Home
ಸುದ್ದಿಜಾಲ

ಆಪಲ್‌ನ ಬಹುನಿರೀಕ್ಷಿತ iOS 17 ಲಾಂಚ್: ಹೊಸ ಫೀಚರ್ಸ್‌ ಗ್ರಾಹಕರು ಫಿದಾ!

ಆಪಲ್ ತನ್ನ ವರ್ಲ್ಡ್‌ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2023 ರಲ್ಲಿ ಬಹುನಿರೀಕ್ಷಿತ iOS 17 ಓಎಸ್‌ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಐಫೋನ್‌ಗಳಿಗಾಗಿನ ಹೊಸ iOS ಆಪರೇಟಿಂಗ್ ಸಿಸ್ಟಮ್ ಭದ್ರತೆ ಮತ್ತು ಗೌಪ್ಯತೆ-ಕೇಂದ್ರಿತ ಆಯ್ಕೆಗಳನ್ನು ಹೆಚ್ಚಿಸುವಾಗ ಅನೇಕ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತದೆ.

ಹೌದು, ಸದ್ಯ ಆಪಲ್ ವರ್ಲ್ಡ್‌ವೈಡ್ ಡೆವಲಪರ್ ಕಾನ್ಫರೆನ್ಸ್ (WWDC) 2023 ಕಾರ್ಯಕ್ರಮ ಲೈವ್‌ ಇದೆ. ಈ ಕಾರ್ಯಕ್ರಮದಲ್ಲಿ ಕೆಲವು ಹೊಸ ಡಿವೈಸ್‌ಗಳ ಜೊತೆಗೆ iOS 17 ಓಎಸ್‌ ಅನ್ನು ಸಂಸ್ಥೆಯು ಪರಿಚಯಿಸಿದೆ. ಇದು ಸಾಕಷ್ಟು ನೂತನ ಅಪ್‌ಡೇಟ್‌ ಆಯ್ಕೆಗಳೊಂದಿಗೆ ಲಗ್ಗೆ ಇಟ್ಟಿದೆ. ಮುಖ್ಯವಾಗಿ ಫೇಸ್‌ಟೈಮ್‌ ಸಹ ಅಪ್‌ಡೇಟ್‌ ಪಡೆದಿದ್ದು, ಲೈವ್‌ ವಾಯಿಸ್‌ ಮೇಲ್, ಇಮೋಜಿ ಸಪೋರ್ಟ್‌ ಪಡೆದಿದೆ.

ಆಪಲ್‌ನ ಬಹುನಿರೀಕ್ಷಿತ iOS 17 ಲಾಂಚ್: ಹೊಸ ಫೀಚರ್ಸ್‌ ಗ್ರಾಹಕರು ಫಿದಾ!

ಮೆಸೆಜ್‌ ಆಪ್‌ನಲ್ಲಿ ಆಪಲ್ ಸರ್ಚ್‌ ಅನ್ನು ಚುರುಕಾಗಿ ಮತ್ತು ಸುಲಭಗೊಳಿಸಿದೆ. 'ಚೆಕ್ ಇನ್' ಎಂಬ ಸುರಕ್ಷತಾ ಫೀಚರ್ ಅನ್ನು ಸಹ ಮೆಸೆಜ್‌ಗಳಿಗೆ ಸೇರ್ಪಡೆ ಮಾಡಲಾಗಿದೆ. ಸ್ಟಿಕ್ಕರ್‌ಗಳು ಮೆಸೆಜ್‌ಗಳಿಗೂ ದಾರಿ ಮಾಡಿಕೊಟ್ಟಿವೆ. ಇದರೊಂದಿಗೆ ಆಪಲ್ ಹೊಸ ಜರ್ನಲ್ ಆಪ್‌ ಅನ್ನು ಸಹ ಪರಿಚಯಿಸಿದ್ದು, ಇದು ಪ್ರಸಕ್ತ ವರ್ಷದ ಕೊನೆಯಲ್ಲಿ ಲಭ್ಯವಿರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

