'ಐಫೋನ್ 11' ಬಿಡುಗಡೆಯ ದಿನಾಂಕ ಫಿಕ್ಸ್!.ಏನು ವಿಶೇಷತೆ ಇರಲಿದೆ!

|

ಇಡೀ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯೇ ಎದುರುನೋಡುತ್ತಿರುವ ಬಹುನಿರೀಕ್ಷಿತ 'ಐಫೋನ್ 11' ಸರಣಿ ಇದೇ ಸೆಪ್ಟಂಬರ್ 10ರಂದು ಅಧಿಕೃತವಾಗಿ ಲಾಂಚ್ ಆಗುವುದು ಖಚಿತವಾಗಿದೆ. ಆಪಲ್‌ನ ಹೊಸ ಐಫೋನ್ ಸರಣಿಯು 'ಐಫೋನ್ 11 ಪ್ರೊ, 'ಐಫೋನ್ 11 ಆರ್' ಮತ್ತು 'ಐಫೋನ್ 11 ಪ್ರೊ ಮ್ಯಾಕ್ಸ್' ಒಟ್ಟು ಮಾದರಿಗಳನ್ನು ಒಳಗೊಂಡಿರಲಿದ್ದು, 'ಐಓಎಸ್‌ 13' ಓಎಸ್‌ ಈ ಸರಣಿಯ ಪ್ರಮುಖ ಹೈಲೈಟ್‌ ಸಂಗತಿಯಾಗಿದೆ.

'ಐಫೋನ್ 11' ಬಿಡುಗಡೆಯ ದಿನಾಂಕ ಫಿಕ್ಸ್!.ಏನು ವಿಶೇಷತೆ ಇರಲಿದೆ!

ಹೌದು, ಇದೇ ಸೆಪ್ಟಂಬರ್ 10ರಂದು ಕ್ಯಾಲಿಫೋರ್ನಿಯಾದಲ್ಲಿ ಕಂಪನಿಯು ಅಧಿಕೃತವಾಗಿ 'ಐಫೋನ್ 11' ಸರಣಿಯನ್ನು ಲಾಂಚ್ ಮಾಡಲಿದೆ. ಹಾಗೆಯೇ ಸೆಪ್ಟಂಬರ್ 13 ರಂದು ಗ್ರಾಹಕರು ಐಫೋನ್ 11 ಫೋನ್‌ಗಳನ್ನು ಪ್ರಿ ಆರ್ಡರ್‌ ಮಾಡಲು ಅವಕಾಶ ಲಭ್ಯವಾಗಲಿದ್ದು, ಇದೇ ಸೆಪ್ಟೆಂಬರ 20ರಂದು ಐಫೋನ್ 11 ಸರಣಿಯ ಫೋನ್‌ಗಳ ಸೇಲ್ ಆರಂಭವಾಗಲಿದೆ. ಹಾಗಾದರೇ ಐಫೋನ್‌ 11 ಸರಣಿಯಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ನಿರೀಕ್ಷಿಸಲಾಗಿದೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಈ ತಿಂಗಳು ಫೋನ್ ಖರೀದಿಸುವ ಪ್ಲ್ಯಾನ್‌ ಇದೆಯಾ?.ಹಾಗಿದ್ರೆ ಸ್ವಲ್ಪ ಕಾಯಿರಿ!ಓದಿರಿ : ಈ ತಿಂಗಳು ಫೋನ್ ಖರೀದಿಸುವ ಪ್ಲ್ಯಾನ್‌ ಇದೆಯಾ?.ಹಾಗಿದ್ರೆ ಸ್ವಲ್ಪ ಕಾಯಿರಿ!

ಒಂದೇ ಬಾರಿ ಲೊಕೇಶನ್

ಒಂದೇ ಬಾರಿ ಲೊಕೇಶನ್

ಹಲವಾರು ಆಪ್‌ಗಳು ಲೊಕೇಶನ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಅದಕ್ಕಾಗಿ ಆಪ್‌ಗಳು ಪ್ರತಿ ಭಾರಿ ಲೊಕೇಶನ್ ಆನ್‌ ಮಾಡಲು ಬೇಡುತ್ತದೆ. ಆದರೆ ಈ ಹೊಸ ಫೀಚರ್ ನಿಂದ ಕೇವಲ ಒಂದು ಭಾರಿ ಲೊಕೇಶನ್ ಆನ್‌ ಮಾಡಿದರೇ ಸಾಕು. ಪದೇ ಪದೇ ಲೊಕೇಶನ್ ಆಯ್ಕೆ ಕುರಿತು ಯಾವುದೇ ಆಯ್ಕೆ ಮಾಡುವ ಅಗತ್ಯ ಇರುವುದಿಲ್ಲ ಎನ್ನಲಾಗಿದೆ.

