ಭಾರತದಲ್ಲಿ ಇಂದು ಐಫೋನ್ SE 2020 ಸೇಲ್‌!..ಬೆಲೆ 42,500ರೂ!

|

ಜನಪ್ರಿಯ ಆಪಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಐಫೋನ್ SE 2020 ಈಗಾಗಲೇ ದೇಶಿಯ ಐಫೋನ್ ಪ್ರಿಯರ ಗಮನ ಸೆಳೆದಿದೆ. ಇನ್ನು ಐಫೋನ್ SE 2020 ಇಂದು(ಮೇ.20) ಮಧ್ಯಾಹ್ನ 12ಗಂಟೆಗೆ ಇ-ಕಾಮರ್ಸ್‌ ತಾಣಗಳಲ್ಲಿ ಸೇಲ್ ಆರಂಭಿಸಲಿದೆ. ಅಂದಹಾಗೆ ಈ ಐಫೋನ್ ಆರಂಭಿಕ ಬೆಲೆಯು 42,500ರೂ.ಗಳಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗಲಿದೆ.

ಐಫೋನ್ SE 2020

ಹೌದು, ಬಜೆಟ್‌ ಬೆಲೆಯ ಐಫೋನ್ ಎಂದೇ ಗುರುತಿಸಿಕೊಂಡಿರುವ ಐಫೋನ್ SE 2020 ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಐಫೋನ್ ಖರೀದಿಯೊಂದಿಗೆ 6 ತಿಂಗಳ ಉಚಿತ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯು ದೊರೆಯುತ್ತದೆ. ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳ ಮೂಲಕ ಈ ಐಫೋನ್ ಖರೀದಿಸಿದರೇ 3,600ರೂ. ವರೆಗೂ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. 64GB ಸ್ಟೋರೇಜ್‌ನ ಬೇಸ್‌ ವೇರಿಯಂಟ್ ಐಫೋನ್ SE2020 38,900ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 128GB ಮತ್ತು 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳು ಇವೆ. ಇನ್ನೂ ಈ ಫೋನ್ ರೆಡ್, ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳ ಆಯ್ಕೆಗಳನ್ನು ಪಡೆದಿದೆ. ಹಾಗಾದರೇ ಈ ಐಫೋನ್‌ ಫೀಚರ್ಸ್‌ಗಳೆನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಆಪಲ್ ಐಫೋನ್ SE(2020) 4.7-ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ. ಅಲ್ಲದೆ ಡಾಲ್ಬಿ ವಿಷನ್ ಮತ್ತು ಎಚ್‌ಡಿಆರ್ 10 ಅನ್ನು ಬೆಂಬಲಿಸಲಿದೆ. ಇನ್ನು ಈ ಡಿಸ್‌ಪ್ಲೇ ಸ್ಕ್ರೀನ್‌ ಹೊಸ ಐಫೋನ್ ಮಾದರಿಗಳಲ್ಲಿ ಕಂಡುಬರುವ ಹ್ಯಾಪ್ಟಿಕ್ ಟಚ್ ಬೆಂಬಲವನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ಐಫೋನ್ SE(2020) ಆಪಲ್‌ ಕಂಪೆನಿ A 13 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 13 ಬೆಂಬಲ ನೀಡಲಿದೆ. ಹುಡ್ ಅಡಿಯಲ್ಲಿ, ಐಫೋನ್ 11, ಐಫೋನ್ 11 ಪ್ರೊ ಮತ್ತು ಐಫೋನ್ 11 ಪ್ರೊ ಮ್ಯಾಕ್ಸ್‌ನ ಮಾದರಿಯನ್ನೆ ಹೊಂದಿದೆ. ಇನ್ನು ಈ ಐಫೋನ್‌ RAM ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಲಬ್ಯವಿಲ್ಲ, ಆದರೆ ಈ ಐಫೋನ್‌ 64GB, 128GB, ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಲಬ್ಯವಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇನ್ನು ಈ ಹೊಸ ಐಫೋನ್ ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದೆ. ಇದು 2 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ f/ 1.8 ಲೆನ್ಸ್‌ + ಒಐಎಸ್ ಹೊಂದಿದೆ ಮತ್ತು ಸ್ಲೋ ಸಿಂಕ್‌ ಜೊತೆಗೆ ದಿಗೆ ಎಲ್ಇಡಿ ಟ್ರೂ ಟೋನ್ ಫ್ಲ್ಯಾಷ್ ಹೊಂದಿದೆ. ಇದು 60kps ವರೆಗೆ 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಫೋಟೋಗಳಿಗಾಗಿ ಸ್ಮಾರ್ಟ್ HDR ಅನ್ನು ನೀಡುತ್ತದೆ. ಜೊತೆಗೆ ರಿಯರ್‌ ಕ್ಯಾಮೆರಾ ಪ್ರೊಟೆಕ್ಷನ್‌ ಗಾಗಿ ಶಾಂಪೈರ್‌ ಕ್ರಿಸ್ಟಲ್ ಲೆನ್ಸ್ ಕವರ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಕ್ಯಾಮೆರಾ ಫೀಚರ್ಸ್‌ನಲ್ಲಿ ಪೋರ್ಟ್ರೇಟ್ ಮೋಡ್ ಅನ್ನು ನೀಡಲಾಗಿದೆ. ಜೊತೆಗೆ 7 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಆಪಲ್‌ ಐಫೋನ್‌SE(2020) ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ. ಆದರೆ ಈ ಐಫೋನ್‌ ಬ್ಯಾಟರಿ ಸಾಮರ್ಥ್ಯವೂ ಐಫೋನ್‌ 8 ಮಾದರಿಯನ್ನ ಹೊಂದಿರುವ ಸಾಧ್ಯತೆ ಇದೆ. ಜೊತೆಗೆ ಈ ಬ್ಯಾಟರಿ ಪ್ಯಾಕ್‌ಅಪ್‌ 13 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಂ ಮತ್ತು 40 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಟೈಂ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದ್ದು, 18W ಚಾರ್ಜರ್ನೊಂದಿಗೆ 30 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಮಾಡಲಿದೆ. ಕಿ ವೈರ್‌ಲೆಸ್ ಚಾರ್ಜಿಂಗ್ ಬಳಸಿಕೊಂಡು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ 802.11ax, ವೈ-ಫೈ ಕಾಲ್‌, ಎನ್‌ಎಫ್‌ಸಿ, ಬ್ಲೂಟೂತ್ ವಿ 5.0, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಹಾಗೇಯೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಐಫೋನ್ SE (2020) ಬೆಲೆ 64GB ಶೇಖರಣಾ ರೂಪಾಂತರಕ್ಕೆ 42,500 ರೂ., 128GB ಶೇಖರಣಾ ರೂಪಾಂತರಕ್ಕೆ 47,800 ರೂ., ಮತ್ತು ರೂ. 256GB ಶೇಖರಣಾ ರೂಪಾಂತರಕ್ಕೆ 58,300 ರೂ. ಆಗಿದೆ. ಈ ಫೋನ್ ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ.

Best Mobiles in India

English summary
The base price of the iPhone SE 2020 is Rs 42,500. This is the 64GB model of the device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X