗಳ ಹಿಂದೆ, ಫ್ರೆಂಚ್ ಸರ್ಕಾರವು ಐಫೋನ್ 12 ಅನ್ನು ಹಿಂಪಡೆಯುವ ಬೇಡಿಕೆಯೊಂದಿಗೆ ಆಪಲ್ ಅನ್ನು ಸಂಪರ್ಕಿಸಿತ್ತು. ಇದಾದ ನಂತರ ಸಾಫ್ಟ್‌ವೇರ್ ಅಪ್‌ಡೇಟ್ ನೀಡುವ ಮೂಲಕ ಫೋನ್‌ನಲ್ಲಿ ಹೆಚ್ಚಿನ ವಿಕಿರಣದ ಸಮಸ್ಯೆಯನ್ನು ಪರಿಹರಿಸಲು ಕಂಪನಿಯು ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಫ್ರೆಂಚ್ ನಿಯಂತ್ರಕರು ಬಳಸುವ ಪ್ರೋಟೋಕಾಲ್ ಅನ್ನು ಸರಿಹೊಂದಿಸಲು ನಾವು ಫ್ರಾನ್ಸ್‌ನಲ್ಲಿರುವ ಬಳಕೆದಾರರಿಗೆ ಸಾಫ್ಟ್‌ವೇರ್ ನವೀಕರಣವನ್ನು ನೀಡುತ್ತೇವೆ ಎಂದು ಆಪಲ್ ಮಾಹಿತಿ ನೀಡಿದೆ.
ಇದು ಫ್ರೆಂಚ್ ನಿಯಂತ್ರಕರು ಬಳಸುವ ನಿರ್ದಿಷ್ಟ ಪರೀಕ್ಷಾ ಪ್ರೋಟೋಕಾಲ್‌ಗೆ ಸಂಬಂಧಿಸಿದೆ ಮತ್ತು ಫೋನ್‌ಗೆ ಯಾವುದೇ ಭದ್ರತಾ ಸಮಸ್ಯೆ ಇಲ್ಲ ಎಂದು ಹೇಳಿದೆ. ಇನ್ನು ಐರೋಪ್ಯ ಒಕ್ಕೂಟದ ವಿಕಿರಣ ಮಾನ್ಯತೆ ಮಿತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫ್ರಾನ್ಸ್‌ನಲ್ಲಿ ಐಫೋನ್ 12 ಮಾದರಿಗಳನ್ನು ನಿಷೇಧಿಸಲಾಗಿದೆ. ಫೋನ್ ಮಾರಾಟವಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳನ್ನು ಆಪಲ್ ಸ್ಟೋರ್‌ಗಳಿಗೆ ಕಳುಹಿಸುವುದಾಗಿಯೂ ಫ್ರೆಂಚ್ ಸರ್ಕಾರ ಎಚ್ಚರಿಕೆ ನೀಡಿತ್ತು.
ಈ ಸುದ್ದಿಯನ್ನು ಪ್ರಮುಖ ಅಂತಾರಾಷ್ಟ್ರೀಯ ಮಾಧ್ಯಮವಾದ ರಾಯಿಟರ್ಸ್ ಬಿಡುಗಡೆ ಮಾಡಿದೆ. ದೇಶದಲ್ಲಿ ಐಫೋನ್ 12 ಅನ್ನು ಮಾರಾಟ ಮಾಡದಂತೆ ಮತ್ತು ಈಗಾಗಲೇ ಮಾರಾಟವಾದ ಮಾಡೆಲ್‌ಗಳನ್ನು ಹಿಂಪಡೆಯುವಂತೆ ಫ್ರೆಂಚ್ ಸರ್ಕಾರ ಆಪಲ್‌ಗೆ ಕೇಳಿಕೊಂಡಿದೆ. ಮಾರಾಟವನ್ನು ಸ್ಥಗಿತಗೊಳಿಸುವ ಆದೇಶದ ಹೊರತಾಗಿಯೂ ಫೋನ್ ಅನ್ನು ಇನ್ನೂ ಇಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವರದಿಳಿಂದ ತಿಳಿದುಬಂದಿದೆ. ಫ್ರಾನ್ಸ್ ಅಲ್ಲದೆ ಜರ್ಮನಿ, ಸ್ಪೇನ್ ದೇಶಗಳೂ ಸಹ ಈ ಫೋನ್ ವಿರುದ್ಧ ಸಮರ ಸಾರಲು ಮುಂದಾಗಿವೆ.
