Home
ಸುದ್ದಿಜಾಲ

ಭಾರತದಲ್ಲೇ ತಯಾರಾಗುತ್ತೆ ಐಫೋನ್‌ 15!..ಅಚ್ಚರಿ ಮೂಡಿಸಿದ ಲೀಕ್ ಫೀಚರ್ಸ್‌!

ಜನಪ್ರಿಯ ಆಪಲ್‌ ಸಂಸ್ಥೆಯು ಇತ್ತೀಚಿಗೆ ತನ್ನ ಐಫೋನ್‌ 14 ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈಗ ಬಹುತೇಕ ಎಲ್ಲ ಐಫೋನ್‌ ಪ್ರಿಯರ ಕಣ್ಣು ಮುಂದಿನ ಐಫೋನ್‌ 15 ಸರಣಿಯ ಮೇಲೆ ಎನ್ನಬಹುದು. ಐಫೋನ್‌ 15 ಫೋನಿನ ಬಗ್ಗೆ ಕೆಲವು ಲೀಕ್‌ ಮಾಹಿತಿಗಳು ಗ್ರಾಹಕರಿಗೆ ಖುಷಿ ನೀಡದೆ. ಆದ್ರೀಗ ಮುಂಬರುವ ಈ ಐಫೋನ್‌ 15 ಮೇಡ್‌ ಇನ್‌ ಇಂಡಿಯಾ ಆಗಿರಲಿದೆ ಎನ್ನಲಾಗುತ್ತಿದೆ.

ಹೌದು, ಐಫೋನ್‌ 15 ಸರಣಿ ಫೋನ್‌ಗಳ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲಗಳು ಮೂಡಿವೆ. ಅದಲ್ಲದೇ ಈ ಐಫೋನ್‌ ಸರಣಿಯು ಭಾರತದಲ್ಲೇ ತಯಾರಾಗುತ್ತದೆ ಎನ್ನುವ ವರದಿಯು ಫೋನ್ ಪ್ರಿಯರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ. ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ವರದಿ ಪ್ರಕಾರ, ಆಪಲ್ ಈ ಸರಣಿ ಬಿಡುಗಡೆಯ ನಂತರ ಭಾರತದಿಂದ ಐಫೋನ್ 15 ಮಾಡೆಲ್‌ಗಳನ್ನು ರವಾನಿಸಲು ಯೋಜಿಸಿದೆ ಎಂದಿದೆ.

ಭಾರತದಲ್ಲೇ ತಯಾರಾಗುತ್ತೆ ಐಫೋನ್‌ 15!..ಅಚ್ಚರಿ ಮೂಡಿಸಿದ ಲೀಕ್ ಫೀಚರ್ಸ್‌!

ಮ್ಯಾಕ್‌ರೂಮರ್‌ ಪ್ರಕಾರ, ಈಗಾಗಲೇ ಏರ್‌ಪೋಡ್‌ ಆವರಣಗಳನ್ನು ಅಸೆಂಬಲ್‌ ಮಾಡುವ ಮತ್ತು ಭವಿಷ್ಯದಲ್ಲಿ ಆಪಲ್‌ ಪೆನ್ಸಿಲ್‌ಗೆ ವಿಸ್ತರಿಸುವ ಯೋಜನೆಯನ್ನು ಹೊಂದಿರುವ ಜಬಿಲ್‌ (Jabil) ನಂತಹ ಸ್ಥಳೀಯ ಪೂರೈಕೆದಾರರಿಂದ ಐಫೋನ್‌ 15 ಗಾಗಿ ಕೇಸಿಂಗ್‌ಗಳನ್ನು ಭಾರತದಲ್ಲಿ ತಯಾರಿಸಲು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. ಹಾಗಾದರೆ ಮುಂಬರುವ ನೂತನ ಐಫೋನ್‌ 15 ಸರಣಿಯ ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳ ಹೊಂದಿರಲಿವೆ? ನಿರೀಕ್ಷಿಗೆಳೇನು ಮುಂದೆ ತಿಳಿಯೋಣ ಬನ್ನಿರಿ.

ಅಂದಹಾಗೆ ಈ ವರ್ಷದ ಆರಂಭದಲ್ಲಿ, ಫೈನಾನ್ಶಿಯಲ್ ಟೈಮ್ಸ್ 'ಭಾರತದಲ್ಲಿ ಟಾಟಾದ ಉತ್ಪಾದನಾ ಮಾರ್ಗದಿಂದ ಹೊರಬರುವ ಎರಡು ಐಫೋನ್ ಕೇಸಿಂಗ್‌ಗಳಲ್ಲಿ ಒಂದನ್ನು ಮಾತ್ರ ಫಾಕ್ಸ್‌ಕಾನ್‌ನಲ್ಲಿ ( Foxconn ) ಅಸೆಂಬ್ಲಿಗೆ ಕಳುಹಿಸಲು 'is in good enough shape' ಎಂದು ವರದಿ ಮಾಡಿದೆ.

ಭಾರತದಲ್ಲೇ ತಯಾರಾಗುತ್ತೆ ಐಫೋನ್‌ 15!..ಅಚ್ಚರಿ ಮೂಡಿಸಿದ ಲೀಕ್ ಫೀಚರ್ಸ್‌!

ಆಪಲ್ ಸಂಸ್ಥೆಯ ಬರಲಿರುವ ನೂತನ ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ ಫೋನ್‌ಗಳ ಕ್ಯಾಮೆರಾ ಸೆನ್ಸಾರ್‌ ಅನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ ಫೋನ್‌ಗಳು ಮೂರು ಕ್ಯಾಮೆರಾ ಹೊಂದಿರಬಹುದು. ಇವುಗಳ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ವೈಡ್ ಲೆನ್ಸ್‌ ಸೆನ್ಸಾರ್‌ ಹೊಂದಿರಬಹುದು. ಇನ್ನು ಐಫೋನ್ 15 ಮಾದರಿಗಳು ಆಪ್ಟಿಕಲ್ ಜೂಮ್ ಅಥವಾ ಲಿಡಾರ್ ಸ್ಕ್ಯಾನರ್‌ಗಾಗಿ ಟೆಲಿಫೋಟೋ ಲೆನ್ಸ್‌ನೊಂದಿಗೆ ಬರುವುದಿಲ್ಲ.

ಐಫೋನ್ 15 ಸರಣಿಯ ಕುರಿತು ಈಗಾಗಲೇ ಹಲವು ಲೀಕ್ ಮಾಹಿತಿಗಳು ಹೊರಬಂದಿವೆ. ಮುಂಬರುವ ಮಾದರಿಗಳು ಎರಡು ಪ್ರೊ ಆವೃತ್ತಿಗಳಲ್ಲಿ ಬೆಜೆಲ್‌ಗಳನ್ನು ಕಡಿಮೆಗೊಳಿಸಬಹುದು ಮತ್ತು ಆಪಲ್ ವಾಚ್ ತರಹದ ವಿನ್ಯಾಸಕ್ಕಾಗಿ ಎಲ್ಲಾ ನಾಲ್ಕು ಫೋನ್‌ಗಳಲ್ಲಿ ಕರ್ವ್‌ ಮಾದರಿಯ ಅಂಚುಗಳನ್ನು ಹೊಂದಿರಬಹುದು ಎಂದು ಹೇಳುತ್ತದೆ. ಹಾಗೆಯೇ ನಾಲ್ಕು ಐಫೋನ್‌ಗಳ ಡಿಸ್‌ಪ್ಲೇ ಗಾತ್ರಗಳು ಕಳೆದ ವರ್ಷದಂತೆ ಇರಲಿವೆ ಎನ್ನಲಾಗಿದೆ. ಜೊತೆಗೆ ಡೈನಾಮಿಕ್ ಐಲ್ಯಾಂಡ್ ಎಲ್ಲಾ ಮಾದರಿಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗ್ತಿದೆ.

ಆಪಲ್‌ ಐಫೋನ್‌ 15 ಪ್ರೊ ಮಾಡೆಲ್‌ ಫೋನ್‌ ಆಪಲ್ A17 ಚಿಪ್‌ಸೆಟ್‌ ಒಳಗೊಂಡಿರಲಿದ್ದು, 8 GB RAM ಆಯ್ಕೆ ಪಡೆದಿರಲಿದೆ. ಹಾಗೆಯೇ ಐಫೋನ್‌ 15 ಹಾಗೂ ಐಫೋನ್‌ 15 ಪ್ಲಸ್‌ ಮಾಡೆಲ್‌ಗಳು A16 ಬಯೋನಿಕ್‌ ಚಿಪ್‌ಸೆಟ್‌ ಅನ್ನು ಹೊಂದಿರಲಿವೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ. ಹಾಗೆಯೇ ಫೋರ್ಬ್ಸ್‌ನ ವರದಿಯ ಪ್ರಕಾರ, ಐಫೋನ್‌ 15 ಮತ್ತು ಐಫೋನ್‌ 15 ಪ್ರೊ ಮಾಡೆಲ್‌ಗಳ ನಡುವೆ ಬೆಲೆಯಲ್ಲಿ ಭಾರೀ ವ್ಯತ್ಯಾಸಗಳನ್ನು ಹೊಂದಿರಬಹುದು ಎಂದು ಹೇಳಲಾಗ್ತಿದೆ.

Best Mobiles in India

English summary
iPhone 15 : Expected that only the regular iPhone 15 models will be manufactured and shipped from India. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+