* ಫೋನ್ ಆಪ್‌ ಸಾಕಷ್ಟು ಅಪ್‌ಡೇಟ್‌ : ಹೊಸ ಕಾಂಟ್ಯಾಕ್ಟ್ ಪೋಸ್ಟರ್‌ಗಳ ವೈಶಿಷ್ಟ್ಯವಿದೆ, ಇದು ಬಳಕೆದಾರರು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ, ಒಳಬರುವ ಕರೆಗಳಿಗೆ ಸಂಪೂರ್ಣವಾಗಿ ಹೊಸ ನೋಟವನ್ನು ತರುತ್ತದೆ. ಫೋಟೋಗಳು ಅಥವಾ ಮೆಮೊಜಿ, ಹಾಗೆಯೇ ಅಸ್ಟಿಪೋಗ್ರಫಿ ಮತ್ತು ಫಾಂಟ್ ಬಣ್ಣಗಳನ್ನು ಸೇರಿಸುವ ಮೂಲಕ ಅವರು ಕರೆ ಪರದೆಯನ್ನು ಕಸ್ಟಮೈಸ್ ಮಾಡಬಹುದು. ಥರ್ಡ್‌ ಪಾರ್ಟಿ ಕಾಲಿಂಗ್ ಆಪ್‌ಗಳಿಗೆ ಸಂಪರ್ಕ ಪೋಸ್ಟರ್‌ಗಳು ಸಹ ಲಭ್ಯವಿರುತ್ತವೆ.

ಆಪಲ್‌ನ ಬಹುನಿರೀಕ್ಷಿತ iOS 17 ಲಾಂಚ್: ಹೊಸ ಫೀಚರ್ಸ್‌ ಗ್ರಾಹಕರು ಫಿದಾ!

* ಲೈವ್ ವಾಯ್ಸ್‌ಮೇಲ್‌ಗೆ ಬೆಂಬಲ : ಈ ಆಯ್ಕೆಯು ಇದು ಬಳಕೆದಾರರಿಗೆ ಯಾರಾದರೂ ಧ್ವನಿಮೇಲ್ ಅನ್ನು ಬಿಟ್ಟಾಗ ರಿಯಲ್‌ ಟೈಮ್‌ನ ಪ್ರತಿಲೇಖನವನ್ನು ನೋಡುವ ಸಾಮರ್ಥ್ಯವನ್ನು ನೀಡುತ್ತದೆ ಮತ್ತು ಕರೆ ಮಾಡುವವರು ತಮ್ಮ ಸಂದೇಶವನ್ನು ಬಿಡುತ್ತಿರುವಾಗ ಅದನ್ನು ಸ್ವೀಕರಿಸುವ ಅವಕಾಶವನ್ನು ನೀಡುತ್ತದೆ. ಸ್ಪ್ಯಾಮ್ ಕರೆಗಳು ಲೈವ್ ವಾಯ್ಸ್‌ಮೇಲ್‌ನಂತೆ ಗೋಚರಿಸುವುದಿಲ್ಲ ಮತ್ತು ಸ್ವಯಂಚಾಲಿತವಾಗಿ ನಿರಾಕರಿಸಲಾಗುತ್ತದೆ.

* ಫೇಸ್‌ಟೈಮ್‌ iOS 17 ಅಪ್‌ಡೇಟ್‌ : ಇದು ಬಳಕೆದಾರರು ತಾವು ಕರೆ ಮಾಡಿದ ವ್ಯಕ್ತಿ ಲಭ್ಯವಿಲ್ಲದಿದ್ದಾಗ ಆಡಿಯೋ ಮತ್ತು ವೀಡಿಯೊ ಮೆಸೆಜ್‌ಗಳನ್ನು ಕಳುಹಿಸಲು ಅನುಮತಿಸುತ್ತದೆ. ಹೃದಯಗಳು, ಬಲೂನ್‌ಗಳು, ಪಟಾಕಿಗಳು, ಲೇಸರ್ ಕಿರಣಗಳು, ಮಳೆ ಮತ್ತು ಹೆಚ್ಚಿನವುಗಳಂತಹ ಪ್ರತಿಕ್ರಿಯೆಗಳಿಗೆ ಸಹ ಬೆಂಬಲವಿದೆ. ಇದನ್ನು ಸರಳ ಸನ್ನೆಗಳ ಮೂಲಕ ಸಕ್ರಿಯಗೊಳಿಸಬಹುದು.

