Just In
Don't Miss
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಾಳೆ ಬಿಡುಗಡೆ ಆಗಲಿದೆ ಬಹುನಿರೀಕ್ಷಿತ ಐಫೋನ್ 12 ಸರಣಿ!
ಆಪಲ್ ಸಂಸ್ಥೆಯ ಐಫೋನ್ 11 ಸರಣಿ ಈಗಾಗಲೇ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟುಹಾಕಿ ಸದ್ದು ಮಾಡಿದೆ. ಸಂಸ್ಥೆಯ ಬಹುನಿರೀಕ್ಷಿತ ಐಫೋನ್ 12 ಸರಣಿಯ ಬಿಡುಗಡೆ ದಿನಾಂಕ ಈಗ ಫಿಕ್ಸ್ ಆಗಿದೆ. ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಸಂಸ್ಥೆಯು ತನ್ನ ನೂತನ ಸರಣಿಯನ್ನು ಅನಾವರಣ ಮಾಡುತ್ತಲಿತ್ತು. ಆದ್ರೆ ಈ ಬಾರಿ ಕೊರೊನಾದಿಂದಾಗಿ ಐಫೋನ್ 12 ಸರಣಿ ಬಿಡುಗಡೆ ವಿಳಂಬ ಆಗಿದ್ದು, ಈಗ ಡೇಟ್ ನಿಗದಿಯಾಗಿದೆ.

ಹೌದು, ಆಪಲ್ ಸಂಸ್ಥೆಯು ತನ್ನ ಬಹುನಿರೀಕ್ಷಿತ ಐಫೋನ್ 12 ಸರಣಿ ಯನ್ನು ನಾಳೆ (ಅಕ್ಟೋಬರ್ 13) ಭಾರತೀಯ ಕಾಲಮಾನ ರಾತ್ರಿ 10:30ಗಂಟೆಗೆ ಬಿಡುಗಡೆ ಮಾಡುವುದು ಖಚಿತವಾಗಿದೆ. ಇನ್ನು ಈ ಐಫೋನ್ 12 ಸರಣಿಯು ಮೂರು ವೇರಿಯಂಟ್‌ಗಳನ್ನು ಹೊಂದಿರಲಿದೆ. ಅವುಗಳು ಕ್ರಮವಾಗಿ ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಹೆಸರಿನಲ್ಲಿ ಲಾಂಚ್ ಆಗುವ ಸಾಧ್ಯತೆಗಳಿವೆ ಹಾಗೆಯೇ ಐಫೋನ್ 12 ಮಿನಿ ಫೋನ್ ಸಹ ಲಾಂಚ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗ್ತಿದೆ. ಹಾಗಾದರೆ ಯಾವೆಲ್ಲಾ ಫೀಚರ್ಸ್‌ಗಳಿರಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 12 ಪ್ರೊ
ಐಫೋನ್ 12, ಐಫೋನ್ 12 ಪ್ರೊ ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಈ ಮೂರು ಐಫೋನ್‌ಗಳಲ್ಲಿ ಒಂದು ನಾಚ್ ಲೆಸ್ ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಗೇಮಿಂಗ್, ಫೋಟೊ ಪ್ರೊಸೆಸಿಂಗ್, ವಿಡಿಯೊ ರೆಂಡರಿಂಗ್ ಕೆಲಸಗಳ ವೇಗ ಹೆಚ್ಚಿಸುವ ಸಲುವಾಗಿ ಆಪಲ್ ಐಫೋನ್ 12 ಸರಣಿಯಲ್ಲಿ ಅಧಿಕ RAM ಸಾಮರ್ಥ್ಯ ಒದಗಿಸುವ ಸಾಧ್ಯತೆಗಳಿದೆ. ಹೀಗಾಗಿ ಹೊಸ ಸರಣಿಯು 6GB RAM ಯಿಂದ 12GB RAM ಸಾಮರ್ಥ್ಯದವರೆಗೂ ವೇರಿಯಂಟ್ ಆಯ್ಕೆಗಳನ್ನು ಹೊಂದಿರಲಿವೆ ಎನ್ನಲಾಗಿದೆ.

ಐಫೋನ್ 12
ಇನ್ನು ಐಫೋನ್ 12 ಮತ್ತು ಐಫೋನ್ 12 ಪ್ರೊ ಮ್ಯಾಕ್ಸ್ ಫೋನ್‌ಗಳು 6.7 ಇಂಚಿನ ಡಿಸ್‌ಪ್ಲೇ ಹೊಂದಿರಲಿವೆ. ಹಾಗೆಯೇ ಐಫೋನ್ 12 ಪ್ರೊ 6.1 ಇಂಚಿನ ಗಾತ್ರದಲ್ಲಿರಲಿದೆ ಎಂದು UBS ಅನಾಲಿಟಿಕ್ಸ್ ತಂಡ ತಿಳಿಸಿದೆ. ಹಾಗೆಯೇ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಗುಣಮಮಟ್ಟ ಉನ್ನತವಾಗಿರಲಿದ್ದು, ಫೋನ್ ಡಿಸೈನ್ ಆಕರ್ಷಕವಾಗಿರುವ ಜೊತೆಗೆ ಆಯತಾಕಾರದ ಡಿಸ್‌ಪ್ಲೇ ಇರಲಿದ್ದು, ಚೌಕಾಕಾರದ ಕರ್ವ್ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

ಐಫೋನ್ ಅಗತ್ಯ ಫೀಚರ್ಸ್
ಉಳಿದಂತೆ ಐಫೋನ್ 12 ಫೋನ್ ಮೊದಲ ಬಾರಿ ಪಾಪ್‌ಅಪ್ ಸೆಲ್ಫಿ ಕ್ಯಾಮೆರಾ ಪರಿಚಯಿಸುವ ಸಾಧ್ಯತೆಗಳ ಅಧಿಕ ಎನ್ನಲಾಗಿದೆ. ಸಿಮ್ ಟ್ರೇ, ವ್ಯಾಲ್ಯೂಮ್ ಬಟನ್, ಪವರ್ ಬಟನ್‌ಗಳು ಫೋನ್ ಫ್ರೇಮ್‌ನ ಬಾಹ್ಯವಾಗಿ ರಚನೆ ಪಡೆದಿವೆ. ಹಾಗೆಯೇ ಐಫೋನ್ ಅಗತ್ಯ ಫೀಚರ್ಸ್‌ಗಳು ಸಹ ಇರಲಿವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190