ಇದು ವಜ್ರದ ಐಫೋನ್!..ಇದರ ಬೆಲೆ ತಿಳಿದ್ರೆ, ನೀವು ಶಾಕ್ ಆಗ್ತೀರಾ!
ಮಾರುಕಟ್ಟೆಯಲ್ಲಿ ಆಪಲ್ ಐಫೋನ್‌ಗಳು ದುಬಾರಿ ಪ್ರೈಸ್‌ಟ್ಯಾಗ್‌ನಿಂದ ಗುರುತಿಸಿಕೊಂಡಿವೆ. ಆ ಪೈಕಿ ಇತ್ತೀಚಿನ ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಮಾರುಕಟ್ಟೆಯಲ್ಲಿ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದೀಗ ಈ ಫೋನಿನ ಲಕ್ಸುರಿ ಕಸ್ಟಮ್ ಆವೃತ್ತಿಯು ಬಿಡುಗಡೆ ಆಗಿದ್ದು, ಈ ಲಕ್ಸುರಿ ಫೋನಿನ ಬೆಲೆ ಕೇಳಿದ್ರೆ ಗ್ರಾಹಕರು OMG ಎನ್ನುವುದಂತೂ ಪಕ್ಕಾ.!
ಹೌದು, ಪ್ರಸಿದ್ಧ ಐಷಾರಾಮಿ ಫೋನ್‌ಗಳನ್ನು ಪರಿಚಯಿಸುವ ಕ್ಯಾವಿಯರ್ (Caviar) ಇದೀಗ ಐಫೋನ್ 15 ಪ್ರೊ ಮ್ಯಾಕ್ಸ್ (Apple iPhone 15 Pro Max) ಫೋನಿನ ಲಕ್ಸುರಿ ಕಸ್ಟಮ್ ಆವೃತ್ತಿಯನ್ನು ಪರಿಚಯಿಸಿದ್ದು, ಇದನ್ನು 'ಗಾರ್ಡನ್ ಆಫ್ ಈಡನ್' ಎಂದು ಕರೆಯಲಾಗಿದೆ.

ಇನ್ನು ಈ ಫೋನ್ ಹೈ ಎಂಡ್ ಮಾಡೆಲ್ ಬೆಲೆಯು ಬರೋಬ್ಬರಿ 50 ಲಕ್ಷಕ್ಕೂ ಹೆಚ್ಚಿದೆ ಎಂದು ವರದಿ ಆಗಿದೆ. ಹಾಗೆಯೇ ಈ ಹೊಸ ಕಸ್ಟಮ್ ಐಫೋನ್ ಶ್ರೇಣಿಯ ಆರಂಭಿಕ ಬೆಲೆಯು 7.9 ಲಕ್ಷ ರೂ. ಗಳಿಂದ ಪ್ರಾರಂಭವಾಗುತ್ತದೆ.
ಈ ಫೋನ್ ಸರಣಿಯು ವಜ್ರಗಳು, ರತ್ನದ ಕಲ್ಲುಗಳು ಮತ್ತು Swarovski ಸ್ಫಟಿಕಗಳಿಂದ ಅಲಂಕರಿಸಲ್ಪಟ್ಟಿದೆ. ಈ ಸಂಗ್ರಹದ ಪ್ರಮುಖವಾದ ಪ್ಯಾಂಥರ್ ಗೋಲ್ಡ್ 18K, ಸಂಪೂರ್ಣವಾಗಿ 18K ಚಿನ್ನದಿಂದ ರಚಿಸಲಾದ ಚಾಸಿಸ್ ಅನ್ನು ಪಡೆದುಕೊಂಡಿದೆ. ಇದರ ಸೊಗಸಾದ ಪ್ಯಾಂಥರ್ ಬಾಸ್-ರಿಲೀಫ್ ಕಪ್ಪು ವಜ್ರಗಳಿಂದ ಅಲಂಕರಿಸಲ್ಪಟ್ಟಿದೆ, ಹಾಗೆಯೇ ಒಟ್ಟು ಪ್ರಭಾವಶಾಲಿ 159 ವಜ್ರಗಳನ್ನು ಹೊಂದಿದೆ.

