ಮುಂಬರುವ 'ಐಫೋನ್ 11' ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು!
ಮೊಬೈಲ್ ಮಾರುಕಟ್ಟೆಯಲ್ಲಿ ಭಿನ್ನವಾಗಿ ಗುರುತಿಸಿಕೊಂಡಿರುವ ಐಫೋನ್‌ಗಳ ಗ್ರಾಹಕರ ಹಾಟ್ ಫೇವರೇಟ್. ಇದೀಗ ಐಫೋನ್ ಪ್ರಿಯರೆಲ್ಲರು 'ಐಫೋನ್ 11' ಫೋನ್‌ಗಾಗಿ ಬಹಳಷ್ಟು ನಿರೀಕ್ಷೆಗಳೊಂದಿಗೆ ಆಪಲ್‌ನತ್ತ ಮುಖ ಮಾಡಿದ್ದಾರೆ. ಕಂಪನಿಯು ಸಹ ತನ್ನ ಬಹುನಿರೀಕ್ಷಿತ 'ಐಫೋನ್ 11' ಆವೃತ್ತಿಯ ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಒಟ್ಟು ಮೂರು ಮಾದರಿ ಐಫೋನ್‌ಗಳು ಲಾಂಚ್ ಆಗುವ ಸಾಧ್ಯತೆಗಳಿವೆ.

ಹೌದು, ಆಪಲ್ ಕಂಪನಿಯು ಐಫೋನ್ 11 ಸರಣಿಯಲ್ಲಿ ಮೂರು ಐಫೋನ್‌ಗಳನ್ನು ಈ ವರ್ಷದ ಸೆಪ್ಟಂಬರ್‌ನಲ್ಲಿ ಬಿಡುಗಡೆ ಮಾಡುವ ಲಕ್ಷಣಗಳನ್ನು ನೀಡಿದೆ. ಈ ಸರಣಿಯಲ್ಲಿ ಐಫೋನ್ 11, ಐಫೋನ್ 11 ಮ್ಯಾಕ್ಸ್ ಮತ್ತು ಐಫೋನ್ 11ಆರ್ ಹೆಸರಿನ ಮೂರು ಐಫೋನ್‌ಗಳು ರಿಲೀಸ್ ಆಗಲಿದ್ದು, ಅವುಗಳು OLED ಡಿಸ್‌ಪ್ಲೇ, ಹೊಸ iOS 13 ಓಎಸ್, ಅತ್ಯುತ್ತಮ ಕ್ಯಾಮೆರಾ ಸೆಟ್‌ಅಪ್, ಸೇರಿದಂತೆ ಅಚ್ಚರಿಯ ಫೀಚರ್ಸ್‌ಗಳು ಸೇರಲಿವೆ.

ಹಾಗೆಯೇ ಈ ಮೂರು ಐಫೋನ್ ಮಾದರಿಗಳು ಹೊಸ ಬಣ್ಣದ ಆಯ್ಕೆಗಳಲ್ಲಿ ಕಾಣಿಸಿಕೊಳ್ಳಲಿದ್ದು, ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೌಲಭ್ಯ ಹೊಂದಿರಲಿವೆ. ಡಾರ್ಕ್‌ಮೋಡ್, ಫೈಂಡ್ ಮೈ ಆಪ್ ಮತ್ತು ಹೆಲ್ತ್ ಆಪ್ ಒಳಗೊಂಡಂತೆ ಹಲವು ನೂತನ ಅಪ್ಲಿಕೇಶನ್‌ಗಳು ಸಹ ಲಭ್ಯವಾಗಲಿವೆ. ಹಾಗಾದರೇ ಹೊಸ ಆಪಲ್ ಐಫೋನ್ 11 ಸರಣಿಯ ಐಫೋನ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೇಲವು ಅಂಶಗಳನ್ನು ಮುಂದೆ ನೋಡೋಣ ಬನ್ನಿರಿ.

ಮೂರು ಐಫೋನ್‌ಗಳು
ಆಪಲ್‌ನ ಐಫೋನ್ 11 ಸರಣಿಯು ಒಟ್ಟು ಮೂರು ಐಫೋನ್ ವೇರಿಯಂಟ್‌ಗಳಲ್ಲಿ ಲಾಂಚ್ ಆಗಲಿದ್ದು, ಅವುಗಳು ಕ್ರಮವಾಗಿ ಐಫೋನ್ 11, ಐಫೋನ್ 11 ಮ್ಯಾಕ್ಸ್ ಮತ್ತು ಐಫೋನ್ 11ಆರ್ ಆಗಿರಲಿವೆ. 2008ರ ಜನಪ್ರಿಯ 5.8 ಇಂಚಿನ OLED ಡಿಸ್‌ಪ್ಲೇ, 6.5 ಇಂಚಿನ OLED ಡಿಸ್‌ಪ್ಲೇ ಮತ್ತು 6.1 ಇಂಚಿನ LCD ಡಿಸ್‌ಪ್ಲೇ ಮಾದರಿಯನ್ನೇ 2019ರ ಐಫೋನ್ ಸರಣಿಯಲ್ಲಿಯೂ ಮುಂದುವರಿಸುವ ಸಾಧ್ಯತೆಗಳಿವೆ. ಐಫೋನ್ 11ಆರ್ ಮೊದಲು ಲಾಂಚ್ ಆಗಬಹುದು.

