ಐಫೋನ್‌ಗಳ ಬೆಲೆಯಲ್ಲಿ ಭಾರಿ ಏರಿಕೆ!..ಹೊಸ ದರ ಪಟ್ಟಿ ಹೀಗಿದೆ!

|

ಮೊಬೈಲ್ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ದರ ಪೈಪೋಟಿ ಇದ್ದು, ಕಂಪನಿಗಳು ಬೆಸ್ಟ್ ಆಫರ್ ನೀಡುತ್ತಾ ಗ್ರಾಹಕರನ್ನು ಸೆಳೆಯುತ್ತಿವೆ. ಆದ್ರೆ ಇದೀಗ ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಶಾಕಿಂಗ್ ನ್ಯೂಸ್‌ವೊಂದು ಹೊರ ಬಿದ್ದಿದೆ. ಇತ್ತೀಚಿಗೆ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹೆಚ್ಚಳ ಮಾಡುವುದಾಗಿ ಹೇಳಿತ್ತು. ಈ ಹಿನ್ನಲೆಯಲ್ಲಿ ಆಪಲ್‌ ಐಫೋನ್‌ಗಳ ಬೆಲೆಯಲ್ಲಿ ಏರಿಕೆ ಆಗಿದೆ.

ಐಫೋನ್‌ಗಳ ಬೆಲೆ

ಹೌದು, ಆಪಲ್ ತನ್ನ ಐಫೋನ್‌ಗಳ ಬೆಲೆಯಲ್ಲಿ ಶೇ.5% ಹೆಚ್ಚಳ ಘೋಷಿಸಿದೆ. ಕೇಂದ್ರ ಸರ್ಕಾರವು ಸ್ಮಾರ್ಟ್‌ಫೋನ್‌ಗಳ ಜಿಎಸ್‌ಟಿ ತೆರೆಗೆಯನ್ನು 12 ಪರ್ಸೆಂಟ್‌ನಿಂದ 18 ಪರ್ಸೆಂಟ್‌ಗೆ ಏರಿಕೆ ಮಾಡಿರುವುದರಿಂದ ಸಂಸ್ಥೆಯು ಐಫೋನ್‌ಗಳ ದರ ಹೆಚ್ಚಿಸಿತ್ತು. ಹಾಗೆಯೇ ಸರ್ಕಾರವು ನಿವ್ವಳ ಆಮದು ಸುಂಕವನ್ನು ಶೇಕಡಾ 2 ರಷ್ಟು ಹೆಚ್ಚಿಸಿದೆ. ಐಫೋನ್‌ಗಳ ಬೆಲೆ ಏರಿಕೆಯ ನೂತನ ಪ್ರೈಸ್‌ ಲಿಸ್ಟ್‌ ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಐಫೋನ್ 11

ಇತ್ತೀಚಿನ ಹೊಸ ಐಫೋನ್ 11 ಫೋನಿನ 64 GB ಸ್ಟೋರೇಜ್ ವೇರಿಯಂಟ್ ಬೆಲೆಯು ಈಗ 68,300 ರೂ.ಗಳು ಆಗಿದೆ. ಹಾಗೆಯೇ 128GB ವೇರಿಯಂಟ್ 73,600.ರೂ. ಆಗಿದ್ದು, ಇನ್ನು 256GB ಸ್ಟೋರೇಜ್‌ನ ಹೈ ಎಂಡ್‌ ವೇರಿಯಂಟ್‌ ಬೆಲೆಯು 84,100 ರೂಗಳಿಗೆ ಲಭ್ಯವಿದೆ. ಅದೇ ರೀತಿ ಐಫೋನ್ 11 ಪ್ರೊ 64 GB ಸ್ಟೋರೇಜ್ ವೇರಿಯಂಟ್ ಬೆಲೆಯು 1,01,200 ರೂ.ಗಳಿಂದ 1,06,600 ರೂ.ಗೆ ಏರಿಕೆ ಕಂಡಿದೆ. ಐಫೋನ್ 11 ಪ್ರೊ ಮ್ಯಾಕ್ಸ್ 64GB ವೇರಿಯಂಟ್ ಈಗ 1,17,100 ರೂ.ಪ್ರೈಸ್‌ಟ್ಯಾಗ್ ಹೊಂದಿದೆ.

ಐಫೋನ್ ಎಕ್ಸ್‌ಆರ್

ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಆಪಲ್‌ನ ಐಫೋನ್ ಎಕ್ಸ್‌ಆರ್ ಮತ್ತು ಐಫೋನ್ 7 ಸಹ ಈಗ ದುಬಾರಿಯಾಗಿವೆ. ಐಫೋನ್ ಎಕ್ಸ್‌ಆರ್ 64 ಜಿಬಿ ವೇರಿಯಂಟ್‌ ಬೆಲೆಯು 52,500ರೂ.ಗಳಾಗಿದೆ. ಹಾಗೂ ಹಾಗೆಯೇ ಐಫೋನ್ ಎಕ್ಸ್‌ಆರ್‌ 128GB ವೇರಿಯಂಟ್‌ ಬೆಲೆಯು 57,800 ರೂಗಳು ಆಗಿದೆ. ಅದೇ ರೀತಿ 32GB ಸ್ಟೋರೇಜ್ ವೇರಿಯಂಟ್‌ನ ಐಫೋನ್ 7 ಫೋನ್ 29,900ರೂ.ಗಳಿಂದ ಈಗ 31,500 ರೂ.ಗಳಿಗೆ ಏರಿಕೆ ಕಂಡಿದೆ.

ಐಫೋನ್ 12

ಹಾಗೆಯೇ ಆಪಲ್ ಇದೀಗ ಐಫೋನ್ 12 ಸರಣಿಯನ್ನು ಬಿಡುಗಡೆ ಮಾಡುವ ತರಾತುರಿಯಲ್ಲಿದೆ. ಹೊಸ ಸರಣಿಯ ಬಗ್ಗೆ ಐಫೋನ್‌ ಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಅಂದಹಾಗೆ ಇದೇ ಸೆಪ್ಟಂಬರ್ ತಿಂಗಳಿನಲ್ಲಿ ಐಫೋನ್ 12 ಸರಣಿ ಬಿಡುಗಡೆ ಆಗುವ ಸಾಧ್ಯತೆಗಳು ಇದ್ದವು ಆದರೆ ಪ್ರಸ್ತುತ ಕೊರೊನಾ ವೈರಸ್‌ ಅಟ್ಟಹಾಸದ ವಿರುದ್ಧ ದೇಶವೇ ಹೋರಾಟ ಮಾಡುತ್ತಿದೆ. ಹೀಗಾಗಿ ಈ ಸರಣಿ ಬಿಡುಗಡೆ ಮುಂದೂಡುವುದು ಬಹುತೇಕ ಖಚಿತವಾಗಿದೆ.

Best Mobiles in India

English summary
Apple had increased the price of iPhone models in India last month. Now, the company is announcing another price hike due to GST rate increase.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X