Subscribe to Gizbot

ಆಪಲ್‌ 'ಐಫೋನ್ 7' ಲಾಂಚ್‌ ಮತ್ತು ತಿಳಿಯಲೇಬೇಕಾದ ವಿಶೇಷ ಫೀಚರ್‌ಗಳು!

Written By:

2016 ರಲ್ಲಿ ಹೆಚ್ಚು ಜನರು ಮಾತನಾಡಿದ್ದು ಐಫೋನ್ 7 ಬಗ್ಗೆ. ಇಷ್ಟುದಿನ ಐಫೋನ್ 7 ಮತ್ತು ಅದರ ಫೀಚರ್‌ ಬಗ್ಗೆ ಹೆಚ್ಚು ಜನರು ಕೇವಲ ಗಾಳಿ ಸುದ್ದಿಯನ್ನೇ ಕೇಳುತ್ತಿದ್ದರು. ಅಲ್ಲದೇ ಹಲವು ಬಾರಿ ಐಫೋನ್ 7 ಬಗ್ಗೆ ಕೆಲವು ಮಾಹಿತಿಗಳು ಲೀಕ್‌ ಆಗಿದ್ದವು. ಆದ್ರೆ ಈಗ ಅಂತೂ ಇಂತೂ ಐಫೋನ್ 7 ಲಾಂಚ್‌ ಆಗುವ ದಿನಾಂಕವನ್ನು ಪ್ರಕಟಿಸಲಾಗಿದೆ.

ಆಪಲ್‌ನ ಐಫೋನ್‌ ಪ್ರಿಯರು ಐಫೋನ್ 7 ಬಗ್ಗೆ ನಿರೀಕ್ಷಿಸಬಹುದಾದ ಫೀಚರ್‌, ಮತ್ತು ಲಾಂಚ್‌ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಐಫೋನ್ ಕ್ಯಾಮೆರಾ ಮತ್ತು ಫ್ಲ್ಯಾಶ್‌ ನಡುವಿನ ಸಣ್ಣ ಬ್ಲಾಕ್‌ ಹೋಲ್‌ ರಹಸ್ಯ ಏನು ಗೊತ್ತೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ 7 ಲಾಂಚ್‌ ಡೇಟ್‌

ಐಫೋನ್ 7 ಲಾಂಚ್‌ ಡೇಟ್‌

ಕುಪರ್ಟಿನೋ ದೈತ್ಯ ಕಂಪನಿ ಆಪಲ್‌ ಐಫೋನ್ 7 ಬಗೆಗಿನ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆಯಲು ಸಜ್ಜಾಗಿದೆ. ಹೌದು, ಸ್ಯಾನ್‌ ಫ್ರ್ಯಾನ್ಸಿಸ್ಕೋದಲ್ಲಿ ಐಫೋನ್ 7 ಲಾಂಚ್‌ ಮಾಡಲು ಆಪಲ್‌ ಸಿದ್ಧವಾಗಿದ್ದು, ಸೆಪ್ಟೆಂಬರ್‌ 7 ಈ ಕಾರ್ಯಕ್ರಮ ಜರುಗಲಿದೆ. ಲಾಂಚ್‌ ಮಾಡಲು ಈಗಾಗಲೇ ಮಾಧ್ಯಮಗಳಿಗೆ ಆಹ್ವಾನವನ್ನು ಸಹ ನೀಡಿದೆ.

ಐಫೋನ್‌ 7 ಬುಕ್ಕಿಂಗ್‌

ಐಫೋನ್‌ 7 ಬುಕ್ಕಿಂಗ್‌

ಅಂದಹಾಗೆ ಆಪಲ್‌ ಐಫೋನ್ 7 ಸೆಪ್ಟೆಂಬರ್‌ 7 ರಂದು ಲಾಂಚ್‌ ಆಗಲಿದ್ದು, ಸೆಪ್ಟೆಂಬರ್ 9 ರಿಂದ ಐಫೋನ್ 7 ಖರೀದಿಸಲು ಕಾಯ್ದಿರಿಸಬಹುದಾಗಿದೆ. ಸೆಪ್ಟೆಂಬರ್‌ 16 ರಿಂದ ಸ್ಟೋರ್‌ಗಳಲ್ಲಿ ಖರೀದಿಸಲು ಲಭ್ಯವಾಗಲಿವೆ.

