Apple: ಐಪ್ಯಾಡ್ ಏರ್, ಐಪ್ಯಾಡ್ ಪ್ರೊ ಶೀಘ್ರದಲ್ಲೇ ಲಾಂಚ್! ನಿರೀಕ್ಷಿತ ಫೀಚರ್ಸ್ ಏನು?
ಆಪಲ್ ಡಿವೈಸ್‌ಗಳಿಗೆ (Apple device) ಅದರಲ್ಲೂ ಐಫೋನ್‌ಗಳಿಗೆ ಬಹುಬೇಡಿಕೆ ಇದ್ದು, ಈ ನಡುವೆ ಆಪಲ್ ಐಪ್ಯಾಡ್ ಏರ್, ಐಪ್ಯಾಡ್ ಪ್ರೊ (iPad Air, iPad Pro) ಅನ್ನು ಶೀಘ್ರದಲ್ಲೇ ಲಾಂಚ್ ಮಾಡಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಹೌದು, ಹೊಸ ಐಪ್ಯಾಡ್ ಮಾಡೆಲ್‌ಗಳು, ಐಪ್ಯಾಡ್ ಪ್ರೊ ಮತ್ತು ಐಪ್ಯಾಡ್ ಏರ್ (iPad Pro and iPad Air) ಸಂಬಂಧ ಪ್ರಮುಖ ಮಾಹಿತಿ ತಿಳಿದುಬಂದಿವೆ. ಈ ಡಿವೈಸ್‌ಗಳನ್ನು ಇದೀಗ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದೆ. ಹಾಗಿದ್ರೆ, ಈ ಡಿವೈಸ್‌ಗಳ ಪ್ರಮುಖ ಫೀಚರ್ಸ್ ಹಾಗೂ ಇವು ಯಾವಾಗ ಲಾಂಚ್ ಆಗಲಿವೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶೀಘ್ರದಲ್ಲೇ ಐಪ್ಯಾಡ್ ಏರ್, ಐಪ್ಯಾಡ್ ಪ್ರೊ: ಆಪಲ್ ಈ ವರ್ಷದ ಮೇ ತಿಂಗಳಲ್ಲಿ ಹೊಸ ಡಿವೈಸ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಕಂಪನಿಯು ಐಪ್ಯಾಡ್ ಏರ್ ಹಾಗೂ ಐಪ್ಯಾಡ್ ಪ್ರೊ ಅನ್ನು ಅನಾವರಣಗೊಳಿಸಲಿದೆ ಎಂದು ಹೇಳಲಾಗಿದ್ದು, A2836 ಮತ್ತು A2837 ಎಂದು ಲೇಬಲ್ ಮಾಡಲಾದ ಎರಡು ಐಪ್ಯಾಡ್ ಮಾಡೆಲ್‌ಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿವೆ.
ಇನ್ನು ಈ ಮಾದರಿಗಳ ಗುರುತುಗಳು ತಿಳಿದಿಲ್ಲವಾದರೂ, ಐಪ್ಯಾಡ್ ಪ್ರೊ ಮತ್ತು ಐಪ್ಯಾಡ್ ಏರ್ ಲೈನ್‌ಗಳಿಗೆ ಸಂಭಾವ್ಯ ನವೀಕರಣಗಳ ಬಗ್ಗೆ ಚರ್ಚಿಸುವಂತೆ ಮಾಡಲಾಗಿದೆ. ಹೊಸ ಐಪ್ಯಾಡ್ ಪ್ರೊ ಮಾದರಿಗಳು ಪ್ರಸ್ತುತ ಮಿನಿ-ಎಲ್‌ಇಡಿ ಪ್ಯಾನೆಲ್‌ಗಳ ಬದಲಿಗೆ ಒಎಲ್‌ಇಡಿ ಡಿಸ್‌ಪ್ಲೇಗಳನ್ನು ಹೊಂದಿರಬಹುದು ಎಂದು ತಿಳಿದುಬಂದಿದ್ದು, ಇದು ಸ್ಲೀಕರ್ ವಿನ್ಯಾಸಗಳಿಗೆ ಕಾರಣವಾಗಲಿದೆ ಎನ್ನಲಾಗಿದೆ. ಅಲ್ಲದೆ ಲ್ಯಾಂಡ್‌ಸ್ಕೇಪ್ ಓರಿಯೆಂಟೆಡ್ ಫೇಸ್ ಐಡಿ ಕ್ಯಾಮೆರಾ ಆಯ್ಕೆ ಇರಲಿದೆ ಎನ್ನಲಾಗಿದ್ದು, ಅದಾಗ್ಯೂ ಈ ಅಪ್‌ಗ್ರೇಡ್ ಮಾಡೆಲ್‌ಗಳ ಕುರಿತು ಇನ್ನೂ ಸಾಕಷ್ಟು ಮಾಹಿತಿ ತಿಳಿದುಬರಬೇಕಿದೆ.

