Home
ಸುದ್ದಿಜಾಲ

iPhone 14 Price Cut : ಐಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ; ಪ್ರೇಮಿಗಳ ದಿನಕ್ಕೆ ಇದು ಬೆಸ್ಟ್ ಆಫರ್‌!

ಟೆಕ್ ದೈತ್ಯ ಆಪಲ್‌ ಸಂಸ್ಥೆಯ ಐಫೋನ್‌ಗಳು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿವೆ. ಸಾಮಾನ್ಯವಾಗಿ ಅನೇಕ ಮೊಬೈಲ್‌ ಪ್ರಿಯರು ಐಫೋನ್‌ ಖರೀದಿಸುವ ಇಚ್ಛೆ ಹೊಂದಿರುತ್ತಾರೆ. ಹೀಗೆ ನೀವೇನಾದರೂ ನೂತನ ಮಾದರಿಯ ಐಫೋನ್‌ ಖರೀದಿಸುವ ಪ್ಲ್ಯಾನ್ ಹೊಂದಿದ್ದರೆ, ತಡ ಮಾಡದೇ ಖರೀದಿ ಮಾಡಬಹುದು. ಏಕೆಂದರೇ ಇಮ್ಯಾಜಿನ್‌ ಸ್ಟೋರ್ ಪ್ರೇಮಿಗಳ ದಿನದ ಪ್ರಯುಕ್ತ (Valentine's Day offer) ಜನಪ್ರಿಯ ಐಫೋನ್‌ 14 ಮತ್ತು ಐಫೋನ್‌ 14 ಪ್ಲಸ್‌ (iPhone 14 and iPhone 14 Plus) ಭರ್ಜರಿ ರಿಯಾಯಿತಿ ತಿಳಿಸಿದೆ.

ಐಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ; ಪ್ರೇಮಿಗಳ ದಿನಕ್ಕೆ ಬೆಸ್ಟ್ ಆಫರ್‌!

ಹೌದು, ಆಪಲ್‌ ಉತ್ಪನ್ನಗಳ ಪ್ರಮುಖ ಮಾರಾಟಗಾರ ಎನಿಸಿರುವ ಇಮ್ಯಾಜಿನ್‌ (Imagine) ಸ್ಟೋರ್‌ ಪ್ರೇಮಿಗಳ ದಿನದ ಅಂಗವಾಗಿ ಐಫೋನ್‌ 14 ಫೋನಿಗೆ 6,000ರೂ ಮತ್ತು ಐಫೋನ್‌ 14 ಪ್ಲಸ್‌ ಫೋನ್‌ಗೆ 7,000ರೂ. ಗಳ ರಿಯಾಯಿತಿ ತಿಳಿಸಿದೆ. ಇದರೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್‌ ಮೂಲಕ ಖರೀದಿಸಿದರೆ, 4,000ರೂ. ಕ್ಯಾಶ್‌ಬ್ಯಾಕ್‌ ದೊರೆಯುತ್ತದೆ. ಹಾಗಾದರೆ ಈ ಐಫೋನ್‌ 14 ಸರಣಿಯ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ; ಪ್ರೇಮಿಗಳ ದಿನಕ್ಕೆ ಬೆಸ್ಟ್ ಆಫರ್‌!

ಐಫೋನ್ 14 ಫೋನಿನ ಪ್ರಮುಖ ಫೀಚರ್ಸ್‌

ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

ಐಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ; ಪ್ರೇಮಿಗಳ ದಿನಕ್ಕೆ ಬೆಸ್ಟ್ ಆಫರ್‌!

ಐಫೋನ್ 14 ಪ್ಲಸ್‌ ಫೋನಿನ ಪ್ರಮುಖ ಫೀಚರ್ಸ್‌

ಐಫೋನ್ 14 ಪ್ಲಸ್‌ ಫೋನ್ 6.7 ಇಂಚಿನ ಡಿಸ್‌ಪ್ಲೇ ಸಾಮರ್ಥ್ಯ ಪಡೆದಿದ್ದು, OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಗೆ ಹೋಲಿಸಿದರೆ, ಈ ಫೋನ್ ದೀರ್ಘ ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದೆ. ಇದು ಐಫೋನ್‌ 14 ಪ್ಲಸ್ ಫೋನ್ ಸಹ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಸಪೋರ್ಟ್‌ ಪಡೆದಿದೆ.

ಐಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ; ಪ್ರೇಮಿಗಳ ದಿನಕ್ಕೆ ಬೆಸ್ಟ್ ಆಫರ್‌!

ಐಫೋನ್ 14 ಪ್ರೊ ಫೋನಿನ ಪ್ರಮುಖ ಫೀಚರ್ಸ್‌

ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದ್ದು, ಮೊದಲ ಬಾರಿಗೆ ಆಲ್ವೇಸ್‌ ಆನ್ ಡಿಸ್‌ಪ್ಲೇ ನೀಡುತ್ತದೆ. ಅದೇ ರೀತಿ ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ 6.7 ಇಂಚಿನ ರೆಟಿನಾ XDR ಡಿಸ್‌ಪ್ಲೇ ಹೊಂದಿದ್ದು, ಇದು ಸಹ ಆಲ್ವೇಸ್‌ ಆನ್ ಕಾರ್ಯವನ್ನು ಹೊಂದಿದೆ. ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯು 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾವನ್ನು 65 ಪ್ರತಿಶತ ದೊಡ್ಡ ಸಂವೇದಕವನ್ನು ಹೊಂದಿದೆ. 48 ಮೆಗಾ ಪಿಕ್ಸೆಲ್ ಅಗಲದ ಕ್ಯಾಮೆರಾ 2x ಟೆಲಿಫೋಟೋ ವೀಕ್ಷಣೆಯನ್ನು ಸಹ ನೀಡುತ್ತದೆ. ಐಫೋನ್ 14 ಪ್ರೊ ಆಕ್ಷನ್ ಮೋಡ್ ಅನ್ನು ನೀಡುತ್ತದೆ, ಇದು ಆಟೋಫೋಕಸ್, ಕ್ರ್ಯಾಶ್ ಡಿಟೆಕ್ಷನ್ ಮತ್ತು Emergency SOS via satellite ಸಂಪರ್ಕವನ್ನು ಬಳಸಿಕೊಂಡು ಸುಧಾರಿತ ಮುಂಭಾಗದ ಕ್ಯಾಮೆರಾ.

Best Mobiles in India

English summary
Apple authorised sellers, Imagine is offering best deals on iPhone 14 and 14 Plus in India. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+