Home
ಸುದ್ದಿಜಾಲ

iphone 15: ಹೊಸ ಐಫೋನ್‌ 15 ಗೆ 12,000 ರೂ. ಡಿಸ್ಕೌಂಟೇ...? ಎಲ್ಲಿ ಈ ಆಫರ್?

ಐಫೋನ್‌ 15 (iphone 15) ಸ್ಮಾರ್ಟ್‌ಫೋನ್‌ ಖರೀದಿ ಪ್ರಕ್ರಿಯೆ ನಾಗಾಲೋಟದಲ್ಲಿದೆ. ಈ ಮೂಲಕ ಸಾಕಷ್ಟು ಜನರು ಈ ಹೊಸ ಫೋನ್‌ ಅನುಭವ ಪಡೆಯುತ್ತಿದ್ದಾರೆ. ಈ ನಡುವೆ ಹೊಸ ಐಫೋನ್‌ಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ. ಪರಿಣಾಮ ನೀವು ಈ ಹೊಸ ಫೋನ್‌ನಲ್ಲಿ 12,000 ಸಾವಿರ ವರೆಗೆ ಹಣ ಉಳಿತಾಯ ಮಾಡಬಹುದು.

ಹೌದು, ಐಫೋನ್‌ 15 ಸರಣಿ (iPhone 15 series) ಫೋನ್‌ಗಳನ್ನು ಈ ಕ್ಷಣಕ್ಕೂ ಸಹ ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ. ಈ ಬೆಳವಣಿಗೆ ನಡುವೆ ಈ ಫೋನ್‌ ಖರೀದಿ ಮೇಲೆ ಪ್ರಮುಖ ಇ-ಕಾಮರ್ಸ್‌ ಸೈಟ್‌ನಲ್ಲಿ ಆಫರ್ ಘೋಷಣೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಭಾರತದಲ್ಲಿ 79,900ರೂ.ಗಳಿಂದ ಪ್ರಾರಂಭವಾಗುತ್ತದೆ. ಹಾಗಿದ್ರೆ ಈ ಹೊಚ್ಚ ಹೊಸ ಫೋನ್‌ಗೆ ಆಫರ್ ನೀಡುತ್ತಿರುವ ಇ-ಕಾಮರ್ಸ್‌ ಸೈಟ್‌ ಯಾವುದು?, ಈ ಫೋನ್‌ನ ಫೀಚರ್ಸ್‌ ಏನು ಅನ್ನೋದನ್ನು ತಿಳಿದುಕೊಳ್ಳಿ.

iphone 15: ಹೊಸ ಐಫೋನ್‌ 15 ಗೆ 12,000 ರೂ. ಡಿಸ್ಕೌಂಟೇ...? ಎಲ್ಲಿ ಈ ಆಫರ್?

ಐಫೋನ್‌ 15 ಫೋನ್‌ಗೆ ಭರ್ಜರಿ ಆಫರ್: ಐಫೋನ್ 15 ಅನ್ನು ಸೆಪ್ಟೆಂಬರ್ 12 ರಂದು ಆಪಲ್‌ನ ವಂಡರ್‌ಲಸ್ಟ್ ಈವೆಂಟ್‌ನಲ್ಲಿ ಲಾಂಚ್‌ ಮಾಡಲಾಗಿದ್ದು, ಸೆಪ್ಟೆಂಬರ್ 22 ರಿಂದ ಫೋನ್ ಮಾರಾಟಕ್ಕೆ ಲಭ್ಯವಾಗಿದೆ. ಆರಂಭದಲ್ಲಿ ದೆಹಲಿಯಲ್ಲಿ ಹೊಸದಾಗಿ ತೆರೆಯಲಾದ ಆಪಲ್ ಸ್ಟೋರ್‌ಗಳ ಹೊರಗೆ ಜನರು ಸರದಿಯಲ್ಲಿ ನಿಂತಿದ್ದ ವರದಿಯನ್ನು ನೀವು ಗಮನಿಸಿರಬಹುದು. ಅದರಂತೆ ಈಗ ಪ್ರಮುಖ ಇ ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ (Amazon india ) ಈ ಫೋನ್‌ಗೆ ಆಫರ್ ನೀಡಲಾಗಿದೆ.

