ಆಪಲ್‌ ನ್ಯೂಸ್‌ ; ಆಪ್‌ ಡೌನ್‌ಲೋಡ್‌ ಮಿತಿ ಇನ್ನು 200MB!

|

ಟೆಕ್‌ ಹಿರಿಯಣ್ಣ ಎನಿಸಿಕೊಂಡಿರುವ ಆಪಲ್‌ ಸಂಸ್ಥೆಯು ಹೊಸದೊಂದು ಸುದ್ದಿಯನ್ನು ಹೊರಹಾಕಿದ್ದು, ಐಫೋನ್‌ ಮತ್ತು ಐಫೋಡ್ ಬಳಕೆದಾರರಿಗೆ ಸೆಲ್ಯೂಲರ್‌ ಡೇಟಾದಿಂದ ಆಪ್‌ ಡೌನ್‌ಲೋಡ್‌ ಮಾಡುವ ಮಿತಿಯಲ್ಲಿ ಹೆಚ್ಚಳ ಮಾಡಿದ್ದು, ಇನ್ಮುಂದೆ ಬಳಕೆದಾರರು 200MB ವರೆಗಿನ ಯಾವುದೇ ಆಪ್‌ಗಳನ್ನು ಸೆಲ್ಯೂಲರ್‌ ಡಾಟಾ ಬಳಸಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಆಪಲ್‌ ನ್ಯೂಸ್‌ ; ಆಪ್‌ ಡೌನ್‌ಲೋಡ್‌ ಮಿತಿ ಇನ್ನು 200MB!

ಹೌದು, ಆಪಲ್‌ ಸಂಸ್ಥೆಯು ಸೆಲ್ಯೂಲರ್‌ ಡೇಟಾ ಬಳಿಸಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವ ಮಿತಿಯಲ್ಲಿ 50MB ಹೆಚ್ಚಳ ಮಾಡಿದ್ದು, ಹೀಗಾಗಿ ಐಫೋನ್‌ ಬಳಕೆದಾರರು 200MB ಸಾಮರ್ಥ್ಯದ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಮೊದಲು ಸೆಲ್ಯೂಲರ್‌ ಡಾಟಾದಲ್ಲಿ ಕೇವಲ 150MB ಡೇಟಾದ ಅಪ್ಲಿಕೇಶನ್‌ಗಳನ್ನು ಮಾತ್ರವೇ ಡೌನ್‌ಲೋಡ್‌ ಮಾಡಿಕೊಳ್ಳಲಿಕ್ಕೆ ಅವಕಾಶವಿತ್ತು.

ಆಪಲ್‌ ನ್ಯೂಸ್‌ ; ಆಪ್‌ ಡೌನ್‌ಲೋಡ್‌ ಮಿತಿ ಇನ್ನು 200MB!

ಆಪಲ್‌ ಆಪ್‌ ಸ್ಟೋರ್‌ನಲ್ಲಿ ಸದ್ಯ ಹಲವು ಗೇಮ್ಸ್‌ಗಳು ಮತ್ತು ವಿಡಿಯೊ ಆಪ್‌ಗಳು ಸೇರಿದಂತೆ ಅನೇಕ ಅಪ್ಲಿಕೇಶನ್‌ಗಳು ದೊಡ್ಡ ಗಾತ್ರದ ಡೇಟಾವನ್ನು ಬೇಡುತ್ತವೆ. ಅವುಗಳನ್ನು ವೈ-ಫೈ ನೆಟವರ್ಕ್‌ ಬಳಸಿ ಡೌನ್‌ಲೋಡ್‌ ಮಾಡುವುದು ಉತ್ತಮ. ಹಾಗಾದರೇ ಆಪಲ್‌ ಸೆಲ್ಯೂಲರ್‌ ಡೇಟಾ ಬಳಸಿ ಆಪ್‌ ಡೌನ್‌ಲೋಡ್‌ಗಳನ್ನು ಮಾಡುವುದಕ್ಕೆ ಲಿಮಿಟ್‌ ನೀಡಿರುವುದೇಕೆ? ಮತ್ತು ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ! ಓದಿರಿ : ವಾಟ್ಸಪ್‌ನಲ್ಲಿ 'ಪ್ರೊಫೈಲ್‌ ಫೋಟೊ ಸೇವ್' ಆಯ್ಕೆ ಇನ್ನಿಲ್ಲ!