'ಐಫೋನ್ 7' 3 ಮಾಡೆಲ್‌ಗಳಲ್ಲಿ ಲಾಂಚ್‌

'ಐಫೋನ್ 7' 3 ಮಾಡೆಲ್‌ಗಳಲ್ಲಿ ಲಾಂಚ್‌

ಅಂದಹಾಗೆ ಫೋನ್‌ ಪ್ರಿಯರಿಗೆ ತಿಳಿದಿರುವಂತೆ ಈ ವರ್ಷ ಐಫೋನ್ 7 ಬಗ್ಗೆ ಹೆಚ್ಚು ಮಾತನಾಡಲಾಗಿದೆ. ಅಂತೆಯೇ ಐಫೋನ್ 7 ಬಗೆಗಿನ ವದಂತಿಗಳೆಂದರೆ, 'ಐಫೋನ್ 7 ಮೂರು ಮಾಡೆಲ್‌ಗಳಲ್ಲಿ ಲಾಂಚ್‌ ಆಗುತ್ತಿದೆ. ಐಫೋನ್ 7, ಐಫೋನ್ 7 ಪ್ಲಸ್‌, ಐಫೋನ್ 7 ಪ್ರೊ'. ಜೊತೆಗೆ ಆಪಲ್‌ (2nd gen) ವಾಚ್ ಹೊಸ ಐಫೋನ್‌ ಮಾಡೆಲ್‌ಗಳ ಜೊತೆ ಲಾಂಚ್‌ ಆಗಲಿದೆ ಎಂದು ಮಾಹಿತಿ ತಿಳಿಯಲಾಗಿದೆ.

 'ಐಫೋನ್ 7' ಬಗೆಗಿನ ವದಂತಿಗಳು

'ಐಫೋನ್ 7' ಬಗೆಗಿನ ವದಂತಿಗಳು

'ಐಫೋನ್ 7' 4.7 ಇಂಚಿನ ಸ್ಕ್ರೀನ್ ಹೊಂದಿದ್ದು, ಇತರೆ 'ಐಫೋನ್ 7' ಮಾಡೆಲ್‌ 5.5 ಇಂಚಿನ ಡಿಸ್‌ಪ್ಲೇ ಸ್ಕ್ರೀನ್‌ ಹೊಂದಿವೆ ಎಂದು ವದಂತಿಗಳು ಹೇಳುತ್ತಿವೆ. ಅಲ್ಲದೇ ಗಾಳಿ ಸುದ್ದಿ ಪ್ರಕಾರ ಐಫೋನ್ 7 ಪ್ಲಸ್‌ ಮತ್ತು 'ಐಫೋನ್ 7' ಪ್ರೊ'ಗಳು ಒಂದೇ ರೀತಿಯ ಫೀಚರ್‌ಗಳನ್ನು ಹೊಂದಿದ್ದು, ಎರಡು 'ಐಫೋನ್ 7' ಮಾಡೆಲ್‌ಗಳು ಸಹ 2 ಹಿಂಭಾಗ ಕ್ಯಾಮೆರಾ ಸಪೋರ್ಟ್ ಮಾಡಲಿವೆ ಎನ್ನಲಾಗಿದೆ.

'ಐಫೋನ್ 7' ಮಾಡೆಲ್‌ 256GB

ಇತ್ತೀಚಿನ ವರದಿಗಳ ಪ್ರಕಾರ 'ಐಫೋನ್ 7' ಮಾಡೆಲ್‌ 256GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ ಎಂದು ಹೇಳಿವೆ. ಈ ವರದಿ ತೈವಾನ್‌ ಮೂಲದಿಂದ ಬಂದಿದ್ದು, ಆಪಲ್‌ 256GB ಸ್ಟೋರೇಜ್‌ ಸಾಮರ್ಥ್ಯದ ಐಫೋನ್‌ 7 ಅನ್ನು ಲಾಂಚ್ ಮಾಡಲಿದೆ ಎಂದು ಹೇಳಲಾಗಿದೆ. ಆಪಲ್‌ ಮೊದಲ 16GB ಗಿಂತ ವಿಭಿನ್ನವಾಗಿ 32GB ಮಾಡೆಲ್‌ ಇರಲಿದೆ ಎನ್ನಲಾಗಿದೆ.

ಡ್ಯುಯಲ್‌ ಕ್ಯಾಮೆರಾ ಸೆಟಪ್, ಹೆಡ್‌ಫೋನ್ ಜಾಕ್‌ ರಹಿತ

ಡ್ಯುಯಲ್‌ ಕ್ಯಾಮೆರಾ ಸೆಟಪ್, ಹೆಡ್‌ಫೋನ್ ಜಾಕ್‌ ರಹಿತ

ಬ್ಲೂಮ್‌ಬರ್ಗ್‌ನ 'ಮಾರ್ಕ್‌ ಗುರ್‌ಮ್ಯಾನ್' ಎಂಬುವವರು ಆಪಲ್ ಬಗ್ಗೆ ವದಂತಿಗಳನ್ನು ತಿಳಿಯುವಲ್ಲಿ ಪ್ರಖ್ಯಾತವಾಗಿದ್ದು, ಐಫೋನ್ 7 ಡ್ಯುಯಲ್ ಹಿಂಭಾಗ ಕ್ಯಾಮೆರಾ ಹೊಂದಲಿದ್ದು, ಟ್ಯಾಪ್‌ಟಿಕ್‌ ಫೀಡ್‌ಬ್ಯಾಕ್‌ನ ಹೋಮ್‌ ಬಟನ್‌ ಹೊಂದಲಿದೆ. ಆದರೆ ಹೆಡ್‌ಫೋನ್‌ ಜಾಕ್ ರಹಿತವಾಗಿರಲಿದೆ ಎಂದು ವರದಿ ಮಾಡಿದ್ದಾರೆ. ಅಂದಹಾಗೆ ಡ್ಯುಯಲ್‌ ಹಿಂಭಾಗ ಕ್ಯಾಮೆರಾ ಸೆಟಪ್‌ ಸಣ್ಣ 4.7 ಇಂಚಿನ ಸ್ಕ್ರೀನ್ ವರ್ಸನ್‌ ಐಫೋನ್‌ನಲ್ಲಿ ಕಾಣುವುದಿಲ್ಲ, ಈ ಕ್ಯಾಮೆರಾಗಳು ಪ್ರಕಾಶಮಾನವಾದ ಫೋಟೋಗಳಿಗೆ ಅವಕಾಶ ನೀಡಲಿವೆ, ವಿಶೇಷವಾಗಿ ಕಡಿಮೆ ಬೆಳಕಿನ ಸೆಟ್ಟಿಂಗ್ಸ್‌ನಲ್ಲಿ ಸಹಾಯಕವಾಗಲಿವೆ ಎಂದು ಹೇಳಿದ್ದಾರೆ.
Image Source: The Malignant

