ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 11 ಫೋನ್‌ಗೆ 21,000ರೂ. ಗಳ ರಿಯಾಯಿತಿ!
ಆಪಲ್ ಡಿವೈಸ್‌ಗಳು ದುಬಾರಿ ಬೆಲೆ ಹೊಂದಿದ್ದರೂ ಸಹ ಅದಕ್ಕೆ ತಕ್ಕಂತಹ ಫೀಚರ್ಸ್‌ಗಳನ್ನು ಅವು ಪಡೆದುಕೊಂಡಿರುತ್ತವೆ. ಈ ಕಾರಣಕ್ಕೆ ಆಪಲ್ ನ ಯಾವುದೇ ಡಿವೈಸ್‌ಗಳು ಮಾರುಕಟ್ಟೆಗೆ ಅನಾವರಣಗೊಂಡರೆ ಅವುಗಳಿಗೆ ಹಲವು ಜನರು ಅಪ್‌ಗ್ರೇಡ್ ಆಗುತ್ತಾರೆ. ಆದರೆ, ಬಹುಮಂದಿಗೆ ಈ ಡಿವೈಸ್‌ಗಳು ಇಷ್ಟವಿದ್ದರೂ ಹೆಚ್ಚಿನ ಬೆಲೆಗೆ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಗ್ರಾಹಕರು ಆಪಲ್ ಐಫೋನ್ 11 ಫೋನ್ ಅನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದು.

ಹೌದು, ಐಫೋನ್ 11 ಅನ್ನು ಗ್ರಾಹಕರು ಕೈಗೆಟಕುವ ದರದಲ್ಲಿ ತಮ್ಮದಾಗಿಸಿಕೊಳ್ಳಬಹುದು. ಈ ಫೋನ್‌ನ ಸಾಮಾನ್ಯ ದರ 48,900 ರೂ. ಗಳಾಗಿದ್ದು, ಬ್ಯಾಂಕ್ ರಿಯಾಯಿತಿ ಹಾಗೂ ಇನ್ನಿತರೆ ತ್ವರಿತ ರಿಯಾಯಿತಿಗಳ ಮೂಲಕ ಹಾಗೂ ವಿನಿಮಯ ಆಫರ್ ಮೂಲಕ ಈ ಫೋನ್ ಅನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದು. ಹಾಗಿದ್ರೆ, ಈ ಫೋನ್ ಅನ್ನು ಎಲ್ಲಿ ಖರೀದಿ ಮಾಡಬೇಕು? ಯಾವೆಲ್ಲಾ ಬ್ಯಾಂಕ್ ಗ್ರಾಹಕರಿಗೆ ಈ ಆಫರ್ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.
ಐಫೋನ್‌ಗೆ 11 ಗೆ 21,000ರೂ. ಗಳ ಡಿಸ್ಕೌಂಟ್
ಪ್ರಮುಖ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಇತ್ತೀಚಿನ ದಿನಗಳಲ್ಲಿ ಉನ್ನತ ಮಟ್ಟದ ಫೋನ್‌ಗಳಿಗೆ ದೊಡ್ಡ ಆಫರ್ ಘೋಷಣೆ ಮಾಡುತ್ತಲೇ ಬರುತ್ತಿದೆ. ಇದರ ಭಾಗವಾಗಿಯೇ ಐಫೋನ್ 11 ಫೊನ್‌ಗೆ 48,900 ರೂ. ಗಳ ಸಾಮಾನ್ಯ ಬೆಲೆ ಹೊಂದಿದ್ದು, 3% ತ್ವರಿತ ಫ್ಲಿಪ್‌ಕಾರ್ಟ್‌ನ ರಿಯಾಯಿತಿಯೊಂದಿಗೆ ಈ 21,000 ರೂ. ಗಳ ಭಾರೀ ರಿಯಾಯಿತಿ ಪಡೆದುಕೊಳ್ಳಲಿದೆ.
ಐಫೋನ್ 11 ಗೆ ಏನೆಲ್ಲಾ ಬ್ಯಾಂಕ್ ಆಫರ್ ಲಭ್ಯ?
ಗ್ರಾಹಕರು ಹೆಚ್‌ಎಸ್‌ಬಿಸಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಈ ಫೋನ್ ಖರೀದಿ ಮಾಡಲು ಮುಂದಾದರೆ 1000 ರೂ. ಗಳ ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಇಂಡಸ್‌ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹಾಗೂ ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೂ ಗ್ರಾಹಕರು 1000 ರೂ. ಗಳ ವರೆಗೆ ಹಣ ಉಳಿಸಬಹುದು.
ಇದನ್ನು ಹೊರತುಪಡಿಸಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಲು ಬಯಸಿದರೆ 5% ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದಾಗಿದೆ.

