Home
ಸುದ್ದಿಜಾಲ

iphone: 89,900 ರೂ.ಗಳ ಈ ಐಫೋನ್‌ 42 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ!

ಐಫೋನ್‌ಗಳೆಂದರೆ (iphone) ಭಾರತೀಯರಿಗೆ ವಿಶೇಷವಾದ ಪ್ರೀತಿ. ಎಷ್ಟೇ ಬೆಲೆ ಇದ್ದರೂ ಅದನ್ನು ಲೆಕ್ಕಿಸದೆ ಐಫೋನ್‌ ಖರೀದಿ ಮಾಡುವ ವರ್ಗ ಭಾರತದಲ್ಲಿದೆ. ಈ ನಡುವೆ ಇನ್ನೂ ಕೆಲವು ಒಂದಷ್ಟು ಜನರು ಡಿಸ್ಕೌಂಟ್‌ನಲ್ಲಿ ಐಫೋನ್‌ ಖರೀದಿ ಮಾಡಲು ಮುಂದಾಗುತ್ತಾರೆ. ಅಂಥವರು ಇದೀಗ ಆಪಲ್‌ ಐಫೋನ್ 14 ಪ್ಲಸ್‌ ಫೋನ್‌ ಖರೀದಿ ಮಾಡಬಹುದಾಗಿದೆ.

ಹೌದು, ಐಫೋನ್‌ಗಳು ಕಡಿಮೆ ದರದಲ್ಲಿ ಏನು ಲಭ್ಯ ಇಲ್ಲ ಎಂಬುದು ನಿಮ್ಮೆಲ್ಲರಿಗೂ ತಿಳಿದ ವಿಚಾರ. ಆದರೆ, ಕೆಲವು ಇ-ಕಾಮರ್ಸ್‌ ಸೈಟ್‌ಗಳು ವಿಶೇಷ ಸೇಲ್‌ ಮೂಲಕ ಈ ಫೋನ್‌ಗಳಿಗೆ ಆಗಾಗ್ಗೆ ಆಫರ್ ಘೋಷಣೆ ಮಾಡುತ್ತಿದ್ದು, ಅದರಂತೆ ಇದೀಗ ಆಪಲ್‌ ಐಫೋನ್ 14 ಪ್ಲಸ್‌ ಫೋನ್‌ (Apple iPhone 14 Plus Phone) ಅನ್ನು 65 ಸಾವಿರ ರೂ.ಗಳ ಬೆಲೆಗಿಂತಲೂ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಐಫೋನ್‌ 15 ಲಾಂಚ್‌ ಆಗುವ ಮುನ್ನ 89,900 ರೂ.ಗಳ ಸಾಮಾನ್ಯ ಬೆಲೆ ಹೊಂದಿತ್ತು. ಹಾಗಿದ್ರೆ, ಇಷ್ಟು ಕಡಿಮೆ ಬೆಲೆಗೆ ಖರೀದಿ ಮಾಡಲು ಹೇಗೆ ಸಾಧ್ಯ?, ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

iphone: 89,900 ರೂ.ಗಳ ಈ ಐಫೋನ್‌ 42 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ!

ಆಪಲ್‌ ಐಫೋನ್ 14 ಪ್ಲಸ್‌: ನೀವೇನಾದರೂ ಐಫೋನ್‌ ಖರೀದಿ ಮಾಡಲು ಮುಂದಾಗಿದ್ದರೆ ಈ ಸಮಯ ಉತ್ತಮವಾಗಿದೆ. ಅದರಲ್ಲೂ ಐಫೋನ್ 15 ಸರಣಿಯನ್ನು ಅನಾವರಣ ಮಾಡಿದ ಬಳಿಕ ಇದರ ಹಿಂದಿನ ಸರಣಿಯ ಫೋನ್‌ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಅದರಂತೆ ಐಫೋನ್ 14 ಪ್ಲಸ್‌ ಅನ್ನು 65,000 ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲು ಅನುವು ಮಾಡಿಕೊಡಲಾಗಿದೆ.

ಮೊದಲೇ ತಿಳಿಸಿದಂತೆ 89,900 ರೂ.ಗಳ ಸಾಮಾನ್ಯ ಬೆಲೆಯ ಫೋನ್‌ ಐಫೋನ್‌ 15 ನಂತರ 79,900 ರೂ.ಗಳ ಸಾಮಾನ್ಯ ಬೆಲೆಹೊಂದಿದ್ದು, ಫ್ಲಿಪ್‌ಕಾರ್ಟ್‌ ಇದಕ್ಕೆ 17% ರಿಯಾಯಿತಿ ನೀಡುವ ಮೂಲಕ 65,999 ರೂ.ಗಳಿಗೆ ಮಾರಾಟ ಮಾಡುತ್ತಿದೆ. ಅದಾಗ್ಯೂ ನೀವು ಹೆಚ್ಚುವರಿಯಾಗಿ ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ವ್ಯವಹಾರ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಬಹುದಾಗಿದೆ.

iphone: 89,900 ರೂ.ಗಳ ಈ ಐಫೋನ್‌ 42 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ!

ಫ್ಲಿಪ್‌ಕಾರ್ಟ್‌ನಲ್ಲಿ 128GB ಸ್ಟೋರೇಜ್‌ನ ಈ ಫೋನ್‌ ಅನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್‌ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ಶೇಕಡಾ 10 ರಷ್ಟು ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ನಿಮ್ಮ ಬಳಿ ಹಳೆಯ ಐಫೋನ್ 13 ಇದ್ದರೆ ಇನ್ನೂ ಉತ್ತಮ. ಯಾಕೆಂದರೆ ಫ್ಲಿಪ್‌ಕಾರ್ಟ್ 22 ಸಾವಿರ ರೂ.ಗಳ ವರೆಗಿನ ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ಈ ಮೂಲಕ ಐಫೋನ್ 14 ಪ್ಲಸ್ ಬೆಲೆ 42 ಸಾವಿರಕ್ಕೆ ಇದರ ಬೆಲೆ ಇಳಿಯಲಿದೆ.

ಐಫೋನ್ 14 ಪ್ಲಸ್ ಫೀಚರ್ಸ್‌ ಏನು?: ಈ ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದ್ದು ಈ ದೊಡ್ಡ ಡಿಸ್‌ಪ್ಲೇ ಒಟ್ಟಾರೆ ದೃಶ್ಯ ಅನುಭವವನ್ನು ಹೆಚ್ಚಿಸುತ್ತದೆ. ಮಲ್ಟಿಮೀಡಿಯಾ ಬಳಕೆ, ಗೇಮಿಂಗ್ ಮತ್ತು ಇತರೆ ಕಾರ್ಯಗಳಲ್ಲಿ ಅತ್ಯುತ್ತಮ ಅನಭವ ಸಿಗಲಿದೆ. ಇದರೊಂದಿಗೆ ಈ ಫೋನ್ ಸುಧಾರಿತ A16 ಬಯೋನಿಕ್ ಚಿಪ್‌ನ ಕಾರ್ಯಕ್ಷಮತೆ ಹೊಂದಿದೆ. ಈ ಮೂಲಕ ಐಫೋನ್ 13 ನ A15 ಬಯೋನಿಕ್ ಚಿಪ್‌ನ ಸಾಮರ್ಥ್ಯಗಳನ್ನು ಮೀರಿಸಿದೆ. ಅಂದರೆ ಗಮನಾರ್ಹ 40 ಪ್ರತಿಶತ ಹೆಚ್ಚಳವನ್ನು ಈ ಮೂಲಕ ಕಾಣಬಹುದಾಗಿದೆ.

ಇದರೊಂದಿಗೆ ಸುಧಾರಿತ ಕ್ಯಾಮೆರಾ ರಚನೆ ಪಡೆದಿದೆ. ಅಂದರೆ 12 ಮೆಗಾಪಿಕ್ಸೆಲ್ ಪ್ರಾಥಮಿಕ OIS ಸೆನ್ಸರ್‌ ಈ ಫೋನ್‌ನಲ್ಲಿದ್ದು, ಈ ಸೆನ್ಸರ್‌ ಹೆಚ್ಚು ಬೆಳಕನ್ನು ಸೆರೆಹಿಡಿಯುವಲ್ಲಿ ಉತ್ಕೃಷ್ಟವಾಗಿದೆ. ಇದು ಉತ್ತಮವಾದ ಫೋಟೋ ಮತ್ತು ವಿಡಿಯೋ ಗುಣಮಟ್ಟವನ್ನು ನೀಡುತ್ತದೆ. ಇದರೊಂದಿಗೆ ಸಿನೆಮ್ಯಾಟಿಕ್ ಮೋಡ್‌ನ ಸೇರ್ಪಡೆಯು ವೃತ್ತಿಪರ ಕ್ಯಾಮೆರಾಗಳ ಸಾಮರ್ಥ್ಯದಂತೆಯೇ ಕೆಲಸ ಮಾಡುತ್ತದೆ.

iphone: 89,900 ರೂ.ಗಳ ಈ ಐಫೋನ್‌ 42 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಲಭ್ಯ!

ಉಳಿದಂತೆ ಈ ಫೋನ್ ವಿಸ್ತೃತ ಬ್ಯಾಟರಿ ಅವಧಿಯನ್ನು ಹೊಂದಿದೆ. ಅದರಲ್ಲೂ ಈ ಫೋನ್‌ನಲ್ಲಿ ಇರುವ A16 ಬಯೋನಿಕ್ ಚಿಪ್‌ನ ದಕ್ಷತೆ, OLED ಡಿಸ್‌ಪ್ಲೇ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚುಗೆ ಮಾಡುತ್ತವೆ. ಅದರಂತೆ ಈ ಫೋನ್ 4,323mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ಹಳೆಯ ಆವೃತ್ತಿಫೋನ್‌ಗಳಿಗಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಇದರಲ್ಲಿ ಕಾಣಬಹುದಾಗಿದೆ.

Best Mobiles in India

English summary
iPhone 14 Plus phone is available at a low price. This means that this phone has appeared on Flipkart at a price of Rs. 65,000, and through exchange and bank offer, this phone can be purchased at an even lower price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+