 ಕಪ್ಪು ಬಣ್ಣದಲ್ಲಿ ಐಫೋನ್‌ 7

ಕಪ್ಪು ಬಣ್ಣದಲ್ಲಿ ಐಫೋನ್‌ 7

ಗಾಳಿ ಸುದ್ದಿಗಳ ಪ್ರಕಾರ 'ಐಫೋನ್ 7 ಪ್ಲಸ್‌' ಮಾಡೆಲ್‌ ಡಿವೈಸ್‌ ಕಪ್ಪು ಬಣ್ಣದ ಭಿನ್ನತೆಯಲ್ಲಿ ಲಾಂಚ್‌ ಆಗಲಿದೆ ಎಂದು ಚೀನಾ ಹೇಳಿದೆ. ಅಲ್ಲದೇ ಆಪಲ್‌ ಕಡು ನೀಲಿ ಬಣ್ಣದ ವರ್ಸನ್‌ನಲ್ಲಿಯೂ ಸಹ ಲಾಂಚ್‌ ಮಾಡಲಿದೆ. ವಿನ್ಯಾಸಕಾರ 'ಮಾರ್ಟಿನ್‌ ಹಜೆಕ್ 3D ಐಫೋನ್ 7 ಅನ್ನು ಕಪ್ಪು ಬಣ್ಣದಲ್ಲಿ ರಚಿಸಿದ್ದರು, ಈ ಮಾಹಿತಿ ಈಗಾಗಲೇ ಇಂಟರ್ನೆಟ್‌ನಲ್ಲಿ ವೈರಲ್ ಆಗಿತ್ತು. ವಿಶೇಷವಾಗಿ ಐಫೋನ್‌ 7 ಒತ್ತಡದ ಟಚ್‌ ಬಟನ್ ಮತ್ತು ಸ್ಮಾರ್ಟ್‌ ಲೈಟಿಂಗ್ ಕನೆಕ್ಟರ್‌ ಅನ್ನು ಹೊಂದಲಿದೆ ಎನ್ನಲಾಗಿದೆ.
Image Source: The Malignant

ಕೆಳಭಾಗದಲ್ಲಿ ಸ್ಪೀಕರ್‌ ಗ್ರಿಲ್

ಕೆಳಭಾಗದಲ್ಲಿ ಸ್ಪೀಕರ್‌ ಗ್ರಿಲ್

ಚೀನಾದ ವೆಬ್‌ಸೈಟ್‌ MyDrivers ವರದಿ ಪ್ರಕಾರ ಹೊಸ ಐಫೋನ್ ಎರಡನೇ 'ಸ್ಪೀಕರ್‌ ಗ್ರಿಲ್‌ ' ಅನ್ನು ಕೆಳಭಾಗದಲ್ಲಿ ಹೊಂದಿದ್ದು, ಹೆಡ್‌ಫೋನ್‌ ಜಾಕ್‌ ಮತ್ತು ಡ್ಯುಯಲ್‌ ಕ್ಯಾಮೆರಾ ಇರುವುದಿಲ್ಲ ಎಂದು ವರದಿ ಮಾಡಿದೆ. ಆದರೆ ಟಿಮ್ ಕುಕ್‌'ರವರು ತಮ್ಮ ಹೊಸ ಐಫೋನ್‌ ಬಿಡುಗಡೆಯಿಂದ ಎಲ್ಲರೂ ಸಹ ಅಪ್‌ಗ್ರೇಡ್‌ಗೆ ಉತ್ಸುಹರಾಗುವಂತೆ ಮಾಡುತ್ತಾರೆ ಎನ್ನಲಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಐಫೋನ್ ಬಿಸಿಯಾಗುತ್ತಿದೆ - ಪರಿಹಾರಗಳೇನು?

ಐಫೋನ್‌ 6s ಬ್ಯಾಟರಿ ದೀರ್ಘತೆಗೆ ಟಿಪ್ಸ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Apple iPhone 7 launch date confirmed: Here’s everything we know so far. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot