Home
ಸುದ್ದಿಜಾಲ

ಆಪಲ್‌ ಐಫೋನ್‌ 15 ಪ್ರೊ ಮಾಡೆಲ್‌ಗಳಿಗೂ ಇಸ್ರೋಗೂ ವಿಶೇಷ ಬಾಂಧವ್ಯ! ಅದೇನು ಅಂತೀರಾ!?

ಆಪಲ್‌ ಬಹುನಿರೀಕ್ಷಿತ ಐಫೋನ್‌ 15 ಸರಣಿ ಫೋನ್‌ಗಳನ್ನು ಲಾಂಚ್‌ ಮಾಡಿದೆ. ಈ ಸರಣಿಯಲ್ಲಿ ಐಫೋನ್‌ 15 , ಐಫೋನ್‌ 15 ಪ್ಲಸ್‌, ಐಫೋನ್‌ 15 ಪ್ರೊ, ಐಫೋನ್‌ 15 ಮ್ಯಾಕ್ಸ್‌ ಫೋನ್‌ಗಳಿದ್ದು, ಗ್ರಾಹಕರು ಅವರ ಅಗತ್ಯಕ್ಕೆ ತಕ್ಕಂತೆ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ವಿಶೇ‍ಷ ಏನೆಂದರೆ ಪ್ರೊ ಮಾದರಿಗಳಿಗೂ ಇಸ್ರೋಗೂ ಒಂದು ಅದ್ಭುತ ಸಂಬಂಧ ಇದೆ.

ಹೌದು, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್‌ ವೇರಿಯಂಟ್‌ ಫೋನ್‌ಗಳು ಹೊಸ ಆಕರ್ಷಕ ಶೈಲಿಯೊಂದಿಗೆ ಕಾಣಿಸಿಕೊಂಡಿದ್ದು, ಈ ಮೂಲಕ ಆಪಲ್‌ ಪ್ರಿಯರ ಗಮನಸೆಳೆದಿವೆ. ಅಷ್ಟೇ ಅಲ್ಲದೆ ಈ ಫೋನ್‌ಗಳು ಇಸ್ರೋದೊಂದಿಗೆ ವಿಶೇಷವಾದ ಕನೆಕ್ಟಿವಿಟಿ ಸೌಲಭ್ಯ ಪಡೆದಿಕೊಂಡಿವೆ. ಈ ಮೂಲಕ ಭಾರತೀಯರು ಹೆಮ್ಮೆ ಪಡುವಂತೆ ಆಗಿದೆ. ಹಾಗಿದ್ರೆ ಏನಿದು ಹೊಸ ಕನೆಕ್ಟಿವಿಟಿ?, ಈ ಪ್ರೊ ಮಾದರಿಗಳಿಗೂ ಇಸ್ರೋಗೂ ಏನು ಸಂಬಂಧ? ಎಂಬ ಇಂಟ್ರೆಸಿಂಗ್ ಮಾಹಿತಿ ಇಲ್ಲಿದೆ ನೋಡಿ.

ಆಪಲ್‌ ಐಫೋನ್‌ 15 ಪ್ರೊ ಮಾಡೆಲ್‌ಗಳಿಗೂ ಇಸ್ರೋಗೂ ವಿಶೇಷ ಬಾಂಧವ್ಯ!ಅದೇನು ಅಂತೀರಾ!?