ಮಿತಿಯಲ್ಲಿ ಹೆಚ್ಚಳ

ಮಿತಿಯಲ್ಲಿ ಹೆಚ್ಚಳ

ಆಪಲ್‌ ಆಪ್‌ ಸ್ಟೋರ್‌ನಿಂದ ಸೆಲ್ಯೂಲರ್‌ ಡೇಟಾ ಬಳಸಿ ಕೇವಲ 150MB ಡೇಟಾ ಸಾಮರ್ಥ್ಯದ ಅಪ್ಲಿಕೇಶನ್‌ಗಳನ್ನು ಮಾತ್ರ ಡೌನ್‌ಲೋಡ್‌ ಮಾಡುವುದಕ್ಕೆ ಅವಕಾಶ ನೀಡಿತ್ತು. ಆದರೆ ಆ ಮಿತಿಯಲ್ಲಿಗ ಸಡಿಲಿಕೆ ಮಾಡಿರುವ ಕಂಪನಿಯು, 50MB ಡೇಟಾವನ್ನು ಹೆಚ್ಚಳ ಮಾಡಿದೆ. ಹೀಗಾಗಿ 200MB ವರೆಗಿನ ಡೇಟಾ ಬೇಡುವ ಆಪ್‌ಗಳನ್ನು ಡೌನ್‌ಲೋಡ್‌ ಮಾಡಬಹುದು.

ಮೊದಲು 100MB

ಮೊದಲು 100MB

ಆಪಲ್‌ ಸಂಸ್ಥೆಯು ಸೆಲ್ಯೂಲರ್‌ ಡೇಟಾ ಬಳಸಿ 100MB ವರೆಗಿನ ಡೇಟಾ ಸಾಮರ್ಥ್ಯದ ಆಪ್‌ಗಳನ್ನು ಮಾತ್ರ ಡೌನ್‌ಲೋಡ್‌ ಮಾಡುವುದಕ್ಕೆ ಅನುಕೂಲ ಮಾಡಿತ್ತು. ಆದರೆ 2017ರಲ್ಲಿ ಈ ಮಿತಿಯಲ್ಲಿ ಹೆಚ್ಚುವರಿಯಾಗಿ 50MB ಡೇಟಾವನ್ನು ಸೇರಿಸಿದ್ದು, ಬಳಕೆದಾರರು 150MB ಡೇಟಾ ಬೇಡುವ ಆಪ್‌ಗಳನ್ನು ಡೌನ್‌ಲೋಡ್‌ ಮಾಡುವುದಕ್ಕೆ ಅವಕಾಶ ದೊರೆಯಿತು.

ಓದಿರಿ : ಫ್ಲಿಪ್‌ಕಾರ್ಟ್‌ನಲ್ಲಿ 'ವಿವೋ' ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ! ಓದಿರಿ : ಫ್ಲಿಪ್‌ಕಾರ್ಟ್‌ನಲ್ಲಿ 'ವಿವೋ' ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!