ಈ ನಡುವೆ ಆಪಲ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಐಫೋನ್ 12 ಜಾಗತಿಕ ವಿಕಿರಣ ಮಾನದಂಡಗಳನ್ನು ಅನುಸರಿಸುತ್ತದೆ ಮತ್ತು ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ತನ್ನ ಹಕ್ಕನ್ನು ಸಾಬೀತುಪಡಿಸಲು ಆಪಲ್ ಮತ್ತು ಮೂರನೇ ವ್ಯಕ್ತಿಗಳು ನಡೆಸಿದ ವಿವಿಧ ಲ್ಯಾಬ್ ಫಲಿತಾಂಶಗಳನ್ನು ಸಲ್ಲಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಆಪಲ್ ಎಲ್ಲಾ ರೀತಿಯಲ್ಲಿಯೂ ಸರಿಇದೆ ಎಂದು ತಿಳಿಸಲಾಗಿದೆ.
ವರದಿಯ ಪ್ರಕಾರ, ಆಪಲ್ ಹಲವಾರು ವರ್ಷಗಳಿಂದ ಮೊಬೈಲ್ ಫೋನ್‌ಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಅಧ್ಯಯನ ಮಾಡುತ್ತಿದೆ ಎಂದು ಹೇಳಿಕೊಂಡಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮೊಬೈಲ್ ಫೋನ್‌ಗಳ ಬಳಕೆಯಿಂದ ಉಂಟಾಗುವ ಯಾವುದೇ ಆರೋಗ್ಯ ಸಮಸ್ಯೆಗಳು ಇದುವರೆಗೂ ಸಹ ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ. SAR ಮಿತಿಗಳ ಮೇಲೆ ಜಾಗತಿಕ ಮಾರ್ಗಸೂಚಿಗಳನ್ನು ಹೊಂದಿಸುವ ಅಯಾನೀಕರಿಸದ ವಿಕಿರಣ ರಕ್ಷಣೆಯ ಅಂತರರಾಷ್ಟ್ರೀಯ ಆಯೋಗದ (ICNIRP) ಅಧ್ಯಕ್ಷರಾದ ಪ್ರೊಫೆಸರ್ ರಾಡ್ನಿ ಕ್ರಾಫ್ಟಿ ಸಹ ಆಪಲ್ ಅನ್ನು ಈ ವಿಷಯದಲ್ಲಿ ಬೆಂಬಲಿಸಿದ್ದಾರೆ.
ಫೋನ್‌ಗಳ ವಿಕಿರಣದಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಅವರು ಹೇಳಿಕೆ ನೀಡಿದ್ದು, ಆಪಲ್ ತನ್ನ ಗ್ರಾಹಕರು ಮತ್ತು ಉತ್ಪನ್ನಗಳ ಸುರಕ್ಷತೆಗಾಗಿ ಹಲವು ವೈಶಿಷ್ಟ್ಯಗಳನ್ನು ಒದಗಿಸುವ ಕಂಪನಿಯಾಗಿದೆ. ವಿಕಿರಣದ ಬಗ್ಗೆ ಫ್ರಾನ್ಸ್‌ನಿಂದ ಹೊರಬಂದ ವರದಿಯು ಆಪಲ್‌ನ ಖ್ಯಾತಿಗೆ ದೊಡ್ಡ ಕಳಂಕವನ್ನು ಉಂಟುಮಾಡಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಇನ್ನು ಸೆಪ್ಟೆಂಬರ್ 12 ರಂದು, ಆಪಲ್ ತನ್ನ ಹೊಸ ಐಫೋನ್ 15 ಸರಣಿಯ ಫೋನ್‌ಗಳನ್ನು ಪರಿಚಯಿಸಿದೆ. ಆಪಲ್ ಬಿಡುಗಡೆ ಮಾಡಿರುವ ಹೊಸ ಫೋನ್‌ಗಳೆಂದರೆ ಐಫೋನ್15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ . ಈ ಫೋನ್‌ಗಳ ಹೊರತಾಗಿ, ಕಂಪನಿಯು ಆಪಲ್ ಸ್ಮಾರ್ಟ್ ವಾಚ್ 9 ಸರಣಿ ಮತ್ತು ವಾಚ್ ಅಲ್ಟ್ರಾ 2 ಅನ್ನು ಸಹ ಲಾಂಚ್ ಮಾಡಿದೆ. ಈಗಾಗಲೇ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಉತ್ಪನ್ನಗಳ ಪ್ರಿ-ಬುಕಿಂಗ್ ಸಹ ಆರಂಭವಾಗಿದೆ


Click it and Unblock the Notifications