ಈ ನಡುವೆ 12.9 ಇಂಚಿನ ದೊಡ್ಡ ಐಪ್ಯಾಡ್ ಏರ್ ಶ್ರೇಣಿಯನ್ನು ಲಾಂಚ್ ಮಾಡಲಾಗುತ್ತದೆ ಎನ್ನುವ ಮಾಹಿತಿಗಳು ಸಹ ಟೆಕ್ ವಲಯದಲ್ಲಿ ಕೇಳಿಬರುತ್ತಿವೆ. ಈ ಮೂಲಕ ಆಪಲ್ ಜನರಲ್ಲಿ ಉತ್ಸಾಹವನ್ನು ಹೆಚ್ಚು ಮಾಡಿದೆ. ಉದ್ದೇಶಿತ 12.9 ಇಂಚಿನ ಐಪ್ಯಾಡ್ ಏರ್‌ನ ಲೀಲ್ ಮಾಹಿತಿ ಗಮನಿಸುವುದಾದರೆ ಟಚ್ ಐಡಿ ಬಟನ್ ಮತ್ತು ಸ್ಪೋರ್ಟಿಂಗ್ ಸ್ಪೀಕರ್ ಗ್ರಿಲ್‌ಗಳನ್ನು ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಹೊಂದಿರುವ ಸಾಧ್ಯತೆ ಇದೆ.
ಈ ಮೊದಲು ಈ ಹೊಸ ಐಪ್ಯಾಡ್‌ಗಳನ್ನು ಮಾರ್ಚ್‌ನಲ್ಲಿ ಲಾಂಚ್ ಆಗಲಿವೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ ಮಾರ್ಚ್‌ನಲ್ಲಿ ಆಪಲ್‌ನಿಂದ ಯಾವುದೇ ಅಧಿಕೃತ ಪ್ರಕಟಣೆ ಈವರೆಗೂ ವರದಿ ಆಗಲಿಲ್ಲ. ಇದರಿಂದಾಗಿ ಬಹುಶಃ ಮೇ ಗೆ ಇದು ವಿಸ್ತರಣೆ ಆಗಿರಬಹುದು ಎನ್ನಲಾಗಿದೆ. ಇನ್ನು ಈ ಹೊಸ ಐಪ್ಯಾಡ್‌ಗಳ ಜೊತೆಗೆ ಆಪಲ್ ಮ್ಯಾಜಿಕ್ ಕೀಬೋರ್ಡ್ ಮತ್ತು ನವೀಕರಿಸಿದ ಆಪಲ್ ಪೆನ್ಸಿಲ್ ಅನ್ನು ಸಹ ಲಾಂಚ್ ಮಾಡಲಾಗುತ್ತದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಆಪಲ್ ಐಫೋನ್ 16 ಸರಣಿ: ಈ ನಡುವೆ ಆಪಲ್ ಐಫೋನ್ 16 ಸರಣಿ ಬಗ್ಗೆ ಸಾಕಷ್ಟು ಮಾಹಿತಿ ಲೀಕ್ ಆಗುತ್ತಿವೆ. ಈ ಸರಣಿಯಲ್ಲಿ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಅನ್ನು ಲಾಂಚ್ ಮಾಡಲಾಗುತ್ತದೆ ಎನ್ನಲಾಗಿದೆ. ಹಾಗೆಯೇ ಟಿಪ್‌ಸ್ಟರ್ ಸೋನಿ ಡಿಕ್ಸನ್ ಅವರು ನಕಲಿ ಘಟಕಗಳ ಸೋರಿಕೆಯಾದ ಫೋಟೋಗಳ ಮೂಲಕ ಬಹಿರಂಗಪಡಿಸಿದ್ದಾರೆ.
ಈ ಚಿತ್ರಗಳನ್ನು ಗಮನಿಸಿದ್ರೆ ರಿಯರ್ ಕ್ಯಾಮೆರಾ ಕಾನ್ಫಿಗರೇಶನ್‌ಗಳನ್ನು ಹೈಲೈಟ್ ಮಾಡುತ್ತವೆ. ನಿರ್ದಿಷ್ಟವಾಗಿ ಗಮನಿಸಬೇಕಾದ ಅಂಶವೆಂದರೆ ಲಂಬ ಜೋಡಣೆ. ಆದರೆ, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಸ್ವಲ್ಪ ದೊಡ್ಡ ಆಯಾಮಗಳನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಮಾತ್ರೆ ಆಕಾರದ ಕ್ಯಾಮೆರಾ ಕಾನ್ಫಿಗರೇಶನ್ ಅನ್ನು ಹೊಂದಿರಲಿದೆ ಎಂದು ಲೀಕ್ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.


Click it and Unblock the Notifications