ಆಪಲ್‌ ಖಾತೆ

ಆಪಲ್‌ ಖಾತೆ

ಪ್ರಸ್ತುತ ಹಲವಾರು ಸಾಮಾಜಿಕ ಆಪ್ಸ್‌ಗಳು ಜನಪ್ರಿಯವಾಗಿದ್ದು, ಅವುಗಳಲ್ಲಿ ಖಾತೆ ಹೊಂದಲು ಬಳಕೆದಾರರು ಇ ಮೇಲ್‌ ಐಡಿ ಮೂಲಕ ಲಾಗ್‌ ಇನ್‌ ಆಗಬೇಕಿದೆ. ಬಳಕೆದಾರರು ಆಪಲ್‌ ಐಡಿ ಬಳಸಿಯೇ ಲಾಗ್‌ ಇನ್‌ ಆಗುವ ಅವಕಾಶ ಬಳಕೆದಾರರಿಗೆ ಹೊಸ ಓಎಸ್‌ ವರ್ಷನ್‌ನಲ್ಲಿ ಲಭ್ಯವಾಗಲಿದೆ. ಇದು ಬಳಕೆದಾರರಿಗೆ ಹೆಚ್ಚಿನ ಪ್ರೈವೆಸಿ ಒದಗಿಸಲಿದೆ.

ಕ್ವಿಕ್‌ ಟೈಪಿಂಗ್

ಕ್ವಿಕ್‌ ಟೈಪಿಂಗ್

ಆಪಲ್‌ ಡೀಫಾಲ್ಟ್‌ ಕೀಬೋರ್ಡ್‌ ಸ್ವಿಪ್‌ ಗೆಸ್ಚರ್‌ ಸೌಲಭ್ಯವನ್ನು ಪಡೆದಿದ್ದು, ಇದು ಬಳಕೆದಾರರಿಗೆ ಟೈಪಿಂಗ್‌ಗೆ ಅನುಕೂಲವಾಗಲಿದೆ. ಗೂಗಲ್‌ನ ಜಿಬೋರ್ಡ್ ಮತ್ತು ಇತರೆ ಟೈಪಿಂಗ್ ಬೋರ್ಡ್‌ ಮಾದರಿಯಂತೆ ಇದು ಸಹ ಇರಲಿದೆ. ಬಳಕೆದಾರರು ಒಂದು ಕೀವರ್ಡ್‌ನಿಂದ ಇನ್ನೊಂದು ಕೀವರ್ಡ್‌ಗೆ ಸ್ವಿಪ್‌ ಮಾಡುವ ಮೂಲಕ ಟೈಪಿಂಗ್ ಮಾಡಬಹುದಾಗಿದೆ.

ಡಾರ್ಕ್‌ಮೋಡ್‌

ಡಾರ್ಕ್‌ಮೋಡ್‌

ಬಹುನಿರೀಕ್ಷಿತ ಡಾರ್ಕ್‌ಮೋಡ್‌ ಫೀಚರ್‌ ಆಪಲ್‌ನ ಹೊಸ ಐಓಎಸ್‌ನಲ್ಲಿ ಸೇರಿಕೊಳ್ಳಲಿದೆ. ಇದೊಂದು ಐಚ್ಛಿಕ ಆಯ್ಕೆ ಆಗಿರಲಿದ್ದು, ಬಳಕೆದಾರರು ಬೇಕಾದಾಗ ಡಾರ್ಕ್‌ ಮೋಡ್‌ಬೆ ಬದಲಾಯಿಸಿಕೊಳ್ಳಬಹುದು. ಮೆಸೆಜ್‌, ಫೋಟೋ, ಗ್ಯಾಲರಿ, ಕ್ಯಾಲೆಂಡರ ಆಪ್ಸ್‌ಗಳಿಗೂ ಡಾರ್ಕ್‌ಮೋಡ್‌ ಆಯ್ಕೆ ಬೆಂಬಲ ನೀಡಲಿದೆ.

ಫೋಟೋ ಟ್ಯಾಬ್‌

ಫೋಟೋ ಟ್ಯಾಬ್‌

ಆಪಲ್‌ ಫೋಟೋ ಗ್ಯಾಲರಿ ಹೊಸ ರೀತಿ ವ್ಯವಸ್ಥಿತವಾಗಿ ಕಾಣಿಸಲಿದ್ದು, ದಿನ, ತಿಂಗಳು ಮತ್ತು ವರ್ಷದ ಆಧಾರದ ಮೇಲೆ ಜೋಡಣೆಯಾಗಿರುತ್ತದೆ. ಬಳಕೆದಾರರು ಸರ್ಚ್‌ ಮೂಲಕ ದಿನಾಂಕ ಫೋಟೋಗಳನ್ನು ಹುಡುಕಬಹುದು. ಹಳೆಯ ಫೋಟೋಗಳನ್ನು ಸರಳವಾಗಿ ತೆಗೆಯಬಹುದಾಗಿದೆ.

ಓದಿರಿ : ಜಿಯೋ ಫೈಬರ್‌ ಎಂಟ್ರಿಗೆ ವಿಘ್ನವಾದ ಟಾಟಾಸ್ಕೈ ಬ್ರಾಡ್‌ಬ್ಯಾಂಡ್‌ನ ಹೊಸ ಆಫರ್!ಓದಿರಿ : ಜಿಯೋ ಫೈಬರ್‌ ಎಂಟ್ರಿಗೆ ವಿಘ್ನವಾದ ಟಾಟಾಸ್ಕೈ ಬ್ರಾಡ್‌ಬ್ಯಾಂಡ್‌ನ ಹೊಸ ಆಫರ್!

Best Mobiles in India

English summary
Apple will launch the 2019 iPhone family on September 10. pre-order starts on september 13. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X