ಐಫೋನ್‌ಗೂ ಐಸ್ರೋಗೂ ನಂಟು: ಇಸ್ರೋ ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ವಿಜ್ಞಾನ ವಿಭಾಗದಲ್ಲಿ ಮಹತ್ತರ ಸಾಧನೆಗಳನ್ನು ಮಾಡಿಕೊಂಡು ಬರುತ್ತಿದೆ. ಇದರ ಭಾಗವಾಗಿಯೇ ಚಂದ್ರಯಾನ 3 ಯಶಸ್ವಿಯಾಗಿದೆ. ಹಾಗೆಯೇ ಸೂರ್ಯನಲ್ಲಿಗೂ ಉಪಗ್ರಹ ಕಳುಹಿಸಲಾಗಿದೆ. ಇದರೊಂದಿಗೆ ಹೊಸ ಹೊಸ ಅನ್ವೇಷಣೆಯಲ್ಲಿ ಇಸ್ರೋ ಕಾರ್ಯನಿರತವಾಗಿದ್ದು, ಈಗ ಈ ಹೊಸ ಮಾದರಿಯ ಐಫೋನ್‌ಗಳಿಗೂ ಇಸ್ರೋ ನಂಟು ಆರಂಭ ಆಗಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದ ಭಾರತದ ಸ್ವದೇಶಿ ಜಿಪಿಎಸ್‌ಗೆ ಪರ್ಯಾಯವಾದ ಭಾರತೀಯ ನ್ಯಾವಿಕ್ (NavIC) ನ್ಯಾವಿಗೇಷನ್ ಅನ್ನು ಈ ಐಫೋನ್ ವೇರಿಯಂಟ್‌ಗಳು ಬೆಂಬಲಿಸಲಿವೆ. ಆಪಲ್ ತನ್ನ ಐಫೋನ್‌ಗಳಿಗೆ ನ್ಯಾವಿಕ್ ಬೆಂಬಲವನ್ನು ಸೇರಿಸಿರುವುದು ಇದೇ ಮೊದಲು ಎಂಬುದು ಮತ್ತೊಂದು ವಿಶೇಷವಾದ ಸಂಗತಿಯಾಗಿದೆ.

ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (IRNSS) ಅನ್ನು ನ್ಯಾವಿಕ್ ಎಂದು ಕರೆಯಲಾಗುತ್ತದೆ. ಇದು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಯಲ್ಲಿದೆ. ಭಾರತದಲ್ಲಿ ಮತ್ತು ಭಾರತದ ಮುಖ್ಯ ಭೂಭಾಗದ ಸುತ್ತಲೂ ನಿಖರವಾದ ಸ್ಥಾನವನ್ನು ಪತ್ತೆ ಮಾಡಲು ಪ್ರಾದೇಶಿಕ ಜಿಯೋ-ಪೊಸಿಷನಿಂಗ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಗಮನಿಸಬೇಕಾದ ಮಾಹಿತಿ ಏನಂದ್ರೆ ಇದು ಜಿಪಿಎಸ್‌ಗಿಂತಲೂ ಹೆಚ್ಚು ನಿಖರವಾದ ಮಾಹಿತಿ ನೀಡುತ್ತದೆ.

ನ್ಯಾವಿಕ್ ಭಾರತದಲ್ಲಿನ ಬಳಕೆದಾರರಿಗೆ ನಿಖರವಾದ ಸ್ಥಾನದ ಮಾಹಿತಿ ಸೇವೆಯನ್ನು ಒದಗಿಸಲಿದೆ. ಅದಾಗ್ಯೂ ಈ ಸೇವೆ ಭಾರತದ ಗಡಿಯಿಂದ 1500 ಕಿಮೀ ವರೆಗೆ ವಿಸ್ತರಿಸುತ್ತದೆ. ಇದು ಅದರ ಪ್ರಾಥಮಿಕ ಸೇವಾ ಪ್ರದೇಶವಾಗಿದೆ. ಈ ವಿಸ್ತೃತ ಸೇವಾ ಪ್ರದೇಶವು ಅಕ್ಷಾಂಶ 30 ಡಿಗ್ರಿ ದಕ್ಷಿಣದಿಂದ 50 ಡಿಗ್ರಿ ಉತ್ತರಕ್ಕೆ ಹಾಗೂ ರೇಖಾಂಶ 30 ಡಿಗ್ರಿ ಪೂರ್ವದಿಂದ 130 ಡಿಗ್ರಿ ಪೂರ್ವಕ್ಕೆ ಇರಲಿದೆ.

ಇನ್ನು ಈ ನ್ಯಾವಿಕ್ ಎರಡು ರೀತಿಯ ಸೇವೆಗಳನ್ನು ನೀಡಲಿದೆ. ಅವುಗಳೆಂದರೆ ಎಲ್ಲಾ ಬಳಕೆದಾರರಿಗೆ ಒದಗಿಸಲಾದ ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆ (SPS) ಇನ್ನೊಂದು ನಿರ್ಬಂಧಿತ ಸೇವೆ (RS), ಇದು ಅಧಿಕೃತ ಬಳಕೆದಾರರಿಗೆ ಮಾತ್ರ ಒದಗಿಸಲಾದ ಎನ್‌ಕ್ರಿಪ್ಟ್ ಮಾಡಿದ ಸೇವೆಯಾಗಿದೆ. IRNSS ವ್ಯವಸ್ಥೆಯು ಪ್ರಾಥಮಿಕ ಸೇವಾ ಪ್ರದೇಶದಲ್ಲಿ 20 ಮೀ ಗಿಂತ ಉತ್ತಮ ಸ್ಥಾನದ ನಿಖರತೆಯನ್ನು ನೀಡುತ್ತದೆ. ಈ ಸೇವೆ ಹೊಸದೇನಲ್ಲ ಬದಲಾಗಿ ಭಾರತದಲ್ಲಿ 2018 ರಿಂದಲೂ ಕಾರ್ಯನಿರ್ವಹಿಸುತ್ತಿದೆ.

ಕಳೆದ ವರ್ಷ ಸ್ಯಾಮ್‌ಸಂಗ್, ಶಿಯೋಮಿ ಮತ್ತು ಆಪಲ್‌ನಂತಹ ಟೆಕ್ ದೈತ್ಯರನ್ನು ತಮ್ಮ ಸ್ಮಾರ್ಟ್‌ಫೋನ್‌ಗಳು ನ್ಯಾವಿಕ್‌ಗೆ ಬೆಂಬಲ ನೀಡುವಂತೆ ತಯಾರು ಮಾಡಿ ಎಂದು ಕೇಂದ್ರ ಸರ್ಕಾರ ಒತ್ತಾಯ ಮಾಡಿತ್ತು,. ಅಷ್ಟೇ ಅಲ್ಲದೆ ಜನವರಿ 2023 ರಿಂದ ಮಾರಾಟವಾಗುವ ಹೊಸ ಐಫೋನ್‌ಗಳ ಮಾದರಿಗಳು ನ್ಯಾವಿಕ್‌ ಮತ್ತು ಜಿಪಿಎಸ್‌ ಸೌಲಭ್ಯ ಹೊಂದಿರಬೇಕು ಎಂದೂ ಸಹ ಸರ್ಕಾರ ಕಡ್ಡಾಯಗೊಳಿಸಿತ್ತು. ಪರಿಣಾಮ ಈಗ ಈ ಸೇವೆ ಬಳಕೆದಾರರಿಗೆ ಲಭ್ಯ ಇರಲಿದೆ.

ಆಪಲ್‌ ಐಫೋನ್‌ 15 ಪ್ರೊ ಮಾಡೆಲ್‌ಗಳಿಗೂ ಇಸ್ರೋಗೂ ವಿಶೇಷ ಬಾಂಧವ್ಯ!ಅದೇನು ಅಂತೀರಾ!?

ಆಪಲ್‌ ಹೊರತುಪಡಿಸಿ ಈ ಮೊದಲು ಲಾಂಚ್‌ ಆದ ಇತರೆ ಆಂಡ್ರಾಯ್ಡ್‌ ಫೋನ್‌ಗಳಲ್ಲೂ ಸಹ ಈ ಸೇವೆ ಲಭ್ಯ ಇದೆ. ಆ ಫೋನ್‌ಗಳ ಲಿಸ್ಟ್‌ ಗಮನಿಸುವುದಾದರೆ ಒನ್‌ಪ್ಲಸ್‌ ನಾರ್ಡ್‌ 2T, ಶಿಯೋಮಿ ಮಿ 11X ಹಾಗೂ 11T ಪ್ರೊ ಮತ್ತು ರಿಯಲ್‌ಮಿ 9 ಪ್ರೊ ಫೋನ್‌ಗಳಲ್ಲಿ ಈ ಸೌಲಭ್ಯ ಲಭ್ಯ ಇದೆ. ಈ ಮೂಲಕ ಆಪಲ್‌ಗಿಂತ ಈ ಸೇವೆ ಪಡೆದ ಮೊದಲ ಫೋನ್‌ಗಳಾಗಿ ಇವು ಗುರುತಿಸಿಕೊಳ್ಳಲಿವೆ.

Best Mobiles in India

English summary
iPhone 15 Pro and iPhone 15 Pro Max variant phones have got special connectivity facility with ISRO.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+