'ಐಫೋನ್ 11 ಪ್ರೊ' ಖರೀದಿಸಬೇಕೆಂದರೆ ಎರಡು ಬಾರಿ ಯೋಚಿಸುವಂತಾಗಿದೆ!

|

ಬಹುತೇಕ ಸ್ಮಾರ್ಟ್‌ಫೋನ್ ಪ್ರಿಯರಿಗೆ ಜನಪ್ರಿಯ ಆಪಲ್ ಸಂಸ್ಥೆಯ ಐಫೋನ್ ಅಂದ್ರೆ ಹಾಟ್ ಫೇವರೇಟ್. ಅದರಲ್ಲಿಯೂ ಇತ್ತೀಚಿನ ಹೊಸ ಐಫೋನ್ 11 ಸರಣಿ ಫೋನ್‌ಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸಿದ್ದು, ಖರೀದಿಸಲು ಇಷ್ಟಪಡುತ್ತಾರೆ. ಸದ್ಯ ಐಫೋನ್ 11 ಪ್ರೊ, ಐಫೋನ್ 11 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 8 ಫೋನ್ ಖರೀದಿಸಬೇಕೆಂದರೆ ಎರಡೆರಡು ಬಾರಿ ಯೋಚಿಸುವಂತಾಗಿದೆ. ಯಾಕೆ ಅಂತೀರಾ?

ಐಫೋನ್ 11 ಪ್ರೊ

ಹೌದು, ಆಪಲ್ ಸಂಸ್ಥೆಯ ಐಫೋನ್ 11 ಪ್ರೊ, ಐಫೋನ್ 11 ಪ್ರೊ ಮ್ಯಾಕ್ಸ್‌ ಮತ್ತು ಐಫೋನ್ 8 ಫೋನ್‌ಗಳು ಭಾರತದಲ್ಲಿ ಇದೀಗ ಬೆಲೆ ಏರಿಕೆ ಆಗಿವೆ. ಬಾರಿಯ ಕೇಂದ್ರ ಬಜೆಟ್‌2020ನಲ್ಲಿ ಮೂಲ ಕಸ್ಟಮ್ ತೆರಿಗೆ ಏರಿಕೆಯ (basic customs duty-BCD) ಪರಿಣಾಮದಿಂದ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆದ್ರೆ ಹೆಚ್ಚು ಮಾರಾಟ ಕಾಣುತ್ತಿರುವ ಐಫೋನ್ 11 ಫೋನ್‌ ಬೆಲೆಯಲ್ಲಿ ಯಾವುದೆ ಏರಿಕೆ ಆಗಿಲ್ಲ.

ಐಫೋನ್‌ 11

ಬೆಲೆ ಏರಿಕೆಯಿಂದಾಗಿ ಐಫೋನ್‌ 11 ಸರಣಿಯ ಟಾಪ್‌ ವೇರಿಯಂಟ್ ಐಫೋನ್ 11 ಪ್ರೊ ಮ್ಯಾಕ್ಸ್‌ 64GB ವೇರಿಯಂಟ್ ಫೋನ್ ಈಗ 1,11,200ರೂ ಪ್ರೈಸ್‌ಟ್ಯಾಗ್ ಅನ್ನು ಹೊಂದಿದೆ. ಹಾಗೆಯೇ 256GB ವೇರಿಯಂಟ್ 1,25,200ರೂ, ಬೆಲೆಯನ್ನು ಪಡೆದಿದ್ದು, ಇನ್ನು 512GB ವೇರಿಯಂಟ್ ಫೋನ್ 1,43,200ರೂ. ಬೆಲೆಯನ್ನು ಹೊಂದಿದೆ.

ವೇರಿಯಂಟ್‌

ಅದೇ ರೀತಿ 64GB ಸ್ಟೋರೇಜ್ ವೇರಿಯಂಟ್‌ನ ಐಫೋನ್ 11 ಪ್ರೊ 1,01,200ರೂ. ಬೆಲೆ ಪಡೆದಿದ್ದು, ಲಾಂಚ್ ಆದಾಗ ಈ ಫೋನ್ ಬೆಲೆ 99,900ರೂ ಆಗಿತ್ತು. 256GB ಸ್ಟೋರೇಜ್ ವೇರಿಯಂಟ್ ಬೆಲೆಯು 1,15,200ರೂ.ಗಳಾಗಿದ್ದು, ಹೈ ಎಂಡ್ 512GB ಸ್ಟೋರೇಜ್ ವೇರಿಯಂಟ್ ಬೆಲೆಯು 1,33,200ರೂ. ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ.

ಐಫೋನ್ 8 ಪ್ಲಸ್‌

ಜನಪ್ರಿಯ ಐಫೋನ್ 8 ಪ್ಲಸ್‌ ಮತ್ತು ಐಫೋನ್ 8 ಫೋನ್‌ಗಳ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. 64GB ಸ್ಟೋರೇಜ್ ವೇರಿಯಂಟ್‌ನ ಐಫೋನ್ 8 ಪ್ಲಸ್‌ ಸದ್ಯ 50,600ರೂ.ಬೆಲೆಯನ್ನು ಹೊಂದಿದೆ. ಇನ್ನು 128GB ಆಂತರಿಕ ಸ್ಟೋರೇಜ್ ವೇರಿಯಂಟ್ ಬೆಲೆಯು 55,600ರೂ. ದರದಲ್ಲಿ ಲಭ್ಯವಾಗಲಿದೆ. ಅದೇ ರೀತಿ ಐಫೋನ್ 8 64GB ಸ್ಟೋರೇಜ್ ಫೋನ್ ಬೆಲೆಯು 40,500ರೂ.ಗಳು ಆಗಿದ್ದು, ಹೈ ಎಂಡ್ 128GB ಸ್ಟೋರೇಜ್ ವೇರಿಯಂಟ್‌ ಫೋನ್ ಬೆಲೆಯು. 45,500ರೂ. ಆಗಿದೆ.

Best Mobiles in India

English summary
Apple iPhone 11 Pro Max and iPhone 11 Pro received price hike in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X