Home
ಸುದ್ದಿಜಾಲ

Apple iPhone 15 ಲಾಂಚ್‌ಗೆ ಕೊನೆಗೂ ದಿನಾಂಕ ನಿಗದಿ, ಈ ಫೋನ್‌ಗಳಲ್ಲಿ ಏನೆಲ್ಲಾ ವಿಶೇಷತೆ ಇರಬಹುದು?

ಈವರೆಗೂ ಯಾವಾಗ ಐಫೋನ್‌ನ (iPhone) ಮುಂದಿನ ಸರಣಿಯ ಫೋನ್‌ಗಳು ಲಾಂಚ್‌ ಆಗಲಿವೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಕೊನೆಗೂ ಆಪಲ್‌(Apple) ಕಂಪೆನಿಯು ಐಫೋನ್‌ 15 ಫೋನ್‌ ಸರಣಿಯ ಲಾಂಚ್‌ಗೆ ಡೇಟ್‌ ಫಿಕ್ಸ್‌ ಮಾಡಿದೆ. ಈ ಮೂಲಕ ಐಫೋನ್‌ ಪ್ರಿಯರಲ್ಲಿ ಸಂತಸ ಹೆಚ್ಚಿಗೆ ಮಾಡಿದೆ.

ಹೌದು, ಐಫೋನ್‌ ಪ್ರಿಯರು ಈ ಫೋನ್‌ ಖರೀದಿ ಮಾಡಲು ಬಹಳ ಕಾತುರದಿಂದ ಕಾಯುತ್ತಿದ್ದರು. ಅದರಲ್ಲೂ ಈ ಫೋನ್‌ಗಳ ಬಗ್ಗೆ ಕೆಲವು ಲೀಕ್‌ ಮಾಹಿತಿಗಳು ಟೆಕ್‌ ವಲಯದಲ್ಲಿ ಬಹಳ ಸದ್ದು ಮಾಡಿದ್ದವು. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಐಫೋನ್‌ ಲಾಂಚ್‌ ಬಗ್ಗೆ ಆಪಲ್ ಅಧಿಕೃತ ಹೇಳಿಕೆ ನೀಡಿದೆ. ಹಾಗಿದ್ರೆ, ಈ ಫೋನ್ ಅನ್ನು ಯಾವಾಗ ಲಾಂಚ್‌ ಮಾಡಲಾಗುತ್ತದೆ?, ಲೀಕ್‌ ಫೀಚರ್ಸ್‌ ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

Apple iPhone 15 ಲಾಂಚ್‌ಗೆ ಕೊನೆಗೂ ದಿನಾಂಕ ನಿಗದಿ..

ಐಫೋನ್ 15 ಲಾಂಚ್‌ಗೆ ದಿನಾಂಕ ಘೋಷಣೆ: ಹಲವು ತಿಂಗಳ ವದಂತಿಗಳು ಮತ್ತು ಸೋರಿಕೆಗಳ ಬಳಿಕ ಈಗ ಆಪಲ್ ಅಂತಿಮವಾಗಿ ಐಫೋನ್ 15 (iPhone 15) ಬಿಡುಗಡೆ ಕಾರ್ಯಕ್ರಮವನ್ನು ಘೋಷಣೆ ಮಾಡಿದೆ. ಅಂದರೆ ಈ ಮುಂದಿನ ಪೀಳಿಗೆಯ ಐಫೋನ್ 15 ಸ್ಮಾರ್ಟ್‌ಫೋನ್‌ಗಳನ್ನು ಸೆಪ್ಟೆಂಬರ್ 12 ರಂದು ಲಾಂಚ್‌ ಮಾಡಲಾಗುತ್ತದೆ ಎಂದು ಕಂಪನಿ ಬಹಿರಂಗಪಡಿಸಿದೆ.