ವಿನಿಮಯ ಆಫರ್
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 11 ನಲ್ಲಿ ವಿನಿಮಯ ಕೊಡುಗೆ ಘೋಷಣೆ ಮಾಡಲಾಗಿದ್ದು, ಈ ಮೂಲಕ ಖರೀದಿ ಮಾಡಲು ಮುಂದಾದರೆ. ಅಂದರೆ ನಿಮ್ಮ ಹಳೆಯ ಫೋನ್ ಅನ್ನು ಮಾರಿ ಈ ಹೊಸ ಫೋನ್ ಕೊಂಡುಕೊಳ್ಳಬಹುದು. ಅದರಲ್ಲೂ ಹಳೆಯ ಫೋನ್ ಸುಸ್ಥಿತಿಯಲ್ಲಿದ್ದರೆ 20,000 ರೂ. ವರೆಗೆ ಉಳಿಸಬಹುದು, ಇಲ್ಲವಾದರೆ ಹಳೆಯ ಫೋನ್‌ನ ಕಾರ್ಯಕ್ಷಮತೆಗೆ ತಕ್ಕಂತೆ ಬೆಲೆ ನಿಗದಿಯಾಗುತ್ತದೆ. ಇಷ್ಟೆಲ್ಲಾ ಕೊಡುಗೆ ಮೂಲಕ ಈ ಫೋನ್ ಅನ್ನು ಕೊನೆಯದಾಗಿ 25,999 ರೂ. ಗಳ ರಿಯಾಯಿತಿಯಲ್ಲಿ ಖರೀದಿ ಮಾಡಬಹುದು.
ಐಫೋನ್ 11 ಪ್ರಮುಖ ಫೀಚರ್ಸ್
ಐಫೋನ್ 11 ಸ್ಮಾರ್ಟ್‌ಫೋನ್ 6.1 ಇಂಚಿನ ಲಿಕ್ವಿಡ್ ರೆಟಿನಾ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, ಇದು 828 x 1792 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ಆಪಲ್‌ನ A13 ಬಯೋನಿಕ್ ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ iOS 13 ನಲ್ಲಿ ರನ್ ಆಗುತ್ತದೆ. ಜೊತೆಗೆ iOS 16.3 ಗೆ ಅಪ್‌ಗ್ರೇಡ್ ಸಹ ಮಾಡಬಹುದಾಗಿದೆ. ಇನ್ನು 4GB RAM+64GB , 4GB RAM +128GB ಹಾಗೂ 4GB RAM +256GB ನ ಮೂರು ವೇರಿಯಂಟ್‌ನಲ್ಲಿ ಲಭ್ಯವಿದೆ.

ಇದರೊಂದಿಗೆ ಈ ಫೋನ್ 12 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ನೊಂದಿಗೆ ಡ್ಯುಯಲ್ ಡಿಯರ್ ಕ್ಯಾಮೆರಾ ರಚನೆ ಹೊಂದಿದ್ದು, 12 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಸಹ ಇದೆ. ಇನ್ನುಳಿದಂತೆ 3110mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿರುವ ಈ ಐಫೋನ್ ಅನ್ನು ಈಗ ಕೈಗೆಟಕುವ ದರದಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.


Click it and Unblock the Notifications








