Home
ಸುದ್ದಿಜಾಲ

ಈ iPhone ಮೇಲೆ ಭಾರೀ ರಿಯಾಯಿತಿ; ಗ್ರಾಹಕರಿಗೆ ಉಳಿತಾಯ ಖಚಿತ!

ಟೆಕ್ ದೊಡ್ಡಣ್ಣ ಎನಿಸಿರುವ ಆಪಲ್‌ ಕಂಪನಿಯ ಐಫೋನ್‌ ಮಾಡೆಲ್‌ಗಳು ವಿಶ್ವ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿವೆ. ಐಫೋನ್‌ಗಳು ಸುರಕ್ಷತೆ, ಕ್ಯಾಮೆರಾ ಕ್ವಾಲಿಟಿ ಹಾಗೂ ಅತ್ಯುತ್ತಮ ಕಾರ್ಯ ವೈಖರಿಗಳಂತಹ ಆಯ್ಕೆಗಳ ಮೂಲಕ ಹೆಚ್ಚಿನ ಗಮನ ಸೆಳೆದಿವೆ. ಸದ್ಯ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಐಫೋನ್‌ 15 ( iPhone 15 ) ಮೊಬೈಲ್‌ ಗಣನೀಯ ಬೆಲೆ ಇಳಿಕೆ ಕಂಡಿದ್ದು, ಹೊಸ ಐಫೋನ್‌ ಖರೀದಿಸಬೇಕು ಎಂದಿರುವ ಗ್ರಾಹಕರ ಮೊಗ ಅರಳಿಸಿದೆ.

ಹೌದು, ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ನಲ್ಲಿ ಆಪಲ್‌ ಸಂಸ್ಥೆಯ ಐಫೋನ್‌ 15 (iPhone 15) ಮೊಬೈಲ್‌ ಶೇ. 17% ರಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಐಫೋನಿನ 128 GB ಸ್ಟೋರೇಜ್‌ನ ವೇರಿಯಂಟ್‌ ಅನ್ನು ಗ್ರಾಹಕರು 57,499ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಈ ಫೋನ್‌ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದೆ.

ಈ iPhone ಮೇಲೆ ಭಾರೀ ರಿಯಾಯಿತಿ; ಗ್ರಾಹಕರಿಗೆ ಉಳಿತಾಯ ಖಚಿತ!

ಐಫೋನ್‌ 15 ಮೊಬೈಲ್‌ ಬ್ಲೂ, ಬ್ಲ್ಯಾಕ್‌, ಪಿಂಕ್, ಯೆಲ್ಲೋ ಮತ್ತು ಗ್ರೀನ್ ಕಲರ್‌ ಆಯ್ಕೆ ಪಡೆದಿದೆ. ಇನ್ನು ಈ ಫೋನಿನ ಸೆಲ್ಫಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗಾದರೇ ಆಪಲ್‌ ಐಫೋನ್‌ 15 (iPhone 15) ಮೊಬೈಲ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.

ಐಫೋನ್‌ 15 - ಫೀಚರ್ಸ್‌ ಮಾಹಿತಿ

ಐಫೋನ್‌ 15 ಮೊಬೈಲ್‌ 6.1 ಇಂಚಿನ ಡಿಸ್‌ಪ್ಲೇ ಸೌಲಭ್ಯ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1600 nits ಬ್ರೈಟ್ನಸ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ. ಹಾಗೆಯೇ ಇದು ಮಾತ್ರೆ ಆಕಾರದ (ಪಿಲ್‌ ಶೇಪ್‌ ಮಾದರಿ) ಪಂಚ್‌ ಹೋಲ್‌ ವಿನ್ಯಾಸವನ್ನು ಹೊಂದಿದ್ದು, ಫೇಸ್‌ಟೈಮ್ ಕ್ಯಾಮೆರಾ ಮತ್ತು ಫೇಸ್‌ಐಡಿ ಆಯ್ಕೆಗಳನ್ನು ಇದು ಒಳಗೊಂಡಿದೆ.

ಐಫೋನ್‌ 15 ಮೊಬೈಲ್‌ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಐಫೋನ್‌ ios 16 ಓಎಸ್‌ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು 128 GB, 256 GB ಹಾಗೂ 512 GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಸಹ ಪಡೆದುಕೊಂಡಿದೆ.

ಐಫೋನ್‌ 15 ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಅವುಗಳಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದು ಮಂದ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಎರಡನೇ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್‌ ಆಂಗಲ್‌ ಲೆನ್ಸ್‌ ಅನ್ನು ಪಡೆದಿದೆ. ಹಾಗೆಯೇ ಇದು ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.

ಐಫೋನ್‌ 15 ಮೊಬೈಲ್‌ ತನ್ನ ಈ ಹಿಂದಿನ ಸರಣಿಗಿಂತ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಐಫೋನ್‌ ಪ್ರಿಯರ ಗಮನ ಸೆಳೆದಿದೆ. ಹಾಗೆಯೇ ಈ ಫೋನ್‌ ಡೈನಾಮಿಕ್ ಐಲ್ಯಾಂಡ್‌ ( Dynamic Island ) ಆಯ್ಕೆ ಅನ್ನು ಪಡೆದಿದೆ. ಇದು 5G ಸಪೋರ್ಟ್ ಪಡೆದಿದೆ ಅಲ್ಲದೇ ವೈರ್‌ಲೆಸ್‌ ಕನೆಕ್ಟಿವಿಟಿ ಸೌಲಭ್ಯ ಕೂಡಾ ಪಡೆದಿದೆ. ಅಲ್ಲದೇ ಇದು ರೋಡ್‌ ಸೈಡ್‌ ಅಸಿಸ್ಟಂಟ್‌ ವೈಯಾ ಸೆಟಲೈಟ್‌ ಆಯ್ಕೆ ಇದೆ.

Best Mobiles in India

English summary
Apple iPhone 15 Now at Fantastic Price Cut on Flipkart website: Check offer price and more details here. ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ನಲ್ಲಿ ಆಪಲ್‌ ಸಂಸ್ಥೆಯ ಐಫೋನ್‌ 15 (iPhone 15) ಮೊಬೈಲ್‌ ಶೇ. 17% ರಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಐಫೋನಿನ 128 GB ಸ್ಟೋರೇಜ್‌ನ ವೇರಿಯಂಟ್‌ ಅನ್ನು ಗ್ರಾಹಕರು 57,499ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+