ಈ ಐಫೋನ್‌ಗಳು ಅನೇಕ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ನವೀಕರಣಗಳನ್ನು ಪಡೆಯಲಿವೆ ಎಂಬ ವದಂತಿಗಳಿವೆ. ಅದಾಗ್ಯೂ ಹೆಚ್ಚಿನ ಬದಲಾವಣೆಯಿಲ್ಲದೆ ವಿನ್ಯಾಸವು ಒಂದೇ ಆಗಿರಬಹುದು ಎಂದೂ ಸಹ ಹೇಳಲಾಗುತ್ತಿದೆ. ಈ ನಡುವೆ ಲೀಕ್ ಆದ ಮಾಹಿತಿಗಳನ್ನು ನಂಬುವುದಾದರೆ ಐಫೋನ್ 15 ಪ್ರೊ (iPhone 15 Pro) ಮಾದರಿಗಳ ಬೆಲೆಯಲ್ಲಿ ದೊಡ್ಡ ಅಂತರ ಇರಲಿದೆ ಎನ್ನಲಾಗಿದೆ. ಇನ್ನು ಪ್ರಮಾಣಿತ ಮತ್ತು ಪ್ಲಸ್ ಆವೃತ್ತಿಗಳು ಹಳೆಯ ಬೆಲೆಗಳಲ್ಲಿಯೇ ಲಭ್ಯವಿರಬಹುದು ಎಂದು ಹೇಳಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಲ ದಿನ ಕಾಯಲೇಬೇಕಿದೆ.

ಪ್ರಮುಖವಾಗಿ ಮುಂಬರುವ ಐಫೋನ್ ಶ್ರೇಣಿಯಲ್ಲಿ USB-C ಚಾರ್ಜ್ ಆಯ್ಕೆ ಇರಲಿದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಪ್ರಬಲವಾದ ಹೊಸ A17 ಬಯೋನಿಕ್ ಚಿಪ್ ಪ್ರೊ ಆಯ್ಕೆಯನ್ನೂ ಸಹ ಹೊಂದಿರಲಿವೆ ಎಂದು ತಿಳಿದುಬಂದಿದೆ. ಈ ಎಲ್ಲಾ ವೇರಿಯಂಟ್‌ನಲ್ಲಿ ಸ್ಲಿಮ್ಮರ್ ಬೆಜೆಲ್‌ಗಳೊಂದಿಗೆ ದೊಡ್ಡ ಡಿಸ್‌ಪ್ಲೇ ಯನ್ನು ನಿರೀಕ್ಷೆ ಮಾಡಬಹುದು ಎಂದು ಊಹಿಸಲಾಗಿದೆ.

ಇದರಲ್ಲಿ ಮುಖ್ಯವಾಗಿ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಡೈನಾಮಿಕ್ ಐಲ್ಯಾಂಡ್ ಫೀಚರ್ಸ್‌ ಆಯ್ಕೆ ಪಡೆಯಲಿವೆ ಎನ್ನಲಾಗಿದೆ ಹಾಗೂ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ನಯವಾದ ಟೈಟಾನಿಯಂ ಫಿನಿಶ್ ಅನ್ನು ಹೊಂದಿರಬಹುದು ಎಂದು ವರದಿಗಳಿಂದ ತಿಳಿದುಬಂದಿದೆ. ಇದಲ್ಲದೆ ಐಫೋನ್ 15 ಪ್ರೊ ಮ್ಯಾಕ್ಸ್ ನ ಕ್ಯಾಮೆರಾ ವಿಭಾಗದಲ್ಲಿ ಕೆಲವು ಬದಲಾವಣೆ ಆಗಲಿದ್ದು, ರಿಸ್ಕೋಪ್ ಲೆನ್ಸ್‌ ಸೇರಲಿದೆ ಎನ್ನಲಾಗಿದೆ. ಇದು ಉತ್ತಮ ಜೂಮ್ ಸಾಮರ್ಥ್ಯದ ಭರವಸೆ ನೀಡುತ್ತದೆ.