ಐಫೋನ್‌ 15 ನ 128GB ವೇರಿಯಂಟ್ ಬೆಲೆ 79,900 ರೂ. ಆಗಿದ್ದರೆ 256GB ವೇರಿಯಂಟ್ ಬೆಲೆ 89,900 ರೂ. ಗಳಾಗಿದೆ. ಹಾಗೆಯೇ 512GB ವೇರಿಯಂಟ್ ಗೆ ನೀವು 1,09,900 ರೂ.ಗಳನ್ನು ಪಾವತಿ ಮಾಡಬೇಕಿದೆ. ಈ ಫೋನ್‌ ಐದು ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಐಫೋನ್ 14 ಗೆ ಹೋಲಿಸಿದರೆ ಪ್ರಮುಖ ನವೀಕರಣಗಳನ್ನು ಈ ಹೊಸ ಫೋನ್ ಹೊಂದಿದೆ.

iphone 15: ಹೊಸ ಐಫೋನ್‌ 15 ಗೆ 12,000 ರೂ. ಡಿಸ್ಕೌಂಟೇ...? ಎಲ್ಲಿ ಈ ಆಫರ್?

ಐಫೋನ್ 15 ರ ಮಾರಾಟವು ಅಧಿಕೃತವಾಗಿ ಆರಂಭ ಆಗುತ್ತಿದ್ದಂತೆ ವಿವಿಧ ಔಟ್‌ಲೆಟ್‌ಗಳು ಐಫೋನ್‌ಗೆ ರಿಯಾಯಿತಿಗಳನ್ನು ನೀಡುತ್ತಿವೆ. ವಿಜಯ್ ಸೇಲ್ಸ್, ಫ್ಲಿಪ್‌ಕಾರ್ಟ್, ಕ್ರೋಮಾ ಮತ್ತು ಫ್ಲಿಪ್‌ಕಾರ್ಟ್ ನಲ್ಲಿ ಈ ಫೋನ್‌ಗಳನ್ನು ಅಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅದರಲ್ಲೂ ವಿನಿಮಯ ಆಫರ್ ಅನ್ನೂ ಸಹ ನೀಡಲಾಗುತ್ತಿದ್ದು, ಈ ಮೂಲಕ 35,000 ರೂ.ಗಳಲ್ಲಿ ಹೊಸ ಐಫೋನ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

12,000 ರಿಯಾಯಿತಿಯಲ್ಲಿ ಐಫೋನ್‌ 15 : ಈ ನಡುವೆ ಅಮೆಜಾನ್ ಐಫೋನ್‌ 15 ಗೆ ವಿಶೇಷ ರಿಯಾಯಿತಿ ನೀಡಿದೆ. ಪರಿಣಾಮವಾಗಿ ನೀವು 12,000 ರೂಪಾಯಿಗಳ ರಿಯಾಯಿತಿಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದು. ಅಂದರೆ ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ನಲ್ಲಿ 5,000 ರೂಪಾಯಿಗಳ ತ್ವರಿತ ಬ್ಯಾಂಕ್ ರಿಯಾಯಿತಿ ಇದೆ. ಇದರ ಜೊತೆಗೆ, ನೀವು ಏರ್‌ಟೆಲ್ ಪೋಸ್ಟ್‌ಪೇಯ್ಡ್ ಸಂಪರ್ಕಕ್ಕೆ ಬದಲಾಯಿಸಿದರೆ ಹೆಚ್ಚುವರಿ 7,000 ರೂ. ಡಿಸ್ಕೌಂಟ್‌ ಸಿಗಲಿದೆ. ಪರಿಣಾಮ ಒಟ್ಟು 12,000 ರೂ.ಗಳಷ್ಟು ಬೆಲೆ ಕಡಿಮೆ ಆಗಲಿದೆ.

