Home
ಸುದ್ದಿಜಾಲ

ಐಫೋನ್ ಖರೀದಿಸುವವರಿಗೆ ಸಿಹಿಸುದ್ದಿ: ಐಫೋನ್‌ ಈ ಮಾಡೆಲ್‌ಗಳ ಬೆಲೆಯಲ್ಲಿ ಇಳಿಕೆ!

ಟೆಕ್ ದೈತ್ಯ ಆಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 13 ಸರಣಿ ಬಿಡುಗಡೆ ಆಗಿದ್ದು, ಹಲವು ಅಪ್‌ಡೇಟ್‌ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸರಣಿಯು ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ. ಅದರ ಐಫೋನ್ 13 ಸರಣಿ ಲಾಂಚ್ ಬೆನ್ನಲ್ಲೇ ಈಗ ಐಫೋನ್ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಹೀಗಾಗಿ ನೂತನವಾಗಿ ಐಫೋನ್‌ 12, ಐಫೋನ್‌ 12 ಮಿನಿ ಹಾಗೂ ಐಫೋನ್ 11 ಫೋನ್‌ ಖರೀದಿಸುವ ಗ್ರಾಹಕರಿಗೆ ಸದ್ಯ ಶುಭ ಸಮಯವಾಗಿದೆ.

ಐಫೋನ್‌

ಹೌದು, ಆಪಲ್ ಕಂಪನಿಯ ಐಫೋನ್ 13 ಸರಣಿ ಲಾಂಚ್ ಮಾಡಿರುವ ಗ್ರಾಹಕರಿಗೆ ಖುಷಿ ನೀಡಿರುವ ಜೊತೆಗೆ ಜನಪ್ರಿಯ ಐಫೋನ್‌ ಮಾಡೆಲ್‌ಗಳ ಬೆಲೆ ಕಡಿತ ಮಾಡಿ ಅಚ್ಚರಿ ಮೂಡಿಸಿದೆ. ಕಂಪನಿಯ ಐಫೋನ್‌ 12, ಐಫೋನ್‌ 12 ಮಿನಿ ಹಾಗೂ ಐಫೋನ್ 11 ಫೋನ್‌ ಮಾರುಕಟ್ಟೆಯಲ್ಲಿ ಈಗಲೂ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಆದ್ರೆ ಈ ಐಫೋನ್‌ಗಳು ಇದೀಗ ಬೆಲೆ ಇಳಿಕೆ ಕಂಡಿರುವುದು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿವೆ.

ಹೊಸ ಬೆಲೆ ಹೀಗಿವೆ:

ಹೊಸ ಬೆಲೆ ಹೀಗಿವೆ:

ಆಪಲ್ ಐಫೋನ್ 11 64GB ವೇರಿಯಂಟ್ 49,900ರೂ. ಆಗಿದೆ. ಐಫೋನ್ 11 128GB ವೇರಿಯಂಟ್ 54,900ರೂ. ಆಗಿದೆ. ಐಫೋನ್‌ 12 ಮಿನಿ 64GB ವೇರಿಯಂಟ್ 59,900ರೂ. ಆಗಿದೆ. ಐಫೋನ್‌ 12 ಮಿನಿ 128GB ವೇರಿಯಂಟ್ 64,900ರೂ. ಆಗಿದೆ. ಐಫೋನ್‌ 12 ಮಿನಿ 256GB ವೇರಿಯಂಟ್ 74,900ರೂ. ಆಗಿದೆ. ಅದೇ ರೀತಿ ಐಫೋನ್‌ 12 64GB ವೇರಿಯಂಟ್ 65,900ರೂ. ಆಗಿದೆ. ಐಫೋನ್‌ 12 128GB ವೇರಿಯಂಟ್ 70,900ರೂ. ಆಗಿದೆ. ಐಫೋನ್‌ 12 256GB ವೇರಿಯಂಟ್ 80,900ರೂ. ಆಗಿದೆ. ಹಾಗದರೇ ಈ ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 12 ಫೋನ್ ಫೀಚರ್ಸ್‌

ಐಫೋನ್ 12 ಫೋನ್ ಫೀಚರ್ಸ್‌

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.

ಐಫೋನ್ 12 ಮಿನಿ ಫೋನ್ ಫೀಚರ್ಸ್‌

ಐಫೋನ್ 12 ಮಿನಿ ಫೋನ್ ಫೀಚರ್ಸ್‌

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ. ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಯನ್ನು ಪಡೆದಿದೆ.

ಐಫೋನ್ 11 ಫೋನ್ ಫೀಚರ್ಸ್‌

ಐಫೋನ್ 11 ಫೋನ್ ಫೀಚರ್ಸ್‌

ಆಪಲ್ ಸಂಸ್ಥೆಯು ಐಫೋನ್ 11 ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 326 ಪಿಪಿಐ ಹೊಂದಿದ್ದು, 1792 × 828-ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದರೊಂದಿಗೆ ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದ್ದು, ಈ ಬಯೋನಿಕ್ ಚಿಪ್ 8.5 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಹೊಂದಿದೆ. ಇನ್ನು ಇದರ ಬ್ಯಾಟರಿ ಬ್ಯಾಕ್‌ಅಪ್‌ ಆಪಲ್‌ ಐಫೋನ್ ಎಕ್ಸ್‌ಆರ್‌ ಫೋನ್‌ ಗಿಂತ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12 ಮೆಗಾ ಪಿಕ್ಸಲ್ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ. ಹಾಗೆಯೇ ಇದು ಐಪಿ 68 ಸಾಮರ್ಥ್ಯದಲ್ಲಿ ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆದಿದ್ದು, ಫೇಸ್ ಐಡಿ ಸೆಟ್‌ಅಪ್‌ ಪಡೆದಿದೆ. ಇನ್ನು ಈ ಫೋನ್ ನೇರಳೆ, ಹಸಿರು, ಹಳದಿ, ಕಪ್ಪು, ಬಿಳಿ ಮತ್ತು ಕೆಂಪು ಎಂಬ ಆರು ಬಣ್ಣಗಳಲ್ಲಿ ಲಭ್ಯ.

Best Mobiles in India

English summary
Apple iPhone 11, iPhone 12 And iPhone 12 mini Get A Big Price Drop In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+