* ಮೆಸೆಜ್‌ಗಳಿಗೆ ಸ್ಟಿಕ್ಕರ್‌ಗಳಿಗೆ ಸಪೋರ್ಟ್‌ : ಇದು ಫೋಟೋಗಳಿಂದ ಲೈವ್ ಸ್ಟಿಕ್ಕರ್‌ಗಳನ್ನು ರಚಿಸುವ ಸಾಮರ್ಥ್ಯವನ್ನು ಪಡೆಯುತ್ತಿದೆ. ಬಳಕೆದಾರರು ಈ ಸ್ಟಿಕ್ಕರ್‌ಗಳನ್ನು ತಮ್ಮ ಕೀಬೋರ್ಡ್‌ಗೆ ಸೇರಿಸಬಹುದು, ನಂತರ ಅದನ್ನು ಇತರ ಆಪ್‌ಗಳಲ್ಲಿಯೂ ಹಂಚಿಕೊಳ್ಳಬಹುದು. ಮೆಸೆಜ್‌ಗಳಲ್ಲಿನ ಸರ್ಚ್‌ ಹುಡುಕಾಟ ಫಿಲ್ಟರ್‌ಗಳೊಂದಿಗೆ ಹೆಚ್ಚು ಶಕ್ತಿಯುತ ಮತ್ತು ನಿಖರವಾಗಿದೆ ಎಂದು ಹೇಳಲಾಗುತ್ತದೆ. iOS 17 ನಲ್ಲಿ, ಬಳಕೆದಾರರು ತಮ್ಮ ಹುಡುಕಾಟವನ್ನು ಕಡಿಮೆ ಮಾಡಲು ಫಿಲ್ಟರ್‌ಗಳನ್ನು ಸೇರಿಸಬಹುದು.

* ಚೆಕ್ ಇನ್ ಫೀಚರ್ : ಈ ಫೀಚರ್ ಪ್ರಮುಖ ಸುರಕ್ಷತೆ ಮತ್ತು ಭದ್ರತಾ ಆಯ್ಕೆ ಆಗಿದೆ. 'ಬಳಕೆದಾರರು ಚೆಕ್ ಇನ್ ಅನ್ನು ಪ್ರಾರಂಭಿಸಿದ ನಂತರ, ಬಳಕೆದಾರರು ಬಂದ ತಕ್ಷಣ ಅವರ ಸ್ನೇಹಿತ ಅಥವಾ ಕುಟುಂಬದ ಸದಸ್ಯರಿಗೆ ಸ್ವಯಂಚಾಲಿತವಾಗಿ ಸೂಚನೆ ನೀಡಲಾಗುತ್ತದೆ. ಅವರು ತಮ್ಮ ಗಮ್ಯಸ್ಥಾನದ ಕಡೆಗೆ ಪ್ರಗತಿ ಸಾಧಿಸದಿದ್ದರೆ, ಡಿವೈಸ್‌ ಸ್ಥಳ, ಬ್ಯಾಟರಿ ಮಟ್ಟ ಮತ್ತು ಸೆಲ್ ಸೇವಾ ಸ್ಥಿತಿಯಂತಹ ಆಯ್ದ ಸಂಪರ್ಕದೊಂದಿಗೆ ಉಪಯುಕ್ತ ಮಾಹಿತಿಯನ್ನು ತಾತ್ಕಾಲಿಕವಾಗಿ ಹಂಚಿಕೊಳ್ಳಲಾಗುತ್ತದೆ.

Best Mobiles in India

English summary
Apple iOS 17 Introduced at WWDC 2023: check details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+