ಹೊಸ iOS 13 ಓಎಸ್ ಬೆಂಬಲ
ಆಪಲ್ ಹೊಸ iOS 13 ಓಎಸ್ ಮುಂಬರುವ ಐಫೋನ್ 11 ಸರಣಿಯ ಐಫೋನ್‌ಗಳಲ್ಲಿ ಸೇರಿರಲಿದ್ದು, ಅತ್ಯುತ್ತಮ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ. ಡಾರ್ಕ್‌ಮೋಡ್, ಫೈಂಡ್ ಮೈ ಆಪ್, ರಿಮೈಂಡರ್ಸ್ ಆಪ್, ಹೆಲ್ತ್ ಆಪ್ ಸೇರಿದಂತೆ ಫೋಟೊ ಎಡಿಟಿಂಗ್ ಮತ್ತು ವಿಡಿಯೊ ಎಡಿಟಿಂಗ್ ಆಪ್ಸ್‌ಗಳಲ್ಲಿ ಸಾಕಷ್ಟು ಹೊಸತನದ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ.

ಅಪ್‌ಗ್ರೇಡ್ ಕ್ಯಾಮೆರಾ
ಮುಂಬರುವ 'ಐಫೋನ್ 11' ಸರಣಿಯಲ್ಲಿ ಕ್ಯಾಮೆರಾ ಆಯ್ಕೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲಿದ್ದು, ಸ್ವೇರ್ ಆಕಾರದಲ್ಲಿ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಐಫೋನ್ 11 ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಮತ್ತು ಒಂದು ಸೆಲ್ಫಿ ಕ್ಯಾಮೆರಾ ಇರಲಿದ್ದು, ಹಾಗೆಯೇ ಐಫೋನ್ 11 ಮ್ಯಾಕ್ಸ್ ಸಹ ಹಿಂಬದಿ ಮೂರು ಕ್ಯಾಮೆರಾ ಮತ್ತು ಒಂದು ಸೆಲ್ಫಿ ಕ್ಯಾಮೆರಾ ಒಳಗೊಂಡಿರಲಿದೆ ಮತ್ತು ಐಫೋನ್ 11 ಆರ್ ಒಂದು ಸೆಲ್ಫಿ ಕ್ಯಾಮೆರಾ ಮತ್ತು ಹಿಂಬದಿ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿವೆ.

ಹೊಸ ಕಲರ್ ಆಯ್ಕೆ
ನೂತನ ಐಫೋನ್ 11 ಸರಣಿಯ ಮೂರು ಐಫೋನ್‌ಗಳು ಹೊಸ ಬಣ್ಣಗಳ ಆಯ್ಕೆಗಳಲ್ಲಿ ಕಂಗೊಳಿಸಲಿವೆ. ಹಳೆಯ ಐಫೋನ್ ಎಕ್ಸ್‌ಆರ್ ತರಹ ಹೊಸ 'ಐಫೋನ್ 11ಆರ್' ವೈಟ್, ಬ್ಲ್ಯಾಕ್, ರೆಡ್, ಯೆಲ್ಲೊ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದ್ದು, ಇದರೊಂದಿಗೆ ಹೊಸ ಬಣ್ಣಗಳಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಹಾಗೆಯೇ ಐಫೋನ್ 11 ಮ್ಯಾಕ್ಸ್ ಮತ್ತು ಐಫೋನ್ 11 ಸಹ ನೂತನ ಕಲರ್ ಪಡೆಯಲಿವೆ.

ಯುಎಸ್‌ಬಿ-ಸಿ
ಹೊಸ ಸರಣಿಯ ಐಫೋನ್‌ಗಳಲ್ಲಿ ಕಂಪನಿಯು ಯುಎಸ್‌ಬಿ-ಸಿ ಪೋರ್ಟ್ ಆಯ್ಕೆಯನ್ನು ಒಳಗೊಂಡಿರಲಿದ್ದು, ಇದರೊಂದಿಗೆ ಲೈಟಿಂಗ್ ಟು ಯುಎಸ್‌ಬಿ ಕೇಬಲ್ ಸೌಲಭ್ಯವನ್ನು ಒದಗಿಸಲಿದೆ. ಹಾಗೆಯೇ (18W USB-C) ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ನೀಡಲಿದ್ದು, ಐಫೋನ್‌ಗಳು ಬೇಗನೆ ಚಾರ್ಜ್ ಪಡೆದುಕೊಳ್ಳಲು ಈ ತಂತ್ರಜ್ಞಾನ ನೆರವಾಗಲಿದೆ.


Click it and Unblock the Notifications