ಇದರೊಂದಿಗೆ ಮ್ಯೂಟ್ ಸ್ವಿಚ್ ಬಟನ್‌ನ ಸ್ಥಳದಲ್ಲಿ ಪ್ರೊ ಮಾದರಿಗಳಲ್ಲಿ ಹೊಸ ಆಕ್ಷನ್ ಬಟನ್ ಅನ್ನು ಸಹ ನೋಡಬಹುದು ಎಂದು ಹೇಳಲಾಗುತ್ತಿದ್ದು, ಮುಂಬರುವ ಐಫೋನ್ 15 ಈವೆಂಟ್‌ನಲ್ಲಿ ಆಪಲ್ ಕೇವಲ ಸ್ಮಾರ್ಟ್‌ಫೋನ್‌ಗಳನ್ನು ಹೊರತುಪಡಿಸಿ ಇತರ ಉತ್ಪನ್ನಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಅಂದರೆ ಆಪಲ್ ವಾಚ್ ಸರಣಿ 9 ರ ಹೊಸ ಸೆಟ್ ಅನ್ನು ಅನಾವರಣಗೊಳಿಸಲಾಗುತ್ತದೆ ಎನ್ನಲಾಗಿದೆ.

ಈ ಸ್ಮಾರ್ಟ್‌ವಾಚ್‌ ಸರಣಿ 8 ರ ಉತ್ತರಾಧಿಕಾರಿಯಾಗಲಿದೆ ಎನ್ನಲಾಗಿದ್ದು, ನೀವು ಆಪಲ್ ವಾಚ್ ಅಲ್ಟ್ರಾದ ನವೀಕರಿಸಿದ ಆವೃತ್ತಿಯನ್ನು ಸಹ ಈ ವೇಳೆ ನಿರೀಕ್ಷೆ ಮಾಡಬಹುದಾಗಿದೆ. ಇದರೊಂದಿಗೆ S9 ಪ್ರೊಸೆಸರ್‌ಗೆ ಅಪ್‌ಗ್ರೇಡ್ ಆಯ್ಕೆ ಸಹ ಇರಲಿದೆ ಎನ್ನಲಾಗಿದ್ದು, ಇದು ಹೊಸ 3D ಮುದ್ರಿತ ಘಟಕಗಳ ಸಂಯೋಜನೆಯ ಆಯ್ಕೆಯನ್ನು ನೀಡುತ್ತದೆ.

Apple iPhone 15 ಲಾಂಚ್‌ಗೆ ಕೊನೆಗೂ ದಿನಾಂಕ ನಿಗದಿ..

ಹಾಗೆಯೇ ಆಪಲ್ M3 ಪ್ರೊಸೆಸರ್‌ನೊಂದಿಗೆ ಹೊಸ ಡಿವೈಸ್‌ ಅನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಅಂದರೆ ಆಪಲ್ ಈ ಚಿಪ್‌ನೊಂದಿಗೆ ಹೊಸ ಐಮ್ಯಾಕ್ ಅನ್ನು ಪರಿಚಯಿಸಲು ಆಪಲ್‌ ಸಿದ್ಧವಾಗಿದೆಯಂತೆ. ಅದಾಗ್ಯೂ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದೂ ಸಹ ಹೇಳಲಾಗಿದೆ. ಐಫೋನ್ 15 ಬಿಡುಗಡೆಯೊಂದಿಗೆ, ಆಪಲ್ ಏರ್‌ಪಾಡ್ಸ್ ಪ್ರೊಗಾಗಿ ಯುಎಸ್‌ಬಿ-ಸಿ ಚಾರ್ಜಿಂಗ್ ಕೇಸ್ ಅನ್ನು ಸಹ ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
After months of rumors and leaks, Apple has finally announced the iPhone 15 launch event. next generation iPhone 15 smartphones will be launched on September 12.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+