ಅದೇ ರೀತಿ ಈ ಫೊನಿನ ಆರ್ಕಿಡ್ red calfskin ಹೊಂದಿದೆ, 24K ಚಿನ್ನದ ಲೇಪನದಿಂದ ವರ್ಧಿಸಲ್ಪಟ್ಟಿದೆ ಜೊತೆಗೆ 9 ವಜ್ರಗಳನ್ನು ಒಳಗೊಂಡಿದೆ. ಹಾಗೆಯೇ ಇದರ ಲವ್ಲಿ ಬಟರ್‌ಫ್ಲೈಸ್ ವೇರಿಯಂಟ್ white calfskin ಯಿಂದ ಅಲಂಕರಿಸಲ್ಪಟ್ಟಿದೆ ಹಾಗೆಯೇ 35 ವಜ್ರಗಳನ್ನು ಪಡೆದಿದೆ. ಇದರೊಂದಿಗೆ ಐಷಾರಾಮಿ 24K ಚಿನ್ನದ ಲೇಪನದೊಂದಿಗೆ ಸೊಗಸಾಗಿ ಮುಗಿದಿದೆ. ಹಾಗದರೇ ಐಫೋನ್ 15 ಪ್ರೊ ಮ್ಯಾಕ್ಸ್ ಫೋನಿನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಐಫೋನ್ 15 ಪ್ರೊ ಮ್ಯಾಕ್ಸ್ - ಫೀಚರ್ಸ್
ಐಫೋನ್ 15 ಪ್ರೊ ಮ್ಯಾಕ್ಸ್ ಮೊಬೈಲ್ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್ ರೇಟ್ ಮೂಲಕ ಈ ಫೋನ್ ವಿಶೇಷ ಎನಿಸಿದೆ. ಈ ಫೋನ್ ತೆಳುವಾದ ಬೆಜೆಲ್ ಆಯ್ಕೆ ಹೊಂದಿದ್ದು, ಈ ಮೂಲಕ ಬಳಕೆ ಮಾಡುವಾಗ ಹೊಸ ಅನುಭವ ನೀಡಲಿದೆ.
ಐಫೋನ್ 15 ಪ್ರೊ ಮ್ಯಾಕ್ಸ್ A17 ಪ್ರೊ ಬಯೋನಿಕ್ ಚಿಪ್‌ಸೆಟ್ ಪ್ರೊಸೆಸರ್ ಪವರ್ ಅನ್ನು ಪಡೆದುಕೊಂಡಿದ್ದು, ಇದು 3 ನ್ಯಾನೋಮೀಟರ್ ಚಿಪ್, ವೇಗವಾದ ಕಾರ್ಯಕ್ಷಮತೆಗಾಗಿ 19 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಪಡೆದುಕೊಂಡಿದೆ.
ಇದು ಹೊಸ ಆರು-ಕೋರ್ ಜಿಪಿಯು A16 ನ ಜಿಪಿಯು ಗಿಂತ 20% ವೇಗವಾಗಿದ್ದು, ಹಾಗೆಯೇ ರೇ ಟ್ರೇಸಿಂಗ್ ಅನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೇ ಇದರ ಬೇಸ್ ಮಾಡೆಲ್ 8GB RAM ಹಾಗೂ 256GB ಆಂತರೀಕ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಇದನ್ನು 1TB ವರೆಗೂ ವಿಸ್ತರಣೆ ಮಾಡುವ ಆಯ್ಕೆ ಪಡೆದಿದೆ.
ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಹೆಚ್ಚು ಸುಧಾರಿತ 48 ಮೆಗಾ ಪಿಕ್ಸೆಲ್ ಸೆನ್ಸರ್ ಆಯ್ಕೆ ಪಡೆದುಕೊಂಡಿದ್ದು, LiDAR ಸ್ಕ್ಯಾನಿಂಗ್ ಲೋ ಲೈಟ್ ಮತ್ತು ನೈಟ್ ಮೋಡ್ ಫೋಟೋ ಫೀಚರ್ಸ್ ಬಹಳ ವಿಶೇಷ ಎನಿಸಿದೆ. ಅಲ್ಲದೇ ಈ ಫೋನ್ 12 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಸೆನ್ಸರ್ ಅನ್ನು ಪಡೆದಿದೆ. ಇದರಲ್ಲಿ ಸ್ಪೆಷಲ್ ಏನೆಂದರೆ ಉತ್ತಮವಾದ ಜೂಮ್, ಅಂದರೆ 5x ಆಪ್ಟಿಕಲ್ ಜೂಮ್ ಆಯ್ಕೆ.


Click it and Unblock the Notifications








