Apple iPhone: ಆಪಲ್ ದೀಪಾವಳಿ ಸೇಲ್‌ನಲ್ಲಿ ಭರ್ಜರಿ ಬ್ಯಾಂಕ್ ಕೊಡುಗೆ, ಐಫೋನ್ ಖರೀದಿಯಲ್ಲಿ ಭಾರೀ ಉಳಿತಾಯ
ಆಪಲ್ ಐಫೋನ್‌ಗಳನ್ನು (Apple iPhone) ಹೊಂದುವುದು ಅಥವಾ ಹೊಸ ಐಫೋನ್‌ಗೆ ಅಪ್‌ಗ್ರೇಡ್ ಆಗುವುದು ಜನರಿಗೆ ಸಂತಸ ವಿಚಾರ. ಅದರಂತೆ ಈಗ ಐಫೋನ್ 15 ಸರಣಿ(iPhone 15 series) ಫೋನ್‌ಗಳು ಲಾಂಚ್ ಆಗಿದ್ದು, ಇದರೊಂದಿಗೆ ಆಪಲ್ ಮಗದೊಂದು ಸಂತಸದ ವಿಚಾರ ಘೋಷಣೆ ಮಾಡಿದೆ. ಇದರಿಂದಾಗಿ ಐಫೋನ್‌ಗಳ ಖರೀದಿ ಮೇಲೆ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.
ಹೌದು, ಆಪಲ್‌ನ ಐಫೋನ್‌ಗಳಿಗೆ ಇರುವ ಬೇಡಿಕೆ ಇತರೆ ಯಾವುದೇ ಫೋನ್‌ಗಳಿಗೆ ಇಲ್ಲ. ಈ ಫೋನ್‌ಗಳ ಕಾರ್ಯಕ್ಷಮತೆ ಹಾಗೂ ದೀರ್ಘ ಬಾಳಿಕೆ ವಿಷಯ ಮಾತ್ರ ಗ್ರಾಹಕರನ್ನು ಸದಾಕಾಲ ಸೆಳೆಯುತ್ತದೆ. ಅದರಂತೆ ಈಗ ಐಫೋನ್ 13, ಐಫೋನ್ 14, ಐಫೋನ್ 15 ಸರಣಿ (iPhone 13, iPhone 14, iPhone 15 series) ಫೋನ್‌ಗಳಿಗೆ ದೊಡ್ಡ ಮಟ್ಟದ ಬ್ಯಾಂಕ್ ಆಫರ್ (Bank offer) ಅನ್ನು ಘೋಷಣೆ ಮಾಡಲಾಗಿದೆ. ಹಾಗಿದ್ರೆ, ಈ ಫೋನ್‌ಗಳಿಗೆ ಏನೆಲ್ಲಾ ಆಫರ್ ಇದೆ, ಸುಲಭವಾಗಿ ಈ ಪ್ರೀಮಿಯಂ ಫೋನ್‌ಗಳನ್ನು ಖರೀದಿ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಪಲ್ ದೀಪಾವಳಿ ಸೇಲ್ 2023: ಈಗಾಗಲೇ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಈ ಹಬ್ಬದ ಸೀಸನ್‌ನಲ್ಲಿ ವಿಶೇವಾದ ಆಫರ್‌ಗಳನ್ನು ಘೋಷಣೆ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಖರೀದಿ ಮಾಡುವವರಿಗೆ ಭಾರೀ ಹಣ ಉಳಿತಾಯವಾಗುಂತೆ ಮಾಡಿವೆ. ಅದರಂತೆ ಆಪಲ್ ಸಹ ಆಪಲ್ ದೀಪಾವಳಿ ಸೇಲ್ 2023 ಅನ್ನು (Apple Diwali Sale 2023) ಘೋಷಣೆ ಮಾಡಿದೆ. ಇದರಲ್ಲಿ ಹೊಸ ಐಫೋನ್ 15 ಸರಣಿ, ಮ್ಯಾಕ್‌ಬುಕ್ ಏರ್/ಪ್ರೊ ಮಾದರಿಗಳು, ಆಪಲ್ ವಾಚ್ ಸೀರಿಸ್ 9, ವಾಚ್ ಅಲ್ಟ್ರಾ 2, ಏರ್ಪಾಡ್ಸ್ ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಉತ್ತಮ ಕೊಡುಗೆಗಳು ಲಭ್ಯ ಇದೆ.
ಐಫೋನ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನೀವು ಈ ವೇಳೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ (HDFC Bank Credit Card) ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಅರ್ಹ ಡಿವೈಸ್‌ಗಳ ಮೇಲೆ 6,000ರೂ.ಗಳ ವರೆಗೆ ರಿಯಾಯಿತಿ ನೀಡಲಾಗುತ್ತದೆ. ಇಷ್ಟೇ ಅಲ್ಲದೆ ಯಾವುದೇ ವೆಚ್ಚದ ಇಎಮ್‌ಐ ಆಯ್ಕೆಗಳನ್ನು ಸಹ ನೀಡುವುದಾಗಿ ತಿಳಿಸಿದೆ. ಹಾಗಿದ್ರೆ, ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ,
ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಬ್ಯಾಂಕ್ ರಿಯಾಯಿತಿಗಳು: ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ (iPhone 15 Pro and iPhone 15 Pro Max) ಖರೀದಿಯಲ್ಲಿ ನೀವು 6,000ರೂ. ವರೆಗೆ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದೇ ವೇಳೆ ನೀವೇನಾದರೂ ಐಫೋನ್ 15 ಮತ್ತು ಐಫೋನ್ 15 ಪ್ಲಸ್ (iPhone 15 and iPhone 15 Plus) ಖರೀದಿ ಮಾಡಲು ಮುದಾದರೆ 5,000ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದು. ಇನ್ನು ಐಫೋನ್ 15 79,900ರೂ. ರಿಂದ ಆರಂಭ ಆದರೆ, ಐಫೋನ್ 15 ಪ್ಲಸ್ 89,90ರೂ.ಗಳಿಂದ ಹಾಗೂ ಐಫೋನ್ 15 ಪ್ರೊ 1,34,900ರೂ.ಗಳಿಂದ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ 1,59,900ರೂ.ಗಳಿಂದ ಆರಂಭ ಆಗಲಿವೆ.
ಐಫೋನ್ 14 ಮತ್ತು 14 ಪ್ಲಸ್‌ಗೆ ಏನಿದೆ ಆಫರ್: ನೀವು ಹೊಸ ಸ್ಮಾರ್ಟ್‌ಫೋನ್ ಬದಲಿಗೆ ಹಳೆಯ ಮಾಡೆಲ್ (iPhone 14 and 14 Plus) ಅನ್ನು ಖರೀದಿ ಮಾಡಲು ಮುಂದಾದ್ರೆ ಅದಕ್ಕೂ ಸಹ ಆಫರ್ ನೀಡಲಾಗಿದೆ. ಅಂದರೆ ಈ ಫೋನ್ ಖರೀದಿ ಮೇಲೆ 4,000ರೂ. ಬ್ಯಾಂಕ್ ರಿಯಾಯಿತಿ ಸಿಗಲಿದೆ. ಈ ಫೋನ್‌ನ ಸಾಮಾನ್ಯ ಬೆಲೆ 69,900ರೂ. ನಿಂದ ಪ್ರಾರಂಭವಾಗುತ್ತದೆ. ಹಾಗೆಯೇ 14 ಪ್ಲಸ್ 79,900ರೂ.ಗಳ ಬೆಲೆಯಿಂದ ಆರಂಭ ಆಗಲಿದೆ.
ಐಫೋನ್ 13 ಗೆ ಇರುವ ಡಿಸ್ಕೌಂಟ್: ಈ ಕ್ಷಣಕ್ಕೂ ಹೆಚ್ಚಿನ ಬೇಡಿಕೆ ಇರುವ ಫೋನ್ ಎಂದರೆ ಅದು ಐಫೋನ್ 13 (iPhone 13). ಈ ಫೋನ್ ಮೇಲೆ ನೀವು 3,000ರೂ.ಗಳ ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಈ ಫೋನ್‌ನ ಆರಂಭಿಕ ಸರ 59,900ರೂ.ಗಳಿಂದ ಪ್ರಾರಂಭವಾಗುತ್ತದೆ. ಹಾಗೆಯೇ ಐಫೋನ್ ಎಸ್ಇ ನಲ್ಲಿ 2,000 ರೂ.ಗಳ ಬ್ಯಾಂಕ್ ಆಫರ್ ಸಿಗಲಿದ್ದು, 49,900 ರೂ.ಗಳ ಆರಂಭಿಕ ಬೆಲೆಯಲ್ಲಿ ಇದನ್ನು ಖರೀದಿ ಮಾಡಬಹುದು.
ವಿನಿಮಯ ಕೊಡುಗೆಗಳೇನು?: ಆಪಲ್ ನ ಈ ವಿಶೇಷ ಸೇಲ್ ಸಮಯದಲ್ಲಿ ಆರು ತಿಂಗಳವರೆಗೆ ಯಾವುದೇ ವೆಚ್ಚದ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದೆ.ಅರ್ಹ ಡಿವೈಸ್‌ನ ವಿನಿಮಯದ ಮೂಲಕ ಖರೀದಿದಾರರು 67,800ರೂ. ವರೆಗೆ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಕಡಿಮೆ ಹಣ ಕೊಟ್ಟು ಈ ಹೊಸ ಮಾದರಿಯ ಫೋನ್‌ಗಳನ್ನು ಖರೀದಿ ಮಾಡಲು ಆಪಲ್ ಅವಕಾಶ ಮಾಡಿಕೊಟ್ಟಿದೆ.

ಆಪಲ್ ಮ್ಯೂಸಿಕ್ ಉಚಿತ: ಈ ಸೇಲ್‌ನಲ್ಲಿ ಐಫೋನ್‌ಗಳನ್ನು ಖರೀದಿ ಮಾಡಿದ್ರೆ ಆರು ತಿಂಗಳವರೆಗೆ ಆಪಲ್ ಮ್ಯೂಸಿಕ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಆಪಲ್ ಘೋಷಣೆ ಮಾಡಿದೆ. ನೀವು ಆಪಲ್ ಟಿವಿ + ಮತ್ತು ಆಪಲ್ ಆರ್ಕೇಡ್ ಅನ್ನು ಉಚಿತವಾಗಿ ಮೂರು ತಿಂಗಳವರೆಗೆ ಪಡೆದುಕೊಳ್ಳಬಹುದು. ಮತ್ಯಾಕೆ ತಡ ನಿಮ್ಮ ನೆಚ್ಚಿನ ಆಪಲ್ ಡಿವೈಸ್ ಅನ್ನು ಈ ಮೂಲಕ ಖರೀದಿ ಮಾಡಿ ಹಲವು ಪ್ರಯೋಜನ ಪಡೆದುಕೊಳ್ಳಿ.


Click it and Unblock the Notifications