ಲಿಮಿಟ್‌ಗೆ ಕಾರಣ ಏನು

ಲಿಮಿಟ್‌ಗೆ ಕಾರಣ ಏನು

ಬಳಕೆದಾರರು ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವಾಗ ಕೇಲವೊಮ್ಮೆ ಆಕಸ್ಮಿಕ್‌ವಾಗಿ ದೊಡ್ಡ ಗಾತ್ರದ ಆಪ್‌ಗಳು ಡೌನ್‌ಲೋಡ್‌ ಆಗಿಬಿಡುವ ಸಾಧ್ಯತೆಗಳಿರುತ್ತವೆ. ಆವಾಗ ಬಳಕೆದಾರರ ಸೆಲ್ಯೂಲರ್‌ ಡೇಟಾ ಖಾಲಿಯಾಗಿ ಬಿಡುತ್ತದೆ ಎನ್ನುವ ಕಾರಣಕ್ಕಾಗಿ ಕಂಪನಿಯು ಹೆಚ್ಚಿನ ಡೇಟಾ ಬೇಡುವ ಆಪ್‌ಗಳಿಗೆ ಲಿಮಿಟ್‌ ಮಾಡಲಾಗಿದೆ.

ವೈ-ಫೈ ಉತ್ತಮ

ವೈ-ಫೈ ಉತ್ತಮ

ಸದ್ಯ ಬಹುತೇಕ ಜನಪ್ರಿಯ ಆಪ್‌ಗಳು ಅಧಿಕ ಡೇಟಾವನ್ನು ಬೇಡುತ್ತವೆ ಅವುಗಳನ್ನು ಸೆಲ್ಯೂಲರ್‌ ಡೇಟಾಗಳನ್ನು ಬಳಸಿ ಡೌನ್‌ಲೋಡ್‌ ಮಾಡುವುದಕ್ಕಿಂತ ವೈ ಫೈ ನೆಟವರ್ಕ್‌ ಬಳಸಿ ಡೌನ್‌ಲೋಡ್‌ ಮಾಡುವುದು ಸೂಕ್ತ ಎನ್ನಬಹುದು. ವೈ ಫೈ ನೆಟವರ್ಕ್‌ನಲ್ಲಿ ಆಪ್‌ಗಳು ವೇಗವಾಗಿ ಡೌನ್‌ಲೋಡ್‌ ಆಗುತ್ತವೆ.

ಹೇವಿ ಡೇಟಾ ಆಪ್‌ಗಳು

ಹೇವಿ ಡೇಟಾ ಆಪ್‌ಗಳು

ಅಧಿಕ ಡೇಟಾ ಬೇಡುವ ಆಪ್‌ಗಳ ಲಿಸ್ಟ್‌ನಲ್ಲಿ ಮೊದಲಿಗೆ ಗುರುತಿಸಿಕೊಳ್ಳುವುದೇ 'ಆನ್‌ಲೈನ್‌ ಗೇಮಿಂಗ್‌ ಆಪ್‌ಗಳು'. ಇವುಗಳನ್ನು ವೈ ಫೈ ನೆಟವರ್ಕ್‌ನಲ್ಲಿಯೇ ಡೌನ್‌ಲೋಡ್‌ ಮಾಡಬೇಕು. ಹಾಗೆಯೇ ವಿಡಿಯೊ ಎಡಿಟಿಂಗ್‌ ಆಪ್‌ಗಳು ಸಹ ಹೆಚ್ಚು ಡೇಟಾವನ್ನು ನಿರೀಕ್ಷಿಸುತ್ತವೆ, ಅವುಗಳೊಂದಿಗೆ ಸಾಮಾಜಿಕ ಜಾಲತಾಣಗಳು ಸಹ ಹೇವಿ ಡೇಟಾ ಬೇಡುತ್ತವೆ.

ಓದಿರಿ : 'ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್‌'ನ ಹಿಡೆನ್‌ ಕ್ಯಾಮೆರಾ ಫೀಚರ್ಸ್‌ ಬಗ್ಗೆ ನಿಮಗೆ ಗೊತ್ತಾ? ಓದಿರಿ : 'ಗ್ಯಾಲ್ಯಾಕ್ಸಿ ಎಸ್‌10 ಪ್ಲಸ್‌'ನ ಹಿಡೆನ್‌ ಕ್ಯಾಮೆರಾ ಫೀಚರ್ಸ್‌ ಬಗ್ಗೆ ನಿಮಗೆ ಗೊತ್ತಾ?

Best Mobiles in India

English summary
download limit over cellular networks is now 200 MB for iPhones and iPads. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X