ಐಫೋನ್‌ 15 ಫೀಚರ್ಸ್‌: ಐಫೋನ್ 15 6.1 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಆಪಲ್ ಈ ಬಾರಿಯೂ ಐಫೋನ್ 14 ಮತ್ತು ಹಿಂದಿನ ಮಾದರಿಗಳಂತೆಯೇ ಅದೇ ವಿನ್ಯಾಸವನ್ನು ಉಳಿಸಿಕೊಂಡಿದೆ. ಆದರೆ ಸಾಮಾನ್ಯ ದರ್ಜೆಯ ಬದಲಿಗೆ, ಡೈನಾಮಿಕ್ ಐಲ್ಯಾಂಡ್ ನಾಚ್ ಅನ್ನು ಈ ಫೋನ್‌ನಲ್ಲಿ ವಿಶೇಷವಾಗಿ ಕಾಣಬಹುದು. ಈ ಫೀಚರ್ಸ್‌ ಅನ್ನು ಕಳೆದ ವರ್ಷ ಐಫೋನ್ 14 ಪ್ರೊ ಮಾದರಿಗಳೊಂದಿಗೆ ಪರಿಚಯಿಸಲಾಗಿತ್ತು.

ಇದರೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸರ್‌ ಆಯ್ಕೆ ನೀಡಲಾಗಿದೆ. ಈ ಹಿಂದಿನ ಐಫೋನ್ 14 ಫೋನ್‌ 12 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಇದನ್ನು ಗಮನಿಸಿದ್ರೆ ಐಫೋನ್‌ 15 ಕ್ಯಾಮೆರಾ ವಿಚಾರದಲ್ಲಿ ಬೃಹತ್ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ. ಅದರಲ್ಲೂ ಉತ್ತಮ ಕಡಿಮೆ ಬೆಳಕಿನ ಫೋಟೋಗಳನ್ನು ಈ ಫೋನ್‌ ನೀಡಲಿದೆ.

iphone 15: ಹೊಸ ಐಫೋನ್‌ 15 ಗೆ 12,000 ರೂ. ಡಿಸ್ಕೌಂಟೇ...? ಎಲ್ಲಿ ಈ ಆಫರ್?

ಈ ಫೋನ್ ಆಪಲ್‌ನ A16 ಬಯೋನಿಕ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವುದರಿಂದ ಪ್ರೊಸೆಸರ್ ಕೂಡ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ. ಕಳೆದ ವರ್ಷ ಆಪಲ್ ಐಫೋನ್ 14 ಮತ್ತು ಐಫೋನ್ 14 ಪ್ಲಸ್‌ನಲ್ಲಿ A15 ಬಯೋನಿಕ್ ಚಿಪ್‌ಸೆಟ್ ಅನ್ನು ನೀಡಿತ್ತು. ಈ ಮೂಲಕ ಪ್ರೊ ಮಾದರಿಗಳು ಉತ್ತಮವಾದ A16 ಚಿಪ್ ಆಯ್ಕೆಯನ್ನು ಪಡೆದಿದ್ದವು.ಇದೆಲ್ಲಕ್ಕಿಂತ ಮಿಗಿಲಾಗಿ ಯುಎಸ್‌ಬಿ ಟೈಪ್‌ ಸಿ ಚಾರ್ಜಿಂಗ್ ಪೋರ್ಟ್‌ ಆಯ್ಕೆ ಈ ಫೋನ್‌ಗಳಲ್ಲಿ ಕಾಣಬಹುದು.

Best Mobiles in India

English summary
People are done buying iPhone 15 series even for this moment. Amidst this development, the leading e-commerce site Amazon has announced an offer on the purchase of this iPhone 15.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+